ಮೈಸೂರು

ಜು.23 ರಂದು ಹಿರೇಮಗಳೂರು ಕಣ್ಣನ್ ಗೆ ಮುದ್ದುರಾಮ ಪ್ರಶಸ್ತಿ ಪ್ರದಾನ

ಮೈಸೂರು: ನಗರದ ಮುದ್ದುರಾಮ ಪ್ರತಿಷ್ಠಾನವು ಜುಲೈ 23ರಂದು ಸಂಜೆ 4.15ಕ್ಕೆ ಸರಸ್ವತಿಪುರಂನ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಮುದ್ದುರಾಮ ಪ್ರಶಸ್ತಿ/ಪುರಸ್ಕಾರ ಹಾಗೂ ಕೃತಿಗಳ ಬಿಡುಗಡೆ ಸಮಾರಂಭವನ್ನು ಆಯೋಜಿಸಿದೆ.

2023ನೇ ಸಾಲಿನ ಮುದ್ದುರಾಮ ಪ್ರಶಸ್ತಿಯನ್ನು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಅವರಿಗೆ ನೀಡಲಾಗುವುದು. 50 ಸಾವಿರ ಗೌರವಧನ ಹಾಗೂ ಫಲಕದೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಚೌಪದಿ ರಚನೆಕಾರ ಎಂ.ಮುತ್ತುಸ್ವಾಮಿ ಅವರಿಗೆ ಮುದ್ದುರಾಮ ಪುರಸ್ಕಾರ ನೀಡಲಾಗುವುದು. ಇದು 25 ಸಾವಿರ ಗೌರವಧನ ಹಾಗೂ ಫಲಕವನ್ನು ಒಳಗೊಂಡಿರುತ್ತದೆ.

ಇದೇ ಸಮಾರಂಭದಲ್ಲಿ ಹಿರೇಮಗಳೂರು ಕಣ್ಣನ್ ಅವರ ಕವಿ ಕೆ.ಸಿ.ಶಿವಪ್ಪ ಕುರಿತ ‘ಮುದ್ದುರಾಮ ಲಹರಿ’ ಹಾಗೂ ಶ್ವೇತಾ ಪ್ರಕಾಶ್ ಅವರ ಚೌಪದಿಗಳ ಸಂಕಲನ ‘ಪದ್ಮ ಪಲ್ಲವ’ ಕೃತಿಗಳು ಬಿಡುಗಡೆ ಆಗಲಿವೆ.

ಸಮಾರಂಭದ ಸಾನ್ನಿಧ್ಯವನ್ನು ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ವಹಿಸುವರು. ಮುಖ್ಯ ಅತಿಥಿಗಳಾಗಿ ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ಹಾಗೂ ವಾಗ್ಮಿ ಎಂ.ಕೃಷ್ಣೇಗೌಡ ಭಾಗವಹಿಸುವರು. ಹಿರಿಯ ಸಾಹಿತಿ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿಗಳು ಅಧ್ಯಕ್ಷತೆ ವಹಿಸುವರು ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.

andolanait

Recent Posts

ಮಡಿಕೇರಿ ನ್ಯಾಯಾಲಯಕ್ಕೆ ಬಾಂಬ್‌ ಬೆದರಿಕೆ

ಮಡಿಕೇರಿ: ಮಡಿಕೇರಿ ನ್ಯಾಯಾಲಯಕ್ಕೆ ಬಾಂಬ್‌ ಬೆದರಿಕೆ ಕರೆ ಬಂದಿದ್ದು, ಸಿಬ್ಬಂದಿ ಕೆಲಕಾಲ ಆತಂಕ್ಕೀಡಾಗಿದ್ದರು. ಇತ್ತೀಚಿನ ದಿನಗಳಲ್ಲಿ ದಿನದಿಂದ ದಿನಕ್ಕೆ ಬಾಂಬ್‌…

2 mins ago

ನಟ ದರ್ಶನ್‌ 49ನೇ ಹುಟ್ಟುಹಬ್ಬಕ್ಕೆ ಪತ್ನಿ ವಿಜಯಲಕ್ಷ್ಮೀ ಶುಭಾಶಯ

ನಟ ದರ್ಶನ್‌ ಅವರಿಗೆ ಇಂದು 49ನೇ ಹುಟ್ಟುಹಬ್ಬದ ಸಂಭ್ರಮ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್‌ ಬೆಂಗಳೂರಿನ…

14 mins ago

ಹನೂರು| ಭೈರನತ್ತ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ: ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಮಣಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೈರನತ್ತ ಗ್ರಾಮದಲ್ಲಿ ಕಳೆದ…

33 mins ago

ಈಶಾ ಫೌಂಡೇಶನ್‌ ಬಳಿ ಅರಣ್ಯ ಪ್ರದೇಶದಲ್ಲಿ ಬೆಂಕಿ ಅವಘಡ

ಚಿಕ್ಕಬಳ್ಳಾಪುರ: ಮಹಾಶಿವರಾತ್ರಿ ಸಂಭ್ರಮದ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ಚಿಕ್ಕಬಳ್ಳಾಪುರದ ಈಶಾ ಫೌಂಡೇಶನ್‌ಗೆ ಆಗಮಿಸಿದ್ದರು. ಎಲ್ಲೆಡೆ ಶಿವನಾಮ ಸ್ಮರಣೆ ಕೇಳಿಬರುತ್ತಿದೆ. ಈ…

4 hours ago

ಕೇಂದ್ರದ ವಿರುದ್ಧ ರಾಹುಲ್‌ ಗಾಂಧಿ ಮತ್ತೆ ವಾಗ್ದಾಳಿ

ನವದೆಹಲಿ: ಭಾರತ-ಅಮೇರಿಕಾ ಮಧ್ಯಂತರ ವ್ಯಾಪಾರ ಒಪ್ಪಂದ ಕುರಿತು ಕೇಂದ್ರ ಸರ್ಕಾರದ ಒಪ್ಪಂದ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ನಾಯಕ…

4 hours ago

ಬಾಂಗ್ಲಾ ನೂತನ ಪ್ರಧಾನಿ ಪ್ರಮಾಣ ವಚನಕ್ಕೆ ಭಾರತದ ಪ್ರತಿನಿಧಿಯಾಗಿ ಸ್ಪೀಕರ್‌ ಓಂ ಬಿರ್ಲಾ

ನವದೆಹಲಿ: ಬಾಂಗ್ಲಾದೇಶದ ನೂತನ ಸರ್ಕಾರದ ಪ್ರಧಾನಿಯಾಗಿ ತಾರಿಕ್‌ ರೆಹಮಾನ್‌ ಅವರು ಪ್ರಮಾಣವಚನ ಸ್ವೀಕರಿಸಲಿರುವ ಕಾರ್ಯಕ್ರಮದಲ್ಲಿ ಭಾರತದ ಪರವಾಗಿ ಲೋಕಸಭಾ ಸ್ಪೀಕರ್‌…

4 hours ago