ಮೈಸೂರು

ಮೈಸೂರು ವಿ.ವಿ ನಿರ್ಲಕ್ಷ್ಯ : ಮೊಬೈಲ್‌ ಬೆಳಕಿನಲ್ಲೇ ಮೌಲ್ಯಮಾಪನ ಮಾಡಿದ ಪ್ರಾಧ್ಯಾಪಕರು…!

ಮೈಸೂರು : ಮೈಸೂರು ವಿಶ್ವವಿದ್ಯಾನಿಲಯದ ಕಾರ್ಯಸೌಧ ಕ್ರಾಫರ್ಡ್‌ಭವನದ ಪರೀಕ್ಷಾ ಭವನದಲ್ಲಿ ಗುರುವಾರ ವಿದ್ಯುತ್ ವ್ಯತ್ಯಯದಿಂದಾಗಿ ಮೊಬೈಲ್‌ ಫೋನ್ ಬೆಳಕಿನಲ್ಲಿಯೇ ಮೌಲ್ಯಮಾಪಕರು ಪದವಿ ಪರೀಕ್ಷೆಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ನಡೆಸಿದ ಸಂಗತಿ ಬಹಿರಂಗವಾಗಿದೆ.

ಕಲಾಮಂದಿರ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿರುವ ಬಗ್ಗೆ ಮೂರು ದಿನಗಳ ಹಿಂದೆಯೇ ಸೆಸ್ಕ್ ನೀಡಿದ್ದ ಮಾಹಿತಿ ಪತ್ರಿಕೆಗಳಲ್ಲೂ ಪ್ರಕಟವಾಗಿತ್ತು. ಪೂರ್ವಸಿದ್ಧತೆಯನ್ನು ಮಾಡಿಕೊಳ್ಳದೆ ಮೈಸೂರು ವಿವಿ ನಿರ್ಲಕ್ಷ್ಯದಿಂದ ಮೌಲ್ಯಮಾಪಕರು ದಿನವಿಡೀ ಸಮಸ್ಯೆ ಎದುರಿಸುವಂತಾಯಿತು.

ಮೋಡವೂ ಕವಿದಿದ್ದರಿಂದ ಬೆಳಕಿರಲಿಲ್ಲ. ಕಿಟಕಿಗಳು ದೂರದಲ್ಲಿದ್ದವು. ವಯಸ್ಸಾದ ಪ್ರಾಧ್ಯಾಪಕರು ಮಂದ ಬೆಳಕಿನಲ್ಲಿ ಮೌಲ್ಯಮಾಪನ ಮಾಡುವಂತಾಯಿತು. ಬೆಳಕಿಲ್ಲದ ಕಾರಣ, ನಾಳೆ ಮೌಲ್ಯಮಾಪನ ಮಾಡುವುದಾಗಿ ಕೇಳಿಕೊಂಡರೂ ಅಧಿಕಾರಿಗಳು ಸ್ಪಂದಿಸಲಿಲ್ಲ. ಪರೀಕ್ಷಾಂಗ ವಿಭಾಗ ಪರ್ಯಾಯ ವ್ಯವಸ್ಥೆ ಮಾಡಿರಲಿಲ್ಲ. ಜನರೇಟರ್ ಕೆಟ್ಟಿದೆ ಡೀಸೆಲ್ ಹಾಕಲೂ ವಿವಿಯಲ್ಲಿ ಹಣವಿಲ್ಲ ಎಂದು ನಿರ್ಲಕ್ಷದ ಮಾತುಗಳಿಂದ ವಿಧಿಯಿಲ್ಲದೇ ಮೌಲ್ಯಮಾಪನ ಮಾಡುವಂತಾಯಿತು ಎಂದು ಮೌಲ್ಯಮಾಪಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ನಗರ ಪ್ರದೇಶದ ಕಾಯಂ ಅಧ್ಯಾಪಕರು ಮೌಲ್ಯಮಾಪನ ಕಾರ್ಯಕ್ಕೆ ಬರುತ್ತಿಲ್ಲ. ಗ್ರಾಮೀಣ ಪ್ರದೇಶದ ಕಾಯಂ ಪ್ರಾಧ್ಯಾಪಕರು ಹಾಗೂ ಅತಿಥಿ ಉಪನ್ಯಾಸಕರಿಂದಲೇ ಮೌಲ್ಯಮಾಪನ ಮಾಡಿಸಲಾಗುತ್ತಿದೆ. ಪ್ರತಿಯೊಬ್ಬ ಪ್ರಾಧ್ಯಾಪಕರು ಕಡ್ಡಾಯವಾಗಿ ಮೌಲ್ಯಮಾಪನದಲ್ಲಿ ಪಾಲ್ಗೊಳ್ಳಬೇಕೆಂಬ ಕ್ರಮಕ್ಕೂ ವಿವಿ ಮುಂದಾಗುತಿಲ್ಲ ಎಂದು ಅಧ್ಯಾಪಕರೊಬ್ಬರು ಆರೋಪಿಸಿದ್ದಾರೆ.

ಆಂದೋಲನ ಡೆಸ್ಕ್

Recent Posts

1ನೇ ತರಗತಿ ಪ್ರವೇಶ: 6 ವರ್ಷ ಕಡ್ಡಾಯ ನಿಯಮದಲ್ಲಿ 60 ದಿನಗಳ ವಿನಾಯಿತಿ

ಬೆಂಗಳೂರು: ಆರು ವರ್ಷ ತುಂಬದ ಮಕ್ಕಳ ಪೋಷಕರಿಗೆ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಒಂದನೇ ತರಗತಿಗೆ 6 ವರ್ಷ ತುಂಬಬೇಕೆಂಬ…

15 mins ago

ಬಜೆಟ್‌ ಕುರಿತು ನಡೆದ ಚರ್ಚೆಯ ಮೇಲಿನ ಉತ್ತರ ಪ್ರಮುಖ ಅಂಶಗಳಿವು.!

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದು ವಿಧಾನಪರಿಷತ್ತಿನಲ್ಲಿ ಬಜೆಟ್ ಕುರಿತು ನಡೆಸಿದ ಚರ್ಚೆಯ ಮೇಲಿನ ಉತ್ತರದ ಪ್ರಮುಖ ಅಂಶಗಳು ಈ ಕೆಳಕಂಡಂತಿವೆ.…

31 mins ago

ವನ್ಯಜೀವಿ- ಮಾನವ ಸಂಘರ್ಷ ನಿಯಂತ್ರಿಸಲು ಸರ್ಕಾರ ಶಕ್ತಿಮೀರಿ ಶ್ರಮಿಸುತ್ತಿದೆ: ಸಚಿವ ಈಶ್ವರ್‌ ಖಂಡ್ರೆ

ಬೆಂಗಳೂರು: ವನ್ಯಜೀವಿಗಳ ದಾಳಿಯಿಂದ ಮೃತಪಟ್ಟವರ ಕುಟುಂಬದ ವಾರಸುದಾರರಿಗೆ ಸರ್ಕಾರಿ ನೌಕರಿ ನೀಡಲು ಸರ್ಕಾರಿ ಆದೇಶದನ್ವಯ ಅವಕಾಶ ಇರುವುದಿಲ್ಲ ಎಂದು ಅರಣ್ಯ,…

42 mins ago

ಹಾರ್ಮುಜ್‌ ಜಲಸಂಧಿ ಮುಚ್ಚಲು ಕಾರಣರಾಗಿದ್ದ ಇರಾನ್‌ ನೌಕಾ ಕಮಾಂಡರ್‌ ಹತ್ಯೆ

ಜೆರುಸೇಲಂ: ಬಂದರ್‌ ಅಬ್ಬಾಸ್‌ನಲ್ಲಿ ಅಮೇರಿಕಾ-ಇಸ್ರೇಲಿ ದಾಳಿಯಲ್ಲಿ ಇಸ್ಲಾಮಿಕ ರೆವಲ್ಯೂಷನರಿ ಗಾರ್ಡ್‌ ಕಾಪ್ಸ್‌ ನೌಕಾ ಕಮಾಂಡರ್‌ ಅಲಿರೆಜಾ ತಂಗ್‌ ಸಿರಿ ಮೃತಪಟ್ಟಿದ್ದಾರೆ.…

52 mins ago

ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿಗೆ ಹೈಕೋರ್ಟ್‌ ತುರ್ತು ನೋಟಿಸ್‌

ಬೆಂಗಳೂರು: ಮೈಸೂರು ಮುಡಾ ಅಕ್ರಮ ಸೈಟ್‌ ಹಂಚಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ…

1 hour ago

ಎರಡು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಜಯ : ಸಚಿವೆ ಹೆಬ್ಬಾಳಕರ್‌

ಉಡುಪಿ : ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಎರಡೂ ಕ್ಷೇತ್ರಗಳಲ್ಲೂ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು…

1 hour ago