ಮೈಸೂರು

ಅವಸಾನದ ಅಂಚಿಗೆ ತಲುಪಿದ ನಂಜರಾಜ ಬಹದ್ದೂರ್ ಛತ್ರ

40ಸಾವಿರ ಬಾಡಿಗೆ ನಿಗದಿ ಮಾಡಿದ್ದರೂ ಮದುವೆ ಮಾಡಲು ಯಾರೂ ಮುಂದೆ ಬರುತ್ತಿಲ್ಲ

ಮೈಸೂರು: ದೂರದ ಊರುಗಳಿಂದ ಮೈಸೂರಿಗೆ ಬಂದವರ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸುವ ಜತೆಗೆ ಮದುವೆ ಸಮಾರಂಭಗಳಿಗೆ ಒದಗಿಸುವ ಉದ್ದೇಶದಿಂದ ಮಹಾರಾಜರು ಕಟ್ಟಿಸಿದ್ದ ನಂಜರಾಜ ಬಹದ್ದೂರ್ ಛತ್ರ ನಿರ್ವಹಣೆ ಕೊರತೆಯಿಂದ ಅವಸಾನದ ಅಂಚಿಗೆ ಬಂದು ತಲುಪಿದೆ.

ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯ ಕಾಲದಲ್ಲಿ ನಿರ್ಮಾಣವಾದ ಕಟ್ಟಡ ಇದಾಗಿದ್ದು, ಇದು ಕೂಡ ಮೈಸೂರಿನ ಪಾರಂಪರಿಕತೆ ಇತಿಹಾಸ ಗರಿಮೆ ಸಾರುವ ಕಟ್ಟಡ. ಪ್ರಸ್ತುತ ಛತ್ರ, ಅವಸಾನದ ಅಂಚಿಗೆ ಬಂದು ತಲುಪಿದ್ದರೂ ಸರ್ಕಾರಕ್ಕೆ ಆದಾಯ ತಂದು ಕೊಡುತ್ತಿದೆ. 

ಆಗಿನ ಕಾಲಕ್ಕೆ ಮೈಸೂರಿಗೆ ದೂರದ ಪ್ರದೇಶಗಳಿಂದ ಆಗಮಿಸುತ್ತಿದ್ದವರ ವಾಸ್ತವ್ಯಕ್ಕೆ ಮೈಸೂರಿನಲ್ಲಿ ಸೂಕ್ತ ವ್ಯವಸ್ಥೆ ಇರಲಿಲ್ಲ. ಇದನ್ನು ಗಮನಿಸಿ ಸುಮಾರು 10 ಎಕರೆ ಜಾಗದಲ್ಲಿ ಈ ಛತ್ರದ ಕಟ್ಟಡವನ್ನು ನಿರ್ಮಿಸಲಾಯಿತು. ಇದರ ನಿರ್ವಹಣೆಯನ್ನು ಆಗಿನ ಮುನಿಸಿಪಲ್ ಆಡಳಿತಕ್ಕೆ ವಹಿಸಲಾಗಿತ್ತು. ಬಳಿಕ ಜಾಗದ ಬಳಕೆ ಇಲ್ಲದ ಕಾರಣ ಅವುಗಳನ್ನು ಭೋಗ್ಯಕ್ಕೆ ನೀಡಲಾಗಿದೆ. ಛತ್ರದ ಸುತ್ತಮುತ್ತ ಇರುವ ಖಾಸಗಿ ಹೋಟೆಲ್‌ಗಳು, ಕೆಲವು ಸರ್ಕಾರಿ ಕಚೇರಿ, ಆಟೋ ಗ್ಯಾರೇಜ್, ಎರಡು ಪೆಟ್ರೋಲ್ ಬಂಕ್‌ಗಳು, ವೇಬ್ರಿಡ್ಜ್, ನೌಕರರ ಸಂಘದ ಕಚೇರಿಗಳೆಲ್ಲವೂ ಛತ್ರಕ್ಕೆ ಸೇರಿದ ಜಾಗ ಎನ್ನಲಾಗಿದೆ.

ನಂಜರಾಜ ಬಹದ್ದೂರ್ ಛತ್ರಕ್ಕೆ ಸೇರಿದ 10 ಎಕರೆ ಪ್ರದೇಶದಲ್ಲಿ ಕಿಂಗ್ಸ್ ಕೋರ್ಟ್ ಹೋಟೆಲ್, ಪೆಟ್ರೋಲ್ ಬಂಕ್, ವಾರ್ತಾ ಭವನ, ಪಶು ಆಸ್ಪತ್ರೆ, ಪ್ರವಾಸೋದ್ಯಮ ಇಲಾಖೆಯ ಕಚೇರಿ ಇನ್ನಿತರ ಕಟ್ಟಡಗಳನ್ನು ಕಟ್ಟಲಾಗಿದೆ. ಒಂದು ಎಕರೆ ಜಾಗವನ್ನು ಮಹಾರಾಣಿ ವಿಜ್ಞಾನ ಕಾಲೇಜು ಕಟ್ಟಡಕ್ಕಾಗಿ ನೀಡಲಾಗಿದೆ. ಇದನ್ನೆಲ್ಲಾ ಹೊರತು ಪಡಿಸಿ ಇನ್ನೂ 5-6 ಎಕರೆ ಜಾಗ ಪಾಳು ಬಿದ್ದಿದ್ದು, ಇದನ್ನು ಯಾವುದೇ ಚಟುವಟಿಕೆಗೂ ಬಳಸಿಕೊಂಡಿಲ್ಲ. ಇದು ನಂಜರಾಜ ಬಹದ್ದೂರ್ ಛತ್ರದ ಬಗೆಗೆ ಮುಜರಾಯಿ ಇಲಾಖೆ ತೋರಿರುವ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ.

ಮದುವೆಗಳು ನಡೆಯುತ್ತಿಲ್ಲ: 130 ವರ್ಷಗಳ ಇತಿಹಾಸ ಹೊಂದಿರುವ ಛತ್ರದಲ್ಲಿ ಇತ್ತೀಚೆಗೆ ಯಾವುದೇ ಮದುವೆ ಸಮಾರಂಭಗಳು ನಡೆಯುತ್ತಿಲ್ಲ. ಒಂದು ಕಾಲದಲ್ಲಿ ಮೈಸೂರಿನ ಅತ್ಯಂತ ಬೇಡಿಕೆಯ ಕಲ್ಯಾಣ ಮಂಟಪಗಳ ಸಾಲಿನಲ್ಲಿದ್ದ, ನಂಜರಾಜ ಬಹದ್ದೂರ್ ಛತ್ರವು ಬರಬರುತ್ತಾ ತನ್ನ ವರ್ಚಸ್ಸು ಕಳೆದುಕೊಂಡಿತು. ಇದರಿಂದ ಮದುವೆ ಸಮಾರಂಭ ನಡೆಯುವುದು ಕಡಿಮೆಯಾಯಿತು. ಜೊತೆಗೆ ಕೆಲ ವರ್ಷಗಳಿಂದ ಮದುವೆಗೆ 40 ಸಾವಿರ ರೂ. ನಿಗದಿ ಪಡಿಸಲಾಗಿದ್ದು, ಬಡ ಮತ್ತು ಮಧ್ಯಮ ವರ್ಗದ ಜನರು ಇಷ್ಟು ಹಣ ಕೊಟ್ಟು ಮದುವೆ ಮಾಡಲು ಸಾಧ್ಯವಾಗದು ಎನ್ನಲಾಗುತ್ತಿದೆ.

ವರ್ಷಕ್ಕೆ ಲಕ್ಷಾಂತರ ರೂ. ವಹಿವಾಟು: ಛತ್ರದ ನಿರ್ವಹಣೆ ಕೊರತೆಯಿಂದ ಮದುವೆ ಕಡಿಮೆಯಾಗಿರಬಹುದು. ಆದರೆ, ಕೃಷಿ ಉತ್ಪನ್ನಗಳ ಮಾರಾಟ, ಆಹಾರ ಉತ್ಪನ್ನ, ಕೃಷಿ, ಕರಕುಶಲ ಮತ್ತು ಸೀರೆ, ಆಭರಣ, ಪುಸ್ತಕಗಳ ಮೇಳಗಳು ವರ್ಷ ಪೂರ್ತಿ ನಡೆಯುವ ಕಾರಣ ಛತ್ರದಿಂದ ವಾರ್ಷಿಕವಾಗಿ ಲಕ್ಷಾಂತರ ರೂ. ಆದಾಯ ಸರ್ಕಾರದ ಬೊಕ್ಕಸ ಸೇರುತ್ತಿದೆ. ಹೀಗಿದ್ದರೂ ಛತ್ರದ ಪಾರಂಪರಿಕತೆಯನ್ನು ಉಳಿಸಿಕೊಂಡು ಹೆಚ್ಚಿನ ಅಭಿವೃದ್ಧಿ ಮಾಡುವ ಮುತುವರ್ಜಿ ತೋರುತ್ತಿಲ್ಲ ಎಂದು ನಂಜರಾಜ ಬಹದ್ದೂರ್ ಛತ್ರ ವ್ಯವಸ್ಥಾಪನಾ ಸಮಿತಿಯ ಸದಸ್ಯರೊಬ್ಬರು ದೂರುತ್ತಾರೆ.

ಮಹಾರಾಜರು ಕಟ್ಟಿಸಿದ್ದ ನಂಜರಾಜ ಬಹದ್ದೂರ್ ಛತ್ರದಿಂದ ಬೊಕ್ಕಸಕ್ಕೆ ಆದಾಯವೇನು ಕಡಿಮೆಯಾಗಿಲ್ಲ. ಛತ್ರದ ಪಾರಂಪರಿಕತೆಯನ್ನು ಉಳಿಸಿಕೊಂಡು ಹೆಚ್ಚಿನ ಅಭಿವೃದ್ಧಿ ಮಾಡುವ ಮುತುವರ್ಜಿಯನ್ನು ಸರ್ಕಾರ ತೋರುತ್ತಿಲ್ಲ.

-ಪುಷ್ಪವಲ್ಲಿ, ಮಾಜಿ ಅಧ್ಯಕ್ಷೆ, ವ್ಯವಸ್ಥಾಪನಾ ಸಮಿತಿ

andolana

Recent Posts

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

1 hour ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

2 hours ago

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

2 hours ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

3 hours ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

3 hours ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

3 hours ago