ಮೈಸೂರು

ನಂಜನಗೂಡು | ಶ್ರೀಕಂಠೇಶ್ವರ ದೇವಾಲಯದ ಮುಂದಿನ ಅನಧಿಕೃತ ಅಂಗಡಿ ತೆರವು

ನಂಜನಗೂಡು : ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿನ ಅನಧಿಕೃತ ಅಂಗಡಿಗಳನ್ನು ಇಂದು(ಜ.24) ಮತ್ತೋಮ್ಮೆ ತೆರವು ಗೊಳಿಸಲಾಯಿತು.

ದೇವಾಲಯದ ನೂತನ ಕಾರ್ಯನಿರ್ವಾಹಕ ಅಧಿಕಾರ ಕೃಷ್ಣ ನೇತ್ರತ್ವದಲ್ಲಿ ಪೊಲಿಸರ ಸಹಾಯದೊಂದಿಗೆ ರಂಗಕ್ಕಿಳಿದ ದೇವಾಲಯದ ಸಿಬ್ಬಂದಿಗಳು ಶನಿವಾರ ಬೆಳಗಿನಿಂದಲೇ ಈ ತೆರವುಕಾರ್ಯವನ್ನು ಆರಂಭಿಸಿದರು.

ದೇವಾಲಯದ ಆವರಣ ಸ್ನಾನಘಟ್ಟದ ರಸ್ತೆ ಸೇರಿದಂತೆ ಬೇಕಾ ಬಿಟ್ಟಿಯಾಗಿ ಇಡಲಾಗಿದ್ದ ಎಲ್ಲ ಅಂಗಡಿಗಳನ್ನೂ ಇಂದು ತೆರವು ಗೊಳಿಸಲಾಗಿದ್ದು ನಾಳೆಯೂ ತೆರವು ಮುಂದುವರಿಯುವದು ಎನ್ನಲಾಗಿದೆ. ಕೆಲವು ವರ್ಷಗಳ ಹಿಂದೆ ಇದೇ ರೀತಿ ಇದೇ ಜಾಗದಲ್ಲಿದ್ದ ಅಂಗಡಿಗಳನ್ನು ತೆರವುಗೊಳಿಸಲಾಗಿತ್ತು.

ಅದಾದ ಕೆಲವು ದಿನಗಳ ನಂತರ ಒಬ್ಬರ ಮೇಲೋಬ್ಬರು ಪೈಪೋಟಿಗೆ ಬಿದ್ದವರಂತೆ ಸಾಕಷ್ಠು ಅಂಗಡಿಗಳು ರಾತ್ರಿ ಬೇಳಗಾಗುವದರೊಳಗೆ ತಲೆ ಎತ್ತಿ ಅನಧಿಕೃತವಾಗಿ ಇಲ್ಲಿ ವ್ಯಾಪಾರ ಮಾಡುತ್ತಿದ್ದವು. ಈ ಅಂಗಡಿಗಳಿಂದಾಗಿ ದೇವಾಲಯಕ್ಕೆ ಆಗಮಿಸುವವರಿಗೆ ಕಿರಿಕಿರಿಯಾಗುವ ದೂರುಗಳು ಫುಂಖಾನು ಫುಂಖವಾಗಿ ಬಂದರೂ ದೇವಾಲಯದ ಆಡಳಿತ ಮಾತ್ರಕಣ್ಣಿದ್ದು ಕುರಡನಂತೆ ವರ್ತಿಸುತ್ತಿತ್ತು. ಕಳೆದ ವಾರ ಶಾಸಕ ದರ್ಶನ್‌ದ್ರುವನಾರಾಯಣ ಇಲ್ಲಿಗೆ ಭೇಟಿ ನೀಡಿದಾಗ ಈ ದೂರುಗಳನ್ನು ಪರಿಶಿಲಿಸಿ ಭಕ್ತಾದಿಗಳಿಗೆ ತೊಂದರೆಯಾಗುತ್ತಿರುವ ಅನಧಿಕೃತ ವ್ಯಾಪಾರ ಹಾಗೂ ಅಂಗಡಿಗಳ ಕುರಿತಂತೆ ಕಿಡಿಕಾರಿದ್ದರು ಅದಾದ ಒಂದೇ ವಾರದಲ್ಲಿ ಅಂಗಡಿಗಳ ತೆರವು ಕಾರ್ಯ ಆರಂಭವಾಗಿದೆ.

ಅಂಗಡಿಗಳ ತೆರವು ನಂಜನಗೂಡಿನ ಪಾಲಿಗೆ ಕಣ್ಣುಮುಚ್ಚಾಲೆಯಾಟ ಎಂದವರು ಇಲ್ಲಿನ ಸಾರ್ವಜನಿಕರು . ಕಳೆದ ತಿಂಗಳು ನಂಜನಗೂಡಿನ ರಾಷ್ರö್ಠಪತಿರಸ್ತೆ ಮಹಾತ್ಮಾಗಾಂಧಿ ಶತಾಬ್ದಿರಸ್ತೆ, ನೆಹರು ವೃತ್ತ ,ಅಂಗಡಿ ಬೀದಿಗಳ ಫುಟ್ ಪಾತ್ ಗಳ ವತ್ತುವರಿತೆರವಾಗಿತ್ತು. ಆಗ ತೆರವಾದ ಅಂಗಡಿಗಳೂ ಈಗ ಮತ್ತೇ ಪೈಪೋಟಿಗೆ ಬಿದ್ದವರಂತೆ ಪಾದಚಾರಿ ಮಾರ್ಗವನ್ನು ವತ್ತುವರಿ ಮಾಡಿಯಥಾ ಸ್ಥಾನದಲ್ಲಿತಮ್ಮ ವ್ಯಾಪಾರ ಮುಂದುವರಿಸಿದ್ದು ನಂಜನಗೂಡಿನ ವತ್ತುವರಿ ತೆರವು ಎಂದರೆ ಅಧಿಕಾರಿಗಳು ಹಾಗೂ ವ್ಯಾಪಾರಿಗಳ ಪಾಲಿಗೆ ಕಣ್ಣುಮಚ್ಚಾಲೆ ಆಟದಂತಾಗಿದೆ ಎಂದ ಯೋಗೀಶ ಈ ವತ್ತುವರಿ ಹಾಗಾಗದಿರಲಿ ಮತ್ತೇ ಇಲ್ಲಿ ಅನಧಿಕೃತ ವ್ಯಾಪಾರ ಆರಂಭವಾಗದಿರಲಿ ಎಂದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಹೆಣ್ಣು ಮಗು ಮಾರಾಟ ; ಐವರ ಬಂಧನ

ಚಾಮರಾಜನಗರ : ಆರು ತಿಂಗಳ ಹೆಣ್ಣು ಮಗುವನ್ನು ಮಾರಾಟ ಮಾಡಿರುವ ಪ್ರಕರಣ ನಗರದಲ್ಲಿ ನಡೆದಿದ್ದು, ಈ ಸಂಬಂಧ ಪೋಷಕರು ಸೇರಿದಂತೆ…

8 hours ago

ವೃದ್ಧೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ : ಗಡಿ ಜಿಲ್ಲೆಯಲ್ಲಿ ಅಮಾನವೀಯ ಘಟನೆ

ಹನೂರು : ಜಮೀನಿನಲ್ಲಿ ಹುರುಳಿ ಫಸಲನ್ನು ಹಸು ಮೇಯ್ದಿದ್ದದನ್ನು ಪ್ರಶ್ನೆಸಿದ್ದಕ್ಕೆ ವೃದ್ಧೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ…

9 hours ago

ಹಾಸನದಲ್ಲಿ ಜಾ.ದಳ ಶಕ್ತಿ ಪ್ರದರ್ಶನ : ಚುನಾವಣೆಗೆ ತಯಾರಾಗುವಂತೆ ಕಾರ್ಯಕರ್ತರಿಕೆ ಎಚ್‌ಡಿಕೆ ಕರೆ

ಹಾಸನ : ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸಿದ್ಧತೆ ನಡೆಸುವ ಸಂದೇಶವನ್ನು ರಾಜ್ಯದ ಜನರಿಗೆ ತಲುಪಿಸುವ ಗುರಿಯೊಂದಿಗೆ ನಗರದಲ್ಲಿ ಆಯೋಜಿಸಿದ್ದ…

9 hours ago

ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ; 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

ಮಳವಳ್ಳಿ : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಹತ್ತುಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಹೊಸಹಳ್ಳಿ…

10 hours ago

ಚಿನ್ನ ಕಳ್ಳ ಸಾಗಾಣಿಕೆ ಪತ್ತೆ : 2.89 ಕೋಟಿ ರೂ. ಮೌಲ್ಯದ ಚಿನ್ನ ವಶ

ಮುಂಬೈ : ಸೌದಿ ಅರೇಬಿಯಾದಿಂದ ಅಂತರರಾಷ್ಟ್ರೀಯ ಕೊರಿಯರ್ ಟರ್ಮಿನಲ್‌ನಲ್ಲಿ ಸಾಗಿಸುತ್ತಿದ್ದ ಗ್ರೈಂಡರ್‌ನಲ್ಲಿ ಬಚ್ಚಿಟ್ಟಿದ್ದ 2.89 ಕೋಟಿ ರೂ.ಮೌಲ್ಯದ ಚಿನ್ನವನ್ನು ಕಂದಾಯ…

11 hours ago

ಗಣರಾಜ್ಯೋತ್ಸವ : ಕರ್ನಾಟಕದ ಸ್ತಬ್ಧಚಿತ್ರಕ್ಕಿಲ್ಲ ಅವಕಾಶ

ಭುಗಿಲೆದ್ದ ಆಕ್ರೋಶ; ಬಿಜೆಪಿ -ಕಾಂಗ್ರೆಸ್ ಆರೋಪ-ಪ್ರತ್ಯಾರೋಪ ಬೆಂಗಳೂರು : ದೇಶದ 77ನೇ ಗಣರಾಜ್ಯೋತ್ಸವ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ, ಈ…

11 hours ago