ಮೈಸೂರು

ನಂಜನಗೂಡು | ದುಷ್ಕರ್ಮಿಗಳಿಂದ ಶಿವಲಿಂಗ, ನಂದಿ ಬಸವ ಭಗ್ನ

ಅನ್ಯಧರ್ಮಿಯರಿಗೆ ದೇವಾಲಯದ ಜಾಗ ಪರಭಾರೆ; ಘಟನಾ ಸ್ಥಳಕ್ಕೆ ಮಾಜಿ ಶಾಸಕ ಹರ್ಷವರ್ಧನ್ ಭೇಟಿ

ನಂಜನಗೂಡು : ಸತಿ-ಪತಿಗಳಾದವರು ಕಡ್ಡಾಯವಾಗಿ ಉದ್ಭವ ಮೂರ್ತಿ ಶಿವಲಿಂಗ ಮತ್ತು ನಂದಿ ಬಸವ ಬಳಿ ತೆರಳಿ ಆಶೀರ್ವಾದ ಪಡೆದು ಗ್ರಾಮ ಪ್ರವೇಶ ಮಾಡುವುದು ಸಂಪ್ರದಾಯವಾಗಿದೆ. ಆದರೆ ಕೆಲವು ತಿಂಗಳ ಹಿಂದೆ ದುಷ್ಕರ್ಮಿಗಳು ಈ ನಂದಿ ಬಸವ ಮತ್ತು ಉದ್ಭವ ಶಿವಲಿಂಗ ಮೂರ್ತಿಗಳನ್ನು ಭಗ್ನಗೊಳಿಸಿದ್ದಾರೆ. ದೇವರ ಮೂರ್ತಿ ಇರುವ ಈ ಜಾಗವನ್ನು ಅನ್ಯ ಧರ್ಮಿಯರು ಆಕ್ರಮಿಸಿಕೊಂಡಿದ್ದು, ಈಗ ಸತಿ ಪತಿಗಳ ಪೂಜಾ ಕೈಂಕರ್ಯಕ್ಕೆ ದಿಗ್ಬಂಧನ ವಿಧಿಸುತ್ತಿರುವ ಘಟನೆ ನಂಜನಗೂಡು ತಾಲ್ಲೂಕಿನ ಬಂಕಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ:-ನಾಗರಿಕತೆ ಬೆಳೆದದ್ದು-ಉಳಿದಿರುವುದು ನೀರಿನಿಂದಲೇ : ಸಿಎಂ ಸಿದ್ದರಾಮಯ್ಯ

ಸಾವಿರಾರು ವರ್ಷಗಳ ಇತಿಹಾಸವಿರುವ ಶಿವಲಿಂಗ ಕೂಡ ಭಗ್ನವಾಗಿದ್ದು, ಪಕ್ಕದ ನಂದಿ ಬಸವನ ತಲೆ ಭಾಗವೂ ಮುರಿದು ಬಿದ್ದಿದೆ. ೧೯೮೨-೮೩ರಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಅನ್ಯಧರ್ಮಿಯ ವ್ಯಕ್ತಿಗೆ ಈ ಜಾಗವನ್ನು ಅನಧಿಕೃತವಾಗಿ ಖಾತೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ಗ್ರಾಮದ ನೂತನ ಸತಿ-ಪತಿಗಳ ಸಾಂಪ್ರದಾಯದ ಪೂಜೆಗೆ ಎಳ್ಳು ನೀರು ಬಿಡಲು ಮುಂದಾಗಿರುವ ಅನ್ಯಕೋಮಿನ ವ್ಯಕ್ತಿಯ ವಿರುದ್ಧ ಈಗ ಬಂಕಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಂಕಹಳ್ಳಿಯ ಗ್ರಾಮಸ್ಥರು ಮಾಜಿ ಶಾಸಕ ಬಿ.ಹರ್ಷವರ್ಧನ್‌ರವರ ಗಮನಕ್ಕೆ ಈ ವಿಚಾರ ಮುಟ್ಟಿಸಿದ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಅವರು, ಕಿಡಿಗೇಡಿಗಳಿಂದ ಭಗ್ನಗೊಂಡಿರುವ ನಂದಿ ಬಸವ ಮತ್ತು ಶಿವಲಿಂಗ ಉದ್ಭವ ಮೂರ್ತಿಗಳನ್ನು ವೀಕ್ಷಿಸಿ ಜನರ ಧಾರ್ಮಿಕ ಭಾವನೆಗಳ ರಕ್ಷಣೆಗೆ ನಾವು ಸದಾ ಬದ್ಧವಾಗಿದ್ದೇವೆ. ಇಲ್ಲಿಯ ದೃಶ್ಯಾವಳಿಗಳನ್ನು ನೋಡಿದರೆ ಇದು ೧೪ ಮತ್ತು ೧೫ನೇ ಶತಮಾನದ ಉದ್ಭವ ಮೂರ್ತಿಗಳಾಗಿವೆ. ಗ್ರಾಮಸ್ಥರು ಪರವಾಗಿ ನಿಲ್ಲುತ್ತೇನೆ. ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಉದ್ಭವಮೂರ್ತಿ ಶಿವಲಿಂಗ ಮತ್ತು ನಂದಿ ಬಸವ ಇರುವ ಸ್ಥಳದಲ್ಲಿ ನೂತನ ದೇವಾಲಯ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರಿಗೆ ಮಾಜಿ ಶಾಸಕ ಬಿ.ಹರ್ಷವರ್ಧನ್ ಸಲಹೆ ನೀಡಿದರು.

ಆಂದೋಲನ ಡೆಸ್ಕ್

Recent Posts

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಹಿಷ ದಸರಾಗೆ ಡೇಟ್ ಫಿಕ್ಸ್!

ಮೈಸೂರು: ಅಕ್ಟೋಬರ್ 10ರಂದು ಮೈಸೂರಿನಲ್ಲಿ ಮಹಿಷ ದಸರಾ ಆಚರಣೆ ನಡೆಯಲಿದೆ. ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9 ಗಂಟೆಗೆ ಮಹಿಷ ಪ್ರತಿಮೆಗೆ…

4 hours ago

ಮೈಸೂರು ದಸರಾ 2026: ಸಿಎಂ ಡಿ.ಕೆ.ಶಿವಕುಮಾರ್‌ಗೆ ಅಧಿಕೃತ ಆಹ್ವಾನ

ಬೆಂಗಳೂರು: ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…

5 hours ago

ಕಾಡಾನೆಗೆ ಲಾರಿ ಡಿಕ್ಕಿ ಹೊಡೆಸಲು ಯತ್ನ: ಚಾಲಕನಿಗೆ ₹5,000 ದಂಡ

ಚಾಮರಾಜನಗರ: ಗುಂಡ್ಲುಪೇಟೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ರಸ್ತೆಯಲ್ಲಿ ರಸ್ತೆ ದಾಟುತ್ತಿದ್ದ ಕಾಡಾನೆಯ ಮೇಲೆಯೇ ಲಾರಿ ಚಲಾಯಿಸಲು ಯತ್ನಿಸಿದ…

5 hours ago

ಅಕ್ಟೋಬರ್.‌11ಕ್ಕೆ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಕಾರ್ಯಕ್ರಮ

ಮಂಡ್ಯ: ಇದೇ ಅಕ್ಟೋಬರ್.‌11ಕ್ಕೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಕಾರ್ಯಕ್ರಮ ನಡೆಯಲಿದೆ. ದಸರಾ ಉತ್ಸವದ ಪ್ರಯುಕ್ತ ನಡೆಯಲಿರುವ…

5 hours ago

ಹನೂರು-ಪಾಲಾರ್ ರಸ್ತೆಯ ಕೌದಳ್ಳಿ ಸೇತುವೆ ಹಾನಿ: ಭಾರಿ ವಾಹನ ಸಂಚಾರಕ್ಕೆ ನಿರ್ಬಂಧ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಹನೂರು-ಪಾಲಾರ್ (ಎಲ್ಲೇಮಾಳ-ಕೌದಳ್ಳಿ) ಜಿಲ್ಲಾ ಮುಖ್ಯ…

5 hours ago

ಮೈಸೂರಿನಲ್ಲಿ ಯುವಕನ ಬರ್ಬರ ಹತ್ಯೆ..!

ಮೈಸೂರು: ಗಣೇಶ ಹಬ್ಬಕ್ಕೆ ಹಾಸನದಿಂದ ಮೈಸೂರಿಗೆ ಬಂದಿದ್ದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. 20 ವರ್ಷದ ಗೌರವ್‌…

6 hours ago