ಅನ್ಯಧರ್ಮಿಯರಿಗೆ ದೇವಾಲಯದ ಜಾಗ ಪರಭಾರೆ; ಘಟನಾ ಸ್ಥಳಕ್ಕೆ ಮಾಜಿ ಶಾಸಕ ಹರ್ಷವರ್ಧನ್ ಭೇಟಿ
ನಂಜನಗೂಡು : ಸತಿ-ಪತಿಗಳಾದವರು ಕಡ್ಡಾಯವಾಗಿ ಉದ್ಭವ ಮೂರ್ತಿ ಶಿವಲಿಂಗ ಮತ್ತು ನಂದಿ ಬಸವ ಬಳಿ ತೆರಳಿ ಆಶೀರ್ವಾದ ಪಡೆದು ಗ್ರಾಮ ಪ್ರವೇಶ ಮಾಡುವುದು ಸಂಪ್ರದಾಯವಾಗಿದೆ. ಆದರೆ ಕೆಲವು ತಿಂಗಳ ಹಿಂದೆ ದುಷ್ಕರ್ಮಿಗಳು ಈ ನಂದಿ ಬಸವ ಮತ್ತು ಉದ್ಭವ ಶಿವಲಿಂಗ ಮೂರ್ತಿಗಳನ್ನು ಭಗ್ನಗೊಳಿಸಿದ್ದಾರೆ. ದೇವರ ಮೂರ್ತಿ ಇರುವ ಈ ಜಾಗವನ್ನು ಅನ್ಯ ಧರ್ಮಿಯರು ಆಕ್ರಮಿಸಿಕೊಂಡಿದ್ದು, ಈಗ ಸತಿ ಪತಿಗಳ ಪೂಜಾ ಕೈಂಕರ್ಯಕ್ಕೆ ದಿಗ್ಬಂಧನ ವಿಧಿಸುತ್ತಿರುವ ಘಟನೆ ನಂಜನಗೂಡು ತಾಲ್ಲೂಕಿನ ಬಂಕಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ:-ನಾಗರಿಕತೆ ಬೆಳೆದದ್ದು-ಉಳಿದಿರುವುದು ನೀರಿನಿಂದಲೇ : ಸಿಎಂ ಸಿದ್ದರಾಮಯ್ಯ
ಸಾವಿರಾರು ವರ್ಷಗಳ ಇತಿಹಾಸವಿರುವ ಶಿವಲಿಂಗ ಕೂಡ ಭಗ್ನವಾಗಿದ್ದು, ಪಕ್ಕದ ನಂದಿ ಬಸವನ ತಲೆ ಭಾಗವೂ ಮುರಿದು ಬಿದ್ದಿದೆ. ೧೯೮೨-೮೩ರಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಅನ್ಯಧರ್ಮಿಯ ವ್ಯಕ್ತಿಗೆ ಈ ಜಾಗವನ್ನು ಅನಧಿಕೃತವಾಗಿ ಖಾತೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ಗ್ರಾಮದ ನೂತನ ಸತಿ-ಪತಿಗಳ ಸಾಂಪ್ರದಾಯದ ಪೂಜೆಗೆ ಎಳ್ಳು ನೀರು ಬಿಡಲು ಮುಂದಾಗಿರುವ ಅನ್ಯಕೋಮಿನ ವ್ಯಕ್ತಿಯ ವಿರುದ್ಧ ಈಗ ಬಂಕಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂಕಹಳ್ಳಿಯ ಗ್ರಾಮಸ್ಥರು ಮಾಜಿ ಶಾಸಕ ಬಿ.ಹರ್ಷವರ್ಧನ್‌ರವರ ಗಮನಕ್ಕೆ ಈ ವಿಚಾರ ಮುಟ್ಟಿಸಿದ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಅವರು, ಕಿಡಿಗೇಡಿಗಳಿಂದ ಭಗ್ನಗೊಂಡಿರುವ ನಂದಿ ಬಸವ ಮತ್ತು ಶಿವಲಿಂಗ ಉದ್ಭವ ಮೂರ್ತಿಗಳನ್ನು ವೀಕ್ಷಿಸಿ ಜನರ ಧಾರ್ಮಿಕ ಭಾವನೆಗಳ ರಕ್ಷಣೆಗೆ ನಾವು ಸದಾ ಬದ್ಧವಾಗಿದ್ದೇವೆ. ಇಲ್ಲಿಯ ದೃಶ್ಯಾವಳಿಗಳನ್ನು ನೋಡಿದರೆ ಇದು ೧೪ ಮತ್ತು ೧೫ನೇ ಶತಮಾನದ ಉದ್ಭವ ಮೂರ್ತಿಗಳಾಗಿವೆ. ಗ್ರಾಮಸ್ಥರು ಪರವಾಗಿ ನಿಲ್ಲುತ್ತೇನೆ. ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಉದ್ಭವಮೂರ್ತಿ ಶಿವಲಿಂಗ ಮತ್ತು ನಂದಿ ಬಸವ ಇರುವ ಸ್ಥಳದಲ್ಲಿ ನೂತನ ದೇವಾಲಯ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರಿಗೆ ಮಾಜಿ ಶಾಸಕ ಬಿ.ಹರ್ಷವರ್ಧನ್ ಸಲಹೆ ನೀಡಿದರು.
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…
ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…
ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…
ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…
ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…