ಮೈಸೂರು: ಇಂದು ಮೈಸೂರು ನಗರ ಬಿಜೆಪಿ ಯುವ ಮೋರ್ಚಾ ತಂಡವು ಪಕ್ಷದ ಕಚೇರಿಯ ಮುಂಭಾಗ ವಿವಿಧ ಭಂಗಿಯ ಬೃಹತ್ ಯೋಗಾಸನ ಮಾಡುವ ಮುಖಾಂತರ ಅರ್ಥಪೂರ್ಣ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಯೋಗಾಸನ ಕುರಿತು ಮಾತನಾಡಿದ ಮಾಜಿ ಸಚಿವರಾದ ಎನ್. ಮಹೇಶ್ ರವರು ಯೋಗಾಸನ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು ಪ್ರತಿದಿನ ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಯೋಗಾಸನವನ್ನು ಮಾಡಿದರೆ ನಮ್ಮ ದೈನಂದಿನ ಜೀವನ ಬಹಳ ಉಲ್ಲಾಸಕರವಾಗಿರುತ್ತದೆ ಮನೆಯಲ್ಲಿ ಹಿರಿಯರು, ವೃದ್ಧರು, ಮಕ್ಕಳು, ಯುವಕರು, ಯುವತಿಯರು, ಯೋಗಭ್ಯಾಸ ಮಾಡಲೇಬೇಕು ಇದರಿಂದ ಆರೋಗ್ಯ ಹಾಗೂ ದೇಹದ ನರನಾಡಿಗಳು ಬಹಳ ಉತ್ತಮಕಾರಿಯಾಗಿ ಸಹಕರಿಸುತ್ತದೆ ಎಂದು ತಿಳಿಸಿದರು
ಬಳಿಕ ಮಾತನಾಡಿದ ಮಾಜಿ ಶಾಸಕ ನಿರಂಜನ್ ಕುಮಾರ್ ನಿಜಕ್ಕೂ ದೇಶಾದ್ಯಂತ ಇಂದು ನಡೆಯುತ್ತಿರುವ ವಿಶ್ವ ಯೋಗಾ ದಿನಾಚರಣೆ ಶ್ಲಾಘನೀಯ, ಭಾರತವು ಇಡೀ ಪ್ರಪಂಚಕ್ಕೆ ಯೋಗವನ್ನು ತೋರಿಸಿ ಕೊಡುವ ಮುಖಾಂತರ ಭಾರತ ವಿಶ್ವ ಗುರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುತ್ತದೆ, ದೇಶದ ಪ್ರಧಾನಿ ನರೇಂದ್ರ ಮೋದಿಜಿ ರವರು ಯೋಗವನ್ನು ಮಾಡುವ ಮುಖಾಂತರ ಜಗತ್ತಿನ ಪ್ರತಿಯೊಬ್ಬರ ಗಮನ ಸೆಳೆದಿದ್ದಾರೆ ಜೊತೆಗೆ ಆರೋಗ್ಯಕರ ಭಾರತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತಿಳಿಸಿದರು
ಮೈಸೂರು ಜಿಲ್ಲಾಧ್ಯಕ್ಷ ಎಲ್.ಆರ್ ಮಹದೇವಸ್ವಾಮಿ,ಯೋಗ ಶಿಕ್ಷಕರಾದ ಮುತ್ತಣ್ಣ ಬಿಡಣಾಳು , ಮೈಸೂರು ನಗರದ ಯುವಮೊರ್ಚಾ ಅಧ್ಯಕ್ಷ ರಾಕೇಶ್ ಗೌಡ, ನಗರ ಉಪಾಧ್ಯಕ್ಷ ಜೋಗಿ ಮಂಜು, ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಚ್ಚಿನ್, ಲೋಹಿತ್, ಮಧು, ನಿಶಾಂತ್, ಅರ್ಜನ್, ದೇವರಾಜ್, ಗಜೇಂದ್ರ, ರಂಗಸ್ವಾಮಿ, ಮುಂತಾದವರು ಉಪಸ್ಥಿತರಿದ್ದರು
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…
ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ…