ಮೈಸೂರು

ಮೈಸೂರು ರಂಗಾಯಣ | ಜೂ.29 ರಿಂದ ಸಿಜಿಕೆ ನೆನಪಿನ ಗ್ರೀಷ್ಮ ರಂಗೋತ್ಸವ

ಮೈಸೂರು : ಪ್ರತಿಬಾರಿಯಂತೆ ಈ ಬಾರಿಯೂ ರಂಗಾಯಣವು ಸಿಜಿಕೆ ನೆನಪಿನಲ್ಲಿ ಹವ್ಯಾಸಿ ರಂಗತಂಡಗಳನ್ನು ಆಹ್ವಾನಿಸಿ ‘ಗ್ರೀಷ್ಮ ರಂಗೋತ್ಸವ-25’ ಅನ್ನು ಆಯೋಜಿಸುತ್ತಿದೆ ಎಂದು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ತಿಳಿಸಿದರು.

ರಂಗಾಯಣದ ಬಿ.ವಿ.ಕಾರಂತ ರಂಗ ಚಾವಡಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಜೂ.೨೯ರಂದು ಸಂಜೆ ೬ ಗಂಟೆಗೆ ಭೂಮಿಗೀತ ರಂಗಮಂದಿರದಲ್ಲಿ ಏರ್ಪಡಿಸಿರುವ ಗ್ರೀಷ್ಮ ರಂಗೋತ್ಸವವನ್ನು ರಂಗಾಯಣದ ಮಾಜಿ ನಿರ್ದೇಶಕ ಎಚ್.ಜನಾರ್ಧನ್ (ಜನ್ನಿ) ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ರಂಗಸಮಾಜದ ಸದಸ್ಯ ಎಚ್.ಎಸ್.ಸುರೇಶ್‌ಬಾಬು ಹಾಜರಲಿದ್ದಾರೆ. ಜೂ.೨೯ರಿಂದ ಆ.೧೦ರವರೆಗೆ ಪ್ರತಿ ಭಾನುವಾರ ಹವ್ಯಾಸಿ ಕಲಾತಂಡದಿಂದ ಒಂದೊಂದು ನಾಟಕ ಪ್ರದರ್ಶನ ಇರಲಿದೆ,” ಎಂದು ತಿಳಿಸಿದರು.

“ರಂಗಾಯಣ ಹಾಗೂ ಹವ್ಯಾಸಿ ರಂಗತಂಡಗಳ ಬೆಸುಗೆಯಾಗಿ ಗ್ರೀಷ್ಮ ರಂಗೋತ್ಸವ ಪ್ರತಿವರ್ಷ ನಡೆದುಕೊಂಡು ಬರುತ್ತಿದೆ. ಮೈಸೂರು, ಮಂಡ್ಯ ಹಾಗೂ ಕೇರಳ ಸೇರಿದಂತೆ ಒಟ್ಟು ಏಳು ನಾಟಕಗಳು ಪ್ರದರ್ಶನ ಕಾಣಲಿದ್ದು, ಕುವೆಂಪು ಅವರ ರಚನೆಯ ಮಂಜುನಾಥ್ ಭ್ಯಾಟೆ ನಿರ್ದೇಶನದ ನೇಪಥ್ಯ ರಂಗತಂಡ ಪ್ರಸ್ತುತಪಡಿಸುವ ‘ಸ್ಮಶಾನ ಕುರುಕ್ಷೇತ್ರ’ ನಾಟಕದ ಮೂಲಕ ಗ್ರೀಷ್ಮ ರಂಗೋತ್ಸವಕ್ಕೆ ಚಾಲನೆ ಸಿಗಲಿದೆ,” ಎಂದು ತಿಳಿಸಿದರು.

ರಂಗಸಮಾಜದ ಸದಸ್ಯ ಎಚ್.ಎಸ್.ಸುರೇಶ್ ಬಾಬು, ಗ್ರೀಷ್ಮ ರಂಗೋತ್ಸವ -೨೦೨೫ರ ಸಂಚಾಲಕ ಅರಸೀಕೆರೆ ಯೋಗಾನಂದ ಇದ್ದರು.

ದಿನಾಂಕ ನಾಟಕ/ತಂಡ ನಿರ್ದೇಶನ

ಜೂ.೨೯ ಸ್ಮಶಾನ ಕುರುಕ್ಷೇತ್ರ ಮಂಜುನಾಥ್ ಭ್ಯಾಟೆ
ನೇಪಥ್ಯ ರಂಗತಂಡ

ಜು.೬ ವಾರ್ಡ್ ನಂ.೦೬ ಮೈಮ್ ರಮೇಶ್
ಜಿಪಿಐಇಆರ್, ಮೈಸೂರು

ಜು.೧೩ ಅಹಲ್ಯ ಬಿ.ಡಿ. ಯತೀಶ್ ಎನ್.ಕೊಳ್ಳೆಗಾಲ
ವರ್ಕ್‌ಶಾಪ್ ಇನ್ ಮೈಸೂರು ಫಾರ್ ಥಿಯೇಟರ್

ಜು.೨೦ ಪರಮೇಶಿ ಪ್ರೇಮ ಪ್ರಸಂಗ ರವಿಪ್ರಸಾದ್
ರಂಗವಲ್ಲಿ, ಮೈಸೂರು

ಜು.೨೭ ಕಳಸೂತ್ರ ಎಚ್.ಎಸ್.ಸುರೇಶ್‌ಬಾಬು
ಅಭಿಯಂತರರು

ಆ.೩ ನಿತ್ಯ ಸಚಿವ ಪ್ರಮೋದ್ ಶಿಗ್ಗಾಂವ್
ಕರ್ನಾಟಕ ಸಂಘ ಮಂಡ್ಯ

ಆ.೧೦ ಕುಹೂ (ಮಲಯಾಳಂ) ಅರುಣ್‌ಲಾಲ್
ಲಿಟಲ್ ಅರ್ಥ್ ಸ್ಕೂಲ್ ಆಫ್ ಥಿಯೇಟರ್, ಕೇರಳ

ಆಂದೋಲನ ಡೆಸ್ಕ್

Recent Posts

ರಾಮನಗರ: ಲಾರಿಗೆ ಕಾರು ಡಿಕ್ಕಿ: ಮೂವರು ದುರ್ಮರಣ

ರಾಮನಗರ: ಲಾರಿ ಹಾಗೂ ಕಾರಿನ ನಡುವೆ ಭೀಖರ ಅಪಘಾತ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು-ಕನಕಪುರ…

6 mins ago

ಕುವೈತ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇರಾನ್‌ ದಾಳಿ

ಕುವೈತ್‌ ಅಂತಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇರಾನ್‌ ದಾಳಿ ಮಾಡಿದೆ. ಕೊಲ್ಲಿಯಾದ್ಯಂತ ಇರಾನ್‌ ತನ್ನ ದಾಳಿಯನ್ನು ಹೆಚ್ಚಿಸುತ್ತಿದ್ದು, ಕುವೈತ್‌ ಅಂತರಾಷ್ಟ್ರೀಯ…

16 mins ago

ಪಕ್ಕದ ಊರಿಗೆ ಪೂಜೆಗೆ ಹೋಗಿದ್ದ ಅರ್ಚಕ ನಿಗೂಢವಾಗಿ ಶವವಾಗಿ ಪತ್ತೆ

ಮಂಡ್ಯ: ಪಕ್ಕದ ಊರಿಗೆ ಪೂಜೆಗೆಂದು ಹೋದ ಅರ್ಚಕ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿದೆ. ಶ್ರೀರಂಗಪಟ್ಟಣದ ಮರಳಗಾಲ ಗ್ರಾಮದಲ್ಲಿ…

25 mins ago

ಓದುಗರ ಪತ್ರ: ಬೀದಿ ನಾಯಿಗಳ ಹಾವಳಿ ತಪ್ಪಿಸಿ

ಮೈಸೂರು ನಗರದ ರಿಂಗ್ ರಸ್ತೆಯಲ್ಲಿರುವ ಹಂಚ್ಯಾ-ಸಾತಗಳ್ಳಿ ‘ಬಿ’ ವಲಯದಲ್ಲಿ (ವಿಟಿಯು ಕಾಲೇಜು ಬಳಿ) ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ಸ್ಥಳೀಯ…

1 hour ago

ಓದುಗರ ಪತ್ರ: ತಾಣ..ಬಾಣ !

ತಾಣ..ಬಾಣ ! ಬೇಕಿದ್ದರೆ ಬಿಟ್ಟೇವು ಒಂದಲ್ಲ, ಎರಡು ದಿನ.. ಶಾಲಾ ತಾಣ! ಬಿಟ್ಟಿರುವುದು ಹೇಗೆ ? ಸಾಮಾಜಿಕ ಜಾಲತಾಣ ಎಂಬುದು…

2 hours ago

ಓದುಗರ ಪತ್ರ: ಬೋಗಾದಿ- ಗದ್ದಿಗೆ ಜೋಡಿ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿ

ಮೈಸೂರಿನ ಬೋಗಾದಿ -ಗದ್ದಿಗೆ ಜೋಡಿ ರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದ್ದರಿಂದ ದಾಸನಕೊಪ್ಪಲು ಬಸ್ ನಿಲ್ದಾಣದ ಬಳಿ ಎರಡು ಕಡೆಯೂ ಒಂದು…

2 hours ago