ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆ ಭರದಿಂದ ಸಾಗುತ್ತಿದೆ.
ದಸರಾ ಗಜಪಡೆಗೆ ಕುಶಾಲತೋಪು ಸಿಡಿಸುವ ತಾಲೀಮು ನಡೆಸಲಾಯಿತು.
ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ 7 ಪಿರಂಗಿ ಗಾಡಿಗಳ ಮೂಲಕ 21 ಭಾರೀ ಕುಶಾಲತೋಪುಗಳನ್ನು ಸಿಡಿಸಿ ತಾಲೀಮು ನಡೆಸಿದರು.
ಈ ವೇಳೆ ಅಶ್ವದಳದ 45 ಕುದುರೆಗಳು ಹಾಗೂ ಗಜಪಡೆಯ 13 ಆನೆಗಳು ಭಾಗವಹಿಸಿದ್ದವು.
ಅಭಿಮನ್ಯು, ಧನಂಜಯ, ಮಹೇಂದ್ರ, ಪ್ರಶಾಂತ, ಸುಗ್ರೀವ, ಏಕಲವ್ಯ, ಶ್ರೀರಾಮ, ಗೋಪಿ, ಕಾವೇರಿ, ಲಕ್ಷ್ಮಿ, ಚೈತ್ರಾ, ರೂಪ ಮತ್ತು ಶ್ರೀಕಂಠ ಸೇರಿದಂತೆ ದಸರಾ ಆನೆಗಳು ತಾಲೀಮಿನಲ್ಲಿ ಭಾಗಿಯಾಗಿದ್ದವು.
ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಡಿಸಿಪಿ ಸುಂದರರಾಜ್ ಸೇರಿದಂತೆ ಹಲವು ಅಧಿಕಾರಿಗಳು ತಾಲೀಮಿನಲ್ಲಿ ಉಪಸ್ಥಿತರಿದ್ದರು.
ಕುಶಾಲತೋಪಿನ ಭಾರೀ ಸದ್ದಿಗೂ ಹೆದರದೆ ಆನೆಗಳು ಮತ್ತು ಅಶ್ವಗಳು ಶಾಂತವಾಗಿ ನಿಂತಿದ್ದು ಗಮನ ಸೆಳೆಯಿತು.
ಮೈಸೂರು ದಸರಾ ಜಂಬೂಸವಾರಿ ವೇಳೆ ನಡೆಯಲಿರುವ ಕುಶಾಲತೋಪು ಸಿಡಿಸುವಿಕೆಗೆ ಈ ತಾಲೀಮು ಪ್ರಮುಖ ಸಿದ್ಧತೆಯಾಗಿದೆ.
ಮಾಸ್ಕೋ: ರಷ್ಯಾದಲ್ಲಿ ಸಂಶೋಧಕಿಯೊಬ್ಬರು ತೀವ್ರ ನ್ಯುಮೋನಿಯಾದಿಂದ ಮೃತಪಟ್ಟಿರುವುದು ವರದಿಯಾಗಿದೆ. ಅಕ್ಟೋಬರ್ 2ರಂದು ತೀವ್ರ ನ್ಯುಮೋನಿಯಾದಿಂದ ಸಂಶೋಧಕಿ ಮೃತಪಟ್ಟಿದ್ದಾರೆ. ಈ ಸಾವಿಗೂ…
ಬೆಂಗಳೂರು: ದ್ವಿಚಕ್ರ ವಾಹನ ಸವಾರರಿಗೆ ಸಾರಿಗೆ ಇಲಾಖೆ ಮಹತ್ವದ ಸೂಚನೆ ನೀಡಿದೆ. ಇನ್ಮುಂದೆ ಸುರಕ್ಷಿತವಲ್ಲದ ಹಾಫ್ ಹೆಲ್ಮೆಟ್‌ಗಳನ್ನು ಬಳಸುವಂತಿಲ್ಲ. ಬಿಐಎಸ್ ಅಥವಾ…
ಚಾಮರಾಜನಗರ: ತಾಲ್ಲೂಕಿನ ಬೂದಂಬಳ್ಳಿ ಗ್ರಾಮದಲ್ಲಿ ಗಾಳಿ ಮಳೆಗೆ ಹೆಂಚಿನ ಮನೆ ಜಖಂಗೊಂಡಿದ್ದು, ಸ್ಥಳಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ…
‘ನಂದಿನಿ’ ಹೆಸರಿಗೆ ಕಳಂಕ ತರಬೇಡಿ ಮಂಡ್ಯ ಜಿ ಹಾಲು ಒಕ್ಕೂಟದಲ್ಲಿ ( ಮನ್ ಮುಲ್) ನಡೆದಿರುವ ಹಾಲಿನ ಪುಡಿ ಕಲಬೆರಕೆ…
ನೀಲಿಯೆಂದರೇನು?! ನೀಲಿಯೆಂದರೇನು ಬರಿಯ ಬಣ್ಣವೇನು ? ಮೈತ್ರಿ ಕಣಾ ಕರುಣೆ ಕಣಾ| ಸೂರ್ತಿ ಕಣಾ ಕೀರ್ತಿ ಕಣಾ| ಬುದ್ಧ ಬಸವ…
ಮಸೂರ ಬದಲಿಸಿ ಬಾಪುವ ಹುಡುಕಿದೆ ಅಂದಗೆಟ್ಟ ವುಡ್ಲ್ಯಾಂಡ್ ಶೂ, ಹರಿದ ಜೀನ್ಸ್, ಮಾಸಿದ ಟಿ-ಶರ್ಟಿನಲಿ ಕಸ ಆಯುತಿದ್ದನವನು ತಿರುವಿನಲಿ. ರಚ್ಚೆ…