ಮೈಸೂರು

ಮೈಸೂರು | ಸೈಬರ್‌ ವಂಚಕರಿಂದ 21 ಲಕ್ಷಕ್ಕೂ ಹೆಚ್ಚ ಹಣ ಕಳೆದುಕೊಂಡ ಮಹಿಳೆ

ಮೈಸೂರು : ಸೈಬರ್ ವಂಚಕರು ನಗರದ ಇಬ್ಬರಿಂದ ೩೧ ಲಕ್ಷ ರೂ.ಗೂ ಹೆಚ್ಚು ಹಣ ಲಪಟಾಯಿಸಿರುವ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಸ್ವ-ಉದ್ಯೋಗಿ ಮಹಿಳೆಯೊಬ್ಬರು ನಕಲಿ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿ ೧೯.೭೪ ಲಕ್ಷ ಹಾಗೂ ಎಪಿಕೆ ಫೈಲ್‌ಗಳ ಡೌನ್‌ಲೋಡ್ ಆಗಿದ್ದರಿಂದ ಖಾಸಗಿ ಸಂಸ್ಥೆ ಉದ್ಯೋಗಿ ೧೧.೬೯ ಲಕ್ಷ ಹಣ ಕಳೆದುಕೊಂಡಿದ್ದಾರೆ.

ಐಪಿಎಸ್ ಶ್ರಿನಿವಾಸನಗರದ ಮಹಿಳೆ, ನಾಲ್ಕು ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ ಟ್ರೇಡಿಂಗ್ ಜಾಹೀರಾತು ನೋಡಿ, ಅದರಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದ್ದಾರೆ. ನಂತರ ತಮ್ಮ ಹೆಸರು ಹಾಗೂ ಮೊಬೈಲ್ ನಂಬರ್ ನಮೂದಿಸಿ, ರಿಜಿಸ್ಟರ್ ಮಾಡಿಕೊಂಡಿ ದ್ದಾರೆ. ಕೂಡಲೇ ರಾಘವ್ ರಾಮ ಚಂದ್ರ ಹೆಸರಿನಲ್ಲಿ ಇಮೇಲ್ ಮೂಲಕ ಲಿಂಕ್ ಬಂದಿದ್ದು, ಅದರ ಮೂಲಕ ಮಹಿಳೆ ಟ್ರೇಡಿಂಗ್ ಅಕೌಂಟ್ ತೆರೆದಿದ್ದಾರೆ.

ಇದನ್ನು ಓದಿ: ಸೈಬರ್‌ ಪೊಲೀಸ್‌ ಸೋಗಿನಲ್ಲಿ ವಂಚನೆ : ಮಹಿಳೆ ಸೇರಿದಂತೆ ಐದು ಮಂದಿ ಬಂಧನ

ನಂತರ ನಿಖಿಲ್ ಗೌಡ ಹೆಸರಿನಲ್ಲಿ ಕರೆ ಮಾಡಿದ ವ್ಯಕ್ತಿಯೊಬ್ಬ, ತನ್ನನ್ನು ಹಣಕಾಸು ಸಲಹೆಗಾರ ಎಂದು ಪರಿಚಯಿಸಿ ಕೊಂಡು, ಹೈ ವಾಲ್ಯೂಂ ಟ್ರೇಡಿಂಗ್ ಬಗ್ಗೆ ಮಾಹಿತಿ ನೀಡಿದ್ದಾನೆ ಬಳಿಕ ಸೂರಜ್ ರೆಡ್ಡಿ ಹೆಸರಿನಲ್ಲಿ ಕರೆ ಮಾಡಿದ ಮತ್ತೋರ್ವನೂ ಹಣಕಾಸು ಸಲಹೆಗಾರ ನೆಂದು ಹೇಳಿಕೊಂಡು ಟ್ರೇಡಿಂಗ್‌ನಲ್ಲಿ ಭಾರೀ ಲಾಭ ಸಿಗಲಿದೆ ಎಂದು ತಿಳಿಸಿದ್ದಾನೆ.

ಇವರುಗಳ ಮಾತು ನಂಬಿದ ಮಹಿಳೆ ಹಂತ ಹಂತವಾಗಿ ೧೯,೭೪,೭೦೦ ರೂ.ಗಳನ್ನು ವರ್ಗಾವಣೆ ಮಾಡಿದ್ದಾರೆ. ಒಮ್ಮೆ ಹಣವನ್ನು ವಿತ್ ಡ್ರಾ ಮಾಡಲು ಯತ್ನಿಸಿದಾಗ ತೆರಿಗೆ ಮೊತ್ತ ಪಾವತಿ ಸುವಂತೆ ಸೂಚಿಸಲಾಗಿದೆ. ಅದರಂತೆ ಹಣ ಪಾವತಿಸಿದ ನಂತರವೂ ವಿತ್‌ಡ್ರಾ ಸಾಧ್ಯವಾಗದಿದ್ದಾಗ ಸೆನ್ ಪೊಲೀಸರಿಗೆ ದೂರು ನೀಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಮೈಸೂರು ತಾಲೂಕು ನಾಡನಹಳ್ಳಿ ನಿವಾಸಿಯೊಬ್ಬರ ಮೊಬೈಲ್‌ಗೆ ಬಂದ ಎಪಿಕೆ ಫೈಲ್‌ಗಳು ಡೌನ್ಛೋಡ್ ಆದ ಬಳಿಕ ಅವರ ಬ್ಯಾಂಕ್ ಖಾತೆಗೆ ಕನ್ನ ಹಾಕಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿನ ಅವರ ಖಾತೆಯಿಂದ ೧೧,೬೯,೬೦೦ ರೂ. ಅಪರಿಚಿತರ ಖಾತೆಗೆ ವರ್ಗಾ ವಣೆಗೊಂಡಿದ್ದು, ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಆಂದೋಲನ ಡೆಸ್ಕ್

Recent Posts

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಹಿಷ ದಸರಾಗೆ ಡೇಟ್ ಫಿಕ್ಸ್!

ಮೈಸೂರು: ಅಕ್ಟೋಬರ್ 10ರಂದು ಮೈಸೂರಿನಲ್ಲಿ ಮಹಿಷ ದಸರಾ ಆಚರಣೆ ನಡೆಯಲಿದೆ. ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9 ಗಂಟೆಗೆ ಮಹಿಷ ಪ್ರತಿಮೆಗೆ…

11 hours ago

ಮೈಸೂರು ದಸರಾ 2026: ಸಿಎಂ ಡಿ.ಕೆ.ಶಿವಕುಮಾರ್‌ಗೆ ಅಧಿಕೃತ ಆಹ್ವಾನ

ಬೆಂಗಳೂರು: ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…

11 hours ago

ಕಾಡಾನೆಗೆ ಲಾರಿ ಡಿಕ್ಕಿ ಹೊಡೆಸಲು ಯತ್ನ: ಚಾಲಕನಿಗೆ ₹5,000 ದಂಡ

ಚಾಮರಾಜನಗರ: ಗುಂಡ್ಲುಪೇಟೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ರಸ್ತೆಯಲ್ಲಿ ರಸ್ತೆ ದಾಟುತ್ತಿದ್ದ ಕಾಡಾನೆಯ ಮೇಲೆಯೇ ಲಾರಿ ಚಲಾಯಿಸಲು ಯತ್ನಿಸಿದ…

11 hours ago

ಅಕ್ಟೋಬರ್.‌11ಕ್ಕೆ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಕಾರ್ಯಕ್ರಮ

ಮಂಡ್ಯ: ಇದೇ ಅಕ್ಟೋಬರ್.‌11ಕ್ಕೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಕಾರ್ಯಕ್ರಮ ನಡೆಯಲಿದೆ. ದಸರಾ ಉತ್ಸವದ ಪ್ರಯುಕ್ತ ನಡೆಯಲಿರುವ…

11 hours ago

ಹನೂರು-ಪಾಲಾರ್ ರಸ್ತೆಯ ಕೌದಳ್ಳಿ ಸೇತುವೆ ಹಾನಿ: ಭಾರಿ ವಾಹನ ಸಂಚಾರಕ್ಕೆ ನಿರ್ಬಂಧ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಹನೂರು-ಪಾಲಾರ್ (ಎಲ್ಲೇಮಾಳ-ಕೌದಳ್ಳಿ) ಜಿಲ್ಲಾ ಮುಖ್ಯ…

11 hours ago

ಮೈಸೂರಿನಲ್ಲಿ ಯುವಕನ ಬರ್ಬರ ಹತ್ಯೆ..!

ಮೈಸೂರು: ಗಣೇಶ ಹಬ್ಬಕ್ಕೆ ಹಾಸನದಿಂದ ಮೈಸೂರಿಗೆ ಬಂದಿದ್ದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. 20 ವರ್ಷದ ಗೌರವ್‌…

13 hours ago