ಮೈಸೂರು: ಮೈಸೂರು ಜಿಲ್ಲೆಯ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ಅಧೀನದ ಅಡಿಯಲ್ಲಿ 163 ಸರ್ಕಾರಿ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಈ ಎಲ್ಲಾ ಆಸ್ಪತ್ರೆಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದೆ.
ಮೇಟಗಳ್ಳಿಯ ಜಿಲ್ಲಾ ಆಸ್ಪತ್ರೆಯಲ್ಲಿ ಬೆಂಕಿ ಅವಘಡಗಳನ್ನು ತಡೆಗಟ್ಟಲು, ಕಟ್ಟಡದಲ್ಲಿ ಅಗ್ನಿ ನಿರೋಧಕ ವ್ಯವಸ್ಥೆಗಳಾದ ಹೈಡ್ರೆಂಟ್, ಹೋಜ್‌ರೀಲ್, ಪ್ರತ್ಯೇಕ ನೀರು ಸಂಗ್ರಹಣೆ ತೊಟ್ಟಿ, ಫೈರ್ ಅಲರಾಮ್‌ಗಳನ್ನು ಅಳವಡಿಸಲಾಗಿದೆ. ಅಲ್ಲದೇ, ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ, ಒಂದೆಡೆ ಸುರಕ್ಷಿತವಾಗಿ ಸೇರಲು ಅಗ್ನಿ ಸುರಕ್ಷಿತ ಸ್ಥಳಗಳನ್ನು ಗುರುತಿಸಲಾಗಿದೆ. ಅಗ್ನಿ ಅವಘಡಗಳಲ್ಲಿ ಹೋರಾಡುವ ಬಗ್ಗೆ ಅಗ್ನಿ ನಿರೋಧಕಗಳನ್ನು ಬಳಸುವ ಬಗ್ಗೆ, ಮಾಹಿತಿ ಶಿಕ್ಷಣ, ಸಂಪರ್ಕ ಸೂಚನಾ ಫಲಕ ಅಳವಡಿಸಲಾಗಿದೆ. ಎಲ್ಲಾ ಸಿಬ್ಬಂದಿಗಳಿಗೆ ಅಗ್ನಿ ಅನಾಹುತಗಳನ್ನು ತಡೆಗಟ್ಟಲು ಹಾಗೂ ವಿವಿಧ ರೀತಿಯ ಅಗ್ನಿ ಅನಾಹುತಗಳನ್ನು ತಡೆಗಟ್ಟುವ ಕುರಿತಂತೆ ಎಲ್ಲಾ ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಲಾಗಿದ್ದು, ಆಸ್ಪತ್ರೆಯ ಹಂತದಲ್ಲಿ ಅಗ್ನಿಶಾಮಕ ತಂಡವನ್ನು ರಚಿಸಲಾಗಿದೆ.
ಮೈಸೂರು ಜಿಲ್ಲೆಯ 6 ತಾಲ್ಲೂಕು ಆಸ್ಪತ್ರೆಗಳಲ್ಲಿ, ನಂಜನಗೂಡು, ಹೆಚ್.ಡಿ.ಕೋಟೆ, ಕೆ.ಆರ್‌ನಗರ, ಟಿ.ನರಸಿಪುರ ಆಸ್ಪತ್ರೆಗಳಲ್ಲಿ ಹಾಗೂ 9 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಅಗ್ನಿ ಅನಾಹುತಗಳನ್ನು ತಪ್ಪಿಸುವ ಕುರಿತಂತೆ ಮುನ್ನೆಚರಿಕೆ ಕ್ರಮವಾಗಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳಿಂದ ಅಗ್ನಿದುರಂತಗಳ ಪರಿಶೀಲನೆ (ಆಡಿಟ್) ಮಾಡಿ ಸೂಕ್ತ ಕ್ರಮ ಕೈಗೊಳ್ಳುವ ಕುರಿತಂತೆ ವರದಿ ಪಡೆಯಲಾಗಿದೆ. 146 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗ್ನಿ ಅವಘಡಗಳನ್ನು ತಡೆಗಟ್ಟುವ ಕುರಿತಂತೆ, ಆಸ್ಪತ್ರೆಯ ಎಲ್ಲಾ ವಿಭಾಗ ಮತ್ತು ರೋಗಿ ಆರೈಕೆ ವಿಭಾಗಗಳಲ್ಲಿ ಹಾಗೂ ತುರ್ತು ನಿರ್ವಾಹಣ ಘಟಕಗಳು, ಶಸ್ತçಚಿಕಿತ್ಸಾ ವಿಭಾಗ, ಒಳ ಮತ್ತು ಹೊರ ರೋಗಿ ವಿಭಾಗಗಳಲ್ಲಿ, ಎ.ಬಿ.ಸಿ ಪ್ರಕಾರದ ಅಗ್ನಿ ನಿರೋಧಕಗಳನ್ನು ಅಳವಡಿಸಲಾಗಿದೆ.
ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳ ಅಗ್ನಿ ಸುರಕ್ಷತಾ ಕ್ರಮಗಳ ಕುರಿತಂತೆ, ಕೆಪಿಎಂಇ ನಿಯಮಗಳ ಅಡಿಯಲ್ಲಿ ಸಂಸ್ಥೆಗಳು ಪರವಾನಿಗೆ ಪತ್ರ ಪಡೆಯುವ ಮುನ್ನ ಮತ್ತು ಪರವಾನಿಗೆ ನವೀಕರಿಸುವ ಸಮಯದಲ್ಲೇ, ಅಗ್ನಿ ಸುರಕ್ಷತ ಕ್ರಮಗಳನ್ನು ಅಳವಡಿಸಿಕೊಂಡಿರುವ ಬಗ್ಗೆ ಕೆಪಿಎಂಇ ತಂಡವು ಮೇಲ್ವಿಚಾರಣೆ ನಡೆಸಿ ಖಾತರಿ ಪಡಿಸಿಕೊಂಡ ನಂತರವೇ ಪರವಾನಿಗೆ ನೀಡಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಾಮರಾಜನಗರ: ತಾಲೂಕಿನ ಸಂತೆಮರಹಳ್ಳಿ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಖಾಲಿ ಇರುವ 8 ಅಂಗನವಾಡಿ ಕಾರ್ಯಕರ್ತೆ ಹಾಗೂ 19 ಸಹಾಯಕಿಯರ…
ಮೈಸೂರು: ಜೂನ್ 2027ರೊಳಗೆ ಮೈಸೂರು-ಕುಶಾಲನಗರ ರಾಷ್ಟ್ರೀಯ ಹೆದ್ದಾರಿ ಯೋಜನೆ ಪೂರ್ಣಗೊಳ್ಳಲಿದ್ದು, ಇದೀಗ ಕಾಮಗಾರಿಯೂ ಸ್ಥಿರ ಪ್ರಗತಿಯಲ್ಲಿದೆ ಎಂದು ಸಂಸದ ಯದುವೀರ್…
ಮೈಸೂರು: ಇಲ್ಲಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಕಳೆದ ಹತ್ತು ದಿನಗಳಿಂದ ನಿರಂತರವಾಗಿ ನಡೆದ ಚಿರತೆ ಸೆರೆ ಕಾರ್ಯಾಚರಣೆಯನ್ನು …
ಕೊಪ್ಪಳ: ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಬಿ.ಎಸ್.ಯಡಿಯೂರಪ್ಪ ಅವರು ಹಳ್ಳಿಗಳಲ್ಲಿ ಸುತ್ತಾಡಿ ಪಕ್ಷವನ್ನು ಕಟ್ಟಿದ್ದಾರೆ. ಆದರೆ ಇತ್ತೀಚೆಗೆಷ್ಟೇ ಬಿಜೆಪಿಗೆ ಬಂದಿರುವ ರಮೇಶ್…
ಬೆಳಗಾವಿ : ಜಿಲ್ಲೆಯ ರಾಯಬಾಗ ತಾಲ್ಲೂಕಿನ ಸವದತ್ತಿ ಗ್ರಾಮದ ಬಳಿಯ ಗುಡ್ಡಾಗಾಡು ಪ್ರದೇಶದಲ್ಲಿ 17 ವರ್ಷದ ಇಬ್ಬರು ಯುವತಿಯರ ಮೇಲೆ…
ಬೆಂಗಳೂರು: ಕಂದಾಯ ಇಲಾಖೆಯ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದು, ಆ ಅಧಿಕಾರಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಚಿವ ಬೈರೇಗೌಡರ ವಿರುದ್ಧ…