ಮೈಸೂರು: ಮೈಸೂರು ಅರಮನೆ ಮಂಡಳಿಯು ʻಅರಮನೆ ಅಂಗಳʼದಲ್ಲಿ ಡಿಸೆಂಬರ್ 21 ರಿಂದ “ಫಲಪುಷ್ಪ ಪ್ರದರ್ಶನ” ಆಯೋಜಿಸಿದ್ದು, ಜೊತೆಗೆ ಸಂಗೀತ ಹಾಗೂ ಸಾಂಸ್ಕೃತಿಕೆ ಕಾರ್ಯಕ್ರಮಗಳು ಮೇಳೈಸಲಿವೆ.
ಕ್ರಿಸ್‌ಮಸ್ ಹಾಗೂ ಹೊಸ ವರ್ಷಾರಚಣೆ ಹಿನ್ನೆಲೆ ನಗರಕ್ಕೆ ಬರುವ ಪ್ರವಾಸಿಗರಿಗಾಗಿ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಡಿ.31ರವರೆಗೆ ನಿತ್ಯ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಪ್ರವಾಸಿಗರು ಹಾಗೂ ನಾಗರಿಕರು ಫಲಪುಷ್ಪ ಪ್ರದರ್ಶನ ನೋಡಬಹುದು.
ಕಾರ್ಯಕ್ರಮವನ್ನು ಮುಖ್ಯಮಂತ್ರಿಸಿ ಸಿದ್ದರಾಮಯ್ಯ ಹಾಗೂ ಉಕ್ಕು ಮತ್ತು ಬೃಹತ್ ಕೈಗಾರಿಕಾ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರ ಘನ ಉಪಸ್ಥಿತಿಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪಉದ್ಘಾಟನೆ ಮಾಡಲಿದ್ದು, ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಎಸ್.ಶ್ರೀವತ್ಸ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರವೇಶ ದರ ನಿಗಧಿ: ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸುವ ವೀಕ್ಷಕರಿಗೆ ಪ್ರವೇಶ ದರವನ್ನು ನಿಗಧಿ ಪಡಿಸಿದ್ದು, ವಯಸ್ಕರಿಗೆ ಮತ್ತು ವಿದೇಶಿ ಪ್ರವಾಸಿಗರಿಗೆ ರೂ.30, 10 ರಿಂದ 18 ವರ್ಷದೊಳಗಿನ ಮಕ್ಕಳಿಗೆ ರೂ.20 ಗಳು ಹಾಗೂ 10 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ.
ಡಿಸೆಂಬರ್ 21 ರಿಂದ 31 ರವರೆಗೆ ಬೆಳಿಗ್ಗೆ 10 ರಿಂದ ರಾತ್ರಿ 9 ರವರೆಗೆ ಫಲಪುಷ್ಪ ಪ್ರದರ್ಶನ ಹಾಗೂ ಸಂಜೆ 7 ರಿಂದ 9 ರ ವರೆಗೆ ಅರಮನೆ ವಿದ್ಯುತ್ ದೀಪಾಲಂಕಾರವಿರುತ್ತದೆ.
ಸಾಂಸ್ಕೃತಿಕ ಕಾರ್ಯಕ್ರಮ
ಡಿಸೆಂಬರ್ 21 ರಂದು ಸಂಜೆ 5 ಗಂಟೆಗೆ ಅರಮನೆಯ ಫಲಪುಷ್ಪ ಪ್ರದರ್ಶನ, ವರಾಹ ಉದ್ಯೋನವನದಲ್ಲಿ ಕುಸ್ತಿ ಪಂದ್ಯಾವಳಿ ಹಾಗೂ ಬೊಂಬೆ ಮನೆ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲ್ಲಿದ್ದು, ಸಂಜೆ 5:30 ರಿಂದ 6:30 ರವರೆಗೆ ಶ್ರೀ.ಸಿ.ಆರ್. ರಾಘವೇಂದ್ರ ಪ್ರಸಾದ್ ಮತ್ತು ತಂಡದವರಿoದ ವಾದ್ಯಸಂಗೀತ ಕಾರ್ಯಕ್ರಮ, ಸಂಜೆ 7 ಗಂಟೆಗೆ ಎ.ಆರ್. ಕಲಾ ತಂಡದವರಿoದ ನಾಡಗೀತೆ ಮತ್ತು ಮೈಸೂರು ಸಂಸ್ಥಾನದ ನಾಡಗೀತೆಯಾದ ಕಾಯೌಶ್ರೀಗೌರಿ ಕರುಣಾಲಹರಿ ಗೀತೆ, ಸಂಜೆ 7:15 ರಿಂದ 7:30 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ, ಸಂಜೆ 7:30 ರಿಂದ 9:30 ರವರೆಗೆ ಖ್ಯಾತ ಹಿನ್ನಲೆಗಾಯಕರಾದ ಶ್ರೀ ಮಧುಬಾಲಕೃಷ್ಣನ್ ಮತ್ತು ತಂಡದವರಿoದ “ಸಂಗೀತ ರಸಸಂಜೆ” ಕಾರ್ಯಕ್ರಮ ಮತ್ತು ಬೊಂಬೆಗಳ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ ಹಾಗೂ ವಿವಿಧ ಕಾರ್ಯಕ್ರಗಳು ನಡೆಯಲಿದೆ.
ಡಿಸೆಂಬರ್ 22 ರಂದು ಸಂಜೆ 6 ರಿಂದ 6.45 ರವರೆಗೆ ರಘು. ಆರ್ ಮತ್ತು ತಂಡದವರಿoದ ಗೀತಗಾಯನ, ಸಂಜೆ 6.45 ರಿಂದ 7.15 ರವರೆಗೆ ಭಾರತೀಯ ವಿದ್ಯಾಭವನರವರಿಂದ “ನೃತ್ಯರೂಪಕ” ಹಾಗೂ ಸಂಜೆ 7.30 ರಿಂದ 9.30 ರವರೆಗೆ ಖ್ಯಾತ ಹಿನ್ನಲೆ ಗಾಯಕರಾದ ವಿಜಯ್ ಪ್ರಕಾಶ್ ಮತ್ತು ತಂಡದವರಿoದ “ಸಂಗೀತ ಸಂಜೆ” ಕಾರ್ಯಕ್ರಮಗಳು ನಡೆಯಲಿವೆ.
ಡಿಸೆಂಬರ್ 23 ರಂದು ಸಂಜೆ 6 ರಿಂದ 6.45 ರವರೆಗೆ ಆಯುಷ್ ಎಂ. ಡಿ ಮತ್ತು ತಂಡದವರಿoದ ಕರ್ನಾಟಕ “ಶಾಸ್ತ್ರೀಯ ಸಂಗೀತ” ಕಾರ್ಯಕ್ರಮ, ಸಂಜೆ 7 ರಿಂದ 8.30 ರವರೆಗೆ ಖ್ಯಾತ ಮೃದಂಗ ವಿದ್ವಾನ್ ಶ್ರೀ ಆನೂರು ಅನಂತಕೃಷ್ಣ ಶರ್ಮ ಮತ್ತು ತಂಡದವರಿoದ “ಲಯ- ಲಾವಣ್ಯ” ಕಾರ್ಯಕ್ರಮ ನಡೆಯಲಿದೆ.
ಡಿಸೆಂಬರ್ 24 ರಂದು ಸಂಜೆ 6 ರಿಂದ 6.45 ರವರೆಗೆ ಶಡಜ್ ಗೊಡ್ಖಂಡಿ( ಕೊಳಲು) ಮತ್ತು ಅಪೂರ್ವ ಕೃಷ್ಣ ( ಪಿಟೀಲು ವಾದನ) ಹಾಗೂ ತಂಡದವರಿoದ ‘ಫೂಶನ್ ಸಂಗೀತ’ ಕಾರ್ಯಕ್ರಮ, ಸಂಜೆ 7 ಗಂಟೆಯಿoದ 8 ಗಂಟೆಯವರೆಗೆ ಶ್ರೀ ಸಿದ್ದಾರ್ಥ ಬೆಲ್ಮಣ್ಣ ಅವರಿಂದ ‘ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ’ ಹಾಗೂ ಗಂಜಿoಫ ರಘುಪತಿ ಭಟ್ ವರ್ಣಚಿತ್ರ ಕಲಾವಿದರಿಂದ “ದಾಸವಾಣಿ ಚಿತ್ರಣ” ಕಾರ್ಯಕ್ರಮ ಹಾಗೂ ಸಂಜೆ 8 ರಿಂದ 9.30 ರವರೆಗೆ ಚಂಪಕ ಅಕಾಡೆಮಿ ವೃಂದ ಡಾ. ನಾಗಲಕ್ಷ್ಮಿನಾಗರಾಜನ್ ಹಾಗೂ 40 ಜನ ತಂಡದವರಿoದ ಶ್ರೀ ಕೃಷ್ಣ ಲೀಲಾ ವಿಭೂತಿ ಪದ್ಮಭೂಷಣ ಶ್ರೀ ಡಿ. ವಿ. ಜಿ. ವಿರಜಿತ ಗೇಯ “ನೃತ್ಯ ನಾಟಕ” ಕಾರ್ಯಕ್ರಮ ನಡೆಯಲಿವೆ.
ಡಿಸೆಂಬರ್ 25 ಸಂಜೆ 5.45 ರಿಂದ 6.30 ರವರೆಗೆ ಶ್ರೀ ನಾಹರ್ ಗುರುದತ್ತ ಮತ್ತು ತಂಡದವರಿoದ “ಶಾಸ್ತ್ರೀಯ ಸಂಗೀತ” ಕಾರ್ಯಕ್ರಮ, ಸಂಜೆ 6.30 ರಿಂದ 7.30 ರವರೆಗೆ ಸಂಗೀತ ವಿದ್ವಾನ್ ಪ್ರೊ. ಡಾ.ಸಿ.ಎ ಶ್ರೀಧರ, ವಿದ್ವಾನ್ ಸಿ.ಎಸ್ ಕೇಶವಚಂದ್ರ ಮತ್ತು ವೃಂದದವರಿAದ “ಕರ್ನಾಟಕ ಶಾಸ್ತ್ರೀಯ ದ್ವಂದ್ವ ವೇಣುವಾದನ” ಕಾರ್ಯಕ್ರಮ ಹಾಗೂ ಸಂಜೆ 7.30 ರಿಂದ 9 ಗಂಟೆಯವರೆಗೆ ಜೀ ಕನ್ನಡ ರಿಯಾಲಿಟಿ ಶೋ ಖ್ಯಾತಿಯ ಗಾಯಕರುಗಳಾದ ದರ್ಶನ್ ನಾರಾಯಣ್, ಐಶ್ವರ್ಯರಂಗರಾಜನ್, ಸುನಿಲ್ ಗುಜಗೊಂಡ್, ವಸುಶ್ರೀ ಹಳೆಮನೆ, ಜ್ಞಾನಗುರುರಾಜ್ ಮತ್ತು ತಂಡದವರಿoದ ” ಸಂಗೀತಯಾನ” ಕಾರ್ಯಕ್ರಮಗಳು ನಡೆಯಲಿದೆ.
ಪೊಲೀಸ್ ಇಲಾಖೆಯ ವತಿಯಿಂದ ಡಿಸೆಂಬರ್ 31 ರಂದು ರಾತ್ರಿ 11 ರಿಂದ 12 ಗಂಟೆಯವರೆಗೆ ಕರ್ನಾಟಕ ಮತ್ತು ಆಂಗ್ಲ ಬ್ಯಾಂಡ್ ಕಾರ್ಯಕ್ರಮ, ಮಧ್ಯರಾತ್ರಿ 12 ರಿಂದ 12:15 ರವರೆಗೆ ಮೈಸೂರು ಅರಮನೆ ಮಂಡಳಿಯ ವತಿಯಿಂದ “ಹೊಸ ವರ್ಷಾಚರಣೆ” ಯ ಪ್ರಯುಕ್ತ ಬಣ್ಣಗಳ ಚಿತ್ತಾರದಿಂದ ಕೂಡಿದ ಶಬ್ಧರಹಿತ ಹಸಿರು ಪಟಾಕಿ ಸಿಡಿಸುವ ಕಾರ್ಯಕ್ರಮ ನಡೆಯಲಿದೆ.
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…
ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…
ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…
ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…
ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…