ಮೈಸೂರು: ಪಾರಂಪರಿಕ ನಗರಿ ಎಂದು ಹೆಸರುವಾಸಿಯಾಗಿರುವ ಮೈಸೂರಿನಲ್ಲಿ ಈಗ ಪ್ರಮುಖ ವೃತ್ತಗಳ ನಿರ್ವಹಣೆ ನಿಂತುಹೋಗಿದೆ. ಈ ಹಿನ್ನೆಲೆಯಲ್ಲಿ ಅವುಗಳು ಇಲಿ, ಹೆಗ್ಗಣಗಳ ಆವಾಸ ಸ್ಥಾನವಾಗಿದ್ದು, ಪ್ರತಿಮೆಗಳ ಸೌಂದರ್ಯಕ್ಕೂ ಧಕ್ಕೆ ಉಂಟಾಗುತ್ತಿದೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 200ಕ್ಕೂ ಹೆಚ್ಚು ವೃತ್ತಗಳಿದ್ದು, ನೂರಾರು ಪ್ರತಿಮೆಗಳಿವೆ. ಕುವೆಂಪುನಗರ, ರಾಮಕೃಷ್ಣನಗರ, ಬನ್ನಿಮಂಟಪ, ರಾಮಸ್ವಾಮಿ ಸರ್ಕಲ್, ವಿದ್ಯಾರಣ್ಯಪುರಂ, ಮೆಟ್ರೋಪೋಲ್ ಸರ್ಕಲ್, ಸರಸ್ವತಿಪುರಂ, ನಜರಬಾದ್ ಸಹಿತ ಎಲ್ಲಾ ಬಡಾವಣೆಗಳಲ್ಲಿ ಒಂದೊಂದು ವೃತ್ತಗಳಿವೆ.
ಡಾ.ಬಿ.ಆರ್.ಅಂಬೇಡ್ಕರ್, ಡಾ.ರಾಜ್ ಕುಮಾರ್, ಕುವೆಂಪು, ಪರಮಹಂಸ, ವಿವೇಕಾನಂದ, ಬಸವೇಶ್ವರ ಸೇರಿದಂತೆ ಸಾಕಷ್ಟು ಪ್ರತಿಮೆಗಳಿಗೆ. ವೃತ್ತಗಳ ಒಳಭಾಗದಲ್ಲಿ ಗಾರ್ಡನ್‌ಗಳಿದ್ದು, ಅವುಗಳನ್ನು ಕೂಡ ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿಲ್ಲ. ಮೊದಲೆಲ್ಲಾ ಇಲ್ಲಿ ಗಿಡಗಳನ್ನು ಬೆಳೆಸಲಾಗುತ್ತಿತ್ತು. ಆದರೀಗ ವೃತ್ತಗಳ ಬಗ್ಗೆ ಯಾರೂ ಕೂಡ ತಲೆಕೆಡಿಸಿಕೊಳ್ಳುತ್ತಿಲ್ಲ.
ವೃತ್ತಗಳ ನಿರ್ವಹಣೆಯನ್ನು ಸಂಘ, ಸಂಸ್ಥೆಗಳಿಗೆ ಕೊಟ್ಟರೆ ಸೂಕ್ತ ನಿರ್ವಹಣೆ ಜೊತೆಗೆ ಪ್ರತಿಮೆಗಳ ಸಂರಕ್ಷಣೆಯೂ ಆಗುತ್ತದೆ. ಮೈಸೂರು ನಗರ ಪಾಲಿಕೆ ಅದಕ್ಕೆ ಅವಕಾಶ ನೀಡಬೇಕಿದೆ. ಇವುಗಳ ಜೊತೆಗೆ ಅರಮನೆ ಗೋಪುರ, ಗೇಟುಗಳು, ಕಿಟಕಿಗಳಿಗೆ, ಆರ್ಚ್‌ಗಳಲ್ಲಿಯೂ ಪಾರಿವಾಳಗಳು ಕುಳಿತು ಹಿಕ್ಕೆ ಹಾಕುತ್ತಿವೆ. ಆದ್ದರಿಂದ ದಸರಾ ಸಮಯದಲ್ಲಿ ಮಾತ್ರ ನಡೆಯುತ್ತಿದ್ದ ಸ್ವಚ್ಛತಾ ಕಾರ್ಯ ತಿಂಗಳಿಗೊಮ್ಮೆ ಮಾಡಲು ಆರಂಭಿಸಬೇಕು ಎಂದು ಪರಿಸರ ಪ್ರೇಮಿಗಳು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಮೈಸೂರು : ಜಿಲ್ಲೆಯ ಟಿ.ನರಸೀಪುರ ಪಟ್ಟಣದಲ್ಲಿ ಬೆಳ್ಳಂಬೆಳಿಗ್ಗೆಯೇ ಮಚ್ಚು ಲಾಂಗುಗಳಿಂದ ದುಷ್ಕರ್ಮಿಗಳು ಹಲ್ಲೆ ನಡೆಸಿ ವ್ಯಕ್ತಿಯೋರ್ವನನ್ನು ಹತ್ಯೆ ಮಾಡಿರುವ ಘಟನೆ…
ಕೋಲ್ಕತ್ತಾ : ಇಲ್ಲಿನ ವಿಮಾನ ನಿಲ್ದಾಣದಲ್ಲಿ ಫುಟ್ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ ಅವರನ್ನು ನೋಡಲು ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಸೇರಿದ್ದರು.…
ನ್ಯೂಯಾರ್ಕ್ : ಭಾರತದ ಮೇಲೆ ಡೊನಾಲ್ಡ್ ಟ್ರಂಪ್ ಹೇರಿರುವ ಶೇ.50 ಪ್ರತಿಸುಂಕವನ್ನು ಅಂತ್ಯಗೊಳಿಸಲು ಅಮೆರಿಕದ ಮೂವರು ಸಂಸದರು ನಿಲುವಳಿ ಮಂಡಿಸಿದ್ದಾರೆ.…
ಹಾಸನ : ಕರ್ತವ್ಯದ ವೇಳೆ ಲಾರಿ ಡಿಕ್ಕಿಯಾಗಿ KSRTC ಬಸ್‌ನ ಚೆಕ್ಕಿಂಗ್ ಇನ್ಸ್ಪೆಕ್ಟರ್ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಆಲೂರು…
ಶೇ.30ರಷ್ಟು ಉತ್ಪಾದನೆ ಕುಸಿತ ; ಉತ್ತರ ಕೊಡಗಿನ ಭಾಗದಲ್ಲಿ ಹೆಚ್ಚಿನ ಬೆಳೆ ನಷ್ಟ ನವೀನ್ ಡಿಸೋಜ ಮಡಿಕೇರಿ: ಈ ಬಾರಿಯ…
ಭೇರ್ಯ ಮಹೇಶ್ ಕೆ.ಆರ್.ನಗರ : ಭತ್ತದ ನಾಡು ಎಂದೇ ಪ್ರಖ್ಯಾತಿ ಹೊಂದಿರುವ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳಲ್ಲಿ ಇದೀಗ ಭತ್ತದ…