ಮೈಸೂರು : ನವರಾತ್ರಿ ಸಂದರ್ಭದಲ್ಲಿ ಮಾತ್ರ ನೋಡಸಿಗುವ ರತ್ನ ಖಚಿತ ಸಿಂಹಾಸನವನ್ನು ಕಣ್ತುಂಬಿಕೊಳ್ಳಲು ದೇಶ, ವಿದೇಶಗಳಿಂದ ಸಹಸ್ರಾರು ಪ್ರವಾಸಿಗರು ಮೈಸೂರು ಅರಮನೆಗೆ ಆಗಮಿಸುತ್ತಾರೆ. ಇದೀಗ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಈ ಸಿಂಹಾಸನ ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ. ಆದರೆ ಫೋಟೋ ವಿಡಿಯೋ ತೆಗೆಯುವುದನ್ನು ನಿರ್ಬಂಧಿಸಲಾಗಿದೆ.
ಅಕ್ಟೋಬರ್ 9ರಂದು ಅರಮನೆಯ ಖಾಸಗಿ ದರ್ಬಾರ್ ಹಾಲ್ನಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಸಿಂಹಾಸನ ಜೋಡಣೆ ಕಾರ್ಯ ನಡೆದಿದೆ. ಸಿಂಹಾಸನಕ್ಕೆ ಪ್ರತ್ಯೇಕ ಪರದೆ ಅಳವಡಿಸಿ ಮುಚ್ಚಲಾಗಿದ್ದು, ಪರದೆಯ ಒಳ ಹೋಗಿ ಸಿಂಹಾಸನ ನೋಡಲು ಪ್ರವಾಸಿಗರಿಗೆ 50 ರೂಪಾಯಿ ಟಿಕೆಟ್ ನಿಗದಿಪಡಿಸಲಾಗಿದೆ.ಅರಮನೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಇದ್ದು, ದರ್ಬಾರ್ ಹಾಲ್ನಲ್ಲಿ ಅರಮನೆ ಆಡಳಿತ ಮಂಡಳಿ ಭದ್ರತೆಗೆ ಹಾಕಿರುವ ಸಿಸಿಟಿವಿಯನ್ನೂ ಮುಚ್ಚಲಾಗಿದೆ. ಇಂದಿನಿಂದ ನವೆಂಬರ್ 7ರ ವರೆಗೆ ಸಿಂಹಾಸನವನ್ನು ಪ್ರವಾಸಿಗರು ವೀಕ್ಷಿಸಲು ಅವಕಾಶವಿದೆ. ಇದಕ್ಕಾಗಿ ದರ್ಬಾರ್ ಹಾಲ್ನಲ್ಲಿ ರಾಜವಂಶಸ್ಥರ ಕಡೆಯಿಂದ ವಿಶೇಷ ಕೌಂಟರ್ ಕೂಡಾ ತೆರೆಯಲಾಗಿದೆ.
ಈ ಸಿಂಹಾಸನಕ್ಕೆ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ರಾಜವಂಶಸ್ಥರಿಂದ ಪೂಜೆ ನಡೆಯುತ್ತದೆ. ವಿಶಿಷ್ಟ ಆಕಾರದಲ್ಲಿರುವ ಭವ್ಯ ಸಿಂಹಾಸನದ ಕೆಳ ಭಾಗದ 4 ಕಡೆ ಕುದುರೆಗಳ ಲಾಂಛನ, ಸಿಂಹಾಸನಕ್ಕಿರುವ ಮೆಟ್ಟಿಲುಗಳಲ್ಲಿ ರಾಜ ಪರಂಪರೆಯ ಸಿಂಹ ಲಾಂಛನ, ಮೆಟ್ಟಿಲುಗಳ ಮೇಲೆ ಹೊದಿಕೆಯಾಕಾರದ ರಾಜಪರಂಪರೆಯ ಚಿನ್ನದ ಲಾಂಛನಗಳು, ರಾಜರು ಕುಳಿತುಕೊಳ್ಳುವ ಹಿಂಭಾಗದಲ್ಲಿ ರಾಜ ಲಾಂಛನ ಗಂಡಬೇರುಂಡ, ಚಿನ್ನದ ಛತ್ರಿ ಹಾಗೂ ಛತ್ರಿಯ ಮೇಲಿನ ಭಾಗದಲ್ಲಿ ನವಿಲಿನ ಆಕಾರ, ನವಿಲಿನ ಕಣ್ಣುಗಳಲ್ಲಿ ಅಪರೂಪದ ವಜ್ರದ ಹರಳುಗಳಿವೆ.ರಾಜವಂಶಸ್ಥರ ಶರನ್ನವರಾತ್ರಿಯ ಪೂಜಾ ಕೈಂಕರ್ಯಕ್ಕೆ ಪೂರ್ವಭಾವಿಯಾಗಿ ಈ ಸಿಂಹಾಸನವನ್ನು ನಿನ್ನೆ ಬೆಳಗ್ಗೆ 10:05 ರಿಂದ 10:35ರ ಶುಭ ಲಗ್ನದಲ್ಲಿ ನುರಿತ ಅರಮನೆಯ ಕೆಲಸಗಾರರಿಂದ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ನೇತೃತ್ವದಲ್ಲಿ ಜೋಡಣೆ ಮಾಡಲಾಗಿತ್ತು.
ಮದ್ದೂರು: ದುಷ್ಕರ್ಮಿಗಳು ದೇವಾಲಯಗಳ ಬಾಗಿಲು ಮುರಿದು ಸರಣಿ ಕಳ್ಳತನ ಮಾಡಿರುವ ಘಟನೆ ತಾಲ್ಲೂಕಿನ ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಡಗನಹಳ್ಳಿ…
ಮೈಸೂರು : ಎನ್‌ಸಿಬಿ ಪೊಲೀಸರು ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದ ರಾಸಾಯನಿಕ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ ನಂತರ…
ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಆರೋಪಿ ರಾಜೀವ್ ಗೌಡಗೆ ಜಾಮೀನು…
ಬೆಂಗಳೂರು : ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿ ಕಾನ್ಫಿಡೆಂಟ್ ಗ್ರೂಪ್‌ನ ಸ್ಥಾಪಕ ಮತ್ತು ಚೇರ್ಮನ್ ಡಾ.ಸಿ.ಜೆ. ರಾಯ್…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು ‘ಮಾನಹಾನಿಕರ’ ಪೋಸ್ಟ್‌ನ್ನು ಬಿಜೆಪಿಯ ‘ಎಕ್ಸ್’ ಖಾತೆಯಲ್ಲಿ…
ಮಂಡ್ಯ : ಸಕ್ಕರೆ ನಗರ ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ರಾಜ್ಯ, ರಾಷ್ಟ್ರ ಹಾಗೂ…