ಮೈಸೂರು: ಇಲವಾಲದ ಸಮೃದ್ಧಿ ಬಡಾವಣೆಯಲ್ಲಿ ಬೌದ್ಧ ಉಪಾಸಕರಾದ ಕೆ.ಎಂ.ವಿನೋದ ಮತ್ತು ಎಚ್.ಸಿ.ರಾಜೇಶ್ ಅವರ ನಿವೇಶನದಲ್ಲಿ ಧಮ್ಮದೀಪ ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ಅಶೋಕಪುರಂನ ಬೌದ್ಧವಿಹಾರದ ಭಂತೆ ಡಾ.ಕಲ್ಯಾಣಸಿರಿ ಅವರ ಸಾನಿಧ್ಯದಲ್ಲಿ ಬುದ್ಧವಂದನೆಯೊಂದಿಗೆ ಧಮ್ಮೋಪದೇಶ ನಡೆಯಿತು.
ಬಳಿಕ ಮಾತನಾಡಿದವ ಭಂತೇಜಿ ಕಲ್ಯಾಣಿಸಿರಿ ಅವರು, ಬುದ್ಧತತ್ವ ಮಾನವತ್ವದ ಪ್ರತಿರೂಪವಾಗಿದ್ದು ಲೋಕದ ಜೀವರಾಶಿಗಳ ಹಿತ ಮತ್ತು ಸುಖಕ್ಕಾಗಿ ಹಾತೊರೆಯುತ್ತದೆ. ಜಾತಿಕೊಳಕುಗಳಿಂದ ಮತಿಗೆಟ್ಟ ಸಮಾಜದಲ್ಲಿ ಜೀವಜೀವಗಳ ನಡುವೆ ಸಮತೆ, ಮಮತೆಯ ಸಂಪ್ರೀತಿ ಹರಿಸಿ ಸರ್ವರೂ ಸಾಮರಸ್ಯದಿಂದ ಬದುಕುವ ನೈತಿಕ ಸಂಸ್ಕಾರವನ್ನು ಕಲಿಸುತ್ತದೆ ಎಂದು ಹೇಳಿದರು.
ಕಣ್ಣಿಗೆ ಕಾಣದ ಸ್ವರ್ಗ-ನರಕಗಳ ಚಿಂತೆಯಲ್ಲಿ ಮೌಡ್ಯಾಲೋಚನೆಗಳಿಗೆ ತುತ್ತಾಗಿರುವ ಮಾನವನಿಗೆ ತಮ್ಮ ನಡತೆಯಿಂದ ಸನ್ಮಾರ್ಗವನ್ನೂ ಸಾಧಿಸಬಹುದು ಎಂದು ಬುದ್ಧರು ತೋರಿಸಿದ್ದಾರೆ. ಹೀಗಾಗಿ ಪಂಚಶೀಲ, ಅಷ್ಟಾಂಗಮಾರ್ಗ ಮತ್ತು ದಶಪಾರಮಿಗಳನ್ನು ಅನುಸರಿಸುವುದರ ಮುಲಕ ಭೂವಾಸಿಗಳಾದ ನಾವು ಇಲ್ಲಿಯೇ ಈ ಜೀವನದಲ್ಲಿಯೇ ಸ್ವರ್ಗಸುಖವನ್ನು ಅನುಭವಿಸಬಹುದಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕಾಳಮ್ಮ, ಪಾರ್ವತಮ್ಮ, ಚಿಕ್ಕದಾಸಯ್ಯ, ಮಾಯಣ್ಣ, ಎಚ್.ಆರ್.ಯಶಿಕ, ಎಚ್.ಆರ್.ಪ್ರಬುದ್ಧ ಸಾತ್ವಿಕ್, ಗೋವಿಂದರಾಜ್, ರಮೇಶ್, ಕೆ.ಲೋಕೇಶ್, ನಟೇಶ್, ಲೇಖಕಿ ಸುಮ ಪಂಚವಳ್ಳಿ, ಎಂ.ಎಸ್.ಮಂಜು, ಪೋಲಿಸ್ ಇಲಾಖೆಯ ವಸಂತಕುಮಾರ್, ಜ್ಯೋತಿಷ್ ಮೂರ್ತಿ, ಸೋಯಬ್ ರಜಾಕ್, ಲೋಕೇಶ್ ಎಂ. ಮೊದಲಾದವರು ಉಪಸ್ಥಿತರಿದ್ದರು.
ಬೆಂಗಳೂರು : ಚಿತ್ರದುರ್ಗದ ಹಿರಿಯೂರು ಬಳಿ ಇಂದು ಬೆಳಗಿನ ಜಾವ ಸಂಭವಿಸಿದ ರಸ್ತೆ ಅಪಘಾತದ ಮಾರ್ಗದಲ್ಲಿ ಶಾಲಾ ಮಕ್ಕಳು ಪ್ರಯಾಣಿಸುತ್ತಿದ್ದ…
ಬೆಂಗಳೂರು: ನಾನು ಪಕ್ಷದ ಅಧ್ಯಕ್ಷನಾಗಿ ಬಾವುಟ ಕಟ್ಟಿದ್ದೇನೆ, ಕಸ ಗುಡಿಸಿದ್ದೇನೆ. ಪಕ್ಷಕ್ಕಾಗಿ ಎಲ್ಲವನ್ನೂ ಮಾಡಿದ್ದೇನೆ. ನಾನು ಸ್ಟೇಜ್ ಮೇಲೆ ಕೂತು…
ಬೆಂಗಳೂರು: ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗಿಯಾಗಲು ಸಿಎಂ ಸಿದ್ದರಾಮಯ್ಯ ಅವರು ನಾಳೆ ದೆಹಲಿಗೆ ತೆರಳಲಿದ್ದಾರೆ. ಡಿಸೆಂಬರ್.27ರಂದು ದೆಹಲಿಯ ಇಂದಿರಾ…
ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಹುಲಿಗಳ ಉಪಟಳ ಹೆಚ್ಚಾಗಿದ್ದು, ದೇಪಾಪುರ ಗ್ರಾಮದ ಹೊರವಲಯದಲ್ಲಿ ಹುಲಿಯೊಂದು ಬೋನಿಗೆ ಬಿದ್ದಿದೆ. ಹುಲಿಯನ್ನು ನೋಡಲು…
ಬೆಂಗಳೂರು: ರಾಜ್ಯದಲ್ಲಿ ತೀವ್ರ ಚಳಿ, ಶೀತಗಾಳಿಯ ಜೊತೆಗೆ ಬೆಳಗಿನ ವೇಳೆ ಕೆಲವೆಡೆ ದಟ್ಟವಾದ ಮಂಜು ಆವರಿಸುತ್ತಿದೆ. ಬೆಳಗಿನ ವೇಳೆಯಲ್ಲಿ ದಟ್ಟವಾದ…
ತಿರುವನಂತಪುರಂ: ಶಬರಿಮಲೆ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣದ ಆರೋಪಿಗಳ ಜೊತೆಗೆ ಸೋನಿಯಾ ಗಾಂಧಿ ನಂಟಿದೆ ಎಂದು ಸಿಎಂ ಪಿಣರಾಯಿ ವಿಜಯನ್…