ಮೈಸೂರು

ಮೈಸೂರು | ಬಸವೇಶ್ವರ ಪ್ರತಿಷ್ಠಾನ ವತಿಯಿಂದ ಶಿವಕುಮಾರ್‌ ಸ್ವಾಮೀಜಿ ಜನ್ಮ ದಿನಾಚರಣೆ

ಮೈಸೂರು: ನಾಡಿನ ಹಲವೆಡೆ ಜಾತಿ ಆಧಾರಿತ ಮಠಗಳೆ ಹೆಚ್ಚು,  ಈ ಮಧ್ಯೆ  ಸಿದ್ಧಗಂಗಾ ಮಠ ಜಾತ್ಯತೀತ, ಧರ್ಮಾತೀತವಾಗಿ ಬೆಳೆದು ಬಂದಿರುವ ಶ್ರೇಷ್ಠ ಮಠವಾಗಿದೆ. ಇದು ಇತರ ಮಠಗಳಿಗೆ ಮಾದರಿಯಾಗಲಿ ಎಂದು  ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಭಿಪ್ರಾಯಪಟ್ಟರು.

ನಗರದ ಕೃಷ್ಣಮೂರ್ತಿಪುರಂನ ನಮನ ಕಲಾ ಮಂಟಪದಲ್ಲಿ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ‘‘ಡಾ. ಶಿವಕುವಾರ್ ಸ್ವಾಮೀಜಿ ಅವರ 118ನೇ ಜಯಂತಿ ಮಹೋತ್ಸವ ಹಾಗೂ ವಿಷ್ಣುಸಂಕಲ್ಪ ಜ್ಯೋತಿಷ್ಯ ಕೇಂದ್ರ ಉದ್ಘಾಟನೆ’ಯ  ಪೋಸ್ಟರ್ ಬಿಡುಗಡೆ  ಮಾಡಿ  ಮಾತನಾಡಿದ ಅವರು ‘‘ಸಿದ್ಧಗಂಗಾ ಮಠ ಅಂದು ಹತ್ತು ವಿದ್ಯಾರ್ಥಿಗಳಿಂದ ಪ್ರಾರಂಭವಾದ ಶಿಕ್ಷಣಭ್ಯಾಸ ಇಂದು ಹತ್ತು ಸಾವಿರ ವಿದ್ಯಾರ್ಥಿಗಳಿಗೆ ತಲುಪಿದೆ. ಅಂದು ಹಚ್ಚಿದ ಅನ್ನದಾಸೋಹದ ಒಲೆ ಇಂದು ಆರದೆ ಉರಿಯುತ್ತಲೇ ಇದೆ ಎಂದು ಹೇಳಿದರು.

‘‘ಆಶ್ರಯ, ಅಕ್ಷರ, ದಾಸೋಹದ ಜೊತೆಗೆ ಆರೋಗ್ಯದ ಸೇವೆಯನ್ನ ಶಿವಕುಮಾರ್ ಸ್ವಾಮಿಜೀಗಳೆ ನೀಡುತಿದ್ದರು. ಸ್ವಾಮಿಜೀ ಅವರು ಮುಂದಿನ ನೂರು ವರ್ಷಗಳಿಗಾಗುವ ಸಂಪತ್ತು ಸಿದ್ಧಗಂಗಾ ಮಠಕ್ಕಾಗಿ ಉಳಿಸಿ ಹೋಗಿದ್ದಾರೆ. ಅವರ ಅದ್ವಿತೀಯ ಕಾರ್ಯಕ್ಕಾಗಿ ದೇಶದಲ್ಲದೇ ವಿದೇಶಿಗರು ಸಹ ಮನಸೊತು ಸಹಾಯ ಹಸ್ತ ಚಾಚಿದ್ದಾರೆ. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಸಾಕ್ಷಿಯಾಗಿದ್ದಾರೆ. ಇಂತಹ ಸ್ವಾಮಿಜೀಯನ್ನ ಪಡೆದ ನಮ್ಮ ನಾಡು ಸರ್ವ ಶ್ರೇಷ್ಠ ಎಂದು ಶ್ಲಾಘಿಸಿದರು.

ಬಳಿಕ ಸಾಹಿತಿ ಹಾಗೂ ಸಂಸ್ಕೃತ ವಿದ್ವಾಂಸೆ ಡಾ.ಕೆ.ಲೀಲಾ ಪ್ರಕಾಶ್ ಮಾತನಾಡಿ, ಶಿವನು ಸರ್ಪಭೂಷಣವಾದರೆ, ಶಿವಕುಮಾರ ಸ್ವಾಮಿಜೀಗಳು ಪದ್ಮಭೂಷಣರು. ದೇವರು ಸ್ವಾಮಿಗಳಿಗೆ ವಿಶೇಷವಾದ ಶಕ್ತಿ ನೀಡಿದ್ದನು. ಹಲವು ಮಠಮಾನ್ಯಗಳಲ್ಲಿ ಯಾರಿಗೂ ಸುಮ್ಮನೆ ದಾಸೋಹ ಮಾಡುತ್ತಿರಲಿಲ್ಲ. ಎಲ್ಲರಲ್ಲೂ ಕಾಯಕವನ್ನ ಮಾಡಿಸಿ ದಾಸೋಹ ಮಾಡುತಿದ್ದರು. ಅದರಿಂದ ವಿದ್ಯಾರ್ಥಿಗಳಲ್ಲಿ ಭಕ್ತಿ, ಜವಬ್ದಾರಿ ಹಾಗೂ ನಿಜ ಜೀವನದ ಬದ್ದತೆ ಕಾಣುವಂತಾಗುತ್ತಿತ್ತು. ಇದರಿಂದ ವಿದ್ಯಾರ್ಥಿಗಳು ಶಿಸ್ತು ಕಲಿಯುವಂತಾಗುತಿತ್ತು. ಶಿವಕುಮಾರ್ ಸ್ವಾಮಿಜೀ ಅವರು ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ಬೇವಿನ ಕಷಾಯ ಸೇವಿಸುತಿದ್ದರು. ಆದರೆ ಇಡೀ ಸಮಾಜಕ್ಕೆ ಸಿಹಿ ಉಣಬಡಿಸಿದರು ಎಂದು ತಿಳಿಸಿದರು.

ಮೈಸೂರು ರೈಲ್ವೆ ನಿಲ್ದಾಣ ಸಲಹಾ ಸಮಿತಿ ಸದಸ್ಯ ಗೋಪಾಲ್ ಮಾತನಾಡಿ, ರಾಜ್ಯ ಸರ್ಕಾರ ಹಲವು ಮಹನೀಯರ ಜಯಂತಿಯಂತೆ ಪ್ರತಿ ವರ್ಷ ಎಲ್ಲಾ ಕಡೆಗಳಲ್ಲಿ ಡಾ.ಶಿವಕುಮಾರ್ ಜಯಂತಿ ಆಚರಣೆ ಮಾಡುವಂತಹ ಕೆಲಸ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಪ್ರಸ್ತಾಪಿಸಿದರು.

ಬಳಿಕ ಡಾ.ಶಿವಕುಮಾರ್ ಸ್ವಾಮಿಜೀ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ‘‘ವಿಷ್ಣುಸಂಕಲ್ಪ ಜ್ಯೋತಿಷ್ಯ ಕೇಂದ್ರ ಉದ್ಘಾಟನೆ’’ಯ ಪೋಸ್ಟರ್ ಬಿಡುಗಡೆ ಮಾಡಲಾಯಿತು.

ಖ್ಯಾತ ಜ್ಯೋತಿಷಿಗಳಾದ ಶ್ರೀ ವಿಷ್ಣು, ಸಾಲಿಗ್ರಾಮ ಸ್ವಾಮಿ, ಹಿರಿಯ ಸವಾಜ ಸೇವಕ ಡಾ.ಕೆ.ರಘುರಾಂ ವಾಜಪೇಯಿ, ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ ಸಂಸ್ಥಾಪಕ ಹಾಗೂ ಅಧ್ಯಕ್ಷ ಬಸವರಾಜೇದ್ರ ಸ್ವಾಮಿ, ಹಿರಿಯ ಕನ್ನಡ ಪರ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ, ಚಲನಚಿತ್ರ ನಟ ಸುಪ್ರೀತ್, ಹಿರಿಯ ವೀರಗಾಸೆ ಕಲಾವಿದ ಅಂಬಳೆ ಶಿವಣ್ಣ, ಲಯನ್ಸ್ ಗೋಲ್ಡನ್ ಟಿ.ಸುರೇಶ್ ಹಾಜರಿದ್ದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ದ್ವಿತೀಯ ಪಿಯುಸಿ ಫಲಿತಾಂಶ: ಇದೊಂದು ಐತಿಹಾಸಿಕ ದಿನ ಎಂದ ಮಧು ಬಂಗಾರಪ್ಪ

ಬೆಂಗಳೂರು: ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 5.46,698 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕರ್ನಾಟಕಕ್ಕೆ ಮೊದಲ ಬಾರಿ ಶೇ.86.48ರಷ್ಟು ಫಲಿತಾಂಶ ಬಂದಿದೆ…

6 hours ago

ಎರಡು ಕ್ಷೇತ್ರಗಳ ಉಪಚುನಾವಣೆ ಮತದಾನ ಮುಕ್ತಾಯ: ವೋಟಿಂಗ್‌ ಪ್ರಮಾಣವೆಷ್ಟು.?

ದಾವಣಗೆರೆ/ಬಾಗಲಕೋಟೆ: ರಾಜ್ಯದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಇಂದು ಮತದಾನ ನಡೆದಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.…

7 hours ago

ಚಾಮುಂಡಿಬೆಟ್ಟದಲ್ಲಿ ನಡೆಯುತ್ತಿದ್ದ ಕಾಮಗಾರಿಗಳಿಗೆ ಹೈಕೋರ್ಟ್‌ ತಡೆಯಾಜ್ಞೆ

ಬೆಂಗಳೂರು: ನಾಡಿನ ಅಧಿದೇವತೆ ನೆಲೆಸಿರುವ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಕೇಂದ್ರ ಸರ್ಕಾರದ ಅನುದಾನದಡಿ ನಡೆಯುತ್ತಿದ್ದ ಕಾಮಗಾರಿಗಳಿಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಹೈಕೋರ್ಟ್‌…

7 hours ago

ಬೆಂಗಳೂರಿನಲ್ಲಿ ಮುಂದಿನ ಮೂರು ದಿನ ಬಿಸಿ ಗಾಳಿ ಎಚ್ಚರಿಕೆ

ಬೆಂಗಳೂರು: ನಗರದಲ್ಲಿ ಮುಂದಿನ ಮೂರು ದಿನಗಳ ಕಾಲ ಅಧಿಕ ಉಷ್ಣಾಂಶ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬಿಸಿ…

7 hours ago

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆದ್ದರೆ ಆರು ಗ್ಯಾರಂಟಿ ಜಾರಿ: ಪ್ರಧಾನಿ ನರೇಂದ್ರ ಮೋದಿ

ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಜನರಿಗೆ ಆರು ಗ್ಯಾರಂಟಿಗಳನ್ನು ನೀಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.…

7 hours ago

ಭಾರತ ತಲುಪಿದ ಗ್ರೀನ್‌ ಆಶಾ: 15,000 ಟನ್‌ ಎಲ್‌ಪಿಜಿ ಹೊತ್ತು ತಂದ ನೌಕೆ

ಮುಂಬೈ: ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯೆ ಭಾರತದ ಧ್ವಜ ಹೊಂದಿರುವ 15,400 ಟನ್‌ ಎಲ್‌ಪಿಜಿ ಹೊತ್ತ ಟ್ಯಾಂಕರ್‌ ಹಾರ್ಮುಜ್‌ ಜಲಸಂಧಿಯನ್ನು…

8 hours ago