ಮೈಸೂರು : ನಕಲಿ ದಾಖಲೆಗಳ ಮೂಲಕ ಎಸ್‌ಬಿಐ ಸಿಬ್ಬಂದಿಯನ್ನೇ ದಾರಿ ತಪ್ಪಿಸಿರುವ ಏಳು ಮಂದಿ ಸುಮಾರು 66 ಲಕ್ಷ ರೂ. ಹಣವನ್ನು ಸಾಲವಾಗಿ ಪಡೆದು ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಎನ್‌ಆರ್ ಮೊಹಲ್ಲಾದ ಶಿವಾಜಿ ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ವಂಚಿಸಿರುವ ಬೋಗಾದಿಯ ನಾಗೇಶ್, ಕೆಜಿ ಕೊಪ್ಪಲಿನ ಮಂಜಣ್ಣ, ಗಾಂಧಿನಗರದ ಸಣ್ಣಪ್ಪ, ಬೋಗಾದಿಯ ನವೀನ್‌ಕುಮಾರ್, ಜಯನಗರದ ದೀಪಾ, ಕ್ಯಾತಮಾರನಹಳ್ಳಿಯ ಶ್ರೀನಿವಾಸ್ ಹಾಗೂ ಮಂಡಿ ಮೊಹಲ್ಲಾದ ಮಂಜುನಾಥ್ ಎಂಬವರ ವಿರುದ್ಧ ಬ್ಯಾಂಕ್‌ನ ವ್ಯವಸ್ಥಾಪಕಿ ರಮ್ಯ ಎಂಬವರು ದೂರು ದಾಖಲಿಸಿದ್ದಾರೆ.
ಇದನ್ನು ಓದಿ: ಗುಂಡಿ ಜಟಾಪಟಿ : ಡಿನ್ನರ್ ಮೀಟಿಂಗ್ ಬಳಿಕ ಡಿಕೆಶಿಯನ್ನು ಹಾಡಿ ಹೊಗಳಿದ ಉದ್ಯಮಿಗಳು
ಆರೋಪಿಗಳು ಸಾಲ ಪಡೆಯುವ ಉದ್ದೇಶದಿಂದ ಕಳೆದ ಒಂದು ವರ್ಷದ ಅವಧಿಯಲ್ಲಿ ವಿವಿಧ ದಿನಾಂಕಗಳಂದು ಎಸ್‌ಬಿಐ ಬ್ಯಾಂಕ್‌ಗೆ ನಕಲಿ ದಾಖಲಾತಿಗಳನ್ನು ಸಲ್ಲಿಸಿದ್ದಾರೆ. ಅವುಗಳ ಆಧಾರದ ಮೇಲೆ ಅವರುಗಳಿಗೆ ಸಾಲ ನಿಡಲಾಗಿದೆ.
ನಾಗೇಶ್ ಎಂಬವರು ೯.೪೦ ಲಕ್ಷ ರೂ., ಮಂಜಣ್ಣ ಎಂಬವರು ೯.೫೫ ಲಕ್ಷ ರೂ., ಸಣ್ಣಪ್ಪ ಅವರು ೧೦ ಲಕ್ಷ ರೂ., ನವೀನ್‌ಕುಮಾರ್ ೯,೨೫ ಲಕ್ಷ ರೂ., ದೀಪಾ ೯.೨೫ ಲಕ್ಷ ರೂ., ಶ್ರೀನಿವಾಸ್ ೯.೨೦ ಲಕ್ಷ ರೂ., ಮಂಜುನಾಥ್ ಎಂಬವರು ೯.೩೦ ಲಕ್ಷ ರೂ. ಸಾಲ ಪಡೆದಿದ್ದಾರೆ.
ಸಾಲ ಪಡೆದ ನಂತರ ಅವರುಗಳು ಸಕಾಲಕ್ಕೆ ಕಂತನ್ನು ಪಾವತಿಸಿಲ್ಲ ಎನ್ನಲಾಗಿದೆ. ಇದೇ ವೇಳೆ ಅವರ ದಾಖಲಾತಿಗಳನ್ನು ಪರಿಶೀಲಿಸಿದ ವೇಳೆ ಅವುಗಳಲ್ಲಿ ಕೆಲವು ನಕಲಿ ಎಂಬುದು ಪತ್ತೆಯಾಗಿದೆ. ಹೀಗಾಗಿ ರಮ್ಯ ಅವರು ಏಳು ಮಂದಿ ವಿರುದ್ಧ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…
ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…
ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…
ಮಂಡ್ಯ: ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ ಭಾಗದ ರೈತರನ್ನು ಆರ್ಥಿಕವಾಗಿ ಅಭಿವೃದ್ಧಿ ಮಾಡಲು ಮಂಡ್ಯದ ವಿ.ಸಿಫಾರಂನಲ್ಲಿ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾನಿಲಯವನ್ನು…
ಬೆಂಗಳೂರು: ಆರ್.ಅಶೋಕ್ ಅವರನ್ನು ವಿಪಕ್ಷ ನಾಯಕನ ಸ್ಥಾನದಿಂದ ಇಳಿಸದೇ ಹೋದರೆ ಬಿಜೆಪಿ ಶಾಶ್ವತವಾಗಿ ವಿಪಕ್ಷದಲ್ಲಿ ಇರುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ್…