ಮೈಸೂರು: ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಪ್ರತಿಷ್ಠಿತ ಕಂಪನಿಯಾದ ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆ ವತಿಯಿಂದ ಇಂದು ಮೈಸೂರಿನಲ್ಲಿ 111 ಅಡಿ ಉದ್ದದ ವಿಶೇಷವಾದ ಬೃಹತ್ ಗಂಧದಕಡ್ಡಿಯನ್ನು ಹಚ್ಚುವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.
ಅರಮನೆ ಅಂಗಳದ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಶ್ರೀರಾಮನ ಮೂರ್ತಿಯನ್ನ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ಅವರ ತಾಯಿ ಸರಸ್ವತಿ, ಪತ್ನಿ ವಿಜೇತ ಸಂಸದ ಪ್ರತಾಪ್ ಸಿಂಹ ಕೆ.ಆರ್.ಕ್ಷೇತ್ರದ ಶಾಸಕ ಶ್ರೀವತ್ಸ ಸೈಕಲ್ ಅಗರಬತ್ತಿ ಸಂಸ್ಥೆಯ ಮುಖ್ಯಸ್ಥ ಆರ್.ಗುರು ಅವರುಗಳು ಬೃಹತ್ ಗಂಧದಕಡ್ಡಿಯನ್ನ ಬೆಳಗಿಸಿದರು.
ಇನ್ನು 111 ಉದ್ದದ ಗಂಧದಕಡ್ಡಿ ಬೆಳಗಿಸುವ ಈ ಕಾರ್ಯಕ್ರಮಕ್ಕೆ ನೂರಾರು ಸಂಖ್ಯೆಯಲ್ಲಿ ರಾಮ ಭಕ್ತರು ಆಗಮಿಸಿ ದಾಖಲೆಯ ಸನ್ನಿವೇಶಕ್ಕೆ ಸಾಕ್ಷಿಯಾದರು.
ಈ ಸಂದರ್ಭದಲ್ಲಿ ರಾಮ ಲಕ್ಷ್ಮಣ ಸೀತಾಮಾತೆಯ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದಲ್ಲದೇ ಅಯೋಧ್ಯೆಯ ರಾಮಮಂದಿರದ ಮಾದರಿಯನ್ನು ಪ್ರದರ್ಶನಕ್ಕಿಡಲಾಗಿತ್ತು. ಇದೇ ವೇಳೆ ಪುಟ್ಟ ಮಗುವೊಂದು ಬಾಲ ರಾಮನ ವೇಷ ಧರಿಸಿ ನೆರೆದಿದ್ದವರ ಗಮನ ಸೆಳೆಯಿತು. ಇದರೊಂದಿಗೆ ರಾಮಭಕ್ತರು ನಾ ಮುಂದು ತಾ ಮುಂದು ಎಂದು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹಾಗೂ ಫೋಟೊ ತೆಗೆಸಿಕೊಳ್ಳಲು ಮುಗಿ ಬೀಳುತ್ತಿದ್ದ ದೃಶ್ಯಗಳು ಕಂಡಿಬಂದವು.
ಶ್ರೀರಾಮನಿಗೆ 108 ರೀತಿಯ ಸಿಹಿ ತಿನಿಸುಗಳ ಅರ್ಪಣೆ
ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಮೈಸೂರಿನ ಇರ್ವಿನ್ ರಸ್ತೆಯಲ್ಲಿರುವ ಶ್ರೀ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿತು. ಈ ವೇಳೆ ದೇವಸ್ಥಾನದ ಆವರಣದಲ್ಲಿ ವಿಷ್ಣುಸಮಾಜದ ನೂರಾರು ರಾಮ ಭಕ್ತರು ಸೇರಿ ರಾಮನ ಭಜನೆ ಮಾಡಿದರು. ಭಕ್ತರಿಗೆ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.
ಇನ್ನು ಅಯೋಧ್ಯೆ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ವಿಷ್ಣು ಸಮಾಜದ ವತಿಯಿಂದ 108 ತರಹದ ಸಿಹಿ ತಿಂಡಿ ತಿನಿಸುಗಳನ್ನು ತಯಾರಿಸಿ ಶ್ರೀ ರಾಮನಿಗೆ ಅರ್ಪಿಸಿದರು.
ಈ ವಿಶೇಷ ದಿನದ ಅಂಗವಾಗಿ ವಿಷ್ಣು ಸಮಾಜದ ರಾಮಭಕ್ತರು ತಮ್ಮ ಅಂಗಡಿ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡಿ ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಆಗಮಿಸಿದ್ರು.
ಇನ್ನು ದೀರ್ಘ ಕಾಲದ ಕನಸು ನನಸಾದ ದಿನದ ಸಂತಸದಲ್ಲಿ ಯುವಕರು ಜೈ ಶ್ರೀರಾಮ್ ಘೋಷಣೆಗಳನ್ನ ಕೂಗಿ ಕುಣಿದು ಕುಪ್ಪಳಿಸಿದರು.
ಬೆಂಗಳೂರು: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜಕುಟುಂಬದ…
ಧನಂಜಯ್ ನಿರ್ಮಾಣದ ‘ವಿದ್ಯಾಪತಿ’ ಚಿತ್ರದ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ. ಇದೀಗ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದ್ದು, ಈ ಹಾಡನ್ನು…
ಹೊಂಬಾಳೆ ಫಿಲಂಸ್‍ನ ವಿಜಯ್ ಕಿರಗಂದೂರು ಇದೀಗ ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಬೇರೆ ಭಾಷೆಗಳಿಗೂ ಕಾಲಿಟ್ಟಿದೆ. ಈಗಾಗಲೇ ‘ಕೆಜಿಎಫ್’, ‘ಸಲಾರ್’…
ಮುಂಬೈ : ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತ್ವತ್ವದ ಸರ್ಕಾರ ಕಾಂಗ್ರೆಸ್‌ನ ಎಟಿಎಂ ಆಗಿದೆ ಎಂದು ಪ್ರಧಾನಿ ನರೇಂದ್ರ ವಾಗ್ದಾಳಿ…
ಚನ್ನಪಟ್ಟಣ: ಡಿಸಿಎಂ ಡಿಕೆ ಶಿವಕುಮಾರ್ ಅವರು ನಿನ್ನೆ ಕ್ಷೇತ್ರದ ಪ್ರಚಾರ ವೇಳೆ ಚನ್ನಪಟ್ಟಣಕ್ಕೆ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಕೊಡುಗೆ…
ಮಡಿಕೇರಿ: ರಾತ್ರೋರಾತ್ರಿ ಈ ಭಾಗದ ಜನತೆಯ ಜಮೀನು ವಕ್ಫ್ ಆಸ್ತಿವೆಂದು ಸೃಷ್ಠಿಯಾಗುತ್ತಿದೆ. ಹೀಗಾಗಿ ನಮ್ಮ ಆಸ್ತಿಯನ್ನು ಉಳಿಸಿಕೊಳ್ಳಲು ಸರ್ಕಾರದ ವಿರುದ್ಧ…