ಮೈಸೂರು: ಇಲ್ಲಿನ ಸಂಗೀತ ವಿಶ್ವವಿದ್ಯಾಲಯ ಆವರಣದಲ್ಲಿ ಶನಿವಾರ ನಡೆದ ಮೂರು ಶೈಕ್ಷಣಿಕ ವರ್ಷಗಳ ಘಟಿಕೋತ್ಸವದಲ್ಲಿ ಒಟ್ಟು 450 ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು. 27 ವಿದ್ಯಾರ್ಥಿಗಳು 69 ಚಿನ್ನದ ಪದಕಗಳೊಂದಿಗೆ ಸಂಭ್ರಮಿಸಿದರು.
2021-22 ನೇ ಸಾಲಿನಲ್ಲಿ ಎಂಪಿಎ ವಿಭಾಗದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ವಿಷಯದಲ್ಲಿ ರ‍್ಯಾಂಕ್ ಜೊತೆಗೆ 9 ಚಿನ್ನದ ಪದಕಗಳನ್ನು ವಿಶಾಖಪಟ್ಟಂ ಮೂಲದ ವಿ.ವಿಜಯಶ್ರೀ ಪಡೆದು ಗಮನ ಸೆಳೆದರು. ಬಿಟೆಕ್ ಪದವೀಧರೆಯಾಗಿರುವ ವಿಜಯಶ್ರೀ ಕಳೆದ 8 ವರ್ಷಗಳಿಂದ ಪತಿ ಮತ್ತು ಮಕ್ಕಳೊಂದಿಗೆ ಶ್ರೀರಂಗಪಟ್ಟಣದ ಬೆಳಗೋಳದಲ್ಲಿ ನೆಲೆಸಿದ್ದಾರೆ.
ಎಂಪಿಎ ವಿಭಾಗದಲ್ಲಿ 2022-23 ನೇ ಸಾಲಿನಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ವಿಷಯದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದ ಎಲ್.ಬಿ.ಬಿಂದು 6 ಚಿನ್ನದ ಪದಕ ಪಡೆದರೆ, ಕೀರ್ತನಾ 5 ಚಿನ್ನ ಪಡೆದರು.
ಇನ್ನೂ 2023-24ನೇ ಸಾಲಿನಲ್ಲಿ ಕೆ.ಆರ್.ಅಶ್ವಿನಿ ಹಾಗೂ ಬಿ.ಆರ್.ಮನೋಜ್ ತಲಾ 6 ಚಿನ್ನದ ಪದಕ ಗಳಿಸಿದರು. ಬಿಪಿಎ ವಿಭಾಗದಲ್ಲಿ ಆರ್.ರಂಜಿನಿಶ್ರೀ 6, ಪಿ.ಆರ್.ರೂಪಾ 5 ಚಿನ್ನದ ಪದಕ ಪಡೆದರು. 14 ಮಂದಿಗೆ ಡಿ.ಲಿಟ್ ಪದವಿ ಪ್ರದಾನ ಮಾಡಲಾಯಿತು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಪದವಿ ಪ್ರದಾನ ಮಾಡಿದರು.
ತುಮಕೂರು : ರಸ್ತೆಯಲ್ಲಿ ನಿಲ್ಲಿಸಿದ್ದ ಕಾರನ್ನು ತೋ ಮಾಡಿಕೊಂಡು ಠಾಣೆಗೆ ತಂದಿದ್ದ ಕಾರನ್ನು ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟು…
ಮೈಸೂರು : ಮಾದಕ ವಸ್ತು ತಯಾರಿಕೆ ಶಂಕೆ ಮೇರೆಗೆ ಮನೆಯೊಂದರ ಮೇಲೆ ಮೈಸೂರು ದಕ್ಷಿಣ ಪೊಲೀಸ್ ಠಾಣೆ ಪೊಲೀಸರು ದಾಳಿ…
ಮೈಸೂರು : ಕಡಿಮೆ ಬಡ್ಡಿ ದರದಲ್ಲಿ ಚಿನ್ನಾಭರಣದ ಮೇಲೆ ಸಾಲ ನೀಡುವುದಾಗಿ ನಂಬಿಸಿ ಗ್ರಾಹಕರಿಂದ ಚಿನ್ನಾಭರಣ ಪಡೆದು ವಂಚಿಸಿ ಪರಾರಿಯಾಗಿದ್ದ…
ಹೊಸದಿಲ್ಲಿ : ನಾಳೆ ಕೇಂದ್ರ ಸರ್ಕಾರದ 2026-27 ಸಾಲಿನ ಆಯವ್ಯಯ ಮಂಡನೆಯಾಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ…
ಮಳವಳ್ಳಿ : ಪಟ್ಟಣದ ಗ್ರಾಮ ದೇವತೆಗಳಾದ ಶ್ರೀ ಪಟ್ಟಲದಮ್ಮ-ದಂಡಿನ ಮಾರಮ್ಮ ಶಕ್ತಿ ದೇವತೆಗಳ ಸಿಡಿ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು. ಜ.27ರಿಂದ…
ಬೆಂಗಳೂರು : ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಛಿಡೆಂಟ್ ಗ್ರೂಪ್ ಅಧ್ಯಕ್ಷ ಮತ್ತು ಸಂಸ್ಥಾಪಕ ಸಿ.ಜೆ.ರಾಯ್ ಅವರು ಶುಕ್ರವಾರ ತಮ್ಮ…