ಮೈಸೂರು: ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಸಂಗೀತ, ನಾಟಕ ಅಕಾಡೆಮಿಯು ಮೈಸೂರಿನ ಇಬ್ಬರೂ ಸೇರಿದಂತೆ ಕರ್ನಾಟಕದ ಐವರಿಗೆ ಸಂಗೀತ ನಾಟಕ ಅಕಾಡೆಮಿ ಅಮೃತ ಪ್ರಶಸ್ತಿ ಘೋಷಿಸಿದೆ. ಸುಗಮ ಸಂಗೀತದ ಹಿರಿಯ ಗಾಯಕಿ ಎಚ್.ಆರ್.ಲೀಲಾವತಿ ಹಾಗೂ ಭರತನಾಟ್ಯ ಕಲಾವಿದೆ ವಸುಂಧರ ದೊರೆಸ್ವಾಮಿ ಅವರು ಪ್ರಶಸ್ತಿ ಘೋಷಣೆ ಆಗಿರುವ ಬಗ್ಗೆ ‘ಆಂದೋಲನ’ದೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.
ಎಚ್.ಆರ್.ಲೀಲಾವತಿ: ಕಲಾವಿದರು ತಮ್ಮ ಸಾಧನೆಯ ಹಾದಿಯನ್ನು ತುಳಿದು ಮುನ್ನಡೆಯಬೇಕು. ನಾನೆಂದೂ ಪ್ರಶಸ್ತಿಯ ಹಿಂದೆ ಬಿದ್ದವಳಲ್ಲ, ಜನರ ಪ್ರೀತಿ ಮತ್ತು ಮೆಚ್ಚುಗೆಯೇ ನನಗೆ ಪ್ರಶಸ್ತಿ. ತಡವಾದರೂ ನನ್ನ ಸಾಧನೆ ಯನ್ನು ಗುರುತಿಸಿ ರಾಷ್ಟ್ರಮಟ್ಟದ ಪ್ರಶಸ್ತಿ ದೊರೆತಿರುವುದು ಖುಷಿ ನೀಡಿದೆ. ಕಲಾವಿದರ ಸಾಧನೆ ಮತ್ತು ಸಾಮರ್ಥ್ಯ, ಯೋಗ್ಯತೆಯ ಮೂಲಕ ವಯಸ್ಸಿರುವಾಗಲೇ ಗುರುತಿಸಿ ಪ್ರಶಸ್ತಿಗಳನ್ನು ಕೊಡ ಮಾಡಿದರೆ ಸಾಧಕರಿಗೆ ಹೆಚ್ಚು ಸಂಭ್ರಮವಿರಲಿದೆ ಎಂದರು.
ಡಾ.ವಸುಂಧರ ದೊರೆಸ್ವಾಮಿ: ತಡವಾಗಿಯಾದರು ಮೈಸೂರಿಗರಿಗೆ ಪ್ರಶಸ್ತಿ ದೊರೆತಿರುವುದು ಬಹಳ ಸಂತೋಷವಾಗಿದೆ. ಇದು ನನ್ನೊಬ್ಬಳಿಗೆ ಬಂದ ಪ್ರಶಸ್ತಿ ಅಲ್ಲ. ಮೈಸೂರಿಗೆ ಸಂದ ಗೌರವ. ಇದುವರೆಗೂ ಮೈಸೂರಿನ ಯಾರೊಬ್ಬರಿಗೂ ಈ ಪ್ರಶಸ್ತಿ ಲಭಿಸಿಲ್ಲ. ಹಲವಾರು ವರ್ಷಗಳಿಂದ ಕಲೆಯಲ್ಲಿ ಸೇವೆ ಸಲ್ಲಿಸಿದ ಕಾರಣ ತಡವಾಗಿಯಾದರೂ ಪ್ರಶಸ್ತಿ ದೊರೆತಿದೆ. ಮೈಸೂರಿನಲ್ಲಿ ನನ್ನಂತ ಕಲಾವಿದರು ಅನೇಕ ಮಂದಿ ಕಲೆಗಾಗಿ ತಮ್ಮ ಜೀವನ ಮುಡಿಪಿಟ್ಟು, ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಛಾಪು ಮೂಡಿಸಿದ್ದು, ಅಂತಹವರನ್ನು ಸರ್ಕಾರ ಗುರುತಿಸಿ ಪ್ರಶಸ್ತಿ ನೀಡಬೇಕು ಎಂದರು.
ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ…
ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…
ಬೆಳಗಾವಿ: ಸುವರ್ಣ ಸೌಧದಲ್ಲಿ ಗುರುವಾರ ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ…
ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಬಳಕೆ ಮಾಡಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರ ವಿರುದ್ಧ…
ಮೈಸೂರು: ಸಂಸತ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಎಸಗಿರುವುದನ್ನು ಖಂಡಿಸಿ ಮೈಸೂರು ವಿಶ್ವವಿದ್ಯಾನಿಲಯದ…