ಮೈಸೂರು

ಮನಸ್ಸಿನ ಸಂಘರ್ಷ ಶಾಂತಗೊಳಿಸುವ ಸಂಗೀತ : ರಾಜ್ಯಪಾಲ ಗೆಹ್ಲೋಟ್‌

ಮೈಸೂರು : ಸಂಗೀತವು ಮನಸ್ಸಿನ ಸಂಘರ್ಷಗಳನ್ನು ಶಾಂತಗೊಳಿಸುವ, ಹಿಂಸೆಯನ್ನು ಕರುಣೆಯಾಗಿ ಪರಿವರ್ತಿಸುವ ಶಕ್ತಿಯನ್ನು ಹೊಂದಿದೆ ಎಂದು ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಹೇಳಿದರು.

ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ೧೦ನೇ ಘಟಿಕೋತ್ಸವದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಕಲೆಯ ಉದ್ದೇಶ ಕೇವಲ ಅದನ್ನು ಪ್ರದರ್ಶಿಸುವುದಲ್ಲ, ಬದಲಾಗಿ ಸಮಾಜದಲ್ಲಿ ಸಂವೇದನೆ ಮತ್ತು ಸಾಮರಸ್ಯವನ್ನು ಉತ್ತೇಜಿಸುವುದಾಗಿದೆ ಎಂದರು.

ಭಾರತೀಯ ಸಂಸ್ಕ ತಿಯಲ್ಲಿ ಸಂಗೀತ ಮತ್ತು ಕಲೆಗೆ ಬಹಳ ಉನ್ನತ ಸ್ಥಾನವಿದೆ. ನಮ್ಮ ವೇದಗಳು ‘ನಾದೋಸ್ಮಿ ಪರಂ ಬ್ರಹ್ಮ‘ ಎಂದು ಹೇಳುತ್ತವೆ, ಅಂದರೆ ‘ಶಬ್ದವೇ ಪರಮಾತ್ಮ‘. ಈ ಶಬ್ದವು ಮಾನವರಲ್ಲಿ ಅಡಗಿರುವ ಸೌಂದರ್ಯ, ಕರುಣೆ ಮತ್ತು ಪ್ರೀತಿಯನ್ನು ಜಾಗೃತಗೊಳಿಸುವ ಶಕ್ತಿಯಾಗಿದೆ. ಸಂಗೀತವು ಹೃದಯವನ್ನು ಮೃದುಗೊಳಿಸುತ್ತದೆ, ಆಲೋಚನೆಗಳನ್ನು ಶುದ್ಧೀಕರಿಸುತ್ತದೆ ಮತ್ತು ಆತ್ಮವನ್ನು ಉನ್ನತೀಕರಿಸುತ್ತದೆ ಎಂದು ತಿಳಿಸಿದರು.

ಸಮಾಜವು ಅನೇಕ ಸವಾಲುಗಳನ್ನು ಎದುರಿಸುತ್ತಿರುವ ಇಂದಿನ ಯುಗದಲ್ಲಿ, ಕಲಾವಿದರು ಮನುಷ್ಯರಲ್ಲಿ ಸಂವಹನ, ಸಹಾನುಭೂತಿ ಮತ್ತು ಸಾಮರಸ್ಯಕ್ಕೆ ದಾರಿ ಮಾಡಿಕೊಡುವ ಸೇತುವೆಯಾಗಿದ್ದಾರೆ. ಪ್ರಸ್ತುತ ವಿದ್ಯಾಮಾನದಲ್ಲಿ ತಂತ್ರಜ್ಞಾನ, ಡಿಜಿಟಲ್ ಮತ್ತು ಜಾಗತಿಕ ಪ್ರವೃತ್ತಿಗಳು ವೇಗವಾಗಿ ಬದಲಾಗುತ್ತಿರುವಾಗ, ನಮ್ಮ ಸಂಪ್ರದಾಯಗಳು, ನಮ್ಮ ಜಾನಪದ ಕಲೆಗಳಿಗೆ ಮರಳುವ, ಅವುಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಅವುಗಳಿಂದ ಸ್ಛೂರ್ತಿ ಪಡೆಯುವ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು.

ಅಭಿವೃದ್ಧಿ ಹೊಂದಿದ ದೇಶದದತ್ತ ಭಾರತ ಸಾಗುತ್ತಿರುವಾಗ, ಸೃಜನಶೀಲ ಯುವಕರ ಪಾತ್ರ ಬಹಳ ಮುಖ್ಯ. ವಿದ್ಯಾರ್ಥಿಗಳೇ, ನಿಮ್ಮ ಕಲೆಯನ್ನು ಸಾರ್ವಜನಿಕ ಕಲ್ಯಾಣ ಮತ್ತು ರಾಷ್ಟ್ರ ನಿರ್ಮಾಣದ ಉದ್ದೇಶಕ್ಕೆ ಬಳಸಿಕೊಳ್ಳಿ. ನೆನಪಿಡಿ, ಕಲೆಯು ಮಾನವೀಯತೆಯ ಸೇವೆಗೆ ಸಮರ್ಪಿತವಾದಾಗ ಮಾತ್ರ ಅದು ಪೂರ್ಣಗೊಳ್ಳುತ್ತದೆ. ನಿಮ್ಮ ಸಂಗೀತ, ನೃತ್ಯ, ನಾಟಕ ಮತ್ತು ಪ್ರದರ್ಶನ ಕಲೆಗಳ ಮೂಲಕ ನೀವು ದೇಶದ ಸಾಂಸ್ಕ ತಿಕ ಏಕತೆಯನ್ನು ಬಲಪಡಿಸಬಹುದು ಎಂದು ಹೇಳಿದರು.

ಈ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೇ, ಪ್ರತಿಯೊಂದು ರಾಗ, ಪ್ರತಿ ಲಯ, ಪ್ರತಿ ಪ್ರದರ್ಶನವು ಈ ರಾಷ್ಟ್ರದ ಆತ್ಮದೊಂದಿಗೆ ಪ್ರತಿಧ್ವನಿಸುತ್ತದೆ. ನಿಮ್ಮ ಅಭಿವ್ಯಕ್ತಿಯ ಮೂಲಕ, ಸಾಮಾಜಿಕ ಉನ್ನತಿಯ ಸಂದೇಶವನ್ನು ಜನಸಾಮಾನ್ಯರಿಗೆ ಸರಳ ರೀತಿಯಲ್ಲಿ ತಲುಪಿಸಬಹುದು. ಡಿಜಿಟಲ್ ಯುಗವು ಸಂಗೀತದಲ್ಲಿ ಅನೇಕ ಅವಕಾಶಗಳನ್ನು ತೆರೆದಿದೆ.

ಆದರೆ ನೆನಪಿಡಿ – ತಂತ್ರಜ್ಞಾನವು ಕೇವಲ ಒಂದು ಸಾಧನ, ಆತ್ಮವಲ್ಲ. ಸಂಗೀತದ ಆತ್ಮವು ನಿಮ್ಮ ಅಭ್ಯಾಸ, ನಿಮ್ಮ ಸೂಕ್ಷ್ತ್ರ್ಮತೆ ಮತ್ತು ನಿಮ್ಮ ಸಮರ್ಪಣೆಯಾಗಿದೆ. ನೀವೆಲ್ಲರೂ ನಿಮ್ಮ ಕಲೆಯನ್ನು ಜೀವನದ ಘನತೆ, ನೈತಿಕತೆ ಮತ್ತು ಮಾನವೀಯ ಮೌಲ್ಯಗಳೊಂದಿಗೆ ಸಂಪರ್ಕಿಸಬೇಕೆಂದು ನಿರೀಕ್ಷಿಸಲಾಗಿದೆ. ನಿಮ್ಮ ಕಲೆ, ನಿಮ್ಮ ಅಭ್ಯಾಸ ಮತ್ತು ನಿಮ್ಮ ಸಮರ್ಪಣೆ ಭಾರತದ ಸಂಸ್ಕ ತಿಯನ್ನು ಸದಾ ಹೊಸದಾಗಿ ಮತ್ತು ಸದಾ ಚೈತನ್ಯಶೀಲವಾಗಿರಿಸಲಿ ಎಂದು ಶುಭ ಹಾರೈಸಿದರು.

ಇಂದಿನ ಘಟಿಕೋತ್ಸವವು ಕಲೆ, ಆಧ್ಯಾತ್ಮಿಕ ಅಭ್ಯಾಸ ಮತ್ತು ಸಂಸ್ಕ ತಿಯ ಸಂಗಮದ ಸಮಾರಂಭದಲ್ಲಿ ಕೇರಳದ ಕಲಾಮಂಡಲ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಅನಂತ ಕೃಷ್ಣನ್, ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ಮತ್ತು ಮುಂತಾದ ಗಣ್ಯರು ಹಾಜರಿದ್ದರು.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಗ್ರಹಣ..!

ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…

3 hours ago

ಓದುಗರ ಪತ್ರ: ಪೆಟ್ರೋಲ್ ಬಂಕ್‌ಗಳಲ್ಲಿ ಮೋಸ: ಗರಿಷ್ಟ ಕ್ರಮ ಕೈಗೊಳ್ಳಲಿ

ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…

3 hours ago

ಓದುಗರ ಪತ್ರ: ಉದ್ಯೋಗ ಸೃಷ್ಟಿ : ಫ್ಲಿಪ್‌ಕಾರ್ಟ್ ನಡೆ ಸ್ವಾಗತಾರ್ಹ

ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…

3 hours ago

ಸುಗಮ ಸಂಗೀತದ ಅದ್ಬುತ ಗಾಯಕ ಮಡಿಕೇರಿ ನಾಗೇಂದ್ರ

ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…

6 hours ago

ಸುಮ್ಮನಿದ್ದರೂ ಪರಿಣಮಿಸುವ ರಂಗಭೂಮಿಯ ಝೆನ್ ಗುರು – ಜಂಬೆ ಮೇಷ್ಟ್ರು

ಸತೀಶ್ ತಿಪಟೂರು ಕರ್ನಾಟಕದ ಯಾವುದೇ ಭಾಗದಲ್ಲಿ ಜಂಬೆ ಮೇಷ್ಟ್ರ ಹಿರಿ - ಕಿರಿಯ ವಿದ್ಯಾರ್ಥಿಗಳು ಮೂರ್ನಾಲ್ಕು ಜನ ಒಂದೆಡೆ ಸೇರಿದರೆಂದರೆ…

6 hours ago

ಮಕ್ಕಳ ಮನದಂಗಳದಲ್ಲಿ ಗಾಂಧಿ ಚಿಂತನೆಯ ಬೇರುಗಳು

ಪ್ರತಿ ಭಾರತೀಯರ ಎದೆ ಬಡಿತದ ಚೇತನ ಗಾಂಧೀಜಿ:  ಕೈಯಲ್ಲೊಂದು ಕೋಲು ಹಿಡಿದು, ದುಂಡು ಕನ್ನಡಕ ಧರಿಸಿ, ಸತ್ಯ, ಅಹಿಂಸೆಯ ಅಸದಿಂದ…

6 hours ago