ಮೈಸೂರು: ಸಂಸದೆ ಪ್ರಿಯಾಂಕಾ ಗಾಂಧಿ ಅವರು ನೀಡಿರುವ ಹೇಳಿಕೆಯಿಂದ ಬಂಡೀಪುರದಲ್ಲಿ ರಾತ್ರಿ ಪ್ರಯಾಣ ನಿರ್ಬಂಧ ಮಾಡುವ ಬಗ್ಗೆ ಕಾಂಗ್ರೆಸ್ ನಾಯಕರು ತೋರುತ್ತಿರುವ ದ್ವಿಮುಖ ನಿಲುವು ಪರಿಸರ ಸಂರಕ್ಷಣೆಗೆ ಅಪಾಯಕಾರಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಇಂದು(ಡಿ.4) ಸಾಮಾಜಿಕ ಜಾಲತಾಣವಾದ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಬಂಡೀಪುರದ ಮೂಲಕ ರಾತ್ರಿ ಪ್ರಯಾಣ ನಿರ್ಬಂಧವನ್ನು ನಿಷೇದಿಸುವ ವಿಚಾರದ ಬಗ್ಗೆ ನೀಡಿರುವ ಇತ್ತೀಚಿನ ಹೇಳಿಕೆ ಕಾಂಗ್ರೆಸ್ ನಾಯಕತ್ವದಲ್ಲಿನ ಭಿನ್ನಾಭಿಪ್ರಾಯವನ್ನು ತೋರುತ್ತದೆ ಎಂದಿದ್ದಾರೆ.
ಒಂದು ಕಡೆ, ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದಿಷ್ಟವಾಗಿ ಅಂತಹ ಯಾವುದೇ ಪ್ರಸ್ತಾಪವಿಲ್ಲ ಎಂದು ನಿರಾಕರಿಸುತ್ತಾರೆ. ಇನ್ನೊಂದು ಕಡೆ, ಪಕ್ಷದ ರಾಷ್ಟೀಯ ನಾಯಕರು ಅದಕ್ಕೆ ವಿರುದ್ಧವಾಗಿ ಸೂಚನೆ ನೀಡುತ್ತಿದ್ದಾರೆ. ಈ ಅಸಮನ್ವಯತೆ ಅವರ ಆಡಳಿತದ ಪ್ರಾಮಾಣಿಕತೆಯ ಬಗ್ಗೆ ಸಂದೇಹಗಳನ್ನು ಹುಟ್ಟುಹಾಕುತ್ತದೆ ಎಂದು ಹೇಳಿದ್ದಾರೆ.
ಮೇಲಾಗಿ, ಈ ಪ್ರಸ್ತಾಪಗಳು ನಮ್ಮ ದೇಶದ ಪರಿಸರ ವ್ಯವಸ್ಥೆಗಳ ಸಂರಕ್ಷಣೆಯ ಬಗ್ಗೆ ಚಿಂತೆಯನ್ನೂ ತೋರುತ್ತವೆ. ಬಂಡೀಪುರವು ಕೇವಲ ಒಂದು ರಸ್ತೆ ಅಲ್ಲ—ಇದು ಅನೇಕ ವನ್ಯಜೀವಿ ಪ್ರಭೇಧಗಳ ವಾಸಸ್ಥಳವಾಗಿದೆ. ಅವುಗಳನ್ನು ಮಾನವ ಚಟುವಟಿಕೆಗಳಿಂದ ರಕ್ಷಿಸಲು, ವಿಶೇಷವಾಗಿ ರಾತ್ರಿ ಸಮಯದಲ್ಲಿ, ಸೂಕ್ಷ್ಮ ಅವಧಿಯಲ್ಲಿ ಅವುಗಳಿಗೆ ರಕ್ಷಣೆ ನೀಡಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜಕೀಯ ನಾಯಕರು ಈ ದೇಶದ ಪ್ರಕೃತಿ ಸಂರಕ್ಷಣೆಗೆ ಪ್ರಜ್ಞಾಪೂರ್ವಕವಾಗಿರುವುದನ್ನು ನಿರ್ಧರಿಸಬೇಕೇ ಹೊರತು, ತಮ್ಮ ಪ್ರಣಾಳಿಕೆಯು ಕೆಲವೊಬ್ಬರಿಗೆ ಲಾಭವನ್ನು ತರುವಂತೆ ಮಾಡಿರುವುದರಿಂದ ಈ ರೀತಿಯ ನಿರ್ಭಂಧವನ್ನು ಹಿಂಪಡೆದು ಪರಿಸರ ಹಾಗೂ ವನ್ಯಜೀವಿಗಳ ಸರ್ವನಾಶ ಮಾಡುವುದು ಸರಿಯಲ್ಲ. ಇದರಿಂದ ಸಂಭವಿಸಬಹುದಾದ ಹಾನಿಯ ಬಗ್ಗೆಯು ಸಹ ಚಿಂತಿಸಬೇಕಾಗಿದೆ. ಒಟ್ಟಾರೆ ಕರ್ನಾಟಕಕ್ಕೆ ಅವಶ್ಯಕವಾದದ್ದು ಏನೆಂದರೆ, ಒಂದೇ ಧ್ವನಿಯಲ್ಲಿ ಮಾತನಾಡುವ, ನಾಡಿನ ಜನತೆ ಮತ್ತು ಪರಿಸರದ ಹಿತದೃಷ್ಠಿಯಿಂದ ಕ್ರಮಗಳನ್ನೂ ತೆಗೆದುಕೊಳ್ಳುವ ಬಲಿಷ್ಠ ಸರ್ಕಾರ ಎಂದು ತಿಳಿಸಿದ್ದಾರೆ.
ಬೆಳಗಾವಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಕಾಂಗ್ರೆಸ್…
ಮೈಸೂರು: ಸ್ನೇಹಮಯಿ ಕೃಷ್ಣಗೆ ಫಂಡಿಂಗ್ ಮಾಡುತ್ತಿರುವವರು ಯಾರು ಅನ್ನೋದು ಗೊತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿಕಾರಿದ್ದಾರೆ. ಮುಡಾ ಪ್ರಕರಣಕ್ಕೆ…
ನವದೆಹಲಿ: ಸಂಸತ್ ಭವನದ ಸಂಕೀರ್ಣದಲ್ಲಿ ಬಿಜೆಪಿ ಸಂಸದರು ನನ್ನನ್ನು ತಳ್ಳಿದ್ದಾರೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ…
ಬೆಳಗಾವಿ: ಕೇಂದ್ರ ಗ್ರಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್. ಅಂಬೇಡ್ಕರ್ ಕುರಿತು ನೀಡಿರುವ ಹೇಳಿಕೆ ವಿರುದ್ಧ ದೇಶಾದ್ಯಂತ ವ್ಯಾಪಕ…
ಬೆಳಗಾವಿ: ಸಂಸತ್ತಿನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಕರ್ನಾಟಕ…
ಬೆಳಗಾವಿ: ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ರಾಜ್ಯದಲ್ಲಿ ನೆಲೆಸಿರುವ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ…