ಮೈಸೂರು: ಭಾರತ ಜೋಡಿಸುವುದನ್ನ ಬಿಜೆಪಿ ನೋಡಿ ಕಾಂಗ್ರೆಸ್ ಕಲಿಯಲಿ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಸಲಹೆ ನೀಡಿದರು. ಈ ಬಗ್ಗೆ ಮಾತಾಡಿದ ಅವರು, ವಾಜಪೇಯಿ ಕಾಲದಲ್ಲಿ ಸುವರ್ಣ ಚತುಷ್ಪಥ ಹೆದ್ದಾರಿ ನಿರ್ಮಾಣವಾಯ್ತು. ಮೋದಿ ಕಾಲದಲ್ಲಿ ದೇಶದಲ್ಲಿ ರಸ್ತೆ, ವಿಮಾನ, ರೈಲು ಸಂಪರ್ಕ ಆಗ್ತಿದೆ. ಭಾರತವನ್ನು ಜೋಡಿಸುವುದಕ್ಕೆ ನಡಿಗೆ ಪ್ರಾರಂಭಿಸಿರುವವರು ‘ಭಾರತ ತೋಡೋ’ ತಂಡದ ಸಹವಾಸವನ್ನು ಬಿಡಲಿ ಎಂದರು
ಮುಂದಿನ ಐದು ವರ್ಷಗಳ ಬಳಿಕ ಮತ್ತೊಂದು ಯಾತ್ರೆ ಕೈಗೊಳ್ಳಿ. ಆಗ ದೆಹಲಿ ಅಥವಾ ಇಟಲಿಯಿಂದ ನೇರ ಮೈಸೂರಿಗೆ ಬಂದು ಲ್ಯಾಂಡ್ ಆಗಬಹುದು. ಇನ್ನು ಕಾಂಗ್ರೆಸ್ ಗೆ 25 ವರ್ಷ ಭವಿಷ್ಯವಿಲ್ಲ, ಅಲ್ಲಿವರೆಗೆ ಬಿಜೆಪಿ ಸರ್ಕಾರ ಇರುತ್ತೆ. ಜೀಸಸ್ ಒಬ್ಬನೇ ದೇವರು ಎನ್ನುವವನು ಪಾದ್ರಿಯನ್ನು ಭೇಟಿ ಮಾಡಿ ಯಾತ್ರೆ ಆರಂಭಿಸಿದ್ದು, ಇದರಿಂದ ನಿಮ್ಮ ಉದ್ದೇಶ ಏನು ಎಂಬುದು ಗೊತ್ತಾಗಿದೆ. ‘ದಸರಾ ಹೊಸ್ತಿಲಲ್ಲಿ ರಾಹುಲ್ ಗಾಂಧಿ ಮೈಸೂರಿಗೆ ಬರುತ್ತಿದ್ದು, ನೀವು ಬರುವ ನಂಜನಗೂಡು ಹೆದ್ದಾರಿ ಮೋದಿ ಕಾಲದಲ್ಲಿ ನಿರ್ಮಾಣವಾಗಿದ್ದು. ಹಾಗೆಯೇ ಬರುವಾಗ ಮೈಸೂರು ಏರ್ಪೋರ್ಟ್ ನೋಡಿಕೊಂಡು ಬನ್ನಿ. ಮೈಸೂರು – ಬೆಂಗಳೂರು ಹೆದ್ದಾರಿ ಸಾಕಷ್ಟು ಅಭಿವೃದ್ಧಿ ಆಗಿದ್ದು, ಮೋದಿ ಸರ್ಕಾರ ಹೇಗೆ ಭಾರತವನ್ನು ಜೋಡಿಸಿದೆ ಎಂಬುದನ್ನು ನೋಡಿಕೊಂಡು ಹೋಗಿ ಎಂದರು.ಪಾದ್ರಿಯನ್ನು ಬದಿಗಿಟ್ಟು ಚಾಮುಂಡಿಗೆ ನಮಸ್ಕರಿಸಿ, ನಾಡಹಬ್ಬ ದಸರಾದಲ್ಲಿ ಭಾಗಿಯಾಗಿ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಮಂಡ್ಯ: ಸಕ್ಕರೆ ನಗರಿಯಲ್ಲಿ ಶುಕ್ರವಾರ ಆಕ್ಷರಶಃ ದೊಡ್ಡ ಜಾತ್ರೆಯ ಸೊಬಗು ಮನೆ ಮಾಡಿತ್ತು. ಎಲ್ಲಿ ನೋಡಿದರಲ್ಲಿ ಜನವೋ ಜನ; ಅದು…
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…