ಮೈಸೂರು

ಪ್ರಧಾನಿ ಮೋದಿಯಿಂದ ಮೌಢ್ಯ ಬಿತ್ತನೆ : ಸಚಿವ ಎಚ್.ಸಿ.ಮಹದೇವಪ್ಪ ಟೀಕೆ

ಮೈಸೂರು : ಸಾಮಾಜಿಕ ಬಹಿಷ್ಕಾರ, ಮಾರ್ಯಾದೆಗೇಡು ಹತ್ಯೆ ತಡೆಯಲು ವಿಶೇಷ ಕಾನೂನು ರೂಪಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ನಗರದ ಕಿರುರಂಗಮಂದಿರದಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಬಂದು ೭೮ ವರ್ಷಗಳಾಗಿದ್ದು, ಇನ್ನೂ ಸಾಮಾಜಿಕ ಬಹಿಷ್ಕಾರ, ಮರ್ಯಾದ ಹತ್ಯೆ ಪೈಶಾಚಿಕ ಘಟನೆಗಳು ನಡೆಯುತ್ತಿವೆ. ಇದಕ್ಕಾಗಿ ಪ್ರತ್ಯೇಕ ಕಾನೂನು ರೂಪಿಸಲು ಮುಂದಾಗಿದ್ದು, ಅದು ಎರಡು ಬಾರಿ ವಾಪಾಸ್ ಬಂದಿದೆ. ಸಂವಿಧಾನದಲ್ಲಿ ಎಲ್ಲವೂ ಸರಿಯಿದೆ. ಆದರೆ, ಸಂವಿಧಾನ ಆಶಯಗಳನ್ನು ಜಾರಿಗೊಳಿಸುವ ಆಳುವ ಮನಸ್ಸುಗಳು ಸರಿಯಿಲ್ಲವಾಗಿದೆ. ಇದರಿಂದ ಕಾನೂನು ಕೇವಲ ಶ್ರೀಮಂತರ ಪರ ಕೆಲಸ ಮಾಡುತ್ತಿದ್ದೀಯಾ ಎಂಬ ಪ್ರಶ್ನೆಗಳು ಮೂಡಿದೆ ಎಂದು ತಿಳಿಸಿದರು.

ಬಿಹಾರದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯ ಸಂದರ್ಭದಲ್ಲಿ ಮಹಿಳಾ ಮತದಾರರಿಗೆ ೧೦ ಸಾವಿರ ರೂ. ನೀಡಿದರು. ಚುನಾವಣಾ ಆಯೋಗ ಅದನ್ನು ನೋ ಡಿಕೊಂಡು ಸುಮ್ಮನೆ ಇದೆ. ಬಿಜೆಪಿಗೆ ಅಭೂತ ಪೂರ್ವ ಯಶಸ್ಸು ಸಿಕಿತ್ತು. ಈ ರೀತಿ ಹಂತ ಹಂತವಾಗಿ ಬಿಜೆಪಿಯ ಕೋಮುವಾದಿಗಳು ಚುನಾವಣೆಯ ಎರಡು ದಿನದ ಮುನ್ನ ೧೦ ಸಾವಿರ ರೂ. ಹಾಕಿ ಮುಗ್ಧ ಜನರ ದಿಕ್ಕು ತಪ್ಪಿಸಿದ್ದಾರೆ. ಈ ನಿಟ್ಟಿನಲ್ಲಿ ಪ್ರಜಾಪ್ರಭುತ್ವ ಉಳಿಸಿ ಬಲಪಡಿಸುವ ಕೆಲಸ ಮತ್ತು ಪ್ರಶ್ನಿಸುವ ವೇದಿಕೆ ಇಂದು ಸೃಷ್ಟಿಯಾಗಿದೆ ಎಂದರು.

ಈ ಹಿಂದೆ ರಾಷ್ಟ್ರಪತಿಗಳಾಗಿದ್ದ ಡಾ.ರಾಜೇಂದ್ರ ಪ್ರಸಾದ್ ಅವರು ಯಾರದೋ ಕಾಲು ಮುಟ್ಟಿ ನಮಸ್ಕಾರ ಮಾಡಿದರು. ಅದಕ್ಕೆ ದೇಶದಾದ್ಯಂತ ಉಗ್ರವಾದ ಪ್ರತಿಭಟನೆ ನಡೆಯಿತು. ನಂತರ ಅವರು ಕ್ಷಮೆ ಕೇಳಿದರು. ಆದರೆ, ಇಂದಿನ ಪ್ರಧಾನಿಗಳು ಎಲ್ಲಾ ದೇವಸ್ಥಾನಗಳಿಗೆ ಹೋಗಿ ಅವರೇ ಪೂಜೆ ಮಾಡಿ ಬರುತ್ತಿದ್ದಾರೆ. ಕೋವಿಡ್ ಸಾಂಕ್ರಾಮಿಕ ರೋಗ ಹೊಗಲಾಡಿಸಲು ಗಂಟೆ-ಜಾಗಟೆ ಬಾರಿಸಿ ಎನ್ನುತ್ತಾರೆ. ದೇಶವನ್ನು ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವದಲ್ಲಿ ಕಟ್ಟಬೇಕು ಎಂದು ಸಂವಿಧಾನ ಹೇಳುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಮೌಢ್ಯ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಬಹುರೂಪಿ ವಿವಿಧ ರೂಪಗಳಿಂದ ಅತ್ಯಂತ ಪ್ರಾಬಲ್ಯವಾದ ಮಾಧ್ಯಮವಾಗಿದೆ. ಇದನ್ನು ಬಳಸಿಕೊಂಡು ಚಳವಳಿಗಳು ಗಟ್ಟಿಯಾಗಿದೆ. ಇದರ ಮೂಲಕವೇ ನಾವು ಯುವ ಸಮೂಹವನ್ನು ಎಚ್ಚರಿಸಬೇಕಿದೆ. ಇಂದು ಸಂವಿಧಾನ ಅಪಾಯದಲ್ಲಿದೆ. ಒಂದೇ ಇಂದೇ ವಿಷಯವನ್ನು ನಿಶಬ್ಧಗೊಳಿಸುತ್ತಿದ್ದಾರೆ. ಐಟಿ, ಇಡಿ, ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರಲ್ಲದೆ, ಇಂತಹ ಕಾರ್ಯಕ್ರಮದ ಮೂಲಕ ಸಮೃದ್ಧ ಭಾರತದ ಜೊತೆಗೆ ಬಹುತ್ವದ ಭಾರತದ ನಿರ್ಮಾಣದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಿದರು.

ಈ ಹಿಂದೆ ಹಲವರು ರಂಗಾಯಣ ನಿರ್ದೇಶಕರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಆದರೆ ಅಡ್ಡಂಡ ಸಿ.ಕಾರ್ಯಪ್ಪ ಅವರು ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಪರ್ವ ನಾಟಕ ಮಾಡಿಸುವಾಗ ಅದರಲ್ಲಿರುವ ಬರುವ ಕೋಣದ ಮಾಂಸ ತಿನ್ನುವ ವಿಷಯವನ್ನು ಬಿಟ್ಟು ನಾಟಕ ಮಾಡಿಸಿದರು. ಇತಿಹಾಸ ಬಿಟ್ಟು ನಾಟಕ ಮಾಡುವುದು ಸರಿಯಲ್ಲ. ಜ್ಞಾನ ವ್ಯವಸ್ಥಿತವಾಗಿರುತ್ತದೆ. ಆದರೆ, ಇತಿಹಾಸ ಆಗಲ್ಲ. ಇತಿಹಾಸ ಹಿಂದಿನ ದಾಖಲೆಯಾಗಿದೆ. ಅದನ್ನು ಬಿಟ್ಟು ಮುಂದೆ ಸಾಗಲು ಸಾಧ್ಯವಿಲ್ಲ ಎಂದರು.

 

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ರಾಜ್ಯ ಬಜೆಟ್‌: ಈ ವರ್ಷ 56,432 ಖಾಲಿ ಹುದ್ದೆಗಳ ಭರ್ತಿ

ಬೆಂಗಳೂರು: ರಾಜ್ಯ ಸರ್ಕಾರ ಈ ವರ್ಷ ಪ್ರಮುಖ ಇಲಾಖೆಗಳ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಂಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.…

21 seconds ago

ಬಜೆಟ್‌ ಗಾತ್ರ 4.48 ಲಕ್ಷ ಕೋಟಿ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರಿಂದು ದಾಖಲೆಯ 17ನೇ ಬಜೆಟ್‌ ಅನ್ನು ಮಂಡಿಸುತ್ತಿದ್ದಾರೆ. ವಿಧಾನಸೌಧದಲ್ಲಿ ರಾಜ್ಯ ಬಜೆಟ್‌ ಮಂಡಿಸುತ್ತಿರುವ ಸಿಎಂ ಸಿದ್ದರಾಮಯ್ಯ…

7 mins ago

ಬಜೆಟ್‌ ಪ್ರತಿ ಇರುವ ಸೂಟ್‌ಕೇಸ್‌ ಜೊತೆ ವಿಧಾನಸೌಧಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯ ಬಜೆಟ್‌ ಮಂಡನೆಗೆ ಕ್ಷಣಗಣನೆ ಶುರುವಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ದಾಖಲೆಯ 17ನೇ ಬಜೆಟ್‌ ಮಂಡಿಸಲು ಸಿದ್ಧರಾಗಿದ್ದಾರೆ. ಸಾಂಪ್ರದಾಯಿಕವಾಗಿ…

36 mins ago

ಓದುಗರ ಪತ್ರ: ಶಾಂತಿ ನೆಲೆಸಲಿ

ಏಕಸ್ವಾಮ್ಯ ಸಾಧಿಸಲು ತಯಾರು ಪರಮಾಣು ಅಣ್ವಸ್ತ್ರ ಅದಕ್ಕಾಗಿಯೇ ನಿಲ್ಲದೆ ನಡೆಯುತ್ತಿದೆ ವಾಯು, ಡ್ರೋನ್, ಕ್ಷಿಪಣಿ ದಾಳಿ ನೆತ್ತರು ಹರಿಯುತ್ತಿದೆ ಹಿಂಸೆ…

3 hours ago

ಓದುಗರ ಪತ್ರ: ಸಂಬಂಧ..!

ಸಂಬಂಧ..! ಒಂದೊಂದು ರೀತಿ ಒಬ್ಬೊಬ್ಬರ ಸಂಬಂಧ.. ಇವರದು ಹಾಲು-ಜೇನು ಅವರದು ಎಣ್ಣೆ-ಸೀಗೆಕಾಯಿ ಬೇಕಿದ್ದರೆ ಗಮನಿಸಿ.. ಇರಾನ್ -ಇಸ್ರೇಲ್ ಹಾವು-ಮುಂಗುಸಿ !…

3 hours ago

ಓದುಗರ ಪತ್ರ: ಒಣಗಿದ ಮರ ತೆರವುಗೊಳಿಸಿ

ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಹಾಲ್ ನಿರ್ಗಮನ ದ್ವಾರದ ಬಳಿ ಮರವೊಂದು ಒಣಗಿ ನಿಂತಿದ್ದು, ಯಾವಾಗಲಾದರೂ ಬೀಳುವ ಸಾಧ್ಯತೆಯಿದೆ. ಕ್ರಾ-ರ್ಡ್ ಹಾಲ್…

3 hours ago