ಮೈಸೂರು

ಮೈಕ್ರೋ ಫೈನಾನ್ಸ್‌ ಸಿಬ್ಬಂದಿ ಅಡ್ಡಗಟ್ಟಿ ದರೋಡೆ : 25 ಸಾವಿರು ದೋಚಿ ಪರಾರಿ

ತಿ.ನರಸೀಪುರ : ಮೈಕ್ರೋ ಫೈನಾನ್ಸ್ ಸಿಬ್ಬಂದಿಯನ್ನು ಅಡ್ಡಗಟ್ಟಿರುವ ಏಳು ಮಂದಿ ದರೋಡೆಕೋರರ ತಂಡ ಮಚ್ಚು ತೋರಿಸಿ ಅವರ ಬಳಿ ಇದ್ದ ಸಾಲ ವಸೂಲಾತಿ 25 ಸಾವಿರ ರೂ. ದೋಚಿರುವ ಘಟನೆ ಸೋಮವಾರ ಸಂಜೆ ಪಟ್ಟಣದ ಹೊರವಲಯ ಶ್ರೀ ನರಸಿಂಹಸ್ವಾಮಿ ಕಂತೆಕಟ್ಟೆ ಕ್ಷೇತ್ರದ ಬಳಿ ಹುಣಸೂರು ರಸ್ತೆಯಲ್ಲಿ ನಡೆದಿದೆ.

ಚಾಮರಾಜನಗರ ತಾಲ್ಲೂಕಿನ ಬಿಸಲವಾಡಿ ಗ್ರಾಮದ ಮಹೇಶ್ ಅವರು ಬಣ್ಣಾರಿ ಅಮ್ಮನ್ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಸಹೋದ್ಯೋಗಿ ಪ್ರೇಮ್ ಕುಮಾರ್ ಅವರೊಂದಿಗೆ ಫೈನಾನ್ಸ್ ಸಂಸ್ಥೆಯ ಮ್ಯಾನೇಜರ್ ಸೂಚನೆಯಂತೆ ವಿವಿಧೆಡೆ ಸಾಲದ ಹಣವನ್ನು ವಸೂಲಿ ಮಾಡಿಕೊಂಡು ಹುಣಸೂರು ಗ್ರಾಮದ ಕಡೆಗೆ ಬೈಕ್‌ನಲ್ಲಿ ಇಬ್ಬರೂ ಹೋಗುತ್ತಿದ್ದಾಗ ಸ್ಕೂಟಿ ಹಾಗೂ ಕಾರಿನಲ್ಲಿ ಬಂದು ಅಡ್ಡಗಟ್ಟಿರುವ ಏಳು ಮಂದಿ ದರೋಡೆಕೋರರ ತಂಡ ಹಣವನ್ನು ದೋಚಿದ್ದಾರೆ.

ಮಹೇಶ್ ಮತ್ತು ಪ್ರೇಮ್ ಕುಮಾರ್ ಇಬ್ಬರೂ ಬೆಳಿಗ್ಗೆ ಕಂಪೆನಿಯ ಬೈಕ್‌ನಲ್ಲಿ ಆಲನಹಳ್ಳಿ, ನಂತರ ವರುಣ, ಸೋಸಲೆ, ಪೂರಿಗಾಲಿ, ಸರಗೂರು ಹ್ಯಾಂಡ್ ಪೋಸ್ಟ್ ಹಾಗೂ ತಲಕಾಡು ಗ್ರಾಮಗಳಲ್ಲಿ ಅಂಗಡಿ ಮತ್ತು ಸಾರ್ವಜನಿಕರಿಂದ ಒಟ್ಟು 25 ಸಾವಿರ ರೂ.ಗಳನ್ನು ಸಾಲಗಾರರಿಂದ ವಸೂಲಿ ಮಾಡಿಕೊಂಡು ತಲಕಾಡಿನಿಂದ ತಿ.ನರಸೀಪುರಕ್ಕೆ ಬರುತ್ತಿದ್ದು, ಬಳಿಕ ಇಬ್ಬರೂ ತಿ.ನರಸೀಪುರದಿಂದ ಹುಣಸೂರಿಗೆ ಹೋಗುತ್ತಿದ್ದಾಗ ಬೈಕ್ ಅನ್ನು ಮಾರ್ಗ ಮಧ್ಯೆ ಶ್ರೀ ನರಸಿಂಹಸ್ವಾಮಿ ಕಂತೆಕಟ್ಟೆ ಕ್ಷೇತ್ರದ ಬಳಿ ನರಸೀಪುರ ಕಡೆಯಿಂದ ಬಿಳಿಯ ಬಣ್ಣದ ಸ್ಕೂಟಿಯಲ್ಲಿ ಬಂದ ಇಬ್ಬರು ಹಾಗೂ ಒಂದು ಕೆಂಪು ಬಣ್ಣದ ಇನ್ನೋವಾ ಕಾರಿನಲ್ಲಿದ್ದ ಐವರು ಅಡ್ಡಹಾಕಿ ನಿಲ್ಲಿಸಿ ಚಿಕ್ಕ ಮಚ್ಚನ್ನು ತೋರಿಸಿ, ಬೆದರಿಸಿ 21 ಸಾವಿರ ರೂ. ಸಾಲ ವಸೂಲಾತಿ ಹಣ ಹಾಗೂ ಪ್ರೇಮ್ ಕುಮಾರ್ ಬಳಿಯಿದ್ದ 4 ಸಾವಿರ ರೂ.ಗಳನ್ನು ಕಿತ್ತುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಪೊಲೀಸ್ ಇನ್‌ಸ್ಪೆಕ್ಟರ್ ಧನಂಜಯ ಅವರು ಘಟನಾ ಸ್ಥಳದ ಮಹಜರು ನಡೆಸಿ ದರೋಡೆಕೋರರ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

ಆಂದೋಲನ ಡೆಸ್ಕ್

Recent Posts

ವಾಹನ ದಟ್ಟನೆ : ಸುಗಮ ಸಂಚಾರಕ್ಕೆ ರೈಲ್ವೆ ಅಂಡರ್‌ ಬ್ರಿಡ್ಜ್‌ ವಿಸ್ತರಿಸಲು ಮನವಿ

ಮೈಸೂರು : ಚಾಮರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಾಹನ ದಟ್ಟಣೆ ನಿಯಂತ್ರಣ ಹಾಗೂ ಸುಗಮ ಸಂಚಾರಕ್ಕಾಗಿ ಅಗತ್ಯ ಅಭಿವೃದ್ಧಿ ಕಾಮಗಾರಿಗಳನ್ನು…

6 hours ago

ಮೈಸೂರು–ಜಲ್ಪೈಗುಡಿ ನಡುವೆ ವಿಶೇಷ ರೈಲು ಸಂಚಾರ

ಮೈಸೂರು : ಬೇಸಿಗೆ ರಜೆಯಲ್ಲಿ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು, ನೈರುತ್ಯ ರೈಲ್ವೆಯು ಮೈಸೂರು- ಜಲ್ಪೈಗುರಿ ಜಂಕ್ಷನ್‌ ನಡುವೆ ವಿಶೇಷ ಎಕ್ಸ್‌ಪ್ರೆಸ್…

6 hours ago

ಯಮುನಾ ನದಿಯಲ್ಲಿ ಮುಳುಗಿದ ಪ್ರವಾಸಿಗರ ದೋಣಿ ; 6 ಮಂದಿ ಸಾವು, ಹಲವರು ನಾಪತ್ತೆ

ಮಥುರಾ : ಬೃಂದಾವನದ ಕೇಶಿ ಘಾಟ್ ಸಮೀಪ ಯಮುನಾ ನದಿಯಲ್ಲಿ ಪ್ರವಾಸಿಗರಿಂದ ತುಂಬಿದ ದೋಣಿ ಪಲ್ಟಿಯಾಗಿ ಆರು ಮಂದಿ ಸ್ಥಳದಲ್ಲೇ…

7 hours ago

ಹಡಗುಗಳ ಮೇಲಿನ ಶುಲ್ಕ ನಿಲ್ಲಿಸಿ ; ಇರಾನ್‌ಗೆ ಟ್ರಂಪ್ ಸೂಚನೆ

ಟೆಹ್ರಾನ್ : ಇರಾನ್ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳ ಮೇಲೆ ಶುಲ್ಕ ವಿಧಿಸುತ್ತಿದ್ದರೆ, ಅದು ತಕ್ಷಣವೇ ಅದನ್ನು ನಿಲ್ಲಿಸಬೇಕು…

8 hours ago

ನಂಜನಗೂಡು | ದೇವರಾಯಶೆಟ್ಟಿಪುರದಲ್ಲಿ ಚಿರತೆ ಪ್ರತ್ಯಕ್ಷ ; ಗ್ರಾಮಸ್ಥರಲ್ಲಿ ಆತಂಕ

ಮಲ್ಕುಂಡಿ : ರಾತ್ರಿ ವೇಳೆ ರಸ್ತೆ ಮಧ್ಯೆ ಚಿರತೆ ಪ್ರತ್ಯಕ್ಷವಾಗಿರುವ ಘಟನೆ ದೇವರಾಯಶೆಟ್ಟಿಪುರ ಗ್ರಾಮದಿಂದ ಹುರ ಗ್ರಾಮಕ್ಕೆ ತೆರಳುವ ಮುಖ್ಯ…

8 hours ago

ಹನೂರು | ಪ್ರತ್ಯೇಕ ಮನೆಕಳ್ಳತನ ; ಐವರ ಬಂಧನ

ಹನೂರು : ಮೂರು ಪ್ರತ್ಯೇಕ ಮನೆಗಳಲ್ಲಿ ಕಳ್ಳತನ ನಡೆಸಿ ನಗದು ಹಾಗೂ ಚಿನ್ನ ದೋಚಿಕೊಂಡು ಪರಾರಿಯಾಗಿದ್ದ ಐವರು ಆರೋಪಿಗಳನ್ನು ರಾಮಾಪುರ…

10 hours ago