ಮೈಸೂರು

ಮೋದಿ ಸರ್ಕಾರದಿಂದ ಅತ್ಯಧಿಕ ಬರ-ಪ್ರವಾಹ ಪರಿಹಾರ ಬಿಡುಗಡೆ, ಮನಮೋಹನ್‌ ಸಿಂಗ್‌ ಸರ್ಕಾರದಿಂದ ಕೇವಲ ಚಿಪ್ಪು:  ಆರ್‌.ಅಶೋಕ

  • ನಿದ್ದೆ ಮಾಡುವ ಸಿಎಂ ಸಿದ್ದರಾಮಯ್ಯನವರಿಂದ ಕೇವಲ ಸುಳ್ಳು ಮಾತು, ಎರಡು ನಾಲಿಗೆಯ ಮುಖ್ಯಮಂತ್ರಿ

ಬೆಂಗಳೂರು : ಎರಡು ನಾಲಿಗೆಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮನೆಹಾಳು ಕಾಂಗ್ರೆಸ್‌ ಬರ-ಪ್ರವಾಹ ಪರಿಹಾರವಾಗಿ ರಾಜ್ಯಕ್ಕೆ ಕೇವಲ ಚಿಪ್ಪು ನೀಡಿದೆ. ಆದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭರಪೂರ ಪರಿಹಾರ ನೀಡಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ‌ ಸುಳ್ಳುರಾಮಯ್ಯ ಆಗಿದ್ದು, ರಾವಣನಿಗೆ ಹತ್ತು ತಲೆ ಇದ್ದಂತೆ ಇವರು ಹತ್ತು ನಾಲಿಗೆ ಇಟ್ಟುಕೊಂಡು ಮಾತಾಡುತ್ತಿದ್ದಾರೆ.

ಈ ಮೊದಲು ಮಾರ್ಗಸೂಚಿ ಪ್ರಕಾರ, 4,860 ಕೋಟಿ ರೂ. ನಷ್ಟ ಪರಿಹಾರ ನೀಡಬೇಕು ಎಂದು ಕೇಳಿ ಈಗ ಕೇಂದ್ರ ಸರ್ಕಾರ 3,454 ಕೋಟಿ ರೂ. ನೀಡಿದ ನಂತರ 18,172 ಕೋಟಿ ರೂ. ನೀಡಬೇಕೆಂದು ಪ್ರತಿಭಟನೆ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಎರಡು ನಾಲಿಗೆ ಹೊಂದಿದ್ದು, ಈ ಸರ್ಕಾರ ತೊಲಗಬೇಕು, ಕಾಂಗ್ರೆಸ್‌ ತೊಲಗಲಿ, ಇಲ್ಲವಾದರೆ ರಾಜ್ಯಕ್ಕೆ ಉಳಿಗಾಲವಿಲ್ಲ ಎಂದರು.

ಕಾಲುಭಾಗ ಹಣ ಬಿಡುಗಡೆ : 2004-05 ರಲ್ಲಿ ಬರ ಬಂದಾಗ ನವೆಂಬರ್‌ನಲ್ಲಿ ರಾಜ್ಯ ಸರ್ಕಾರ 1147.70 ಕೋಟಿ ರೂ. ಗೆ ಮನವಿ ಮಾಡಿದ್ದು, ಅಂದಿನ ಮನಮೋಹನ್‌ ಸಿಂಗ್‌ ಸರ್ಕಾರ 63 ಕೋಟಿ ರೂ. ಬಿಡುಗಡೆ ಮಾಡಿತ್ತು. ಅಂದರೆ 10.07% ಮಾತ್ರ ಸಿಕ್ಕಿತ್ತು. 2005-06 ರಲ್ಲಿ ಪ್ರವಾಹ ಬಂದಾಗ, 4897 ಕೋಟಿ ರೂ. ಕೇಳಿದ್ದು, 358 ಕೋಟಿ ರೂ. ಮಾತ್ರ ನೀಡಲಾಗಿತ್ತು. ಅಂದರೆ 9.08% ಮಾತ್ರ ಸಿಕ್ಕಿತ್ತು. 2006-07 ರಲ್ಲಿ ಬರ-ಪ್ರವಾಹಕ್ಕೆ 2858 ಕೋಟಿ ರೂ. ಕೇಳಿದ್ದು, ಮನೆಹಾಳ ಕಾಂಗ್ರೆಸ್‌ 226 ಕೋಟಿ ರೂ. ಅಂದರೆ 11.89% ನೀಡಿತ್ತು. 2007-08 ರಲ್ಲಿ ಪ್ರವಾಹ ಆದಾಗ 406 ಕೋಟಿ ರೂ. ಕೇಳಿದ್ದು, ಕಾಂಗ್ರೆಸ್‌ ನಯಾಪೈಸೆಯನ್ನೂ ನೀಡಲಿಲ್ಲ. ಇದೇ ವರ್ಷ ಆಗಸ್ಟ್‌ನಲ್ಲಿ 1510 ಕೋಟಿ ರೂ. ಕೇಳಿದ್ದು, ಆಗಲೂ ಮೂರು ನಾಮ ಹಾಕಿದ ಕಾಂಗ್ರೆಸ್‌ ಕೇವಲ ಚಿಪ್ಪು ನೀಡಿತ್ತು ಎಂದು ವಿವರಿಸಿದರು.

2008-09 ರಲ್ಲಿ ಬರಕ್ಕಾಗಿ 516.72 ಕೋಟಿ ರೂ. ಕೇಳಿದರೆ ಕೇವಲ 1.86 ಕೋಟಿ ರೂ. ನೀಡಿ ಗಂಜಿ ಕುಡಿಯಲು ಕೂಡ ಹಣವಿಲ್ಲದಂತೆ ಕಾಂಗ್ರೆಸ್‌ ಮಾಡಿತ್ತು.

2009-10 ರಲ್ಲಿ 7759 ಕೋಟಿ ರೂ. ಕೇಳಿದ್ದರೆ, 1698 ಕೋಟಿ ರೂ. ನೀಡಲಾಗಿತ್ತು. 2010-11 ರಲ್ಲಿ 1045 ಕೋಟಿ ರೂ. ನೀಡಲು ಮನವಿ ಮಾಡಿದ್ದು, ಆಗ ನಯಾಪೈಸೆಯನ್ನೂ ನೀಡಲಿಲ್ಲ. 2011-12 ರಲ್ಲಿ 6415 ಕೋಟಿ ರೂ. ಕೇಳಿದ್ದು, 479 ಕೋಟಿ ರೂ. ನೀಡಿದ್ದು, ಕೇವಲ 7.47% ಆಗಿತ್ತು. 2012-13 ರಲ್ಲಿ 11,489 ಕೋಟಿ ರೂ. ಕೇಳಿದ್ದು, 4.62% ನಷ್ಟು ಮಾತ್ರ 530 ಕೋಟಿ ರೂ. ನೀಡಲಾಗಿತ್ತು. 2013-14 ರಲ್ಲಿ 2588 ಕೋಟಿ ರೂ. ಕೇಳಿದ್ದು, 468 ಕೋಟಿ ರೂ. ಅಂದರೆ 18% ಮಾತ್ರ ನೀಡಲಾಗಿತ್ತು.

ಒಟ್ಟಾರೆಯಾಗಿ 2004-05 ರಿಂದ 2013-14 ನೇ ಸಾಲಿನವರೆಗೂ 44,838.59 ಕೋಟಿ ರೂ. ಕೇಳಿದ್ದು, ಕೇಂದ್ರದ ಕಾಂಗ್ರೆಸ್ ಸರ್ಕಾರ ಎನ್‌ಡಿಆರ್‌ಎಫ್‌ನಿಂದ ಕೇವಲ 3,579.22 ಕೋಟಿ ರೂ. ನೀಡಿದ್ದು, ಎಸ್‌ಡಿಆರ್‌ಎಫ್‌ ಸೇರಿ ಒಟ್ಟು 4,571.4 ಕೋಟಿ ರೂ. ಮಾತ್ರ ನೀಡಿತ್ತು. ಕರ್ನಾಟಕ ಸರ್ಕಾರ ಕೇಳಿದ್ದಕ್ಕೆ ಹೋಲಿಸಿದರೆ ಕೊಟ್ಟಿದ್ದು 10.20% ಮಾತ್ರ. ಇದು ಕಾಲುಭಾಗವೂ ಇಲ್ಲ ಎಂದು ದೂರಿದರು.

ಈ ಅಂಕಿ ಅಂಶ ನಿಜವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಆ ಸ್ಥಾನಕ್ಕೆ ಗೌರವ ತೋರಿಸಬೇಕು ಎಂದು ಆಗ್ರಹಿಸಿದರು.

ಮೋದಿ ಸರ್ಕಾರದಿಂದ ಹೆಚ್ಚು ಹಣ : ಸದಾ ನಿದ್ದೆ ಮಾಡುವ ಸಿದ್ದರಾಮಯ್ಯನವರಿಗೆ ನರೇಂದ್ರ ಮೋದಿ ಸರ್ಕಾರ ಹೆಚ್ಚು ಹಣ ಬಿಡುಗಡೆ ಮಾಡಿದೆ. 2014-15 ರಲ್ಲಿ 779 ಕೋಟಿ ರೂ. ಕೇಳಿದ್ದು, 417.74 ಕೋಟಿ ರೂ. ಅಂದರೆ 53.63% ರಷ್ಟು ನೀಡಲಾಗಿದೆ. 2015-16 ರಲ್ಲಿ 3831 ಕೋಟಿ ರೂ. ಕೇಳಿದ್ದು, 1853 ಕೋಟಿ ರೂ. ಅಂದರೆ 48.37% ರಷ್ಟು ನೀಡಲಾಗಿದೆ. 2016-17 ರಲ್ಲಿ 4703 ಕೋಟಿ ರೂ. ಕೇಳಿದ್ದು, 2510 ಕೋಟಿ ರೂ. ಅಂದರೆ 53.37% ರಷ್ಟು ನೀಡಲಾಗಿದೆ. 2017-18 ರಲ್ಲಿ 3697.26 ಕೋಟಿ ರೂ. ಕೇಳಿದ್ದು, 1141.04 ಕೋಟಿ ರೂ. ಅಂದರೆ 30.86% ರಷ್ಟು ನೀಡಲಾಗಿದೆ. 2018-19 ರಲ್ಲಿ 2434 ಕೋಟಿ ರೂ. ಕೇಳಿದ್ದು, 1248 ಕೋಟಿ ರೂ. ಅಂದರೆ 51.27% ರಷ್ಟು ನೀಡಲಾಗಿದೆ. 2019-20 ರಲ್ಲಿ 3837.76 ಕೋಟಿ ರೂ. ಕೇಳಿದ್ದು, 3412 ಕೋಟಿ ರೂ. ಅಂದರೆ 88.91% ರಷ್ಟು ನೀಡಲಾಗಿದೆ. 2020-21 ರಲ್ಲಿ 2242.48 ಕೋಟಿ ರೂ. ಕೇಳಿದ್ದು, 1480 ಕೋಟಿ ರೂ. ಅಂದರೆ 66% ರಷ್ಟು ನೀಡಲಾಗಿದೆ. 2021-22 ರಲ್ಲಿ 2122.85 ಕೋಟಿ ರೂ. ಕೇಳಿದ್ದು, 2255.8 ಕೋಟಿ ರೂ. ಅಂದರೆ 106.26% ರಷ್ಟು ನೀಡಲಾಗಿದೆ. 2022-23 ರಲ್ಲಿ 1944 ಕೋಟಿ ರೂ. ಕೇಳಿದ್ದು, 1603 ಕೋಟಿ ರೂ. ಅಂದರೆ 82.46% ರಷ್ಟು ನೀಡಲಾಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರದಿಂದ ಹಣ ನೀಡಿ : ಪ್ರಧಾನಿ ನರೇಂದ್ರ ಮೋದಿ ಯಾವುದೇ ತಾರತಮ್ಯ ಮಾಡದೆ ಪರಿಹಾರ ನೀಡಿದ್ದಾರೆ. ಚುನಾವಣೆ ಸಮಯದಲ್ಲಿ ಇದನ್ನು ಲೂಟಿ ಮಾಡಿ ಬೇರೆ ರಾಜ್ಯಗಳಿಗೆ ಕಳುಹಿಸಬಾರದು. ಇದನ್ನು ಬಿಜೆಪಿ ಕಾವಲುಗಾರರಂತೆ ಕಾಯಲಿದೆ. ಫ್ರೂಟ್‌ ತಂತ್ರಜ್ಞಾನ ಬಳಸದೆ ಡಿಬಿಟಿ ಮೂಲಕ ರೈತರಿಗೆ ಪರಿಹಾರ ನೀಡಬೇಕು. ಕೇಂದ್ರ ಸರ್ಕಾರದಂತೆಯೇ ರಾಜ್ಯ ಸರ್ಕಾರ ಕೂಡ 3454 ಕೋಟಿ ರೂ. ಹಣ ನೀಡಬೇಕು.

ಬಿಜೆಪಿ ಸರ್ಕಾರ ದುಪ್ಪಟ್ಟು ಪರಿಹಾರ ನೀಡಿದಂತೆ ರಾಜ್ಯ ಸರ್ಕಾರ ಕೂಡ ಪರಿಹಾರ ಬಿಡುಗಡೆ ಮಾಡಬೇಕು. ಇಲ್ಲವಾದರೆ ಪಾಪರ್‌ ಸರ್ಕಾರ ಎಂದು ನಾನೇ ಶ್ವೇತಪತ್ರ ಬಿಡುಗಡೆ ಮಾಡುತ್ತೇನೆ ಎಂದು ಎಚ್ಚರಿಸಿದರು.

ಎನ್‌ ಎಂ ಪ್ರದ್ಯುಮ್ನ

ಮೈಸೂರು ಜಿಲ್ಲೆಯ ನಂಜನಗೂಡಿನವನಾದ ನಾನು, ಸದ್ಯ ಮೈಸೂರಿನಲ್ಲಿ ನೆಲೆಸಿದ್ದೇನೆ. 2011 ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಬಿಎ ಪತ್ರಿಕೋದ್ಯಮ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 8 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಮೈಸೂರಿನ ಪಾದೇಶಿಕ ಪತ್ರಿಕೆ ʼಹಲೋ ಮೈಸೂರುʼಯಿಂದ ಪ್ರಾರಂಭಿಸಿ, ಜನಶ್ರೀ(ಟಿವಿ), ಸಿರಿ(ಟಿವಿ), ವಿಶ್ವವಾಣಿ ಪತ್ರಿಕೆ, ಟಿವಿ-೯(ಟಿವಿ) ಸಂಸ್ಥೆಗಳಲ್ಲಿ ವರದಿಗಾರ, ಮುಖ್ಯ ವರದಿಗಾರ ಹಾಗೂ ಉಪ ಸಂಪಾದಕನಾಗಿ ಕೆಲಸ ಮಾಡಿದ್ದೇನೆ. ಪ್ರಿಂಟ್‌ ಮೀಡಿಯಾದಲ್ಲಿ 6 ವರ್ಷ ಹಾಗೂ ಎಲೆಕ್ಟ್ರಾನಿಕ್‌ ಮೀಡಿಯಾದಲ್ಲಿ 2 ವರ್ಷಗಳ ಕಾಲ ಅನುಭವ ಹೊಂದಿದ್ದು, ಸದ್ಯ ಮೈಸೂರಿನ ʼಆಂದೋಲನ ದಿನಪತ್ರಿಕೆʼಯ ಭಾಗವಾದ ʼಆಂದೋಲನ ಡಿಜಿಟಲ್‌ʼನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ವೈಲ್ಡ್‌ಲೈಫ್‌ ಫೋಟೋಗ್ರಫಿ, ಪುಸ್ತಕ ಓದುವುದು ನನ್ನ ನೆಚ್ಚಿನ ಹವ್ಯಾಸಗಳಾಗಿವೆ.

Recent Posts

ವಿಮಾನ ದುರಂತದಲ್ಲಿ ಪ್ರಾಣ ಕಳೆದುಕೊಂಡ ಪ್ರಮುಖ ರಾಜಕಾರಣಿಗಳಿವರು…

ಬಾರಾಮತಿ : ಭಾರತೀಯ ರಾಜಕಾರಣದಲ್ಲಿ ಅನೇಕ ರಾಜಕೀಯ ನಾಯಕರು ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ. ಈ ಹಿಂದೆ ವಿಮಾನ ಅಪಘಾತದಲ್ಲಿ ಯಾವೆಲ್ಲಾ…

4 hours ago

ಹೆಬ್ಬಾಳಿನಲ್ಲಿ ಡ್ರಗ್ಸ್‌ ಲ್ಯಾಬ್‌ ಶಂಕೆ : ಶೆಡ್‌ವೊಂದರ ಮೇಲೆ ಎನ್‌ಸಿಬಿ ದಾಳಿ

ಮೈಸೂರು : ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಡ್ರಗ್ಸ್ ಲ್ಯಾಬ್ ಇರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ರಾಷ್ಟ್ರಿಯ ಮಾದಕ ದ್ರವ್ಯ ನಿಯಂತ್ರಣ…

5 hours ago

ನಿಗಮ ಮಂಡಳಿ | ಅಧ್ಯಕ್ಷರ ಅಧಿಕಾರಾವಧಿ ಮುಂದುವರಿಕೆ

ಬೆಂಗಳೂರು : 25 ನಿಗಮ ಮಂಡಳಿಗಳ ಅಧ್ಯಕ್ಷರ ಅಧಿಕಾರಾವಧಿ ಮುಂದುವರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಶಾಸಕರಿಗೆ ಮಾತ್ರ…

5 hours ago

ಡಿಜಿಟಲ್‌ ಅರೆಸ್ಟ್‌ ಕುತಂತ್ರ : 1 ಕೋಟಿ ವಂಚನೆ

ಮೈಸೂರು : ಸೈಬರ್ ವಂಚಕರು ವಾಟ್ಸಾಪ್ ಕರೆ ಮೂಲಕ ಹೂಡಿದ ಡಿಜಿಟಲ್ ಅರೆಸ್ಟ್ ಕುತಂತ್ರಕ್ಕೆ ಬಲಿಯಾಗಿ ವಿವೇಕಾನಂದ ನಗರದ ಹಿರಿಯ…

5 hours ago

ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್‌ ಇನ್ನಿಲ್ಲ ; ಬೆಂಗಳೂರು ಚಲೋ ಮುಂದೂಡಿಕೆ

ಬೆಂಗಳೂರು : ಕೆಎಸ್‌ಆರ್‌ಟಿಸಿ ಸ್ಟಾಫ್‌ ವರ್ಕರ್ಸ್‌ ಫೆಡರೇಷನ್‌ ಅಧ್ಯಕ್ಷ, ಕಾರ್ಮಿಕ ಮುಖಂಡ ಎಚ್.ವಿಅನಂತ್‌ ಸುಬ್ಬರಾವ್‌ (85) ಬುಧವಾರ ಸಂಜೆ ನಿಧನರಾಗಿದ್ದಾರೆ.…

6 hours ago

ಮೈಸೂರು | ಮೃಗಾಲಯದ ಯುವರಾಜ ಸಾವು

ಮೈಸೂರು : ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿದ್ದ 25 ವರ್ಷದ ಗಂಡು ಜಿರಾಫೆ ‘ಯುವರಾಜ’ ಬುಧವಾರ ಬೆಳಿಗ್ಗೆ ಸಾವನ್ನಪ್ಪಿದೆ. 1987ರಲ್ಲಿ ಜರ್ಮನಿಯಿಂದ…

6 hours ago