ಮೈಸೂರು

ವರುಣಾ ಕೆರೆಯಲ್ಲಿ ವ್ಯಕ್ತಿಯ ಶವ ಪತ್ತೆ

ಮೈಸೂರು: ಕಳೆದ ಮೂರು ದಿನಗಳಿಂದ ಕಾಣೆಯಾಗಿದ್ದ ಚಾಲಕರೋರ್ವರ ಶವ ವರುಣಾ ಕೆರೆಯಲ್ಲಿ ಪತ್ತೆಯಾಗಿದೆ.

ರಾಜೇಂದ್ರ ಎಂಬುವವರೇ ವರುಣಾ ಕೆರೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿಯಾಗಿದ್ದಾರೆ. ರಾಜೇಂದ್ರ ಅವರು, ಮೈಸೂರು ನಗರ ವಿಭಾಗದ ಸಾತಗಳ್ಳಿ ಘಟಕದಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೇ ಮಾರ್ಚ್.‌1ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರೆ ವಿಶೇಷವಾದ ಹಿನ್ನೆಲೆಯಲ್ಲಿ ವಾಹನದಲ್ಲಿ ಬೆಟ್ಟದಿಂದ ಬೆಂಗಳೂರಿಗೆ ಕಾರ್ಯಾಚರಣೆ ಮಾಡುವಾಗ ಕೆ.ಎಂ.ದೊಡ್ಡಿಯ ಬೋರಾಪುರ ಗೇಟ್‌ ಬಳಿ ಎದುರಿನಿಂದ ಬಂದ ಕಾರಿಗೆ ಡಿಕ್ಕಿಯಾಗಿ ಕಾರು ಚಾಲಕ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದರು.

ಇದರಿಂದ ತೀವ್ರ ಮನನೊಂದಿದ್ದ ಚಾಲಕ ರಾಜೇಂದ್ರ ಅವರು, ಮನೆಗೆ ಹೋಗದೇ ಕಳೆದ ಮೂರು ದಿನಗಳಿಂದ ಕಾಣೆಯಾಗಿದ್ದರು. ಇಂದು ಅವರ ಶವ ಮೈಸೂರು ಬಳಿ ಇರುವ ವರುಣಾ ಕೆರೆಯಲ್ಲಿ ಪತ್ತೆಯಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಮೈಸೂರು ನಗರ ವಿಭಾಗದ ಅಧಿಕಾರಿಗಳು ಭೇಟಿ ನೀಡಿ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಮೃತ ರಾಜೇಂದ್ರರಿಗೆ ಇಬ್ಬರು ಮಕ್ಕಳು ಹಾಗೂ ವಯಸ್ಸಾದ ತಂದೆ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

 

ಕೆಂಡಗಣ್ಣಸ್ವಾಮಿ

ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಹಂಚೀಪುರ ಗ್ರಾಮದವನಾದ ನಾನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದಿದ್ದೇನೆ. ಪದವಿ ನಂತರದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ 5 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ನೈಸರ್ಗಿಕ ಕೃಷಿ ಹಾಗೂ ಪಶು ಸಂಗೋಪನೆಗೆ ಹೆಚ್ಚು ಒತ್ತು ಕೊಡುತ್ತೇನೆ.‌ ಪರಿಸರ ಸಂರಕ್ಷಣೆ ಜೊತೆ ಜೊತೆಗೆ ಪ್ರಾಣಿ ಪಕ್ಷಿಗಳ ಉಳಿವಿಗಾಗಿ ನಾನು ಶ್ರಮ ವಹಿಸುತ್ತಿದ್ದೇನೆ.‌ ನನ್ನ ಮೊಬೈಲ್‌ ಸಂಖ್ಯೆ: 9964859626, 9606570286

Recent Posts

108 ವರ್ಷದ ಶಾಲೆಯ ಕುಂಟು ನಡಿಗೆ..

ವರಹಳ್ಳಿ ಆನಂದ, ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿಶ್ವವಿದ್ಯಾನಿಲಯ ಮೈಸೂರು: ನಗರದ ಅಗ್ರಹಾರದಲ್ಲಿರುವ ಶ್ರೀ ಕೃಷ್ಣ ರಾಜ ಸರ್ಕಾರಿ ಹಿರಿಯ ಪ್ರಾಥಮಿಕ…

2 hours ago

ಎಚ್‌ಪಿವಿ ಲಸಿಕಾ ಅಭಿಯಾನಕ್ಕೆ ಸಿಗದ ನಿರೀಕ್ಷಿತ ಸ್ಪಂದನೆ

ನವೀನ್ ಡಿಸೋಜ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ  ಯೋಜನೆಗೆ ಹಿನ್ನೆಡೆ; ಯೋಜನೆಯ ಸದುಪಯೋಗಕ್ಕೆ ಆರೋಗ್ಯ ಇಲಾಖೆ ಮನವಿ ಮಡಿಕೇರಿ: ಜಿಲ್ಲೆಯಲ್ಲಿ ಕೇಂದ್ರ…

2 hours ago

‘ಟ್ರಾನ್ಸ್ ಜೆಂಡರ್ ಹಕ್ಕುಗಳ ತಿದ್ದುಪಡಿ ಮಸೂದೆ ಆತುರದಲ್ಲಿ ಹೇರಲಾದ ಕ್ರಮ’

ಸಂದರ್ಶನ: ರಶ್ಮಿ ಕೋಟಿ " ಟ್ರಾನ್ಸ್‌ಜೆಂಡರ್ ಹಕ್ಕುಗಳ ತಿದ್ದುಪಡಿ ಮಸೂದೆ ದೇಶದಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. ಸಮುದಾಯದವರೊಂದಿಗೆ ಸಮಾಲೋಚನೆ ಇಲ್ಲದೆ…

2 hours ago

ರಂಗಸಮುದ್ರ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ

ಎಂ.ನಾರಾಯಣ ಜಿಲ್ಲಾ ಮಟ್ಟದ ವಿಭಾಗದಲ್ಲಿ ಪ್ರಶಸ್ತಿಗೆ ಪಾತ್ರವಾದ ಮೈಸೂರು ಜಿಲ್ಲೆಯ ಏಕೈಕ ಗ್ರಾಮ ಪಂಚಾಯಿತಿ ತಿ.ನರಸೀಪುರ: ಗ್ರಾಮೀಣ ಆಡಳಿತ ಸಂಸ್ಥೆಯಾಗಿ…

3 hours ago

ರಾಮಕೃಷ್ಣನಗರ ಉದ್ಯಾನ: ಸಂಪೂರ್ಣ ಅಧ್ವಾನ!

ಕೆ.ಪಿ.ಮದನ್ ಮೈಸೂರು: ಬಾಗಿಲಿಗೆ ಬೀಗವಿಲ್ಲದೆ ವರ್ಷ ಪೂರ್ತಿ ತೆರೆದೇ ಇರುವ ಉದ್ಯಾನ.., ನೀರಿಲ್ಲದೆ ನಲುಗುತ್ತಿರುವ ಸಸಿಗಳು.., ಹಸಿರು ಕಂಡು ಪಾರ್ಕ್‌ಗೆ…

3 hours ago