ಮೈಸೂರು

ಮಹಿಷಾ ಸತ್ಯ ಚಾಮುಂಡಿ ಮಿತ್ಯ : ಪ್ರೊ ಮಹೇಶ್ ಚಂದ್ರಗುರು

ಮೈಸೂರು : ಮಹಿಷಾ ದಸರಾ ಆಚರಣೆ ಮಾಡುವುದು ನಾಡ ಹಬ್ಬ ದಸರಾವನ್ನು ವಿರೋಧಿಸುವುದಕ್ಕಲ್ಲ. ಮಹಿಷಾ ಮತ್ತು ಚಾಮುಂಡಿ ಭೌಗೋಳಿಕವಾಗಿ ಎಲ್ಲೂ ಒಂದು ಕಡೆ ಹುಟ್ಟಿ ಬೆಳೆದವರಲ್ಲ. ಅಸುರರು ಎಂದರೆ ರಾಕ್ಷಸರಲ್ಲ. ಅವರು ರಕ್ಷಕರು ಎಂದು ಪ್ರೊ ಮಹೇಶ್ ಚಂದ್ರಗುರು ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಿಷಾ ನಮ್ಮ ಚಾರಿತ್ರಿಕ ಪುರುಷ ಈ ನೆಲದ ಮಹಾ ಪುರುಷನ ಆಚರಣೆ ಮಾಡೋದು ನಮ್ಮ ಧಾರ್ಮಿಕ ಕರ್ತವ್ಯ. ಸಂವಿಧಾನ ನಮಗೆ ಧಾರ್ಮಿಕ ಸ್ವಾತಂತ್ರ್ಯ ಕೊಟ್ಟಿದೆ. ಕಳೆದ 5 ವರ್ಷ ನಮಗೆ ಆಚರಣೆ ಮಾಡಲು ಅವಕಾಶ ಮಾಡಿಕೊಡಲಿಲ್ಲ.

ನಾವು ಮಹಿಷಾ ದಸರಾವನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದೇವೆ. ಇತಿಹಾಸವನ್ನು ಮರೆಯಬಾರದು ನಮ್ಮ ಪರಂಪರೆಯನ್ನು ಮರೆಯಬಾರದು.ಚಾಮುಂಡಿ ತಾಯಿ ಪುರಾಣ ಪ್ರಸಿದ್ದರಾದವರು. ಆದರೆ ಮಹಿಷಾ ಇತಿಹಾಸ ಪುರುಷ. ಪುರಾಣ ಕಟ್ಟುಕತೆಗಳು, ಇತಿಹಾಸ ಸತ್ಯದ ಕತೆ ಎಂದರು.

ಸುಳ್ಳು ಮತ್ತು ಸತ್ಯದ ನಡುವೆ ನಡೆಯುವ ಸಂಘರ್ಷ ಇದು. ಮುಂದಿನ ಪೀಳಿಗೆಗೆ ನಾವು ಇತಿಹಾಸವನ್ನ ತಿಳಿಸದೇ ಮತ್ಯಾರು ತಿಳಿಸಬೇಕು. ನೀವು ಯಾರ ದಸರಾವನ್ನಾದರೂ ಮಾಡಿಕೊಳ್ಳಿ ನಾವು ಅಡ್ಡಿ ಮಾಡಲ್ಲ.ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ದಸರಾ ಆರಂಭವಾಯಿತು. ನಾಲ್ವಡಿ ಅವರ ಕಾಲದಲ್ಲಿ ಇನ್ನೂ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಚಾಮುಂಡಿ ಮತ್ತು ಮಹಿಷಾ ಒಂದು ಕಾಲಘಟ್ಟದವರಲ್ಲ. ಮಹಿಷಾ ಸತ್ಯ,ಚಾಮುಂಡಿ ಮಿತ್ಯ. ನೀವು ಚಾಮುಂಡಿ ಪೂಜೆ ಮಾಡ್ತಿರಾ ಮಾಡಿ. ನಾವು ಮಹಿಷಾ ದಸರಾ ಆಚರಣೆ ಮಾಡ್ತಿವಿ ನೀವ್ಯಾಕೆ ಪ್ರಶ್ನೆ ಮಾಡ್ತಿರಾ ಎಂದರು.

ಈ ದೇಶದ ಅಸಲಿ ವಿಶ್ವಗುರು ಮೋದಿಯಲ್ಲ ಬುದ್ಧ,ಬಸವ,ಮಹಾತ್ಮ ಗಾಂಧಿ, ನಾರಾಯಣಗುರು. ಈ ದೇಶದ ಸಂಪತ್ತಿನ ವಾರಸುದಾರರು ಇಲ್ಲಿನ ಮೂಲ ನಿವಾಸಿಗಳು. ನಮ್ಮ ಸಂಸ್ಕೃತಿಯನ್ನು ಅಗೌರವಿಸಬೇಡಿ. ಚಾಮುಂಡಿ ಬೆಟ್ಟಕ್ಕೆ ಮೊದಲು ಮಹಾಬಲೇಶ್ವರ ಬೆಟ್ಟ ಎನ್ನುವ ಹೆಸರಿತ್ತು. ವೈದಿಕರು ಇದನ್ನ ನಾಶ ಮಾಡಿ ಚಾಮುಂಡಿ ಬೆಟ್ಟ ಅಂತ ಮಾಡಿದರು ಎಂದು ಸುದ್ದಿ ಗೋಷ್ಠಿಯಲ್ಲಿ ವಿಚಾರವಾದಿ ಪ್ರೊ.ಮಹೇಶ್ ಚಂದ್ರಗುರು ಹೇಳಿದರು

lokesh

Recent Posts

ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದ ಹುಲಿ ಪೃಥ್ವಿ ಇನ್ನಿಲ್ಲ

ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದ ಹುಲಿ ಪೃಥ್ವಿ ಇನ್ನಿಲ್ಲ ಮೈಸೂರು ಮೃಗಾಲಯದ ಪ್ರಮುಖ ಆಕರ್ಷಣೆಯಾಗಿದ್ದ ಪ್ರವಾಸಿಗರ ಮನಗೆದ್ದಿದ್ದ ಹೆಮ್ಮೆಯ ಹುಲಿ…

48 mins ago

ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಬಂಧನ

ಬೆಂಗಳೂರು: 42ನೇ ಎಸಿಜೆಎಂ ನ್ಯಾಯಾಲಯ ಅರೆಸ್ಟ್‌ ವಾರೆಂಟ್‌ ಜಾರಿಯ ಹಿನ್ನೆಲೆಯಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ.…

1 hour ago

ಮಡಿಕೇರಿ| ಗಾಂಜಾ ಮಾರಾಟ: ಮೈಸೂರು ಮೂಲದ ನಾಲ್ವರ ಬಂಧನ

ಮಡಿಕೇರಿ: ವಿರಾಜಪೇಟೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೈಸೂರು ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು…

1 hour ago

ಹನೂರು: ಚಿರತೆ ದಾಳಿಗೆ ಹಸುವಿಗೆ ಗಂಭೀರ ಗಾಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಚಿರತೆ ದಾಳಿ ನಡೆಸಿದ ಪರಿಣಾಮ ಹಸು ತೀವ್ರವಾಗಿ ಗಾಯಗೊಂಡಿರುವ ಘಟನೆ…

1 hour ago

ಹನೂರು: ಬಿಆರ್‌ಟಿ ವಲಯ ವ್ಯಾಪ್ತಿಯಲ್ಲಿ ಮತ್ತೆ ಕಾಡ್ಗಿಚ್ಚು: ಅರಣ್ಯ ಪ್ರದೇಶ ಸುಟ್ಟು ಭಸ್ಮ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಬಿಆರ್‌ಟಿ ಅರಣ್ಯ ಪ್ರದೇಶ ವ್ಯಾಪ್ತಿಯ ಲೊಕ್ಕನಹಳ್ಳಿ ಸಮೀಪದ ಹಾವಿನಮೂಲೆ…

1 hour ago

ನಾಳೆ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮತದಾನ

ಬೆಂಗಳೂರು: ಆಡಳಿತರೂಢ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾ ಜಿದ್ದಿನ ರಣರಂಗವಾಗಿ ಏರ್ಪಟ್ಟು, 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂದೇ…

1 hour ago