ಮೈಸೂರು: ಜೂ.04 ರಂದು ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯವು ಮೈಸೂರು ನಗರದ ವಾಲ್ಮೀಕಿ ರಸ್ತೆಯಲ್ಲಿನ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ನಡೆಯಲಿದ್ದು, ಮತ ಎಣಿಕೆ ದಿನದಂದು ಮತ ಎಣಿಕೆ ಸ್ಥಳದ ಸುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಲಿದೆ. ಈ ಹಿನ್ನೆಲೆ ಸಾರ್ವಜನಿಕರಿಗೆ ಸುಗಮ ಸಂಚಾರ ವ್ಯವಸ್ಥೆಯನ್ನು ಕಲ್ಪಿಸುವ ಸಂಬoಧ ಮತ ಎಣಿಕೆ ಸ್ಥಳದ ಸುತ್ತಲಿನ ರಸ್ತೆಗಳಲ್ಲಿ ವಾಹನಗಳ ಸಂಚಾರ ಮತ್ತು ನಿಲುಗಡೆಯ ಮೇಲೆ ನಿರ್ಬಂಧ ವಿಧಿಸಿ, ಕೆ.ಎಸ್.ಆರ್.ಟಿ.ಸಿ ಬಸ್‌ಗಳಿಗೆ ಬದಲಿ ಮಾರ್ಗ ಕಲ್ಪಿಸಿಸಲಾಗಿದೆ.
ಜೂ.04 ರಂದು ಬೆಳಿಗ್ಗೆ 5 ಗಂಟೆಯಿoದ ಸಂಜೆ 5 ಗಂಟೆಯವರೆಗೆ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಸಂಚರಿಸಬೇಕಾದ ಮಾರ್ಗ:
ಮೈಸೂರು ನಗರದ ಕಡೆಯಿಂದ ಹುಣಸೂರು ಕಡೆಗೆ ಸಂಚರಿಸುವ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು – ರಾಮಸ್ವಾಮಿ ವೃತ್ತ- ಮೂಡಾಜಂಕ್ಷನ್- ಮೆಟ್ರೋಪೋಲ್ ವೃತ್ತ- ಎಡತಿರುವು- ಹುಣಸೂರುರಸ್ತೆ- ಕಲಾಮಂದಿರಜoಕ್ಷನ್- ಎಡತಿರುವು- ಕುಕ್ಕರಹಳ್ಳಿ ರೈಲ್ವೇಗೇಟ್ ಜಂಕ್ಷನ್- ಡಾ. ಪದ್ಮ ವೃತ್ತ- ವಿ.ಎಂ.ಡಿಜoಕ್ಷನ್- ಬೋಗಾದಿ ರಸ್ತೆಯಲ್ಲಿ ಮುಂದುವರೆದು ಬೋಗಾದಿ ರಿಂಗ್‌ರಸ್ತೆ ಮೂಲಕ ಹುಣಸೂರು ರಸ್ತೆ ತಲುಪುವುದು.
ಮಡಿಕೇರಿ, ಹುಣಸೂರು, ಹಾಸನ ಕಡೆಯಿಂದ ಮೈಸೂರು ನಗರಕ್ಕೆ ಬರುವ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಸೆಂಟ್‌ಜೋಸೆಫ್ ಜಂಕ್ಷನ್‌ನಲ್ಲಿ ಎಡತಿರುವು ಪಡೆದು ಟೆಂಪಲ್ ರಸ್ತೆಯಲ್ಲಿ ಸಾಗಿ ವಿ.ವಿ.ಪುರದ ವೃತ್ತದಲ್ಲಿ ಬಲತಿರುವು ಪಡೆದು ಕೆ.ಆರ್.ಎಸ್‌ರಸ್ತೆ- ದಾಸಪ್ಪ ವೃತ್ತ- ಮೆಟ್ರೋಪೋಲ್ ವೃತ್ತದ ಮೂಲಕ ಮುಂದೆ ಸಾಗುವುದು.
ವಾಹನಗಳ ಸಂಚಾರವನ್ನು ನಿರ್ಭಂಧಿಸಿರುವ ರಸ್ತೆಗಳು
ಕಲಾಮಂದಿರಜoಕ್ಷನ್ನಿoದ ಪಡುವಾರಹಳ್ಳಿ ಜಂಕ್ಷನ್ವರೆಗೆ ಹುಣಸೂರು ರಸ್ತೆಯ ಎರಡು ಕಡೆಗಳಲ್ಲಿ ಸಂಚರಿಸುವ ರಸ್ತೆ, ವಾಲ್ಮೀಕಿ ರಸ್ತೆ – ಕೆ.ಆರ್.ಎಸ್ ರಸ್ತೆ ಜಂಕ್ಷನ್ನಿoದ ಹುಣಸೂರು ರಸ್ತೆ ವಾಲ್ಮೀಕಿ ರಸ್ತೆ ಜಂಕ್ಷನ್ ವರೆಗಿನ ಹಾಗೂ ಮಾತೃ ಮಂಡಳಿ ವೃತ್ತದಿಂದ ವಾಲ್ಮೀಕಿ ರಸ್ತೆ ಲೀಲಾ ಚೆನ್ನಯ್ಯ ಜಂಕ್ಷನ್ ವರೆಗೆ ಆದಿಪಂಪ ರಸ್ತೆಯಲ್ಲಿ ಸಂಚರಿಸುವ ಚುನಾವಣಾ ಅಗತ್ಯ ಕರ್ತವ್ಯ ವಾಹನಗಳನ್ನು ಹೊರತುಪಡಿಸಿ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಬದಲಿ ಮಾರ್ಗ: ಮೈಸೂರು ನಗರದಿಂದ ಹುಣಸೂರು ಕಡೆಗೆ ಹೋಗುವ ವಾಹನಗಳು ಡಿ.ಸಿ ಕಛೇರಿ ಆರ್ಚ್ಗೇಟ್ ಜಂಕ್ಷನ್‌ನಿoದ ವೀರೇಂದ್ರ ಹೆಗ್ಗಡೆ ವೃತ್ತದ ಕಡೆಗೆ ಸಂಚರಿಸುವ ವಾಹನಗಳು ಕಲಾಮಂದಿರ ಜಂಕ್ಷನ್ ಬಳಿ ಎಡತಿರುವು ಪಡೆದು ಕುಕ್ಕರಹಳ್ಳಿ ರೈಲ್ವೇಗೇಟ್ ಜಂಕ್ಷನ್- ಡಾ. ಪದ್ಮ ವೃತ್ತ- ವಿ.ಎಂ.ಡಿಜoಕ್ಷನ್- ಬೋಗಾದಿ ರಸ್ತೆಯಲ್ಲಿ ಮುಂದೆ ಸಾಗುವುದು.
ಹಾಸನ, ಮಡಿಕೇರಿ, ಹುಣಸೂರು ಕಡೆಯಿಂದ ಮೈಸೂರು ನಗರಕ್ಕೆ ಆಗಮಿಸುವ ವಾಹನಗಳು ಸೆಂಟ್‌ಜೋಸೆಫ್ ಜಂಕ್ಷನ್ ನಲ್ಲಿ ಎಡತಿರುವು ಪಡೆದು ಟೆಂಪಲ್ ರಸ್ತೆ- ಬಿ.ಸಿ ಅಂಗಯ್ಯ ವೃತ್ತ- ಕೆ.ಆರ್.ಎಸ್ ರಸ್ತೆ ಮೂಲಕ ಮುಂದೆ ಸಾಗುವುದು.
ಹಾಸನ, ಮಡಿಕೇರಿ, ಹುಣಸೂರು ಕಡೆಯಿಂದ ಮೈಸೂರು ನಗರಕ್ಕೆ ಆಗಮಿಸುವ ವಾಹನಗಳು ಪಡುವಾರಹಳ್ಳಿ ಜಂಕ್ಷನ್‌ನಲ್ಲಿ ಬಲತಿರುವು ಪಡೆದು ಬಯಲುರಂಗ ಮಂದಿರ ರಸ್ತೆ- ವಿ.ಎಂ.ಡಿ ಜಂಕ್ಷನ್ ಮೂಲಕ ಮುಂದೆ ಸಾಗುವುದು.
ಮಾಧ್ಯಮದವರು, ಚುನಾವಣಾ ಅಭ್ಯರ್ಥಿಗಳು ಮತ್ತು ಪಕ್ಷದ ಏಜೆಂಟರುಗಳ ವಾಹನಗಳು ಸಂಚರಿಸುವ ಮಾರ್ಗ & ಪಾರ್ಕಿಂಗ್ ಸ್ಥಳ:
ದಾಸಪ್ಪ ವೃತ್ತದ ಮೂಲಕ ಆಗಮಿಸುವವರು: ದಾಸಪ್ಪ ವೃತ್ತ- ವಿವೇಕಾನಂದ ಪ್ರತಿಮೆ ಜಂಕ್ಷನ್- ರಾಮಮಂದಿರ ಜಂಕ್ಷನ್- ಎಡತಿರುವು- ಲೀಲಾ ಚೆನ್ನಯ್ಯ ಕಲ್ಯಾಣ ಮಂಟಪ ಜಂಕ್ಷನ್- ಬಲತಿರುವು- ಆದಿ ಪಂಪ ರಸ್ತೆ- ನಾರಾಯಣಸ್ವಾಮಿ ಬ್ಲಾಕ್- ಎಡತಿರುವು ಪಡುವಾರಹಳ್ಳಿ ಮಹದೇಶ್ವರ ದೇವಸ್ಥಾನದ ಹಿಂಭಾಗದ ಮೈದಾನದಲ್ಲಿ ಕಾರುಗಳನ್ನು ಪಾರ್ಕಿಂಗ್ ಮಾಡುವುದು. ದ್ವಿಚಕ್ರ ವಾಹನ ಸವಾರರು ಪಡುವಾರಳ್ಳಿ ಜೋಡಿ ಮಾರಮ್ಮ ದೇವಸ್ಥಾನದ ಮುಂಭಾಗದ ಖಾಲಿ ಜಾಗದಲ್ಲಿ ಪಾರ್ಕಿಂಗ್ ಮಾಡುವುದು.
ಹುಣಸೂರು ರಸ್ತೆ ಮೂಲಕ ಆಗಮಿಸುವವರು ಸೆಂಟ್‌ಜೋಸೆಫ್ ಜಂಕ್ಷನ್-ಎಡತಿರುವು-ಟೆoಪಲ್ ರಸ್ತೆ- ಮಾತೃಮಂಡಳಿ ಜಂಕ್ಷನ್- ಬಲತಿರುವು- ಆದಿಪಂಪ ರಸ್ತೆ- ನಾರಾಯಣಸ್ವಾಮಿ ಬ್ಲಾಕ್- ಬಲತಿರುವು- ಪಡುವಾರಹಳ್ಳಿ ಮಹದೇಶ್ವರ ದೇವಸ್ಥಾನದ ಹಿಂಭಾಗದ ಮೈದಾನದಲ್ಲಿ ಕಾರುಗಳನ್ನು ಪಾರ್ಕಿಂಗ್ ಮಾಡುವುದು.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…