ಮೈಸೂರು

ಮಹಿಳಾ ಮೀಸಲಾತಿಗೆ ಆಗ್ರಹಿಸಿ ಪ್ರಧಾನಿಗೆ ಪತ್ರ : ಡಾ.ಪುಷ್ಪಾ ಅಮರನಾಥ್‌

ಮೈಸೂರು : ವಿಧಾನಸಭೆ, ಲೋಕಸಭೆಯಲ್ಲಿ ಮಹಿಳೆಯರ ರಾಜಕೀಯ ಮೀಸಲಾತಿ ಜಾರಿ ಮಾಡುವಂತೆ ಒತ್ತಾಯಿಸಿ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗೆ ಪತ್ರ ಬರೆಯುವುದಾಗಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್‌ ತಿಳಿಸಿದ್ದಾರೆ.

ನಗರ ಮತ್ತು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್‌‍ ವತಿಯಿಂದ ನಗರದ ಇಂದಿರಾ ಕಾಂಗ್ರೆಸ್‌‍ ಭವನದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಪ್ರಜಾಪ್ರಭುತ್ವ ದಿನ ಮತ್ತು ಮಹಿಳಾ ಕಾಂಗ್ರೆಸ್‌‍ ಸಂಸ್ಥಾಪನಾ ದಿನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಮೀಸಲಾತಿ ದೊರೆತಿದೆ. ವಿಧಾನಸಭೆ, ಪಾರ್ಲಿಮೆಂಟಿನಲ್ಲಿ ರಾಜಕೀಯ ಮೀಸಲಾತಿ ಜಾರಿಗೊಳಿಸುವಂತೆ ಕೂಗು, ಹೋರಾಟ ನಿರಂತರವಾಗಿ ನಡೆಯುತ್ತಿದೆ. ಆದರೆ, ಮಹಿಳೆಯರ ಮೀಸಲಾತಿ ಜಾರಿ ಮರೀಚಿಕೆಯಾಗಿದೆ ಎಂದರು.

ಕೇಂದ್ರದಲ್ಲಿ ಬಿಜೆಪಿ ಬಹುಮತದ ಸರ್ಕಾರವಿದೆ. ಮನಸ್ಸು ಮಾಡಿದರೆ ಮಹಿಳಾ ಮೀಸಲಾತಿ ಜಾರಿ ಮಾಡುವುದು ಕಷ್ಟವಲ್ಲ. ಆದರೆ, ತಡ ಮಾಡುತ್ತಿದೆ. ಶೇ. 30 ಮೀಸಲಾತಿ ನೀಡುವ ಮೂಲಕ ಬಾಬಾ ಸಾಹೇಬರ ಆಶಯವನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ರಾಜಕೀಯ ಸಮಾನತೆ ಸಿಕ್ಕಿದರೆ ಮಾತ್ರ ಮಹಿಳೆಯರು ಮುಂದುವರಿಯಲು ಸಾಧ್ಯ. ಶೇ. 50 ಮತದಾನ ಮಾಡುವ ಮಹಿಳೆಗೆ ಶಕ್ತಿ ತುಂಬಬೇಕು. ಎಲ್ಲ ಪಕ್ಷಗಳ ನಾಯಕರು ರಾಜಕೀಯವನ್ನು ಬಿಟ್ಟು ಮಹಿಳಾ ಮೀಸಲಾತಿ ಜಾರಿಗೆ ಸಹಮತ ವ್ಯಕ್ತಪಡಿಸಬೇಕು ಎಂದು ಹೇಳಿದರು.

ಮಹಿಳಾ ಕಾಂಗ್ರೆಸ್‌‍ ಸ್ಥಾಪನೆಯಾಗಿ 4 ದಶಕಗಳನ್ನು ಪೂರೈಸಿದೆ. ಸುಚೇತಾ ಕೃಪಲಾನಿ ಮೊದಲ ಅಧ್ಯಕ್ಷರಾಗಿದ್ದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಮಹಿಳಾ ಕಾಂಗ್ರೆಸ್‌‍ಗೆ ಒತ್ತು ಕೊಟ್ಟಿದ್ದರು. ಇವತ್ತು ಅಖಿಲ ಭಾರತ ಮಹಿಳಾ ಕಾಂಗ್ರೆಸ್‌‍ ದೇಶದ ಮಹಿಳೆಯರ ಕಷ್ಟಗಳಿಗೆ ದನಿಯಾಗಿದೆ ಎಂದು ತಿಳಿಸಿದರು.

ಮಹಿಳಾ ಕಾಂಗ್ರೆಸ್‌‍ ಚಳವಳಿ, ಹೋರಾಟದ ಸಂಕೇತವಾಗಿದೆ. ಮಹಿಳೆಯರ ಶಿಕ್ಷಣ, ಹಕ್ಕುಗಳನ್ನು ಕೊಡಿಸಲು ಬದ್ಧವಾಗಿದೆ. ದೌರ್ಜನ್ಯ, ದಬ್ಬಾಳಿಕೆಯ ವಿರುದ್ಧ ಹೋರಾಡುವ ಸಂಕಲ್ಪ ತೊಟ್ಟಿದೆ ಎಂದು ಹೇಳಿದರು.
ಸಂವಿಧಾನ ಪೀಠಿಕೆ ಓದಿದ ಬಳಿಕ ಎಲ್ಲರಿಗೂ ಸಿಹಿ ವಿತರಿಸಲಾಯಿತು.

ನಗರ ಅಧ್ಯಕ್ಷ ಆರ್‌.ಮೂರ್ತಿ, ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ. ವಿಜಯ್‌ ಕುಮಾರ್‌, ಸಿ.ಬಸವೇಗೌಡ, ಲತಾ ಸಿದ್ಧಶೆಟ್ಟಿ, ಪುಷ್ಪವಲ್ಲಿ, ಪುಷ್ಪಾಲತಾ ಚಿಕ್ಕಣ್ಣ, ಮಾಜಿ ಜಿ.ಪ ಸದಸ್ಯೆ ಸುಧಾ ಮಹದೇವಯ್ಯ ಮುಂತಾದವರು ಭಾಗವಹಿಸಿದ್ದರು.

lokesh

Recent Posts

32 ಕ್ಷೇತ್ರಗಳ ಟಾರ್ಗೆಟ್‌: ನಿಖಿಲ್‌ ಕುಮಾರಸ್ವಾಮಿ ರಾಜ್ಯ ಪ್ರವಾಸ

ಬೆಂಗಳೂರು: ಪಕ್ಷ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿರುವ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರು 2ನೇ ಹಂತದ…

6 mins ago

1.60 ಕೋಟಿ ಲಂಚ ಪಡೆದು ಮುಡಾ ಮಾಜಿ ಆಯುಕ್ತ ನಟೇಶ್‌ಗೆ ಬಡ್ತಿ: ದಾಖಲೆ ಬಿಡುಗಡೆ ಮಾಡಿದ ಸ್ನೇಹಮಯಿ ಕೃಷ್ಣ

ಬೆಂಗಳೂರು: ಮೈಸೂರು ಮುಡಾ ಹಗರಣದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮತ್ತೊಂದು ಗಂಭೀರ ಆರೋಪ ಮಾಡಿದ್ದಲ್ಲದೇ ದಾಖಲೆಗಳನ್ನು ಬಿಡುಗಡೆ…

7 mins ago

ಫೆಬ್ರವರಿ.25ರಂದು ಅಜ್ಜಿಪುರ ಗ್ರಾಮದಿಂದ ವಿಧಾನಸೌಧದವರೆಗೆ ಪಾದಯಾತ್ರೆ: ಬಡಗಲಪುರ ನಾಗೇಂದ್ರ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಹನೂರು ಭಾಗದ ಉಡುತೊರೆ ಹಳ್ಳ ಜಲಾಶಯ ಸೇರಿದಂತೆ ಪ್ರಮುಖ ಕೆರೆಗಳಿಗೆ…

9 mins ago

ಕ್ರಿಕೆಟ್‌ ಪಂದ್ಯಾವಳಿ ವೇಳೆ ಜೇನುನೊಣಗಳ ದಾಳಿ: ಅಂಪೈರ್‌ ದಾರುಣ ಸಾವು

ಉನ್ನಾವೋ: ಕ್ರಿಕೆಟ್ ಪಂದ್ಯದ ವೇಳೆ ಜೇನುನೊಣಗಳ ಹಿಂಡು ದಾಳಿ ಮಾಡಿದ ಪರಿಣಾಮ 65 ವರ್ಷದ ಅಂಪೈರ್ ಸಾವನ್ನಪ್ಪಿದ್ದು, ಹಲವಾರು ಆಟಗಾರರು…

39 mins ago

ಬೆಂಗಳೂರು ಏರ್‌ಪೋರ್ಟ್‌ನಲ್ಲಿ 23.8 ಕೋಟಿ ಮೌಲ್ಯದ ಕೊಕೇನ್‌ ಜಪ್ತಿ

ಬೆಂಗಳೂರು: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 23.8 ಕೋಟಿ ರೂ ಮೌಲ್ಯದ ಕೊಕೇನ್‌ ಸೀಜ್‌ ಮಾಡಲಾಗಿದೆ. ಎನ್‌ಸಿಬಿ ಅಧಿಕಾರಿಗಳು…

1 hour ago

ನಾಳೆ ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಟಾಕ್ಸಿಕ್‌ ಚಿತ್ರದ 2ನೇ ಟೀಸರ್‌ ರಿಲೀಸ್‌

ಬೆಂಗಳೂರು: ಕೆಜಿಎಫ್‌-2 ಯಶಸ್ಸಿನ ನಂತರ ಇಡೀ ದೇಶದ ಕಾತುರದಿಂದ ಕಾಯುತ್ತಿರುವ ಸಿನಿಮಾ ಎಂದರೆ ಅದು ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ…

3 hours ago