ಮೈಸೂರು

ಸ್ತ್ರೀಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಿ: ಸುಧಾ ಫಣೀಶ್

ಮೈಸೂರು: ಸ್ತ್ರೀ ಕುಟುಂಬದ ಆಧಾರಸ್ಥಂಭವಾಗಿದ್ದು, ಆಕೆ ಬೇರೆಯವರ ಜವಾಬ್ದಾರಿ ಜೊತೆಗೆ ತನ್ನ ಸ್ವಂತ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಮರ್ಪಣ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸುಧಾ ಫಣೀಶ್ ಹೇಳಿದರು.

ರಾಮಕೃಷ್ಣನಗರದಲ್ಲಿರುವ ಸುಯೋಗ್‌ ಆಸ್ಪತ್ರೆಯಲ್ಲಿ ಮಂಗಳವಾರ ಸ್ಟ್ರಾಂಗ್‌ ವುಮೆನ್ಸ್ ಹೆಲ್ತ್‌ಕ್ಲಬ್ ವತಿಯಿಂದ ಏರ್ಪಡಿಸಲಾಗಿದ್ದ ಮಹಿಳೆಯರಿಗೆ ಮಾಹಿತಿ ಮತ್ತು ಮನರಂಜನಾ ಕಾರ್ದಯಕ್ರಮದ ಉದ್ಘಾಟನೆ ನೆರವೇರಿಸಿ ಮಾನಾಡಿದರು.

ಗೃಹಕೃತ್ಯ, ಪತಿ, ಮಕ್ಕಳ ಆರೈಕೆಯ ಭರದಲ್ಲಿ ಮಹಿಳೆ ಸ್ವತಃ ತನ್ನ ಆರೋಗ್ಯದ ಬಗ್ಗೆಯೇ ನಿರ್ಲಕ್ಷ ವಹಿಸುತ್ತಿದ್ದು, ಇದು ಆತಂಕಕಾರಿ ಎಂದ ಅವರು, ಮಹಿಳೆೊಂಬ್ಬಳ ಆರೋಗ್ಯ ಇಡೀ ಕುಟುಂಬದ ಮೇಲೆ ಪರಿಣಾಮ ಬೀರುವುದರಿಂದ ಆರೋಗ್ಯದ ವಿಚಾರದಲ್ಲಿ ಆಕೆಗೆ ಆತ್ಮ ವಿಸ್ಮತಿ ಸಲ್ಲದು ಎಂದರು.

ಬೇಸಿಗೆಯ ಬವಣೆಗಳು ಮತ್ತು ಪರಿಹಾರೋಪಾಯಗಳ ಕುರಿತು ಉಪನ್ಯಾಸ ನೀಡಿದ ಸುಯೋಗ್ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ, ಭೂಮಿ ಸೂರ್ಯನ ಸುತ್ತ ಸುತ್ತುವ ಸಂದರ್ಭದಲ್ಲುಂಟಾಗುವ ವಿಸ್ಮಯಕಾರಿ ಕ್ರಿಯೆಗಳೇ ಬೇಸಿಗೆ, ಚಳಿಗಾಲಗಳಾಗಿದೆ ಎಂದರು.

ಸೂರ್ಯನ ಶಾಖ ಭೂಮಿ ತಲುಪಿ ಅದು ವಾಪಸ್ ಹೋಗದಂತೆ ವಾಯು ಮಂಡಲದಲ್ಲಿರುವ ಇಂಗಾಲದ ಡೈ ಆಕ್ಸೈಡ್, ನೈಟ್ರಸ್ ಆಕ್ಸೈಡ್ ಇತ್ಯಾದಿ ಹಸಿರುಮನೆ ಅನಿಲಗಳು ಶಾಖವನ್ನು ಹಿಡಿದಿಟ್ಟುಕೊಂಡು ವಾಯುಮಂಡಲದ ತಾಪವಾನವನ್ನು ನಿಯಂತ್ರಿಸುತ್ತಿದ್ದು, ಈ ಅನಿಲಗಳ ಪ್ರವಾಣ ಹೆಚ್ಚಾದರೆ ಹಾನಿಕಾರಕವೆಂದರು.

ಮಾನವನ ಸ್ವಯಂ ಕೃತ್ಯಗಳಾದ ಅತಿಯಾದ ಪೆಟ್ರೋಲಿಯಂ ಸುಡುವಿಕೆ, ಕಾಡು ನಾಶ, ಕೈಗಾರಿಕೆಗಳ ಹೆಚ್ಚಳ, ಜನಸಂಖ್ಯಾ ಸ್ಪೋಟ, ವಾಯುಮಂಡಲದಲ್ಲಿ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಹೆಚ್ಚಾಗಿ ಭೂಮಂಡಲದ ತಾಪಮಾನ ಏರಿಕೆಯಾಗುತ್ತಿದ್ದು, ಹೀಗೇ ಮುಂದುವರಿದರೆ ಹಿಮಾಲಯದಲ್ಲಿ ಮಂಜುಗೆಡ್ಡೆ ಆವಿಯಾಗಿ ಕರಗಿ ಪಟ್ಟಣಗಳೇ ನೀರಿನಿಂದ ಮುಳುಗಿ ಹೋಗುವ ಸಂಭವವಿದೆ ಎಂದು ಎಚ್ಚರಿಕೆ ನೀಡಿದರು.

ಅತಿಯಾದ ಬೇಸಿಗೆ ತಾಪವಾನದಿಂದ ದೈಹಿಕವಾಗಿ ನಿಶ್ಯಕ್ತಿ, ಸುಸ್ತು ಸಂಕಟ, ಮೂರ್ಛೆ ತಪ್ಪುವ ಸೂರ್ಯಾಘಾತ, ಕಾಲರಾ, ಟೈಫಾಯಡ್‌, ಚರ್ಮ ಕ್ಯಾನ್ಸರ್ ಮುಂತಾದವು ತಲೆದೋರುವ ಸಂಭವವಿದ್ದು, ಅಧಿಕ ನೀರು ಸೇವನೆ, ತೆಳು ಉಡುಪು ಧಾರಣೆ, ದಿನಕ್ಕೆ ೨ಬಾರಿ ತಣ್ಣೀರ ಸ್ನಾನ, ಶುಚಿತ್ವದ ಆಹಾರ ಸೇವನೆ, ಹಣ್ಣು ಹಂಪಲುಗಳ ಸೇವನೆ ಮುಂತಾದುವುಗಳಿಂದ ಬಿಸಿಲಿನ ದುಷ್ಪರಿಣಾಮಗಳನ್ನು ತಡೆಗಟ್ಟಬಹುದು ಎಂದರು.

ಸುಯೋಗ್ ವುಮೆನ್ಸ್ ಹೆಲ್ತ್‌ಕ್ಲಬ್ ಅಧ್ಯಕ್ಷೆ ಪನ್ನಗ ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕ್ಲಬ್‌ನ ಗೌರವಾಧ್ಯಕ್ಷೆ ಡಾ.ಜಯಲಕ್ಷಿ  ಸೀತಾಪುರ ಉಪಸ್ಥಿತರಿದ್ದರು. ಮಹಿಳೆಯರಿಗಾಗಿ ನಡೆದ ಮನರಂಜನಾ ಚಟುವಟಿಕೆಗಳನ್ನು ಕ್ಲಬ್‌ನ ಕಾರ್ಯದರ್ಶಿ ಗಾಯತ್ರಿ ಸುಂದರೇಶ್ ಹಾಗೂ ಶ್ರೀಮತಿ ಪದ್ಮ ಮಹದೇವ್ ನಡೆಸಿಕೊಟ್ಟರು.

ಎನ್‌ ಎಂ ಪ್ರದ್ಯುಮ್ನ

ಮೈಸೂರು ಜಿಲ್ಲೆಯ ನಂಜನಗೂಡಿನವನಾದ ನಾನು, ಸದ್ಯ ಮೈಸೂರಿನಲ್ಲಿ ನೆಲೆಸಿದ್ದೇನೆ. 2011 ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಬಿಎ ಪತ್ರಿಕೋದ್ಯಮ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 8 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಮೈಸೂರಿನ ಪಾದೇಶಿಕ ಪತ್ರಿಕೆ ʼಹಲೋ ಮೈಸೂರುʼಯಿಂದ ಪ್ರಾರಂಭಿಸಿ, ಜನಶ್ರೀ(ಟಿವಿ), ಸಿರಿ(ಟಿವಿ), ವಿಶ್ವವಾಣಿ ಪತ್ರಿಕೆ, ಟಿವಿ-೯(ಟಿವಿ) ಸಂಸ್ಥೆಗಳಲ್ಲಿ ವರದಿಗಾರ, ಮುಖ್ಯ ವರದಿಗಾರ ಹಾಗೂ ಉಪ ಸಂಪಾದಕನಾಗಿ ಕೆಲಸ ಮಾಡಿದ್ದೇನೆ. ಪ್ರಿಂಟ್‌ ಮೀಡಿಯಾದಲ್ಲಿ 6 ವರ್ಷ ಹಾಗೂ ಎಲೆಕ್ಟ್ರಾನಿಕ್‌ ಮೀಡಿಯಾದಲ್ಲಿ 2 ವರ್ಷಗಳ ಕಾಲ ಅನುಭವ ಹೊಂದಿದ್ದು, ಸದ್ಯ ಮೈಸೂರಿನ ʼಆಂದೋಲನ ದಿನಪತ್ರಿಕೆʼಯ ಭಾಗವಾದ ʼಆಂದೋಲನ ಡಿಜಿಟಲ್‌ʼನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ವೈಲ್ಡ್‌ಲೈಫ್‌ ಫೋಟೋಗ್ರಫಿ, ಪುಸ್ತಕ ಓದುವುದು ನನ್ನ ನೆಚ್ಚಿನ ಹವ್ಯಾಸಗಳಾಗಿವೆ.

Recent Posts

ಜನವರಿಯಿಂದ ಇಂದಿರಾ ಕಿಟ್‌ ವಿತರಣೆ

ಬೆಳಗಾವಿ : ಮುಂಬರುವ ಜನವರಿಯಿಂದ ಹೆಚ್ಚುವರಿ 5 ಕೆ.ಜಿ ಅಕ್ಕಿ ಬದಲಿಗೆ ರಾಜ್ಯಾದ್ಯಂತ ಇಂದಿರಾ ಕಿಟ್‍ಗಳನ್ನು ವಿತರಣೆ ಮಾಡಲಾಗುವುದು ಎಂದು…

4 mins ago

ಲ್ಯಾಂಡ್‌ ಲಾರ್ಡ್‌ ಚಿತ್ರದ ಟೀಸರ್‌ ರಿಲೀಸ್‌

ಬೆಂಗಳೂರು: ನಟ ದುನಿಯಾ ವಿಜಯ್‌ ಅಭಿನಯದ ಲ್ಯಾಂಡ್‌ ಲಾರ್ಡ್‌ ಚಿತ್ರದಲ್ಲಿ ನಟ ರಾಜ್‌ ಬಿ ಶೆಟ್ಟಿ ನಟಿಸುತ್ತಿದ್ದು, ಇಂದು ಸಿನಿಮಾದ…

17 mins ago

ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿ ಬಗ್ಗೆ ಸಚಿವ ಮಧು ಬಂಗಾರಪ್ಪ ಹೇಳಿದ್ದಿಷ್ಟು.!

ಬೆಳಗಾವಿ: ಶಿಕ್ಷಕರ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯ ಸಮಸ್ಯೆ ಇಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಪ್ರಾಥಮಿಕ…

49 mins ago

ಮಂಡ್ಯಕ್ಕೆ ನನ್ನ ಕೊಡುಗೆ ಹೇಳುತ್ತೇನೆ, ನಿಮ್ಮ ಕೊಡುಗೆ ಪಟ್ಟಿ ಕೊಡಿ: ಸಿಎಂ ಸಿದ್ದುಗೆ ಎಚ್‌ಡಿಕೆ ಸವಾಲು

ನವದೆಹಲಿ: ಕುಮಾರಸ್ವಾಮಿ ಮಂಡ್ಯಕ್ಕೆ ಏನು ಕೊಟ್ಟಿದ್ದಾರೆ ಎಂದು ಕೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತೀಕ್ಷ್ಣವಾಗಿ ತಿರುಗೇಟು ಕೊಟ್ಟಿರುವ ಕೇಂದ್ರ ಸಚಿವ…

1 hour ago

ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ: ಅಕ್ರಮ ಪತ್ತೆಗೆ ಎಸ್‌ಐಟಿ ರಚಿಸಿ ಎಂದ ಸಿ.ಟಿ.ರವಿ

ಬೆಳಗಾವಿ: ಅನ್ನಭಾಗ್ಯ ಅಕ್ಕಿ ವಿದೇಶಕ್ಕೆ ರಫ್ತಾಗುತ್ತಿದ್ದು, ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಅಕ್ರಮ ಪತ್ತೆಗೆ ಎಸ್‌ಐಟಿ ರಚಿಸುವಂತೆ ಎಂಎಲ್‌ಸಿ ಸಿ.ಟಿ.ರವಿ ಆಗ್ರಹಿಸಿದರು. ಇಂದು…

2 hours ago

ಸ್ವಾತಂತ್ರ್ಯ ಚಳುವಳಿಗೆ ವಂದೇ ಮಾತರಂ ಶಕ್ತಿ ತುಂಬಿತು: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ವಂದೇ ಮಾತರಂ ಗೀತೆಯ 150ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದರು. ಈ ಕುರಿತು…

3 hours ago