Lansdowne building
ಶೀರ್ಘ ಸುಪ್ರೀಂಗೆ ತಜ್ಞರ ವರದಿ
ಮೈಸೂರು: ಮಹಾರಾಜರ ಕಾಲದಲ್ಲಿ ನಿರ್ಮಾಣವಾಗಿದ್ದ ಪಾರಂಪರಿಕ ಕಟ್ಟಡಗಳಲ್ಲಿ ಒಂದಾಗಿರುವ ಲ್ಯಾನ್ಸ್‌ಡೌನ್ ಕಟ್ಟಡ ಪುನರ್ ನಿರ್ಮಾಣ ಅಥವಾ ಪುನರ್ ನವೀಕರಣಕ್ಕೆ ಸಂಬಂಧಿಸಿದಂತೆ ತೀರ್ಮಾನ ಕೈಗೊಳ್ಳಬೇಕಿರುವ ಕಾರಣ ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಭಾರತೀಯ ರಾಷ್ಟ್ರೀಯ ಕಲೆ ಮತ್ತು ಸಾಂಸ್ಕೃತಿಕ ಪರಂಪರೆ ಟ್ರಸ್ಟ್(ಇಂಟಾಚ್) ತಂಡ ಲ್ಯಾನ್ಸ್‌ಡೌನ್ ಕಟ್ಟಡದ ಸ್ಥಿತಿಗತಿ ಕುರಿತು ಪರಿಶೀಲಿಸಿತು.
ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿರುವ ಇಂಟಾಚ್ ತಂಡ ಶುಕ್ರವಾರ ಮೈಸೂರಿಗೆ ಆಗಮಿಸಿ ಮೊದಲು ಲ್ಯಾನ್ಸ್‌ಡೌನ್ ಕಟ್ಟಡವನ್ನು ಪರಿಶೀಲಿಸಿ ಅಧ್ಯಯನ ನಡೆಸಿತು. ಇಂಟಾಚ್‌ನ ತಂಡದ ರಘುನಾಥ್ ಅವರ ನೇತೃತ್ವದಲ್ಲಿ ಮನೀಷ್, ಸಿದ್ದಾರ್ಥ, ಜೀತಾ, ಅಮೃತಾ ಅವರು ಕಟ್ಟಡವನ್ನು ಸಂಪೂರ್ಣವಾಗಿ ಪರಿಶೀಲಿಸಿದರು.
ಕಟ್ಟಡದ ಕೆಳಭಾಗ, ಮೆಟ್ಟಿಲುಗಳು, ಗೋಡೆಗಳು, ನೆಲಹಾಸಿನ ತಾರಸಿಯ ಫೋಟೋ ಮತ್ತು ವೀಡಿಯೋ ರೆಕಾರ್ಡ್ ಮಾಡಿಕೊಂಡರು. ನಂತರ, ಅಲ್ಲಲ್ಲಿ ಸುಣ್ಣದ ಗಾರೆಯಿಂದ ನಿರ್ಮಿಸಿದ್ದ ಕೆಲವು ಮಣ್ಣಿನ ಬಿಡಿಭಾಗಗಳನ್ನು ಸಂಗ್ರಹಿಸಿದರು.
ಯಾವ್ಯಾವ ಕಡೆಗಳಲ್ಲಿ ತೀರಾ ದುಸ್ಥಿತಿಯಲ್ಲಿದೆ, ಯಾವ ಕಡೆಗಳಲ್ಲಿ ಗಟ್ಟಿಮುಟ್ಟಾಗಿದೆ. ನವೀಕರಣ ಮಾಡುವುದಾದರೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಕುರಿತು ಪರಿಶೀಲಿಸಿದರು. ಕಟ್ಟಡದ ಮೊದಲನೇ ಅಂತಸ್ತಿನಲ್ಲಿ ಕೆಲವು ಮಳಿಗೆಗಳು ವಿಶಾಲವಾಗಿದ್ದು, ಮಳೆಯಿಂದ ಸೋರಿಕೆಯಾಗುತ್ತಿವೆ. ಈ ಮಳಿಗೆಗಳನ್ನು ಪುನರ್ ನಿರ್ಮಾಣ ಮಾಡಿದರೆ ಮೊದಲಿನಂತೆ ಮಾಡಬಹುದಾ ಎನ್ನುವುದರ ಬಗ್ಗೆ ತಜ್ಞರು ಪರಸ್ಪರ ಸಮಾಲೋಚನೆ ನಡೆಸಿ ವರದಿ ಮಾಡಿಕೊಂಡರು. ಕಟ್ಟಡವನ್ನು ಪುನರ್ ನವೀಕರಣ ಮಾಡಲು ಸಾಧ್ಯವೇ ಇಲ್ಲ ಎನ್ನುವುದಕ್ಕೆ ವರದಿ ಕೊಡಬೇಕಾದರೆ ಯಾವ್ಯಾವ ಅಂಶಗಳು ಪ್ರಮುಖ ಕಾರಣವಾಗಿದೆ ಎಂಬುದರ ಕುರಿತು ಮುಟ್ಟಿದರೆ ಮಣ್ಣು, ಗಾರೆ ಕಿತ್ತು ಬರುವಂತಹ ಸ್ಥಳಗಳ ಅವಶೇಷಗಳನ್ನು ಸಂಗ್ರಹಿಸಿದರಲ್ಲದೆ, ಕ್ಯಾಮರಾದಲ್ಲಿ ಸೆರೆ ಹಿಡಿದರು.
ನಗರಪಾಲಿಕೆ ಕಾರ್ಯಪಾಲಕ ಅಭಿಯಂತರ ಮಧುಸೂದನ್, ಸಹಾಯಕ ಕಾರ್ಯಪಾಲಕ ಅಭಿಯಂತರ ವೆಂಕಟೇಶ್ ಅವರು ಕಟ್ಟಡಕ್ಕೆ ಸಂಬಂಧಿಸಿದಂತೆ ತಜ್ಞರ ತಂಡಕ್ಕೆ ಪೂರ್ಣ ಮಾಹಿತಿ ನೀಡಿದರು.
ಶೀಘ್ರದಲ್ಲೇ ವರದಿ ಸಲ್ಲಿಕೆ: ಕಟ್ಟಡದ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಿದ ಇಂಟಾಚ್ ತಂಡ ಶೀಘ್ರದಲ್ಲೇ ಸುಪ್ರೀಂಕೋರ್ಟ್‌ಗೆ ತನ್ನ ವರದಿಯನ್ನು ಸಲ್ಲಿಸಲಿದೆ. ಭಾರತೀಯ ಪುರಾತತ್ವ ಇಲಾಖೆಯ ತಜ್ಞರ ತಂಡ ಕೂಡ ಶೀಘ್ರವೇ ಮೈಸೂರಿಗೆ ಆಗಮಿಸಿ ಪರಿಶೀಲಿಸಲಿದೆ. ಪಾರಂಪರಿಕ ಕಟ್ಟಡದ ಸಂರಕ್ಷಣೆ ಮತ್ತು ನಿರ್ವಹಣೆ ಮಾಡುವುದರ ಕುರಿತಂತೆ ಭಾರತೀಯ ಪುರಾತತ್ವ ಇಲಾಖೆ ತಜ್ಞರು ಪರಿಶೀಲಿಸಿ ಪ್ರತ್ಯೇಕ ವರದಿ ಕೊಡಬೇಕಿದೆ. ಈ ಎರಡು ವರದಿಯನ್ನು ಆಧರಿಸಿ ಸುಪ್ರೀಂಕೋರ್ಟ್ ಅಂತಿಮ ತೀರ್ಮಾನಕ್ಕೆ ಬರಲಿದೆ.
ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಮೊರೆ
ಲ್ಯಾನ್ಸ್‌ಡೌನ್ ಕಟ್ಟಡವನ್ನು ನೆಲಸಮಗೊಳಿಸಿ ಪುನರ್ ನಿರ್ಮಾಣ ಮಾಡಲು ಕೈಗೊಂಡ ರಾಜ್ಯಸರ್ಕಾರದ ಕ್ರಮಕ್ಕೆ ಹೈಕೋರ್ಟ್ ಹಸಿರು ನಿಶಾನೆ ತೋರಿಸಿತ್ತು. ಕಟ್ಟಡ ಪುನರ್ ನಿರ್ಮಾಣಕ್ಕೆ ರಾಜ್ಯಸರ್ಕಾರ ೩೫.೯೫ ಕೋಟಿ ರೂ.ಅನುದಾನ ಮೀಸಲಿಟ್ಟು ಟೆಂಡರ್ ಪ್ರಕ್ರಿಯೆ ಶುರು ಮಾಡಿದಾಗಲೇ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಕೆಲವರು ಸುಪ್ರೀಂಕೋರ್ಟ್ ಮೊರೆಹೋಗಿದ್ದರು.
ಹೀಗಾಗಿ, ಕಟ್ಟಡವನ್ನು ನೆಲಸಮ ಮಾಡುವುದು,ಪುನರ್ ನವೀಕರಣ ವಿಚಾರದಲ್ಲಿ ಮುಂದುವರಿಯದೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೇಳುವ ಜತೆಗೆ, ಇಂಟಾಚ್‌ನಿಂದ ಕಟ್ಟಡದ ಸ್ಥಿತಿಗತಿ, ಕಟ್ಟಡ ಸಂರಕ್ಷಣೆ ಕುರಿತಾಗಿ ಭಾರತೀಯ ಪುರಾತತ್ವ ಇಲಾಖೆಯ ತಜ್ಞರ ತಂಡ ಪರಿಶೀಲಿಸಿ ವರದಿ ಕೊಡುವಂತೆ ಸೂಚನೆ ನೀಡಿತ್ತು. ಈ ಸೂಚನೆ ಮೇರೆಗೆ ಮೈಸೂರಿಗೆ ಆಗಮಿಸಿದ ಇಂಟಾಚ್ ತಂಡ ಲ್ಯಾನ್ಸ್‌ಡೌನ್ ಕಟ್ಟಡದ ಸ್ಥಿತಿಯನ್ನು ನೋಡಿದ್ದು, ಶೀಘ್ರ ಮುಚ್ಚಿದ ಲಕೋಟೆಯೊಂದಿಗೆ ವರದಿ ಸಲ್ಲಿಸುವುದು ನಿಶ್ಚಿತವಾಗಿದೆ.
ಮಾಹಿತಿ ನೀಡದ ತಂಡ
ಸುಪ್ರೀಂಕೋರ್ಟ್ ಸೂಚನೆಯಂತೆ ಕಟ್ಟಡ ಪರಿಶೀಲನೆ ನಡೆಸಿ ವರದಿ ಕೊಡುತ್ತೇವೆ. ನಾವು ಏನನ್ನೂ ಹೇಳಲಾಗದು ಎಂದು ತಂಡದ ಮುಖ್ಯಸ್ಥ ರಘುನಾಥ್ ಹೇಳಿದರು.
ಮೈಸೂರು : ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಹನುಮ ಜಯಂತ್ಯೋತ್ಸವ ಸಮಿತಿ ವತಿಯಿಂದ ಶನಿವಾರ ನಡೆದ ಏಳನೇ ವರ್ಷದ ಹನುಮೋತ್ಸವ ಮೆರವಣಿಗೆಯು…
ಮನೆಯಲ್ಲಿ ರಾತ್ರಿಯಿಡೀ ಕೂಡಿಹಾಕಿ ಹಲ್ಲೆ ನಡೆಸಿದ ಮೂವರು ಆರೋಪಿಗಳು; ಹನಿಟ್ರ್ಯಾಪ್ ಶಂಕೆ, ತನಿಖೆ ಚುರುಕು ಮಡಿಕೇರಿ : ಸಾಮಾಜಿಕ ಜಾಲತಾಣದಲ್ಲಿ…
ಮೈಸೂರು : ನಗರದಲ್ಲಿ ಯುನಿಟಿ ಮಾಲ್ ನಿರ್ಮಿಸಲು ನಮ್ಮ ವಿರೋಧ ಇಲ್ಲ. ಆದರೆ, ಸರ್ಕಾರ ಗೊಂದಲವಿಲ್ಲದ ಸ್ಥಳ ನೀಡದೆ ದಿಕ್ಕು…
ಮೈಸೂರು : ಚುಮು ಚುಮು ಚಳಿಯ ನಡುವೆ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಗ್ರಾಹಕರ ಆಕರ್ಷಿಸುವ ಹಾಗೂ ಗ್ರಾಮೀಣ ಸೊಗಡಿನ…
ಮಂಡ್ಯ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುತ್ತೂರಿನ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವ ಯೋಗಿಗಳರವರ 1066ನೇ ಜಯಂತಿ…
ಸಿದ್ದಾಪುರ : ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಗ್ರಾ.ಪಂ. ಮಾಜಿ ಅಧ್ಯಕ್ಷನ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ…