ಮೈಸೂರು

ಕೋಟೆ | ಹೆಚ್ಚುತ್ತಿರುವ ಕಳವು ಪ್ರಕರಣ ; ಜನರಲ್ಲಿ ಆತಂಕ

ಎಚ್.ಡಿ.ಕೋಟೆ : ಪಟ್ಟಣದಲ್ಲಿ ಪೊಲೀಸರ ಮತ್ತು ಸಾರ್ವಜನಿಕರ ಮನೆಗಳೂ ಸೇರಿದಂತೆ ದೇವಸ್ಥಾನಗಳಲ್ಲಿ ನಿರಂತರವಾಗಿ ಕಳ್ಳತನ ಪ್ರಕರಣಗಳು ನಡೆಯುತ್ತಿರುವುದರಿಂದ ಜನರು ಆತಂಕಗೊಂಡಿದ್ದು, ಪೊಲೀಸರ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪಟ್ಟಣದ ಸ್ಟೇಡಿಯಂ ಬಡಾವಣೆಯ ನಿವಾಸಿ, ಎಎಸ್‌ಐ ಕೆ.ಕೆ.ಮಹದೇವ ಹಾಗೂ ಮೊದಲನೇ ಮುಖ್ಯ ರಸ್ತೆಯ ನಿವಾಸಿ ಪೇಪರ್ ಶೇಷಾದ್ರಿರವರ ಮನೆಗಳಲ್ಲಿ ಮಂಗಳವಾರ ರಾತ್ರಿ ಕಳ್ಳತನ ನಡೆದಿದೆ. ರಾತ್ರಿ ಎಎಸ್‌ಐ ಮಾದೇವ ಅವರ ಮನೆ ಬಾಗಿಲು ಮುರಿದು ಸುಮಾರು ೨೬ ಲಕ್ಷ ರೂ. ಬೆಲೆಬಾಳುವ ೨೫೦ ಗ್ರಾಂ ಚಿನ್ನಾಭರಣ, ೨೫ ಸಾವಿರ ರೂ. ನಗದು ಮತ್ತು ಪೇಪರ್ ಶೇಷಾದ್ರಿ ಅವರ ಮನೆಯಲ್ಲಿ ಎರಡೂವರೆ ಲಕ್ಷ ರೂ. ಮೌಲ್ಯದ ೨೦ ಗ್ರಾಂ ಚಿನ್ನಾಭರಣ, ೧೫ ಸಾವಿರ ರೂ. ನಗದನ್ನು ಕಳ್ಳರು ದೋಚಿದ್ದಾರೆ.

ಎಎಸ್‌ಐ ಮಾದೇವವರು ಹಾಸನಕ್ಕೆ ಹಾಸನಾಂಬ ದೇವಸ್ಥಾನದ ಬಂದೋಬಸ್ತ್ ಕರ್ತವ್ಯಕ್ಕಾಗಿ ತೆರಳಿದ್ದರು. ಅವರ ಜೊತೆ ಅವರ ಪತ್ನಿ, ಶಿಕ್ಷಕಿ ಲೋಲಮ್ಮ ಕೂಡ ಹಾಸನಕ್ಕೆ ತೆರಳಿದ್ದರು. ಕಳ್ಳರು ಮಂಗಳವಾರ ರಾತ್ರಿ ಎಎಸ್‌ಐ ಮನೆ ಬಾಗಿಲು ಒಡೆದು ಸಿಸಿ ಕ್ಯಾಮೆರಾದ ವೈರ್‌ಗಳನ್ನು ಕತ್ತರಿಸಿ ಮನೆ ಒಳಗಿದ್ದ ಬೀರುಗಳನ್ನೆಲ್ಲ ಒಡೆದು ೨೫೦ ಗ್ರಾಂ ಚಿನ್ನಾಭಣ, ೨೫ ಸಾವಿರ ರೂ. ನಗದು ದೋಚಿದ್ದಾರೆ.

ಇದೇ ರೀತಿ ಪೇಪರ್ ಶೇಷಾದ್ರಿ ಅವರ ಮನೆಯಲ್ಲೂ ಕಳವು ನಡೆದಿದೆ. ದಿವಂಗತ ಶೇಷಾದ್ರಿ ಅವರ ಪತ್ನಿ ಭಾಗ್ಯಮ್ಮ ಅನಾರೋಗ್ಯಕ್ಕೀಡಾಗಿದ್ದ ಸಂಬಂಧಿಕರನ್ನು ಭೇಟಿ ಮಾಡಲು ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ್ದ ಕಳ್ಳರು ಬಾಗಿಲು ಮೀಟಿ ಮನೆ ಒಳಗೆ ನುಗ್ಗಿ, ಬೀರು ಒಡೆದು ಸುಮಾರು ೨ ಲಕ್ಷ ರೂ.ಗಳಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ, ೧೫ ಸಾವಿರ ರೂ.ಗಳನ್ನು ಕಳವು ಮಾಡಿದ್ದಾರೆ. ಕಳ್ಳತನ ಮಾಡುವ ವೇಳೆ ಕಳ್ಳರು ಅಕ್ಕಪಕ್ಕದ ಮನೆಗಳ ಬಾಗಿಲು ಚಿಲಕ ಹಾಕಿ ಯಾರೂ ಹೊರಬಾರದಂತೆ ನೋಡಿಕೊಂಡಿದ್ದಾರೆ.

ಇದನ್ನು ಓದಿ: ಮನೆಗೆ ಕನ್ನ : ಚಿನ್ನ, ನಗದು ಕಳವು

ಬುಧವಾರ ಬೆಳಿಗ್ಗೆ ನಿವಾಸಿಗಳಾದ ಚಂದ್ರಮೌಳಿ, ವೇಣು, ಶ್ರೀಕಂಠ, ತೇಜಿ, ಸೋಮಣ್ಣ, -ಣಿ, ಮಂಜುನಾಥ್ ರಸ್ತೆಯಲ್ಲಿ ತೆರಳುತ್ತಿದ್ದಾಗ ಕಳ್ಳತನ ನಡೆದಿರುವುದನ್ನು ಗಮನಿಸಿ ತಕ್ಷಣ ಶೇಷಾದ್ರಿ ಅವರ ಪತ್ನಿ ಭಾಗ್ಯಮ್ಮರವರಿಗೆ ವಿಚಾರ ತಿಳಿಸಿದರು. ನಂತರ ನಿವಾಸಿಗಳು ಮನೆಯವರೊಡನೆ ಪಟ್ಟಣದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪೊಲೀಸರು ಮನೆಗೆ ಆಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕಳೆದ ವಾರವಷ್ಟೇ ಮೊದಲನೇ ಮುಖ್ಯ ರಸ್ತೆಯಲ್ಲಿರುವ ವಾರಾಹಿ ಮತ್ತು ಮಾರಮ್ಮ ದೇವಸ್ಥಾನದಲ್ಲಿ ದೇವಸ್ಥಾನ ದೇವರಿಗೆ ಅಳವಡಿಸಲಾಗಿದ್ದ ಸುಮಾರು ೩ ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಗೋಲಕದಲ್ಲಿದ್ದ ಹಣವನ್ನು ಕಳ್ಳರು ದೋಚಿದ್ದರು. ಮೂರು ತಿಂಗಳ ಹಿಂದೆ ಪಟ್ಟಣದ ಶನಿದೇವರು, ಆಂಜನೇಯ, ಪಟಲಮ್ಮ ದೇವಸ್ಥಾನಗಳಲ್ಲಿ ಕಳ್ಳತನ ಪ್ರಕರಣಗಳು ನಡೆದಿದ್ದವು.

ಈಗ ಮತ್ತೆ ಒಂದೇ ವಾರದಲ್ಲಿ ಎರಡು ಕಡೆ ಕಳ್ಳತನವಾಗಿರುವುದು ಜನತೆಯಲ್ಲಿ ಆತಂಕ ಮೂಡಿಸಿದೆ. ಪಟ್ಟಣದಲ್ಲಿ ಕಳೆದ ಒಂದು ವರ್ಷದಿಂದ ಅನೇಕ ಮನೆಗಳು, ದೇವಸ್ಥಾನಗಳಲ್ಲಿ ನಿರಂತರವಾಗಿ ಕಳ್ಳತನವಾಗುತ್ತಿದ್ದರೂ ಪಟ್ಟಣದ ಪೊಲೀಸರು ಕಳ್ಳರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ವಿ-ಲರಾಗಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಾದ ಗಂಗಾಧರ್ ವಿಷ್ಣುವರ್ಧನ್ ಮತ್ತು ಶಾಸಕ ಅನಿಲ್ ಚಿಕ್ಕಮಾದು ಇತ್ತ ಗಮನ ಹರಿಸಿ ಪಟ್ಟಣದಲ್ಲಿ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕಿದೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ರಾಜಕಾರಣಿಗಳು ಜವಾಬ್ದಾರಿಯಿಂದ ವರ್ತಿಸಲಿ

ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆ ನಡೆಯುವುದು ೨೦೨೮ ಏಪ್ರಿಲ್/ಮೇ ತಿಂಗಳಲ್ಲಿ, ಅಂದರೆ ಸುಮಾರು, ಇನ್ನು ಎರಡೂವರೆ ವರ್ಷಗಳ ಬಳಿಕ. ಆದರೆ…

4 hours ago

ಓದುಗರ ಪತ್ರ: ಪ್ರಶ್ನೆ ಪತ್ರಿಕೆ ಸೋರಿಕೆ ಎಂಬ ನಿರಂತರ ಶಾಪ

ರಾಜ್ಯದಲ್ಲಿ ಪರೀಕ್ಷೆಗಳೆಂದರೆ ಸೋರಿಕೆಗಳ ಸರಣಿ ಎಂಬಂತಾಗಿರುವುದು ದುರದೃಷ್ಟಕರ. ಈ ಬಾರಿ ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆಯ ೮೦ ಅಂಕಗಳ…

4 hours ago

ಓದುಗರ ಪತ್ರ: ಶಾಲೆಗಳಲ್ಲಿ ಕನ್ನಡ ದಿನ ದಿನಪತ್ರಿಕೆಗಳ ಓದು ಕಡ್ಡಾಯವಾಗಲಿ

ಉತ್ತರ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸುವ ಮೂಲಕ ಶಾಲೆಗಳ ನೋಟವನ್ನು ಬದಲಾಯಿಸುವುದರ ಜೊತೆಗೆ, ವಿದ್ಯಾರ್ಥಿಗಳ ಆಲೋಚನಾ ಶೈಲಿಯನ್ನು…

4 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಕನ್ನಡ ಚಿತ್ರರಂಗವೂ ಅರಸು – ಸಿದ್ದರಾಮಯ್ಯ ಆಡಳಿತ ರಂಗವೂ

ವೈಡ್‌ ಆಂಗಲ್‌  ಬಾ.ನಾ.ಸುಬ್ರಹ್ಮಣ್ಯ  ಅತಿ ಹೆಚ್ಚು ಕಾಲ ನಾಡಿನ ಆಡಳಿತ ಚುಕ್ಕಾಣಿ ಹಿಡಿದಿದ್ದವರು ದೇವರಾಜ ಅರಸು. ಆ ದಾಖಲೆಯನ್ನು ಮೊನ್ನೆ…

4 hours ago

ಸ್ಮಾರಕವಾಗದೇ ಪಾಳು ಬಿದ್ದಿದೆ ಕೆ.ಎಸ್.ನರಸಿಂಹಸ್ವಾಮಿ ಮನೆ

ಮಹೇಶ್ ಕರೋಟಿ ಇದ್ದೂ ಇಲ್ಲದಂತಾಗಿರುವ ಟ್ರಸ್ಟ್ , ಸರ್ಕಾರ, ಜನಪ್ರತಿನಿಧಿಗಳ ನಿರ್ಲಕ್ಷ್ಯ ಕಿಕ್ಕೇರಿ: ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ (ಕೆ.ಎಸ್.ನರಸಿಂಹಸ್ವಾಮಿ) ಅವರು…

4 hours ago

ಅಭಿವೃದ್ಧಿ ಹರಿಕಾರ ದುಗ್ಗಹಟ್ಟಿ ವೀರಭದ್ರ

ಜಿ.ಎಲ್.ತ್ರಿಪುರಾಂತಕ  ಇಂದು ದುಗ್ಗಹಟ್ಟಿ ವೀರಭದ್ರಪ್ಪ ಅವರ ಸ್ಮರಣೆ, ನುಡಿನಮನ ಕಾರ್ಯಕ್ರಮ ತನಗಾಗಿ ಬದುಕಿದವರನ್ನು ಸಮಾಜ ಬೇಗ ಮರೆಯುತ್ತದೆ, ಸಮಾಜಕ್ಕಾಗಿ ಬದುಕಿದವರನ್ನು…

4 hours ago