ಮೈಸೂರು: ಕಲ್ಯಾಣ್ ಜ್ಯುವೆಲ್ಲರ್ಸ್ ಮೈಸೂರಿನಲ್ಲಿ ತನ್ನ 2ನೇ ಹೊಸ ಶೋರೂಮ್ ಅನ್ನು ಪ್ರಾರಂಭಿಸಿದ್ದು, ಈ ಸೊಗಸಾದ ವಿನ್ಯಾಸದ ಶೋರೂಮ್ ಅನ್ನು ಬಾಲಿವುಡ್ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಉದ್ಘಾಟಿಸಿದರು.
ಈ ಶೋರೂಮ್‌ನಲ್ಲಿ ಕಲ್ಯಾಣ್ ಜ್ಯುವೆಲ್ಲರ್ಸ್ ಬ್ರ್ಯಾಂಡ್‌ನ ವಿವಿಧ ಸಂಗ್ರಹಗಳ ವ್ಯಾಪಕ ಶ್ರೇಣಿಯ ಡಿಸೈನ್‌ಗಳು ಲಭ್ಯವಿವೆ. ಉದ್ಘಾಟನಾ ಕಾರ್ಯಕ್ರಮವು ಅದ್ಧೂರಿಯಾಗಿ ನಡೆದಿದ್ದು, ಬಾಲಿವುಡ್ ತಾರೆಯನ್ನು ನೋಡಲು, ಈ ಸಂದರ್ಭದಲ್ಲಿ ಭಾಗಿಯಾಗಲು ಅಭಿಮಾನಿಗಳು ಮತ್ತು ಗ್ರಾಹಕರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಮಳಿಗೆ ಉದ್ಘಾಟಿಸಿ ಶಿಲ್ಪಾ ಶೆಟ್ಟಿ ಅವರು ತುಳುವಿನಲ್ಲಿ ಮಾತು ಆರಂಭಿಸಿದ ಅವರು, ಕನ್ನಡದಲ್ಲಿ ಎಲ್ಲರೂ ಚೆನ್ನಾಗಿದ್ದಿರ ಎಂದು ಪ್ರಶ್ನಿಸಿದರು. ನಾನು ಕರ್ನಾಟಕದ ಹುಡುಗಿ. ಮೈಸೂರಿಗೆ ತಂದರೆ ತವರು ಮನೆಗೆ ಬಂದಂತೆ ಭಾವ ಬರುತ್ತದೆ. ಇತ್ತೀಚೆಗೆ ಮೈಸೂರಿನಲ್ಲಿ ಕೆಡಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದೆ ಎಂದು ಸಂತಸ ಹಂಚಿಕೊಂಡರು.
ವಿಶ್ವಾಸ, ಪಾರದರ್ಶಕತೆ ಮತ್ತು ಗ್ರಾಹಕ ಕೇಂದ್ರಿತ ಮೌಲ್ಯಗಳ ಕುರಿತು ಗಾಢ ನಂಬಿಕೆ ಹೊಂದಿರುವ ಕಲ್ಯಾಣ್ ಜ್ಯುವೆಲ್ಲರ್ಸ್ ಅನ್ನು ಪ್ರತಿನಿಧಿಸುವುದು ಒಂದು ಸೌಭಾಗ್ಯ ಎಂದು ನಾನು ಭಾವಿಸಿದ್ದೇನೆ. ಗ್ರಾಹಕರು ವೈವಿಧ್ಯಮಯ ಆಭರಣ ಸಂಗ್ರಹಗಳನ್ನು ಆನಂದಿಸುತ್ತಾರೆ ಎಂಬ ಭರವಸೆ ನನಗೆ ಇದೆ ಎಂದು ಹೇಳಿದರು.
ಕಲ್ಯಾಣ್ ಜ್ಯುವೆಲ್ಲರ್ಸ್ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್ ಕಲ್ಯಾಣರಾಮನ್ ಮಾತನಾಡಿ, ಗ್ರಾಹಕರು ಉದ್ಘಾಟನಾ ಕೊಡುಗೆಯ ಭಾಗವಾಗಿ ಮೇಕಿಂಗ್ ಚಾರ್ಜ್ ಮೇಲೆ -ಟ್ ಶೇ.50ರಷ್ಟು ರಿಯಾಯಿತಿ ಪಡೆಯಬಹುದು ಎಂದು ತಿಳಿಸಿದರು.
ಕಲ್ಯಾಣ್ ಜ್ಯುವೆಲ್ಲರ‍್ಸ್‌ನಲ್ಲಿ ಯಾವೆಲ್ಲಾ ವಿಶೇಷ ಆಭರಣಗಳು ಲಭ್ಯ?
ಈ ಹೊಸ ಶೋರೂಮ್‌ನಲ್ಲಿ ಕಲ್ಯಾಣ್ ಜ್ಯುವೆಲ್ಲರ್ಸ್‌ನ ಜನಪ್ರಿಯ ಹೋಮ್ ಬ್ರ್ಯಾಂಡ್‌ಗಳಾದ ಮುಹೂರ್ತ್(ವೆಡ್ಡಿಂಗ್ ಜ್ಯುವೆಲ್ಲರಿ ಲೈನ್), ಮುದ್ರಾ(ಕೈಯಿಂದ ಮಾಡಿದ ಆಂಟಿಕ್ ಆಭರಣ), ನಿಮಾಹ್(ಟೆಂಪಲ್ ಜ್ಯುವೆಲ್ಲರಿ), ಗ್ಲೋ(ಡ್ಯಾನ್ಸಿಂಗ್ ಡೈಮಂಡ್ಸ್), ಝಿಯಾಹ್(ಸಾಲಿಟೇರ್ ಲೈಕ್ ಡೈಮಂಡ್ ಜ್ಯುವೆಲ್ಲರಿ), ಅನೋಖಿ(ಅನ್ ಕಟ್ ಡೈಮಂಡ್ಸ್), ಅಪೂರ್ವ(ವಿಶೇಷ ಸಂದರ್ಭಗಳಿಗಾಗಿ ಸಿದ್ಧಗೊಳಿಸಿರುವ ಡೈಮಂಡ್ಸ್), ಅಂತರಾ(ವೆಡ್ಡಿಂಗ್ ಡೈಮಂಡ್ಸ್), ಹೇರಾ(ದೈನಂದಿನ ಧರಿಸುವ ಡೈಮಂಡ್ಸ್), ರಂಗ್(ಪ್ರೀಷಿಯಸ್ ಸ್ಟೋನ್ಸ್ ಜ್ಯುವೆಲ್ಲರಿ) ಮತ್ತು ಇತ್ತೀಚೆಗೆ ಪ್ರಾರಂಭಿಸಲಾದ ಲೀಲಾ (ಕಲರ್ಡ್ ಸ್ಟೋನ್ಸ್ ಮತ್ತು ಡೈಮಂಡ್ ಜ್ಯುವೆಲ್ಲರಿ) ಉತ್ಪನ್ನಗಳೂ ಲಭ್ಯವಿರುತ್ತವೆ.
ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…
ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…
ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…
ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…
ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…
ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…