ಮೈಸೂರು

ಪತ್ರಿಕೋದ್ಯಮ : ವಿದ್ಯಾರ್ಹತೆ ಜೊತೆ ಕೌಶಲ ಮುಖ್ಯ

ಮೈಸೂರು: ಪತ್ರಿಕೋದ್ಯಮದ ದಾರಿ ಹಿಡಿಯುವ ವಿದ್ಯಾರ್ಥಿಗಳು ಅಧ್ಯಯನದ ಜೊತೆ ಜಾಗತಿಕ ವಿದ್ಯಮಾನಗಳ ಅರಿವು, ಕೌಶಲ್ಯಗಳನ್ನು ಅರಿಯಬೇಕಿದೆ  ಎಂದು ಪ್ರಜಾವಾಣಿಯ ಮೈಸೂರು ಬ್ಯೂರೋ ಮುಖ್ಯಸ್ಥ ಕೆ.ನರಸಿಂಹಮೂರ್ತಿ ಹೇಳಿದರು.

ಮಾನಸಗಂಗೋತ್ರಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ” ಡೆಸ್ಕ್ ವರ್ಕ್ ಮತ್ತು ವರದಿಗಾರಿಕೆ” ವಿಷಯ ಕುರಿತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ವರದಿಗಾರಿಕೆಗೆ ತೆರಳುವ ಮುನ್ನ ಅನ್ಲೈನ್ ವಿಷಯವಾದರೂ ಸರಿ, ಪುಸ್ತಕಗಳ ಮೂಲಕವಾದರೂ ಒಂದು ವಿಷಯದ ಪೂರ್ಣ ಮಾಹಿತಿಯನ್ನು ವರದಿಗಾರರು ತಿಳಿದಿರಬೇಕು ಎಂದು ಸಲಹೆ ನೀಡಿದರು.

ಡೆಸ್ಕ್ ವರ್ಕ್ ಮತ್ತು ವರದಿಗಾರರು ಒಂದೇ ಸಂಸ್ಥೆಯ ಎರಡು ಕಣ್ಣುಗಳಿದ್ದಂತೆ. ಪ್ರತಿಯೊಂದು ಸಂಸ್ಥೆಯಲ್ಲಿಯೂ ವರದಿಗಾರಿಕೆಯೂ ಇರುತ್ತದೆ ಹಾಗೇ ಸಂಪಾದಕೀಯ ತಂಡವು ಇರುತ್ತದೆ, ಎರಡು ಕೂಡ ವಿಭಿನ್ನವಾಗಿ ಕಾರ್ಯನಿರ್ವಹಿಸಿದರೂ, ವರದಿಗಾರನಿಗೆ ಸಂಪಾದಕನ ಕೆಲಸ ಹಾಗೂ ಸಂಪಾದಕನಿಗೆ ವರದಿಗಾರಿಕೆಯು ತಿಳಿದಿರಬೇಕು ಎಂದು ಅವರು ಹೇಳಿದರು.

ಒಬ್ಬ ಉತ್ತಮ ವರದಿಗಾರನಾದಾಗ ಮಾತ್ರ ಉತ್ತಮ ಸಂಪಾದಕನಾಗಲು ಸಾಧ್ಯ, ಹಾಗೆಯೇ ಉತ್ತಮ ಸಂಪಾದಕನಿಗೆ ವರದಿಗಾರನ ವಿಷಯ ಮತ್ತು ವಸ್ತುಪ್ರಜ್ಞೆ ತಿಳಿದಿರಬೇಕು. ಯಾವುದೇ ವಿಷಯದ ಬಗ್ಗೆ ಬರೆಯುವಾಗ ಅಥವಾ ವರದಿಗಾರಿಕೆ ಮಾಡುವಾಗ ವಿಷಯಗಳ ಕುರಿತು ಆಳವಾದ ಅಧ್ಯಯನ ಮಾಡಿದಾಗ ಮಾತ್ರ ಅದರ ಕುರಿತಾದ ಸಂಪೂರ್ಣ ಚಿತ್ರಣಗಳು ನಮಗೆ ಸಿಗುತ್ತದೆ ಎಂದು ಹೇಳಿದರು.

ತಮ್ಮ ವರದಿಗಾರಿಕೆಯ ಅನುಭವಗಳ ಬಿಚ್ಚಿಡುತ್ತ ಹಲವು ಮುಖ್ಯ ವರದಿಗಾರಿಕೆಗಳ ಕುರಿತು ವಿವರಿಸಿದರು. ಒಬ್ಬ ಪತ್ರಕರ್ತನಿಗೆ ಇರಬೇಕಾದಂತಹ ಗುಣಗಳು ಯಾವುದು? ಆತ ಹೇಗೆ ಒಂದು ವಿಷಯವನ್ನು ವರದಿಗಾರಿಕೆ ಮಾಡಬೇಕು? ಎಂಬುದನ್ನು ಸವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.

ಉಪನ್ಯಾಸದ ನಂತರ ವಿದ್ಯಾರ್ಥಿಗಳಲ್ಲಿದ್ದ ಹಲವು ಗೊಂದಲಗಳಿಗೆ ಸೂಕ್ತವಾದ ಉತ್ತರಗಳನ್ನು ನೀಡಿ ಸಂವಾದವನ್ನು ನಡೆಸಿದರು.

ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ. ಎನ್ ಮಮತ , ಅತಿಥಿ ಉಪನ್ಯಾಸಕ ಡಾ ಕುಮಾರಸ್ವಾಮಿ, ಸಂಶೋಧನಾ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಯಳಂದೂರು| ಕೆಸ್ತೂರು ಗ್ರಾಮದಲ್ಲಿ ಭೀಮ ಸಂಭ್ರಮ ಕಪ್‌ ಸೀಜನ್-‌05

ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ “ಭೀಮ ಸಂಭ್ರಮ ಕಪ್ ಸೀಜನ್- 05” ಕ್ರಿಕೆಟ್ ಪಂದ್ಯಾವಳಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ್ದ…

7 mins ago

ಕರ್ನಾಟಕದ ಸಂಸ್ಕೃತಿ, ಸಂಪ್ರದಾಯವನ್ನು ಅನಾವರಣಗೊಳಿಸುವ ‘ಅಯ್ಯನ ಮನೆ’

ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿ ವೆಬ್‍ ಸರಣಿಗಳ ಸಂಖ್ಯೆ ಕಡಿಮೆಯೇ. ಅಪರೂಪಕ್ಕೆಂಬಂತೆ ಅಲ್ಲೊಂದು ಇಲ್ಲೊಂದು ವೆಬ್‍ ಸರಣಿಗಳು ಕನ್ನಡದಲ್ಲಿ ನಿರ್ಮಾಣವಾಗುತ್ತಿವೆ.…

28 mins ago

ಕೊಳ್ಳೇಗಾಲ| ಸಿಡಿಮದ್ದು ಹಾಕಿ ಪ್ರಾಣಿ ಬೇಟೆಯಾಡುತ್ತಿದ್ದ ಆರೋಪಿ ಬಂಧನ

ಕೊಳ್ಳೇಗಾಲ: ಸಿಡಿಮದ್ದು ಹಾಕಿ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ದೊಡ್ಡಿಂದುವಾಡಿ ಗ್ರಾಮದ ಸುಂದರ್…

41 mins ago

ಯುದ್ಧ ಮಾಡಲು ಜೆಡಿಎಸ್ ಪಕ್ಷ ಸಿದ್ಧವಾಗಿದೆ: ನಿಖಿಲ್‌ ಕುಮಾರಸ್ವಾಮಿ

ಬೆಂಗಳೂರು: ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಇದು ಜೆಡಿಎಸ್ ಪಕ್ಷದ ಸ್ಲೋಗನ್ ಅಲ್ಲ. ರಾಜ್ಯದ ಏಳೂವರೆ ಕೋಟಿ ಜನರ ಮನದಾಳದ…

2 hours ago

ಡಿಜಿಟಲ್‌ ಆಯ್ತು ಈಗ ಸ್ಟೇಟಸ್‌ ಅಪ್ಲೋಡ್‌ ಸಮಸ್ಯೆ ಅನುಭವಿಸಿದ ಬಳಕೆದಾರರು

ನವದೆಹಲಿ: ಇಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಡಿಜಿಟಲ್‌ ಪೇಮೆಂಟ್‌ ಸಮಸ್ಯೆಯಿಂದ ಕಂಗಾಲಾಗಿದ್ದ ಬಳಕೆದಾರರು,  ಸಂಜೆ ಹೊತ್ತಿಗೆ ವಾಟ್ಸಪ್‌ ಸ್ಟೇಟಸ್‌ ಸಮಸ್ಯೆ ಅನುಭವಿಸಿದ್ದಾರೆ.…

2 hours ago

ಸಿದ್ದರಾಮಯ್ಯ ಮೇಲೆ ಗಣಿ ಆರೋಪ ಬಂದಿದೆ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಾಂಬ್‌

ಬೆಂಗಳೂರು: ನನ್ನ ಮೇಲೆ ಗಣಿ, ಗುತ್ತಿಗೆ ಆರೋಪ ಮಾಡಿರುವ ಸಿದ್ದರಾಮಯ್ಯ ಅವರು, ಈಗ ತಮ್ಮ ಸುತ್ತ ಸುತ್ತಿಕೊಂಡಿರುವ ಗಣಿ ಅಕ್ರಮದ…

2 hours ago