ಮೈಸೂರು

ಕ್ಷಯರೋಗ ನಿರ್ಮೂಲನೆಗೆ ಕೈ ಜೋಡಿಸಿ : ಡಾ.ಕೆ.ಹೆಚ್ ಪ್ರಸಾದ್‌

ಮೈಸೂರು : ಕ್ಷಯರೋಗ ಒಂದು ಸಾಂಕ್ರಾಮಿಕ ರೋಗವಾಗಿದ್ದು, ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಜೊತೆಗೆ ರೋಗಿಗಳಲ್ಲಿ ದೀರ್ಘಕಾಲದ ವರೆಗೆ ಉಳಿಯುವ ಖಾಯಿಲೆಯಾಗಿದೆ. ಆದರೆ ಕ್ಷಯ ರೋಗಿಗಳನ್ನು ಗುರುತಿಸಿ, ಸೂಕ್ತ ಚಿಕಿತ್ಸೆ ನೀಡಿದರೆ ಕ್ಷಯರೋಗವನ್ನು ವಾಸಿ ಮಾಡಬಹುದು. ಹೀಗಾಗಿ ಕ್ಷಯರೋಗಿಗಳ ಮಾಹಿತಿ ನೀಡಿ, ಕ್ಷಯರೋಗ ಮುಕ್ತ ಭಾರತ ನಿರ್ಮಿಸಲು ಕೈ ಜೋಡಿಸಿ  ಎಂದು ಮೈಸೂರು ವಿಭಾಗದ ವಿಭಾಗೀಯ ಸಹ ನಿರ್ದೇಶಕ ಡಾ.ಕೆ.ಹೆಚ್ ಪ್ರಸಾದ್  ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕೇಂದ್ರ, ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಅಕಾಡೆಮಿ ಇವರ ಸಹಯೋಗದಲ್ಲಿ ಸೋಮವಾರ  ಜೆ.ಕೆ ಮೈದಾನದ ಅಮೃತ್ ಮಹೋತ್ಸವ ಭವನದಲ್ಲಿ ಆಯೋಜಿಸಲಾಗಿದ್ದ ವಿಶ್ವ ಕ್ಷಯರೋಗ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ಷಯರೋಗ ಮುಕ್ತ ಗ್ರಾಮಗಳನ್ನು ನಿರ್ಮಿಸಲು ಜನಾಂದೋಲನ ಮಾದರಿಯಲ್ಲಿ ಅಭಿಯಾನ ನಡೆಸಬೇಕಾದ ಅಗತ್ಯವಿದೆ. ಇಲ್ಲವಾದರೆ ಇಡೀ ದೇಶ ಕ್ಷಯರೋಗ ಮಯವಾಗಿ ಪರಿವರ್ತನೆಗೊಳ್ಳುವ ಅಪಾಯವಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಕ್ಷಯರೋಗ ಅತ್ಯಂತ ಅಪಾಯಕಾರಿ ಖಾಯಿಲೆಯಾಗಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಸಹ ದೇಶ ಕ್ಷಯರೋಗದ ವಿರುದ್ಧ ಹೋರಾಟ ಮಾಡುತ್ತಲೇ ಬರುತ್ತಿದ್ದು, ಕ್ಷಯರೋಗ ನಿರ್ಮೂಲನೆಗಾಗಿ ಸರ್ಕಾರ ಮತ್ತು ಆರೋಗ್ಯ ಇಲಾಖೆ, ವೈದ್ಯರು, ವೈದ್ಯಕೀಯ ಸಿಬ್ಬಂದಿಗಳ ಜೊತೆಗೆ ಸಾರ್ವಜನಿಕರೂ ಕೈಜೋಡೊಸಬೇಕಾದ ಅಗತ್ಯವಿದೆ. ಒಂದು ಕೈ ಸೇರಿದರೆ ಚಪ್ಪಾಳೆಯಾಗುವುದಿಲ್ಲ. ಸಮಾಜದ ಸಹಕಾರವಿದ್ದರೆ ಯಾವ ಕಾರ್ಯವೂ ಸಹ ಕಷ್ಟವಾಗುವುದಿಲ್ಲ ಎಂದು ಅವರು ತಿಳಿಸಿದರು.

ಕೆ.ಆರ್.ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಎಚ್.ಪಿ.ಶೋಭಾ  ಮಾತನಾಡಿ, ಕ್ಷಯರೋಗ ನಿರ್ಮೂಲನೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿರುವುದರಿಂದ ವಿದ್ಯಾರ್ಥಿಗಳು ಮನಸ್ಸು ವಾಡಿದರೆ ಸಂಪೂರ್ಣವಾಗಿ ಕ್ಷಯರೋಗವನ್ನು ನಮ್ಮ ದೇಶದಿಂದ ನಿರ್ಮೂಲನೆ ಗೊಳಿಸಬಹುದು ಎಂದು ಹೇಳಿದರು.

ಎಲ್ಲಾ ವಿದ್ಯಾರ್ಥಿಗಳು ತಮ್ಮ ಗ್ರಾಮದಲ್ಲಿ ಮತ್ತು ತಮ್ಮ ನೆರೆಹೊರೆ ಮನೆಗಳಲ್ಲಿ ಕ್ಷಯ ರೋಗಿಗಳು ಅಥವಾ ಕ್ಷಯ ರೋಗದ ಲಕ್ಷಣಗಳು ಇರುವ ವ್ಯಕ್ತಿಗಳು ಕಂಡು ಬಂದರೆ ತಕ್ಷಣ ತಮ್ಮ ಹತ್ತಿರದ ಆಸ್ಪತ್ರೆಗಳಿಗೆ ಸೇರಿಸಬೇಕು ಎಂದು ಸಲಹೆ ನೀಡಿದರು.

ಕ್ಷಯ ಮುಕ್ತ ಗ್ರಾಮ ಪಂಚಾಯತಿಗಳಾದ ಹೆಚ್.ಡಿ ಕೋಟೆ, ಸರಗೂರು, ಹುಣಸೂರು, ಕೆ. ಆರ್ ನಗರ, ಪಿರಿಯಾಪಟ್ಟಣ ನಂಜನಗೂಡು, ಟಿ.ನರಸೀಪುರ ತಾಲ್ಲೂಕಿನ ಗ್ರಾಮಪಂಚಾಯಿತಿಗಳಾದ ಭೀಮನಹಳ್ಳಿ, ಹೆಬ್ಬಲಗುಪ್ಪೆ, ಭಾಚೇಗೌಡನಹಳ್ಳಿ, ಹೊಮ್ಮರಗಳ್ಳಿ, ಕಂಚಮಳ್ಳಿ, ಇಟ್ನ, ಕೊತ್ತೇಗಾಲ, ಮುಳ್ಳೂರು, ಸಾಗರೆ, ಹೆಗ್ಗನೂರು, ಭೋಳನಹಳ್ಳಿ, ಗಾಗೇನಹಳ್ಳಿ, ಹಳೇಬೀಡು, ಕರ್ಣಕುಪ್ಪೆ, ಮೋದೂರು, ಮುಳ್ಳೂರು, ತಟ್ಟೆಕೆರೆ , ಉದ್ದೂರು ಕಾವಲ್, ಚಂದೇಗಾಲ, ಅಡಗೂರು, ಗಂಧನಹಳ್ಳಿ, ಹರದನಹಳ್ಳಿ, ತಿಪ್ಪೂರು, ಹಗ್ಗಿನವಾಳು ಕಂಪಲಾಪುರ, ಕೋಮಲಾ ಪುರ, ಮುತ್ತೂರು, ಪುನ್ನಾಡಹಳ್ಳಿ, ಗರ್ಗೆಶ್ವರಿ, ಕಲಿಯೂರು, ಕುಪ್ಯ, ಮಾದಾಪುರ, ಮುತ್ತಲವಾಡಿ, ಸೋಸಲೆ , ತುರುಗನೂರು, ವಾಟಾಳು ಗ್ರಾಮ ಪಂಚಾಯಿತಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಎಂ.ಎಸ್.ಜಯoತ್, ಆರ್.ಸಿ.ಎಚ್.ಒ ಡಾ.ಸಿರಾಜ್ ಅಹಮ್ಮದ್, ಕಾರ್ಯಕ್ರಮ ಸಂಯೋಜಕ ಕೆ.ಹನುಮಂತಪ್ಪ, ಆಶ್ರಯ ಹಸ್ತ ಟ್ರಸ್ಟ್ ನ ವಿಕ್ರಮ್ ಪಾಟೀಲ್, ಡಾ.ಬೃಂಧ, ಡಾ. ಸ್ವಾಮಿ, , ಸೆಂಟ್ರಲ್ ಆಸ್ಪತ್ರೆಯ ಡಾ.ಲತಾ ಕುಮಾರಿ, ಡಾ.ಗಣಪತಿ ಉಪ್ಪಿನಾಳ್, ಗ್ರಾಮ ಪಂಚಾಯಿತಿಯ ಸದಸ್ಯರು, ಎನ್.ಟಿ.ಡಿ ಸಂಸ್ಥೆಯ ಸಿಬ್ಬಂದಿಗಳು, ಕೆ.ಹೆಚ್.ಪಿ.ಟಿ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ

ಬೆಂಗಳೂರು: 2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಶೇ.86ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ https:karresults.nic.in ನಲ್ಲಿ…

15 mins ago

ಇಸ್ರೇಲ್‌ ದಾಳಿಗೆ ಹಿಜ್ಬುಲ್ಲಾ ಮುಖ್ಯಸ್ಥನ ಸಹಾಯಕ ಸಾವು

ಟೆಲ್‌ಅವೀವ್:‌ ಕದನ ವಿರಾಮದ ನಡುವೆಯೂ ಲೆಬನಾನ್‌ನಲ್ಲಿ ಇಸ್ರೇಲ್‌ ಏರ್‌ಸ್ಟೈಕ್‌ ನಡೆಸಿ ಹಿಜ್ಬುಲ್ಲಾ ಮುಖ್ಯಸ್ಥ ನಯಿಮ್‌ ಕಾಸೆಮ್‌ನ ಸೋದರಳಿಯ ಯೂಸುಫ್‌ ಹರ್ಷಿಯನ್ನು…

28 mins ago

ಹಾರ್ಮುಜ್‌ ಸಂಚಾರಕ್ಕೆ 2 ಹೊಸ ಮಾರ್ಗ ಪ್ರಕಟಿಸಿದ ಐಆರ್‌ಜಿಸಿ

ಟೆಹ್ರಾನ್‌ : ಅಮೆರಿಕ ಮತ್ತು ಇರಾನ್‌ ಮಧ್ಯೆ ಕದನ ವಿರಾಮ ಘೋಷಣೆಯಾದ ಬಳಿಕ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್…

37 mins ago

ಯೋಗೇಶ್‌ ಗೌಡ ಕೊಲೆ ಪ್ರಕರಣ: ಏಪ್ರಿಲ್.‌15ಕ್ಕೆ ಅಂತಿಮ ತೀರ್ಪು

ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯತ್‌ ಸದಸ್ಯ ಯೋಗೇಶ್‌ ಗೌಡ ಕೊಲೆ ಪ್ರಕರಣದ ಅಂತಿಮ ತೀರ್ಪು ಏಪ್ರಿಲ್.‌15ಕ್ಕೆ ಮುಂದೂಡಿಕೆಯಾಗಿದೆ. ಜನಪ್ರತಿನಿಧಿಗಳ ವಿಶೇಷ…

48 mins ago

ಇನ್ನೂ ಪತ್ತೆಯಾಗದ ಬಾಲಕಿ ಶ್ರೀನಂದಾ ; ಚಂದ್ರದ್ರೋಣ ಬೆಟ್ಟದಲ್ಲಿ ಮುಂದುವರೆದ ಶೋಧ ಕಾರ್ಯ

ಚಿಕ್ಕಮಗಳೂರು : ಜಿಲ್ಲೆಯ ದತ್ತಪೀಠದ ತಪ್ಪಲಿನ ಮಾಣಿಕ್ಯಾಧಾರಕ್ಕೆ ಕುಟುಂಬದ ಜೊತೆ ಬಂದಿದ್ದ 15 ವರ್ಷದ ಬಾಲಕಿ ಶ್ರೀನಂದಾ ಇದ್ದಕ್ಕಿದ್ದಂತೆ ಆ…

1 hour ago

ಉಪ ಚುನಾವಣೆ | 1ಗಂಟೆ ವೇಳೆಗೆ ಬಾಗಲಕೋಟೆ ಶೇ.43, ದಾವಣಗೆರೆ ಶೇ.28ರಷ್ಟು ಮತದಾನ

ದಾವಣಗೆರೆ : ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಹಣಾಹಣಿಗೆ ಸಾಕ್ಷಿಯಾಗಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ…

2 hours ago