ಮೈಸೂರು : ನಿವೇಶನ ರಹಿತರಿಗೆ ೧೩ ಲಕ್ಷ ವೆಚ್ಚದಲ್ಲಿ ಮನೆ ಕಟ್ಟಿಕೊಡಲು ಸರ್ಕಾರ ನಿರ್ಧಾರ ಮಾಡಿದೆ. ಮನೆಗೆ ಫಲಾನುಭವಿಗಳು ೧.೫೦ ಲಕ್ಷ ಕಟ್ಟುವುದು ಸಾಕು ಎಂದು ಸರ್ಕಾರ ನಿರ್ಧರಸಿದೆ ಎಂದು ಶಾಸಕ ಶ್ರೀವತ್ಸ ಹೇಳಿದ್ದಾರೆ.
ಮೈಸೂರು ಮಹಾನಗರ ಪಾಲಿಕೆಯ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಕೆ.ಆರ್ ಕ್ಷೇತ್ರದ ಆಶ್ರಯ ಬಡಾವಣೆ ಫಲಾನುಭವಿಗಳಿಗೆ ಹಕ್ಕುಪತ್ರ, ಹಕ್ಕು ಖುಲಾಸೆ ಮತ್ತು ಎನ್ ಓಸಿಗಳನ್ನು ನೀಡುವ ಕಾರ್ಯಕ್ರಮದಲ್ಲಿ ಶಾಸಕ ಶ್ರೀವತ್ಸ ಭಾಗವಹಿಸಿ ಸಾಂಕೇತಿಕವಾಗಿ ಸಾವಿತ್ರಿ, ಕಮಲಮ್ಮ,ಶಿವರುದ್ರ, ಲಕ್ಷ್ಮಮ್ಮ,ಕೃಷ್ಣಮೂರ್ತಿ ಅವರಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು.
ಮುಂದಿನ ಮೂರು ವರ್ಷಗಳಲ್ಲಿ ನಾಲ್ಕು ಸಾವಿರ ಮನೆಗಳನ್ನು ನಿರ್ಮಾಣ ಮಾಡಿ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು. ಬಡವರು,ಮಧ್ಯಮ ವರ್ಗದವರು ಮನೆಗಳಲ್ಲಿ ವಾಸ ಮಾಡಿ ಜೀವನ ಮಾಡಬೇಕು ಹೊರತು ಮತ್ತೊಬ್ಬರಿಗೆ ಮಾರಾಟ,ಬಾಡಿಗೆಗೆ ಕೊಡಬಾರದು ಲಲಿತಾದ್ರಿಪುರದಲ್ಲಿ ಜಿ-ಪ್ಲಸ್ ೯ ಬಹುಮಹಡಿ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಎರಡು ತಿಂಗಳೊಳಗೆ ಮತ್ತೆ ೧೬೬೦ ಮನೆಗಳ ನಿರ್ವಾಣಕ್ಕೆ ಶೀಘ್ರದಲ್ಲೇ ಕಾಮಗಾರಿ ಆರಂಭ ಮಾಡಲಾಗುವುದು. ಪರಿಶಿಷ್ಟ ಜಾತಿಗೆ ಸೇರಿದ ಫಲಾನುಭವಿಗಳಿಗೆ ೩೯೫ ಮನೆಗಳ ನಿರ್ಮಾಣಕ್ಕೆ ಅನುದಾನ ಮೀಸಲಿಡಲಾಗಿದೆ ಎಂದರು.
ಅಲ್ಲದೆ ಮೂರು ವರ್ಷಗಳಲ್ಲಿ ಕ್ಷೇತ್ರದಲ್ಲಿ ೪ ಸಾವಿರ ಮನೆಗಳನ್ನು ಅರ್ಹರಿಗೆ ಕೊಡಿಸಲು ಬೇಕಾದ ಕ್ರಮ ಕೈಗೊಳ್ಳಲಾಗಿದೆ. ಒಬ್ಬ ಫಲಾನುಭವಿಯು ಒಂದೂವರೆ ಲಕ್ಷ ಕಟ್ಟಿದರೆ, ಉಳಿದ ಹಣ ೧೨ ಲಕ್ಷ ರೂ.ಅನ್ನು ಸರ್ಕಾರ ಭರಿಸಲಿದೆ. ಆಶ್ರಯ ಮನೆಗಳನ್ನು ನಿರ್ಮಿಸಿಕೊಂಡಿರುವ ೧೮೦ ಫಲಾನುಭವಿಗಳಿಗೆ ಹಕ್ಕುಪತ್ರ ಹಂಚಿಕೆ ಮಾಡಲಾಗಿದೆ. ಸರ್ಕಾರದ ಯೋಜನೆಗಳು ಹಳ್ಳಹಿಡಿಯಬಾರದು. ಬಡವನಿಗೆ ಸರ್ಕಾರದ ಕಾರ್ಯಕ್ರಮಗಳ ಸೌಲಭ್ಯಗಳನ್ನು ನೀಡುವಾಗ ಹಣಕ್ಕಾಗಿ ಪೀಡಿಸಬಾರದು. ಒಂದೊತ್ತಿನ ಕೂಲಿ ಮಾಡುವ ಫಲಾನುಭವಿಯಿಂದ ಯಾವುದನ್ನೂ ನಿರೀಕ್ಷೆ ಮಾಡದೆ ಕೆಲಸ ಮಾಡಬೇಕು. ಹಣ ಕೊಟ್ಟು ಪಡೆದುಕೊಂಡೆ ಎನ್ನುವುದು ಬರಬಾರದು. ಒಂದು ವೇಳೆ ನನಗೆ ಗೊತ್ತಿಲ್ಲದೆ ಹಣ ಕೊಟ್ಟು ಹಕ್ಕುಪತ್ರ ಪಡೆದುಕೊಂಡಿದ್ದರೆ ಅಂತಹವರು ನೇರವಾಗಿ ಭೇಟಿ ಮಾಡಿ ನನ್ನಗೆ ಹೇಳಬಹುದು ಎಂದು ಹೇಳಿದರು.
ಹೆಚ್ಚುವರಿ ಆಯುಕ್ತರಾದ ಕುಸುಮಕುಮಾರಿ ಮಾತನಾಡಿ, ತುಂಬಾ ವರ್ಷಗಳ ಕಾಲದಿಂದಲೂ ಹಕ್ಕು ಪತ್ರಗಳು ಸಿಗದೆ ಅಲೆದಾಡುತ್ತಿರುವುದನ್ನು ಗಮನಿಸಿ ಅಗತ್ಯ ಕ್ರಮಕೈಗೊಳ್ಳುವುದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅದರಂತೆ ಒಟ್ಟಿಗೆ ಹಕ್ಕುಪತ್ರ ವಿತರಿಸಲಾಗುತ್ತಿದೆ ಎಂದರು.
ಇನ್ನು ಈ ಸಂದರ್ಭದಲ್ಲಿ ಆಶ್ರಯ ಸಮಿತಿ ವಿಷ್ಣು, ನಿರ್ವಾಹಕ ಜಯರಾಮ್, ಕಚೇರಿ ಸಹಾಯಕ ಉಮೇಶ್, ಮದನ್ ಹಾಜರಿದ್ದರು.
ಮಹಾದೇಶ್ ಎಂ ಗೌಡ ಹನೂರು: ಕೆಎಸ್‌ಆರ್‌ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರರಿಬ್ಬರೂ…
ಮಹಾದೇಶ್ ಎಂ ಗೌಡ ಹನೂರು: ದ್ವಿಚಕ್ರ ವಾಹನ ಸವಾರ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡು ಮೃತಪಟ್ಟಿರುವ ಘಟನೆ…
ಮೈಸೂರು: ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್…
ಮಹಾದೇಶ್ ಎಂ ಗೌಡ ಹನೂರು: ಅಂತರ ರಾಜ್ಯ ನೆರೆಯ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಮಾಪುರ ರಸ್ತೆಯಲ್ಲಿ ನಿತ್ಯ ಗಜರಾಜ ಎಂಟ್ರಿ…
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಚಿತಾವಣೆಯಿಂದ ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಹೆಣ ಬಿದ್ದಿದೆ ಎಂದು ಹೇಳಿಕೆ…
ಬೆಂಗಳೂರು: ನಾಯಕತ್ವ ಬದಲಾವಣೆ ಚರ್ಚೆಗೆ ಹೈಕಮಾಂಡ್ ಸ್ಪಷ್ಟನೆ ಕೊಡಬೇಕು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಒತ್ತಾಯಿಸಿದ್ದಾರೆ. ಜನವರಿ.16ಕ್ಕೆ ಸಿಹಿಸುದ್ದಿ ಬರಲಿದೆ…