ಮೈಸೂರು

ರಪ್ತು ಹೆಚ್ಚಾದರೆ ದೇಶದ ಜಿ.ಡಿ.ಪಿ ಹೆಚ್ಚಾಗುತ್ತದೆ :ಸಿ.ಎಸ್ ಬಾಬು ನಾಗೇಶ್

ಮೈಸೂರು: ಆಮದು ಕಡಿಮೆ ಮಾಡಿಕೊಂಡು ರಪ್ತು ಹೆಚ್ಚಾದರೆ ನಮ್ಮ ದೇಶದ ಜಿ.ಡಿ.ಪಿ ಹೆಚ್ಚಾಗುತ್ತದೆ ಎಂದು ಬೆಂಗಳೂರಿನ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದ ಜಂಟಿ ನಿರ್ದೇಶಕ ಸಿ.ಎಸ್ ಬಾಬು ನಾಗೇಶ್  ತಿಳಿಸಿದರು.

ಇಂದು (ಡಿ.2)ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಬೆಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಮೈಸೂರಿನ ಹೋಟೆಲ್ ಪ್ರೆಸಿಡೆಂಟ್ ನಲ್ಲಿ ನಡೆದ ಆರು ದಿನಗಳ ರಫ್ತು ನಿರ್ವಹಣಾ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು,  ಇದೂವರೆಗೂ ನಡೆದಿರುವಂತಹ ತರಬೇತಿ ಕಾರ್ಯಕ್ರಮದಲ್ಲಿ ತರಬೇತಿ ಪಡೆದಿರುವುದು ಶೇ 100% ನಲ್ಲಿ 30% ಅಷ್ಟೆ ಉಪಯುಕ್ತ ಎಂದು ಕಂಡು ಬರುತ್ತಿದೆ. ಇನ್ನೂ 70% ಯಾವುದೇ ರೀತಿಯ ಸಕಾರಾತ್ಮಕ ಕಂಡುಬರುತಿಲ್ಲ ಎಂದರು.

ಡೊಮೆಸ್ಟಿಕ್ ನಲ್ಲಿ ಎಂಎಸ್ಎoಇ ಘಟಕವನ್ನು ಪ್ರಾರಂಭಿಸಿ, ಇದರಲ್ಲಿ ಯಶಸ್ಸು ಕಂಡರೆ ಖಂಡಿತವಾಗಿಯೂ ಉದ್ಯಮಗಳು ಬೆಳವಣಿಗೆ ಹೊಂದಲು ಇದು ದಾರಿಯಾಗುತ್ತದೆ ಎಂದು ಹೇಳಿದರು.

ರಫ್ತಿನಲ್ಲಿ ಯಾವುದೇ ಕಾರಣಕ್ಕೂ ನಷ್ಟ ಇರುವುದಿಲ್ಲ. ರಪ್ತುನ್ನು ಪ್ರಾರಂಭ ಮಾಡಿದರೆ ಖಂಡಿತವಾಗಿಯೂ ಆದಾಯವನ್ನು ಗಳಿಸಿ ಬೆಳವಣಿಗೆಯನ್ನು ಹೊಂದಲು ಅವಕಾಶವಿರುತ್ತದೆ. ಯಾಕೆಂದರೆ ಹೊರ ದೇಶಗಳಗೆ ರಪ್ತು ಮಾಡಿದರೆ ಆ ದೇಶದ ಒಂದು ಕರೆನ್ಸಿಯಲ್ಲಿ ಆದಾಯ ದೊರೆಯುತ್ತದೆ. ಹಾಗೆಯೇ ತರಬೇತಿಯಲ್ಲಿ ಆಯಾ ಇಲಾಖೆಯ ಸಂಸ್ಥೆಗಳು ಮಾಹಿತಿಯನ್ನು ನೀಡುತ್ತವೆ ಅದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಕೆ.ಶಿವಲಿಂಗಯ್ಯ ಮಾತನಾಡಿ, ರಫ್ತು ಉತ್ತೇಜನ ಕಾರ್ಯಕ್ರಮದಲ್ಲಿ ಬಹಳ ಆಸಕ್ತಿ ವಹಿಸಿ ಭಾಗವಹಿಸಿ ಆದಾಯ ಗಳಿಕೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ನಮ್ಮ ದೇಶದಿಂದ ಹೆಚ್ಚಿನ ಉತ್ಪನ್ನಗಳು ಮಾರಾಟವಾಗುವಲ್ಲಿ ಉತ್ತೇಜನಗೊಳಿಸಬೇಕು ಎಂದು ಹೇಳಿದರು.

6 ದಿನಗಳ ರಪ್ತು ತರಬೇತಿ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಂಡು ಆಮದು ಮತ್ತು ರಫ್ತಿನ ವಿನಿಮಯದಲ್ಲಿ ದೇಶ ಅಭಿವೃದ್ಧಿಯನ್ನು ಕಾಣಲು ಎಲ್ಲರು ತಮ್ಮ ತಮ್ಮ ಕಾರ್ಯಗಳನ್ನು ನಿರ್ವಹಿಸಬೇಕು ಎಂದು ತಿಳಿಸಿದರು.

ತರಬೇತಿಯಲ್ಲಿ ಯೌವುದೇ ಒತ್ತಡವಿದ್ದರೂ ಅದನ್ನೆಲ್ಲ ಮರೆತು ಕಾರ್ಯಕ್ರಮದಲ್ಲಿ ದೊರಕುವಂತಹ ರಫ್ತು, ವಿದೇಶಿ ಪ್ರಯಾಣದಂತಹ ಹಲವಾರು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.

ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್  ಮಾತನಾಡಿ, ಆಮದು ಕಡಿಮೆ ಆಗಬೇಕು ರಪ್ತು ಹೆಚ್ಚಾಗಬೇಕು ಆಗ ಮಾತ್ರ ನಮ್ಮ ದೇಶದ ಜಿ.ಡಿ.ಪಿ ಹೆಚ್ಚಾಗುತ್ತದೆ. ಎಂಎಸ್ಎoಇಯಲ್ಲಿ ರಫ್ತಿಗೆ ಸಂಬoಧಿಸಿದoತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಹಳ ಉತ್ತೇಜನವನ್ನ ನೀಡುತ್ತಿದೆ ಎಂದರು.

ಮೈಸೂರಿನಲ್ಲಿ 165 ಕ್ಕೂ ಹೆಚ್ಚು ರಫ್ತು ಆದಾಯದ ಕೈಗಾರಿಕೆಗಳಿವೆ ಇದನ್ನು ಹೊರತುಪಡಿಸಿ ಪರೋಕ್ಷ ಮದ್ರಾಸ್, ಬಾಂಬೆಯಿoದ ರಫ್ತು ಮಾಡುವ ಉದ್ಯಮಗಳು ಸಾಕಷ್ಟು ಪ್ರಮಾಣದಲ್ಲಿ ಇದೆ. ರಫ್ತಿನಲ್ಲಿ ಅಗರಬತ್ತಿ, ಹ್ಯಾಂಡಿ-ಕ್ರಾಫ್ಟ್ಸ್, ಮೈಸೂರು ಸ್ಯಾಂಡೆಲ್, ಮೈಸೂರು ಸಿಲ್ಕ್ ಉತ್ಪನ್ನಗಳು ಅತ್ಯಂತ ಹೆಚ್ಚು ಪ್ರಭಾವಶಾಲಿಯಾಗಿವೆ .ಇವು ಪ್ರಪಂಚದ ರಫ್ತು ಉದ್ಯಮವರ್ಗಗಳನ್ನು ಆಕರ್ಷಿಸಿದೆ ಎಂದು ತಿಳಿಸಿದರು.

ಎಂಎಸ್ಎoಇ, ಮೈಸೂರು ಕೈಗಾರಿಕೆಗಳ ಸಂಘಗಳನ್ನು ನಾನು ಪ್ರತಿನಿಧಿಸುತ್ತೇನೆ ಎಂಎಸ್ಎoಇ ಉದ್ಯಮಗಳ ಕುರಿತು ಯಾವುದೇ ಮಾಹಿತಿ ಬೇಕಿದ್ದಲ್ಲಿ ನಮ್ಮನ್ನು ಸಂಪರ್ಕಿಸಬಹುದು ಎಂದು ಹೇಳಿದರು.

ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕೆ.ಬಿ. ಲಿಂಗರಾಜು  ಮಾತನಾಡಿ, ಉತ್ಪಾದನೆ ಮಾಡುವುದು ಮಾತ್ರವಲ್ಲ ರಫ್ತು ಮಾಡಲು ಚಾಣಾಕ್ಷ ತನ ಬೇಕು. ನಾವು ತಯಾರು ಮಾಡುವಂತಹ ರಪ್ತುಗಳ ಗುಣಮಟ್ಟ, ಪಾವಿತ್ರತೆ, ತೂಕ, ಅಳತೆ ಮತ್ತು ಪ್ಯಾಕೇಜಿಂಗ್ ಎಲ್ಲವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದಾಗ ಮಾತ್ರ ನಮ್ಮ ಉತ್ಪನ್ನಗಳು ಜನರನ್ನು ತಲುಪಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೈಸೂರು ಮತ್ತು ವಿಟಿಪಿಸಿ- ರಫ್ತು ಸೌಲಭ್ಯ ಕೇಂದ್ರ, ಜಿಲ್ಲಾ ಪಂಚಾಯತ್ನ ಉಪನಿರ್ದೇಶಕರಾದ ಮೇಘಲಾ ಎಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಅಂಡಮಾನ್‌ ಸಮುದ್ರದಲ್ಲಿ ಮುಳುಗಿದ ವಲಸಿಗರಿದ್ದ ದೋಣಿ: 250 ಜನ ಕಣ್ಮರೆ

ಢಾಕಾ: ಭಾರೀ ಬಿರುಗಾಳಿಯಿಂದ ಅಂಡಮಾನ್‌ ಸಮುದ್ರದಲ್ಲಿ ಜನದಟ್ಟಣೆಯಿಂದ ತುಂಬಿದ್ದ ದೋಣಿ ಮುಳುಗಿ ರೋಹಿಂಗ್ಯಾ ನಿರಾಶ್ರಿತರು ಮತ್ತು ಬಾಂಗ್ಲಾದೇಶಿ ಪ್ರಜೆಗಳು ಸೇರಿದಂತೆ…

2 mins ago

ಹನೂರು| ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ: ರೈತ ಮುಖಂಡರ ಆಕ್ರೋಶ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಮೀಣ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಪ್ಪ ಗ್ರಾಮದ ನೀರಿನ…

16 mins ago

ಹನೂರು| ಕುಡಿಯುವ ನೀರಿಗೆ ಹಾಹಾಕಾರ: ಖಾಲಿ ಬಿಂದಿಗೆ ಹಿಡಿದು ಮಹಿಳೆಯರಿಂದ ಪ್ರತಿಭಟನೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಳೆದ ಹಲವಾರು ದಿನಗಳಿಂದ ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡದೆ…

23 mins ago

ಛತ್ತೀಸ್‌ಗಢ ವಿದ್ಯುತ್‌ ಸ್ಥಾವರ ಸ್ಫೋಟ ದುರಂತ: ಸಾವಿನ ಸಂಖ್ಯೆ 14ಕ್ಕೆ ಏರಿಕೆ

ರಾಯಪುರ: ಛತ್ತೀಸ್‌ಗಢದ ಶಕ್ತಿ ಜಿಲ್ಲೆಯ ವಿದ್ಯುತ್‌ ಸ್ಥಾವರದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಘಟನಾ ಸ್ಥಳದಲ್ಲಿ ರಕ್ಷಣಾ…

1 hour ago

ಓದುಗರ ಪತ್ರ: ನಂಜನಗೂಡು ಕೆ.ಹೆಚ್.ಬಿ. ಕಾಲೋನಿ ರಸ್ತೆ ದುರಸ್ತಿ ಮಾಡಿ

ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ತಾಲ್ಲೂಕು ಮಟ್ಟದಲ್ಲಿ ಕರ್ನಾಟಕ ಗೃಹ ಮಂಡಳಿ(ಕೆಎಚ್‌ಬಿ) ಯಿಂದ ಮನೆಗಳನ್ನು ನಿರ್ಮಾಣ ಮಾಡಿ ಹಂಚಿಕೆ ಮಾಡಿದ್ದು…

4 hours ago

ಓದುಗರ ಪತ್ರ: ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಿ

ರಾಜ್ಯದಲ್ಲಿ, ಸುಮಾರು ಮೂರು ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲಾ ಕಟ್ಟಡಗಳು ಶಿಥಿಲಗೊಂಡು, ಈ ಶಾಲೆಗಳು ಕುಸಿಯುವ ಹಂತ ತಲುಪಿವೆ ಎಂದು,…

4 hours ago