ನಂಜನಗೂಡು : ಬ್ಲೇಡ್ನಿಂದ ಕತ್ತು ಕೂಯ್ದು ಗರ್ಭಿಣಿ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ನಂಜನಗೂಡಿನ ಚಾಮಲಾಪುರದ ಹುಂಡಿಯಲ್ಲಿ ನಡೆದಿದೆ.
ಶೋಭಾ (26) ಮೃತ ದುರ್ದೈವಿ, ಮೃತ ಶೋಭಾಳ ಪತಿ ಮಂಜುನಾಥ್ ಕುಡಿದು ಬಂದು ಹಣಕ್ಕಾಗಿ ಪೀಡಿಸಿದ್ದಾನೆ ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಆರೋಪಿ ಮಂಜುನಾಥ್ ಹರಿತವಾದ ಬ್ಲೇಡ್ ನಿಂದ ತನ್ನ ಪತ್ನಿಯ ಕತ್ತನ್ನು ಸೀಳಿದ್ದಾನೆ. ಕೂಡಲೇ ಶೋಭಾಳನ್ನು ನಂಜನಗೂಡಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆಕೆ ಮೃತಪಟ್ಟಿದ್ದಾರೆ.
8 ವರ್ಷಗಳ ಹಿಂದೆ ಶೋಭ ಹಾಗೂ ಮಂಜುನಾಥ್ ಇಬ್ಬರೂ ಕೂಡ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಐದು ವರ್ಷದ ಗಂಡು ಮಗುವಿದೆ. ಈಗ ಎರಡನೇ ಮಗುವಿನ ನಿರೀಕ್ಷಕೆಯಲ್ಲಿದ್ದರು,ಶೋಭಾ ತುಂಬು ಗರ್ಭಿಣಿಯಾದ ಕಾರಣ ತವರು ಮನೆಗೆ ಹೋಗಿದ್ದರು. ಈ ವೇಳೆ ತವರು ಮನೆಯಿಂದ ಹಣ ತರುವಂತೆ ಆರೋಪಿ ಆಗಾಗ ಹೆಂಡತಿ ಜೊತೆ ಜಗಳ ಮಾಡುತ್ತಿದ್ದ. ಅಲ್ಲದೇ ಹೆರಿಗೆಯ ಆರೈಕೆಗಾಗಿ ತವರು ಮನೆಗೆ ಬಂದಿದ್ದ ಪತ್ನಿ ಮನೆಗೆ ಬರುತ್ತಿಲ್ಲವೆಂದು ಜಗಳ ತೆಗೆದು ಬ್ಲೇಡ್ನಿಂದ ಆಕೆಯ ಕುತ್ತಿಗೆ ಕೂಯ್ದಿದ್ದಾನೆ. ಎಂದು ತಿಳಿದುಬಂದಿದೆ.
ಈ ಸಂಬಂಧ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಆರೋಪಿ ಮಂಜುನಾಥ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.