ಹುಣಸೂರು : ತಂಬಾಕು ಬೆಳದ ರೈತರಿಗೆ ಉತ್ತಮ ಬೆಲೆ ಸಿಗುವುವವರೆಗೂ ಅವರೊಂದಿಗೆ ನಾ ಸದಾ ಇರುತ್ತೇನೆ ಎಂದು ಮೈಸೂರು ಮತ್ತು ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಭರವಸೆ ನೀಡಿದರು.
ತಾಲೂಕಿನ ಕಟ್ಟೆಮಳಲವಾಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಇ-ಬೆಡ್ ಮೂಲಕ ತಂಬಾಕು ಖರೀದಿಗೆ ಚಾಲನೆ ನೀಡಿ ಮಾತನಾಡಿ ಅವರು, ಕಳದ ವರ್ಷ ಆರಂಭಿಕ ಬೆಲೆ 290 ರು ಇತ್ತು ಈ ಭಾರಿ 320 ಬೆಲೆ ಸಿಗುವ ಮೂಲಕ ಆಶದಾಯಕವಾಗಿದ್ದು, ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಬೆಲೆ ಕೊಡಿಸುವ ನಿಟ್ಟಿನಲ್ಲಿ ನಿಮ್ಮೊಂದಿಗೆ ಭಾಗಿಯಾಗುವೆ ಎಂದರು.
ಇದನ್ನೂ ಓದಿ: ಓದುಗರ ಪತ್ರ: ನ್ಯಾಯಾಲಯದ ಘನತೆ ಕಾಪಾಡಿ
ಆಂಧ್ರ, ಗುಂಟೂರಿನಲ್ಲಿ ಅಷ್ಟು ಬೆಲೆ ಇದೆ, ಇಷ್ಟು ಇದೆ ಎಂದು ಹೋಲಿಕೆ ಮಾಡಬೇಡಿ. ಅವರ ತಂಬಾಕಿಗೂ ನಮ್ಮ ತಂಬಾಕಿಗೂ ವ್ಯತ್ಯಾಸವಿದೆ. ನಮ್ಮ ತಂಬಾಕು ಕೂಡ ಉತ್ಕೃಷ್ಟವಾಗಿದ್ದು, ಸ್ವದೇಶಿ ವ್ಯವಸ್ಥೆಗೆ ನಾವು ಒತ್ತು ನೀಡಬೇಕಿದೆ. ನಮ್ಮ ತಂಬಾಕು ಖರೀದಿಗೆ ಐಟಿಸಿ ಸೇರಿದಂತೆ ಸುಮಾರು ಮೂವತ್ತು ಕಂಪನಿಗಳು ಬಂದಿದ್ದು ಗುಣಮಟ್ಟದ ನಮ್ಮ ತಂಬಾಕಿಗೆ ಉತ್ತಮ ಬೆಲೆ ಸಿಗಲಿದೆ ಎಂದರು.
ತಂಬಾಕು ಬೆಳೆಗಾರರಿಗೆ ತಲೆ ನೋವಾಗಿರುವ ಅಧಿಕೃತ ಮತ್ತು ಅನಧಿಕೃತ ರೈರಿಗೆ ಮುಕ್ತಿ ಕೊಡಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಜತೆ ಚೆರ್ಚಿಸಿ ಅಧಿಕೃತ ತಂಬಾಕು ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸಲು ನನ್ನ ಶತಪ್ರಯತ್ನ ಮಾಡಲಾಗುವುದು. ಅದೇ ರೀತಿ ರೈತರ ನಿಲುವೇ ನನ್ನ ನಿಲುವಾಗಿದ್ದು, ತಂಬಾಕು ಬೆಳೆಗಾರರಿಗೆ ಅನುಕೂಲವಾಗುವಂತೆ ಹೋರಾಡುವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ತಂಬಾಕು ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷ ಉಂಡವಾಡಿ ಸಿ. ಚಂದ್ರೇಗೌಡ, ಅಧ್ಯಕ್ಷ. ಮೋದೂರು ಶಿವಣ್ಣ, ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ಬಿ.ಎನ್. ನಾರಾಜಪ್ಪ, ರಮೇಶ್ ಕುಮಾರ್, ನಗರಸಭೆ ಸದಸ್ಯ ಗಣೇಶ್ ಕುಮಾರಸ್ವಾಮಿ, ನಾಗರಾಜ ಮಲ್ಲಾಡಿ, ಸತೀಶ್, ಚಂದ್ರಶೇಖರ್, ಸೂಪಡೆಂಟ್ಗಳಾದ ಸಿದ್ದರಾಜು, ಮೀನಾ, ಪ್ರಭಾಕರ್ ಇದ್ದರು
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…
ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…
ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…
ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…