ಮೈಸೂರು

ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್‌ ವೇ ಟೋಲ್‌ ದರವೆಷ್ಟು?

ಬೆಂಗಳೂರು: ರಾಜಧಾನಿ ಬೆಂಗಳೂರು ಹಾಗೂ ಸಾಂಸ್ಕೃತಿಕ ನಗರಿ ಮೈಸೂರು ನಡುವೆ ಸಂಪರ್ಕ ಕಲ್ಪಿಸುವ ಬಹುನಿರೀಕ್ಷೀತ ದಶಪಥ ಹೆದ್ದಾರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ದರವನ್ನು ನಿಗಧಿಪಡಿಸಿದೆ.
ಸೋಮವಾರದಿಂದಲೇ ಟೋಲ್ ದರ ಅನ್ವಯವಾಗಲಿದ್ದು, ಈವರೆಗೂ ಉಚಿತವಾಗಿ ಪ್ರಯಾಣಿಸಿದ್ದ ವಾಹನ ಮಾಲೀಕರು ಇನ್ನು ಮುಂದೆ ಟೋಲ್ ‌ಕಟ್ಡಲೇಬೇಕು. ಬೆಂಗಳೂರು-ನಿಡಘಟ್ಟ ನಡುವಿನ ಶೇಷಗಿರಿಹಳ್ಳಿಯ ಟೋಲ್ ಕಾರ್ಯಾಚರಣೆ ಆರಂಭಿಸಲಾಗಿದೆ.
ದಶಪಥ ಹೆದ್ದಾರಿಯ ಮೊದಲ ಹಂತದ 55.63 ಕಿ.ಮೀ ರಸ್ತೆಗೆ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಈ ಕುರಿತು ಕೇಂದ್ರ ಹೆದ್ದಾರಿ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ. ಮತ್ತೊಂದು ಟೋಲ್‌ ಮಂಡ್ಯ ಬಳಿ ಇದ್ದು, ಅದರ ಕಾರ್ಯಾಚರಣೆ ಸದಸ್ಯಕ್ಕೆ ಆರಂಭಿಸಿಲ್ಲ.
ಪ್ರಾರಂಭದಲ್ಲಿ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ಮೊದಲ ಹಂತದ 55.63 ಕಿ.ಮೀ ರಸ್ತೆಗೆ ಶುಲ್ಕ ಪಡೆಯಲಾಗುತ್ತದೆ ಎಂದು ಕೇಂದ್ರ ಹೆದ್ದಾರಿ ಪ್ರಾಧಿಕಾರದಿಂದ ಪ್ರಕಟಣೆ ನೀಡಿದೆ. ವಿವಿಧ ಮಾದರಿಯ ವಾಹನಗಳಿಗೆ ಪ್ರತ್ಯೇಕ ದರವನ್ನು ನಿಗದಿ ಪಡಿಸಲಾಗಿದೆ. ಸೇವಾ (ಸರ್ವೀಸ್) ರಸ್ತೆ ಹೊರತು ಪಡಿಸಿ, ಉಳಿದ ಆರು‌ಪಥಗಳಿಗೆ ಶುಲ್ಕ ಅನ್ವಯವಾಗಲಿದೆ.

ಹೆದ್ದಾರಿಯ ವಿಶೇಷತೆಗಳು: ದಶಪಥ ಹೆದ್ದಾರಿಯಲ್ಲಿ ಮೊದಲ ನಾಲ್ಕು ಪಥದ ರಸ್ತೆ ಸುಮಾರು 25 ರಿಂದ 30 ಮೀಟರ್ ಅಗಲ ಇದ್ದು, ಇದನ್ನ 60 ಮೀಟರ್​ಗೆ ಹಾಗೂ ಎಲಿವೇಟೆಡ್ ಕಾರಿಡಾರ್ ಬಳಿ 45 ಮೀಟರ್​ಗೆ ವಿಸ್ತರಣೆ ಮಾಡಲಾಗುತ್ತಿದೆ. ಬೆಂಗಳೂರು – ಮೈಸೂರು ನಡುವೆ ಸದ್ಯ 135 ಕಿಲೋಮೀಟರ್ ಅಂತರವಿದ್ದು, ಇದರಲ್ಲಿ ಬೆಂಗಳೂರು ಹೊರವಲಯದ ನೈಸ್ ಜಂಕ್ಷನ್ ಬಳಿಯ ಪಂಚಮುಖಿ ದೇವಸ್ಥಾನದಿಂದ ರಸ್ತೆ ವಿಸ್ತರಣೆ ಕಾರ್ಯ ಆರಂಭಗೊಂಡು, ಮೈಸೂರಿನ ಹೊರವಲಯದಲ್ಲಿ ಮುಕ್ತಾಯಗೊಳ್ಳಲಿದೆ.
ಆರು ಪಥದ ಎಕ್ಸ್​​​ಪ್ರೆಸ್​​​​ ವೇ ಉದ್ದಕ್ಕೂ ಎರಡು ಬದಿಯಲ್ಲಿ 6 ಅಡಿ ಎತ್ತರದಲ್ಲಿ ಚೈನ್ ಲಿಂಕ್ ಬೇಲಿ ನಿರ್ಮಾಣವಾಗಲಿದ್ದು, ಬಿಡದಿ ರಾಮನಗರ-ಚನ್ನಪಟ್ಟಣ ಮದ್ದೂರು ಮಂಡ್ಯ ಹಾಗೂ ಶ್ರೀರಂಗಪಟ್ಟಣದಲ್ಲಿ ಮಾತ್ರ ಪ್ರವೇಶ ಹಾಗೂ ನಿರ್ಗಮನ ದ್ವಾರ ಇರುತ್ತದೆ. ಉಳಿದ ಕಡೆಗಳಲ್ಲಿ ಸಂಪೂರ್ಣವಾಗಿ ಚೈನ್ ಲಿಂಕ್ ಇರಲಿದೆ. ಇದರಿಂದ ಜನ – ಜಾನುವಾರುಗಳು ಪ್ರವೇಶಿಸಲು, ಮಧ್ಯದಲ್ಲಿ ವಾಹನಗಳು ಬೇರೆಡೆ ಹೋಗಲು ಅವಕಾಶ

ಒಟ್ಟು ವೆಚ್ಚ: 8,350 ಕೋಟಿ ರೂಪಾಯಿ ವೆಚ್ಚದ ದಶಪಥ ರಸ್ತೆ ಯೋಜನೆ ಮೂಲಕ ಬೆಂಗಳೂರು-ಮೈಸೂರು ಮಧ್ಯೆ ಆರ್ಥಿಕ ಚಟುವಟಿಕೆಗಳು ಬಲಗೊಳ್ಳಲಿವೆ .117 ಕಿ.ಮೀ ಉದ್ದದ ಬೆಂಗಳೂರು- ಮೈಸೂರು ದಶಪಥ ರಸ್ತೆಯನ್ನು 8,350 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.ಈ ಎಕ್ಸ್ ಪ್ರೆಸ್ ವೇ ಒಂಬತ್ತು ದೊಡ್ಡ ಸೇತುವೆಗಳು, ನಲವತ್ತೆರಡು ಸಣ್ಣ ಸೇತುವೆಗಳನ್ನು ಒಳಗೊಂಡಿದ್ದು, ಎಂಟು ಕಿ.ಮೀ ಉದ್ದದ ಎಲಿವೇಟೆಡ್ ಕಾರಿಡಾರ್, ಅರವತ್ನಾಲ್ಕು ಅಂಡರ್ ಪಾಸ್ ಗಳು 11 ಓವರ್ ಪಾಸು, ರೈಲ್ವೆ ಮೇಲ್ಸುತುವೆಗಳು ಮತ್ತು ಐದು ಬೈ ಪಾಸ್ ಗಳನ್ನು ಒಳಗೊಂಡಿದ್ದು, ಸಂಚಾರ ದಟ್ಟಣೆ ಮತ್ತು ಮಾಲಿನ್ಯವನ್ನು ಗಮನಾರ್ಹ ರೀತಿಯಲ್ಲಿ ಕಡಿಮೆ ಮಾಡಲಿದೆ.

ಮಾಚ್೯ 11 ರಂದು ಉದ್ಘಾಟನೆ: ನೂತನ ಎಕ್ಸ್‌ಪ್ರೆಸ್ ವೇ ಯನ್ನು ಮಾರ್ಚ್‌ 11 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಸೇವೆಗೆ
ಲೋಕರ್ಪಾಣೆ ಮಾಡಲಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಈ ಬಾರಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕು ಎಂದು ಯೋಜ‌ನೆ ಹಾಕಿರುವ‌
ಬಿಜೆಪಿ ಈ ಹೆದ್ದಾರಿಯನ್ನು ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕಮಲ ಅರಳುಸುವ ಯೋಜನೆ ಹಾಕಿಕೊಳ್ಳಲಾಗಿದೆ. ಮಾಚ್೯ 11 ರಂದು ಲೋಕಾರ್ಪಣೆ ಮಾಡಲಿರುವ ಮೋದಿ ಅವರು, ಬೆಂಗಳೂರಿನ ಬಿಡದಿಯಿಂದ – ಮದ್ದೂರಿನ ನಿಡಗಟ್ಟದವರೆಗೆ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ.ಹೆದ್ದಾರಿಯಲ್ಲೇ ಹ್ಯಾಲಿಪ್ಯಾಡ್ ನಿರ್ಮಿಸಲಾಗಿದೆ.

 

ಟೋಲ್ ದರ ಎಷ್ಟಿದೆ?
ಕಾರು, ಜೀಪು, ವ್ಯಾನುಏಕಮುಖ ಸಂಚಾರಕ್ಕೆ 135 ರೂ. ಅದೇ ದಿನ ಮರು ಸಂಚಾರಕ್ಕೆ 205 ರೂ. ಸ್ಥಳೀಯ ವಾಹನಗಳಿಗೆ 70 ರೂ. ಒಂದು ತಿಂಗಳ 50 ಏಕ‌ಮುಖ ಸಂಚಾರದ ಪಾಸ್‌ಗೆ 4,525 ರೂ.
ಲಘು ವಾಣಿಜ್ಯ ವಾಹನಗಳು/ಲಘು ಸರಕು ವಾಹನಗಳು/ಮಿನಿ ಬಸ್ಏಕಮುಖ ಸಂಚಾರಕ್ಕೆ 220ರೂ. ಅದೇ ದಿನ ಮರು ಸಂಚಾರಕ್ಕೆ 320 ರೂ. ಸ್ಥಳೀಯ ವಾಹನಗಳಿಗೆ 110 ರೂ., ಒಂದು ತಿಂಗಳ 50 ಏಕ‌ಮುಖ ಸಂಚಾರದ ಪಾಸ್‌ಗೆ 7315 ರೂ.
ಬಸ್ ಅಥವಾ ಟ್ರಕ್(ಎರಡು ಆಕ್ಸೆಲ್)ಏಕಮುಖ ಸಂಚಾರಕ್ಕೆ 460ರೂ. ಅದೇ ದಿನ ಮರು ಸಂಚಾರಕ್ಕೆ 690 ರೂ. ಸ್ಥಳೀಯ ವಾಹನಗಳಿಗೆ 230ರೂ., ಒಂದು ತಿಂಗಳ 50 ಏಕ‌ಮುಖ ಸಂಚಾರದ ಪಾಸ್‌ಗೆ 15,325 ರೂ.
ವಾಣಿಜ್ಯ ವಾಹನಗಳು (ಮೂರು ಆಲ್ಸೆಲ್)ಏಕಮುಖ ಸಂಚಾರಕ್ಕೆ 500 ರೂ. ಅದೇ ದಿನ ಮರು ಸಂಚಾರಕ್ಕೆ 750 ರೂ. ಸ್ಥಳೀಯ ವಾಹನಗಳಿಗೆ 250ರೂ. ಒಂದು ತಿಂಗಳ 50 ಏಕ‌ಮುಖ ಸಂಚಾರದ ಪಾಸ್‌ಗೆ 16,715 ರೂ.
ಭಾರಿ ನಿರ್ಮಾಣ ಯಂತ್ರ, ಭೂ ಅಗೆತ ಸಾಧನ್, ಬಹು ಆಕ್ಸೆಲ್ ವಾಹನ (6ರಿಂದ 8 ಆಕ್ಸೆಲ್)ಏಕಮುಖ ಸಂಚಾರಕ್ಕೆ 720ರೂ. ಅದೇ ದಿನ ಮರು ಸಂಚಾರಕ್ಕೆ 1080 ರೂ. ಸ್ಥಳೀಯ ವಾಹನಗಳಿಗೆ 360ರೂ, ಒಂದು ತಿಂಗಳ 50 ಏಕ‌ಮುಖ ಸಂಚಾರದ ಪಾಸ್‌ಗೆ 24,030 ರೂ.
ಅತೀ ಗಾತ್ರದ ವಾಹನಗಳು (7ರಿಂದ ಹೆಚ್ಚಿನ ಆಕ್ಸೆಲ್)ಏಕಮುಖ ಸಂಚಾರಕ್ಕೆ 880ರೂ. ಅದೇ ದಿನ ಮರು ಸಂಚಾರಕ್ಕೆ 1315ರೂ. ಸ್ಥಳೀಯ ವಾಹನಗಳಿಗೆ 440 ರೂ., ಒಂದು ತಿಂಗಳ 50 ಏಕ‌ಮುಖ ಸಂಚಾರದ ಪಾಸ್‌ಗೆ 29,255 ರೂ.
.

ಅಭಿವೃದ್ಧಿಗೆ ದಿಕ್ಸೂಚಿ
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಪೂರ್ಣಗೊಂಡ ಬಳಿಕ ಮೈಸೂರಿನ ಅಭಿವೃದ್ಧಿಗೆ ವೇಗ ಸಿಗಲಿದೆ ಎಂದು ಹೇಳಲಾಗುತ್ತಿದೆ. ಹೋಟೆಲ್​, ಐಟಿ, ಪ್ರವಾಸೋದ್ಯಮಗಳ ಬೆಳವಣಿಗೆ ನಿರೀಕ್ಷೆ ಇದೆ.
ಬೃಹತ್ ಕೈಗಾರಿಕೆಗಳು ಸಾಂಸ್ಕೃತಿಕ ನಗರಿಗೆ ಬರಲು ಈ ದಶಪಥ ಹೆದ್ದಾರಿಯು ರತ್ನಗಂಬಳಿ ಹಾಸಲಿದೆ. ಈ ದಶಪಥ ಹೆದ್ದಾರಿಯು ಮೈಸೂರನ್ನು ಮತ್ತಷ್ಟು ಅಭಿವೃದ್ಧಿಯ ಪಥದತ್ತ ಕರೆದೊಯ್ಯಲಿದ್ದು ಸುಗಮ ಸಂಚಾರದ ವ್ಯವಸ್ಥೆಯಿಂದ ಮೈಸೂರು ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡಲಿದೆ. ಅದಷ್ಟೇ ಅಲ್ಲದೆ ಕೈಗಾರಿಕೋದ್ಯಮ, ರಿಯಲ್ ಎಸ್ಟೇಟ್ ಉದ್ಯಮ, ಐಟಿ ಉದ್ಯಮ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಹೆಚ್ಚಾಗಲಿದ್ದು ಬೃಹತ್ ಕೈಗಾರಿಕೆಗಳು ಕೂಡ ಸಾಂಸ್ಕೃತಿಕ ನಗರಿಯತ್ತ ಬರಲು ರತ್ನಗಂಬಳಿಯನ್ನ ದಶಪಥ ಹೆದ್ದಾರಿ ಹಾಸಲಿದೆ. ಕಾರ್ಮಿಕರು ಹಾಗೂ ಯುವ ಸಮೂಹ ಬೇಕು. ಬೆಂಗಳೂರು ಪಕ್ಕದಲ್ಲಿರುವ ಎರಡನೇ ಕೈಗಾರಿಕಾ ಹಬ್ ಆಗಿರುವ ಮೈಸೂರು. ಸಾರಿಗೆ ಸಮಸ್ಯೆಯಿಂದ ಹಿಂದೆ ಬಿದ್ದಿತ್ತು. ಎಕ್ಸ್ಪ್ರೆಸ್ ಹೈವೇ ಇದನ್ನು ಮರೆಮಾಚಿ ಹೊಸ ಉತ್ಸಾಹ ನೀಡಿ ಮೈಸೂರಿನ ಭವಿಷ್ಯವನ್ನು ಬದಲಿಸಲಿದೆ.

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕಾಮಗಾರಿದಶಪಥ ರಸ್ತೆಯಲ್ಲಿ 6 ಪಥದ ಎಕ್ಸ್​​​ಪ್ರೆಸ್​​​​ ಹೈವೇ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ ರಸ್ತೆಯಲ್ಲಿ 6 ಪಥದ ಎಕ್ಸ್​​​​ಪ್ರೆಸ್​​ ಹೈವೇ ಇರಲಿದ್ದು, ಆ ಆರರಲ್ಲಿ ಮೂರು ಬೆಂಗಳೂರಿನ ಕಡೆ ಮೂರು ಮೈಸೂರಿನ ಕಡೆ ಇರಲಿದೆ. ಇನ್ನೆರಡು ಕಡೆ ಸರ್ವಿಸ್ ರಸ್ತೆ ಇರಲಿದೆ‌. ಉದ್ಯಮ, ಐಟಿ ಕ್ಷೇತ್ರ ಬೆಳೆಯಲು ಶುರುವಾದಂತೆ ಅಂತಾರಾಷ್ಟ್ರೀಯ ಮಟ್ಟದ ವಿಮಾನನಿಲ್ದಾಣ ಕೂಡ ಅಗತ್ಯವಾಗುತ್ತದೆ. ರೈಲ್ವೆ ಇಲಾಖೆಯ ಇನ್ಲಾಂಡ್ ಕಂಟೇನರ್ ಡಿಪೋ ಕೂಡ ತಲೆಯೆತ್ತಲಿದೆ. ಆಗ ಮೈಸೂರನ್ನು ಹೊರಜಗತ್ತು ನೋಡುವ ದೃಷ್ಟಿಕೋನವೇ ಬದಲಾಗಲಿದೆ. ಉದ್ಯೋಗ ಸೃಷ್ಟಿಗೆ ವಿಫುಲ ಅವಕಾಶ ದೊರೆಯಲಿದ್ದು, ಈ ಭಾಗದ ಬಹುತೇಕ ಯುವಜನರು ಉದ್ಯೋಗಕ್ಕೆ ಬೇರೆ ಕಡೆ ಹೋಗುವುದು ತಪ್ಪಲಿದೆ ಕುಟುಂಬಗಳ ವರಮಾನವು ಕೂಡ ತೀವ್ರಗತಿಯಲ್ಲಿ ಹೆಚ್ಚಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
ಸಾಗಣೆ ಸಮಸ್ಯೆಯಿಂದಾಗಿ ಮೈಸೂರಿನ ಉದ್ಯಮ ಉತ್ಪಾದನೆಯ ಮೇಲೆ ಹೊಡೆತ ಬಿದ್ದಿತ್ತು. ಈ ಯೋಜನೆಯಿಂದ ಸನ್ನಿವೇಶ ಬದಲಾಗಲಿದೆ. ರಾಜಧಾನಿ ಬೆಂಗಳೂರು, ಚೆನ್ನೈ ಸೇರಿದಂತೆ ಪ್ರಮುಖ ನಗರಗಳಿಗೆ ಸರಕು ಸಾಗಣೆ ಸರಾಗವಾಗಿ ಆಗಲಿದೆ. ಪ್ರಯಾಣ ದೂರವು ಕೂಡ ತಗಲಿದ್ದು, ಅದರಿಂದ ಆರ್ಥಿಕವಾಗಿ ಉಳಿತಾಯವಾಗಲಿದೆ. ಉದ್ಯಮಿಗಳು ಸ್ವಂತ ವಾಹನದಲ್ಲಿ ಹೋಗುವುದರಿಂದ ಅವರಿಗೆ ಇನ್ನೂ ಹೆಚ್ಚು ಅನುಕೂಲವಾಗಲಿದೆ.
ನಗರಕ್ಕೆ ಬರುವ ಉದ್ಯಮಿಗಳು ಪ್ರವಾಸಿಗರ ಸಂಖ್ಯೆ ಈ ದಶಪಥ ಹೆದ್ದಾರಿಯಿಂದ ಹೆಚ್ಚಾಗಲಿದ್ದು, ಇಲ್ಲಿ ವಾಸಕ್ಕಾಗಿ ಬರುವವರು ಕೂಡ ಹೆಚ್ಚಾಗುವುದರಿಂದ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಲಿದೆ. ಹೋಟೆಲ್ ಉದ್ಯಮ ಕೂಡ ಬೆಳೆಯಲಿದೆ, ತಡರಾತ್ರಿ ಊಟಕ್ಕಾಗಿ ಪರವಾನಗಿ ಪಡೆದುಬರುವ ಪ್ರಯಾಣಿಕರಿಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಿದರೆ ಕಲಾವಿದರಿಗೂ ಅನುಕೂಲವಾಗಲಿದೆ. ಪ್ರವಾಸಿಗರೂ ಕೂಡ ಖುಷಿಪಡುತ್ತಾರೆ. ವಾಹನ ಸಂಚಾರಕ್ಕೆ ಸಮಯ ಉಳಿತಾಯವಾಗಲಿದೆ.

ದ್ವಿಚಕ್ರ – ತ್ರಿಚಕ್ರ ವಾಹನಗಳಿಗೆ ಪ್ರವೇಶ ಬಂದ್

ಈ ವರೆಗೂ ಹೊಸ ಎಕ್ಸ್‌ಪ್ರೆಸ್ ವೇ ನಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇನ್ನು ಮುಂದೆ ಅಂದರೆ ಸೋಮವಾರದಿಂದಲೇ ಈ‌ ರಸ್ತೆಯಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ( ಆಟೋ) ವಾಹನಗಳ ‌ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಬಂಧ ಹಾಕಿದೆ. ಹೆದ್ದಾರಿಯಲ್ಲಿ ಸಂಭಿವಿಸಬಹುದಾದ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

ಬಸ್ ದರ ಯಥಾಸ್ಥಿತಿ

ನೂತನ ಹೆದ್ದಾರಿಯಲ್ಲಿ ಬೆಂಗಳೂರು ಹಾಗೂ ಮೈಸೂರು ನಡುವೆ ಸಂಚರಿಸುವ ರಾಜ್ಯ ರಸ್ತೆ ಸಾರಿಗೆಯ ಬಸ್ ದರದಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಇರುವುದಿಲ್ಲ. ವೋಲ್ವೋ, ಕೆಎಸ್ ಆರ್ ಟಿಸಿ , ರಾಜಹಂಸ ಸೇರಿದಂತೆ ಎಲ್ಲಾ ಮಾದರಿಯ ಬಸ್ ದರ ಯಥಾಸ್ಥಿತಿಯಲ್ಲೇ ಇರಲಿದೆ ಎಂದು ಸಾರಿಗೆ ನಿಗಮದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ನೂತನ ದರ ಪರಿಷ್ಕರಣೆಯಾಗುವವರೆಗೂ ಪ್ರಯಾಣಿಕರು ಹಳೆ ದರ ನೀಡಿ ಸಂಚರಿಸಬಹುದು. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

andolanait

Recent Posts

ಕುವೈತ್‌ ಪ್ರವಾಸದಲ್ಲಿ ಪ್ರಧಾನಿ ಮೋದಿ: ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ

ಕುವೈತ್‌: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕುವೈತ್‌ ಪ್ರವಾಸ ಕೈಗೊಂಡಿದ್ದು, ಅಲ್ಲಿನ ರಾಜ ಶೇಕ್‌ ಮಿಶಾಲ್‌…

5 mins ago

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಸಮನ್ಸ್‌ ನೀಡಿದ ರಾಯ್‌ ಬರೇಲಿ ನ್ಯಾಯಾಲಯ

ಉತ್ತರ ಪ್ರದೇಶ: ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಶ್ರೀಮಂತರು ಹಾಗೂ ಬಡವರ ನಡುವಿನ ಆರ್ಥಿಕತೆ, ಅಸಮಾನ ಆಸ್ತಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ…

24 mins ago

ರಾಜ್ಯದಲ್ಲಿ ಚಳಿಯ ತೀವ್ರತೆ ಹೆಚ್ಚು: ಮಕ್ಕಳನ್ನು ಕಾಡುತ್ತಿರುವ ಕಾಲು ಬಾಯಿ ರೋಗ

ಬೆಂಗಳೂರು: ಪ್ರಸಕ್ತ ವರ್ಷದಲ್ಲಿ ಚಳಿ ತುಂಬಾ ಜಾಸ್ತಿಯಿದ್ದು, ಶೀತಗಾಳಿ ಹೆಚ್ಚಾಗಲು ಕರಾವಳಿ ತೀರ ಪ್ರದೇಶದಲ್ಲಾದ ವಾತಾವರಣ ಬದಲಾವಣೆ ಕಾರಣ ಎಂದು…

34 mins ago

ವಿವಾದದ ನಡುವೆಯೂ ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳದನಲ್ಲಿ ಬಾಡೂಟ ವಿತರಣೆ

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ವಿತರಣೆ ಮಾಡಿರುವ ವಿಚಾರ ಭಾರೀ ವಿವಾದಕ್ಕೆ…

45 mins ago

ಕುವೈತ್‌ ಪ್ರವಾಸ: ಪ್ರಧಾನಿ ಮೋದಿಗೆ 20ನೇ ಅಂತರಾಷ್ಟ್ರೀಯ ಗೌರವ

ಕುವೈತ್‌/ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ಕುವೈತ್‌ ಪ್ರವಾಸದಲ್ಲಿದ್ದು, ಇಲ್ಲಿನ ರಾಜ ಶೇಕ್‌ ಮಿಶಾಲ್‌ ಅಲ್‌…

1 hour ago

ಮೈಸೂರಿನಲ್ಲಿ ನಿಮ್ಹಾನ್ಸ್‌ ಘಟಕ ಸ್ಥಾಪನೆಗೆ ಕ್ರಮ ಎಂದ ಸಿಎಂ ಸಿದ್ದರಾಮಯ್ಯ

ಕಲಬುರ್ಗಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಒತ್ತು ನೀಡುತ್ತಿದ್ದು, 371 ಜೆ ಜಾರಿಯಾದ ದಶಮಾನೋತ್ಸವದ ಪ್ರಯುಕ್ತ 371 ಹಾಸಿಗೆಗಳ…

1 hour ago