ಹುಣಸೂರು : ರಾಜ್ಯದ ಎರಡನೇ ದೊಡ್ಡ ಆಲದ ಮರವನ್ನು ಸಂರಕ್ಷಿಸಿ, ಆಮೂಲಕ ಜಾನಪದ ಜಾತ್ರೆ ಆಯೋಜಿಸಿರುವ ಗ್ರಾಮಸ್ಥರು ಇನ್ಮುಂದೆ ಈ ಸ್ಥಳದಲ್ಲಿ ಹುಣ್ಣಿಮೆ ಬೆಳದಿಂಗಳಲ್ಲಿ ಕವಿಗೋಷ್ಠಿ ನಡೆಸಿ ಎಂದು ಮಾಜಿ ಶಾಸಕ ಹೆಚ್.ಪಿ ಮಂಜುನಾಥ್ ಸಲಹೆ ನೀಡಿದರು.
ತಾಲೂಕಿನ ಕುಡಿನೀರು ಮುದ್ದನಹಳ್ಳಿಯಲ್ಲಿರುವ ಇತಿಹಾಸ ಪ್ರಸಿದ್ದ ರಾಜ್ಯದ ಎರಡನೇ ದೊಡ್ಡ ಆಲದ ಮರದ ಪ್ರಪ್ರಥಮ ಜಾನಪದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೊಡ್ಡ ಆಲದ ಮರದ ಸಂರಕ್ಷಣೆ ಆಶಯ ಒಳ್ಳೆಯದೆ, ಇದರ ಅಭಿವೃದ್ದಿಗೆ ಸಹಕಾರ ನೀಡುವೆ. ಈ ಐತಿಹಾಸಿಕ ಮರದ ಬಗ್ಗೆ ಹೆಚ್ಚು ಪ್ರಚುರಪಡಿಸಬೇಕು. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಹುಣ್ಣಿಮೆಯ ಬೆಳದಿಂಗಳಿನಲ್ಲಿ ವಿದ್ವಾಂಸರು, ಇತಿಹಾಸಕಾರರನ್ನು ಕರೆಸಿ ಕವಿಗೋಷ್ಟಿ ನಡೆಸಿ, ಪ್ರಕೃತಿ ಸಂಬಂಧಿತ ಕಾರ್ಯಕ್ರಮ ಆಯೋಜಿಸಿ. ಈ ಕಾರ್ಯಕ್ರಮಕ್ಕೆ ತಾವು ಸಂಪೂರ್ಣ ಸಹಕಾರ ನೀಡುವುದಾಗಿ ಪ್ರಕಟಿಸಿದರು.
ದಾವಣಗೆರೆ : ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಹಣಾಹಣಿಗೆ ಸಾಕ್ಷಿಯಾಗಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ…
ಬೆಂಗಳೂರು : ರಾಜ್ಯದ ಗಿರಿಶ್ರೇಣಿಗಳಿಗೆ ಬರುವ ಚಾರಣಿಗರ ಸುರಕ್ಷತೆಯ ದೃಷ್ಟಿಯಿಂದ ದೇಶಕ್ಕೆ ಮಾದರಿಯಾಗುವಂತಹ ಪ್ರಮಾಣಿತ ಮಾನದಂಡ (ಎಸ್.ಓ.ಪಿ.) ರೂಪಿಸುವಂತೆ ಅರಣ್ಯ,…
ಕಲಬುರಗಿ : ದೇಶದಲ್ಲಿ ಅಡುಗೆ ಅನಿಲ, ಪೆಟ್ರೊಲ್ ಡಿಸೇಲ್ ಕೊರತೆಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್…
ಮೈಸೂರು : ಮೈಸೂರು-ಜೋಧ್‌ಪುರ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭವಾಗಿರುವುದಕ್ಕೆ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ…
೨೦೨೫ರ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ೧೮ ವರ್ಷಗಳ ನಂತರ ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಜಯಶೀಲರಾಗಿ…
ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಯುದ್ಧ ನಡೆಸುತ್ತಿರುವುದರಿಂದ ಕೊಲ್ಲಿ ರಾಷ್ಟ್ರಗಳಿಂದ ಹಾರ್ಮುಜ್ ಜಲಸಂಧಿಯ ಮೂಲಕ ಪೂರೈಕೆಯಾಗುತ್ತಿದ್ದ ಕಚ್ಚಾ ತೈಲ…