ಮೈಸೂರು : ನಮ್ಮ ವಂಶದ ಹಿರಿಯರ ರುಣ ತೀರಿಸಲಿಕ್ಕೆ ನಾನನಗೆ ಅವಕಾಶ ನೀಡಿ ಎಂದು ಕೇಳುತ್ತಿಲ್ಲ. ನನ್ನ ರುಣವನ್ನು ತೀರಿಸಲಿಕ್ಕೆ ಒಂದು ಅವಕಾಶ ನೀಡಿ ಎಂದು ಕೇಳುತ್ತಿದ್ದೇನೆ ಎಂದು ಮೈಸೂರು-ಕೊಡಗು ಮೈತ್ರಿ ಅಭ್ಯರ್ಥಿ ಯದುವೀರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದ ವಸ್ತುಪ್ರದರ್ಶನ ಮೈದಾನದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಮೈತ್ರಿ ಸಮಾವೇಶದಲ್ಲಿ ಮಾತನಾಡಿದ ಅವರು, ನನ್ನ ದತ್ತು ಸ್ವೀಕಾರದಿಂದ ಇಂದಿನ ವರೆಗೆ 9 ವರ್ಷಗಳ ಕಾಲ ನನಗೆ ನೀಡಿದ ಪ್ರೀತಿ ಹಾಗೂ ಬೆಂಬಲದ ರುಣವನ್ನು ತೀರಿಸಲು ನನಗೆ ಒಂದು ಅವಕಾಶ ನೀಡಿ ಎಂದು ಅವರು ತಿಳಿಸಿದರು.
ಅನೇಕರು, ಹಿಂದೆ ಮೈಸೂರು ಅರಸರು ಮಾಡಿದ ಕೆಲಸಕ್ಕಾಗಿ ನಿಮ್ಮ ರುಣ ತೀರಿಸಲು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ತಿಳಿದಿದ್ದಾರೆ. ಆ ರೀತಿ ಯಾವುದೇ ಉದ್ದೇಶ ಇಲ್ಲ. ಅಂದಿನ ಕಾಲದಲ್ಲಿ ಮಹಾರಾಜರು ತಮ್ಮ ರಾಜ ಧರ್ಮಕ್ಕೆ ಅನುಗುಣವಾಗಿ ಅವರ ಸೇವೆ ಮಾಡಿದ್ದಾರೆ. ಆದರೇ ನನ್ನ ದತ್ತು ಸ್ವೀಕಾರದ ಬಳಿಕ ಒಂಬತ್ತು ವರ್ಷಗಳ ಕಾಲ ನಿಮಗೆ ನಾನು ಚಿರರುಣಿಯಾಗಿದ್ದೇನೆ. ಆ ರುಣವನ್ನು ನಾನು ತೀರಿಸಲಿಕ್ಕೆ ನನಗೆ ಒಂದು ಅವಕಾಶ ನೀಡಿ ಎಂದು ಮನವಿ ಮಾಡಿದರು.
ವಿಕಸಿತ ಭಾರತಕ್ಕಾಗಿ ನಾವೆಲ್ಲರೂ ಕೆಲಸ ಮಾಡಬೇಕು : ನಮ್ಮ ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳು ದೇಶದ ಪ್ರಗತಿಗಾಗಿ ಮಾಡುತ್ತಿರುವ ಕೆಲಸ. ಅವರ ದೂರದೃಷ್ಠಿಯನ್ನು ನೋಡುತ್ತಿದ್ದರೆ ನಮ್ಮ ಮುಂದೆ ಇರುವ ಸಂಕಷ್ಟಗಳು ಸಣ್ಣದಾಗಿ ಕಾಣಿಸುತ್ತದೆ.
ಪ್ರಧಾನಮಂತ್ರಿಗಳ 2047ರ ವಿಕಸಿತ ಭಾರತದ ಮೇಲೆ ಇಟ್ಟಿರುವ ಕನಸಿಗಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಕಳೆದ ಹತ್ತು ವರ್ಷ ಅವರು ಮಾಡಿರುವ ಕೆಲಸವೇ ನಮಗೆಲ್ಲಾ ಸ್ಪೂರ್ತಿ ಎಂದು ಹೇಳಿದರು.
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…