ಮೈಸೂರು

ಗೆಳತಿಯ ಫೋನ್ ರಿಸೀವ್ ಮಾಡಿದ್ದ ಗೆಳೆಯನನ್ನೇ ಕೊಲೆ: ಬರ್ತ್ ಡೇ ಪಾರ್ಟಿ ಆಚರಣೆ ವೇಳೆ ಕೃತ್ಯ

ಮೈಸೂರು: ಗೆಳತಿಯ ಫೋನ್ ರಿಸೀವ್ ಮಾಡಿದ ಗೆಳೆಯನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಂಜನಗೂಡು ತಾಲ್ಲೂಕಿನ ಕೆಂಪಿಸಿದ್ದನಹುಂಡಿ ಗ್ರಾಮದಲ್ಲಿ ನಡೆದಿದೆ.

ಕೇವಲ ಗೆಳತಿಯ ಫೋನ್ ರಿಸೀವ್ ಮಾಡಿದ್ದಕ್ಕೆ ಬೈಕ್‌ನಲ್ಲಿ ಗುದ್ದಿ ಕೊಲೆ ಮಾಡಲಾಗಿದೆ. ಘಟನೆಗೆ ಸಂಭಂಧಿಸಿದಂತೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 5 ಸ್ನೇಹಿತರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರನ್ನ ವಶಕ್ಕೆ ಪಡೆಯಲಾಗಿದೆ.

ಕಿರಣ್ ಎಂಬುವವನೇ ಕೊಲೆಯಾದ ದುರ್ದೈವಿಯಾಗಿದ್ದು, ಕೆಂಪಿಸಿದ್ದನಹುಂಡಿ ಗ್ರಾಮದ ವಸಂತ್ ಕುಮಾರ್, ಮಧುಸೂದನ್, ಚಂದ್ರು, ರವಿಚಂದ್ರ, ಸಿದ್ದರಾಜು ಎಂಬುವವರ ವಿರುದ್ದ ಪ್ರಕರಣ ದಾಖಲಾಗಿದೆ.

ಜುಲೈ.15ರಂದು ಸ್ನೇಹಿತ ರವಿಚಂದ್ರನ್ ಹುಟ್ಟುಹಬ್ಬ ಇತ್ತು. ಕಿರಣ್ ಬರ್ತ್ ಡೇ ಪಾರ್ಟಿ ಆಚರಿಸಲು 5 ಮಂದಿ ಸ್ನೇಹಿತರ ಜೊತೆ ಹೊರಟ. ಹೆಜ್ಜಿಗೆ ಸೇತುವೆಯ ತೋಪಿನ ಬಳಿ 6 ಮಂದಿ ಸೇರಿ ಎಣ್ಣೆ ಪಾರ್ಟಿ ಶುರುಮಾಡಿದ್ರು. ವಸಂತ್ ಮೂತ್ರ ವಿಸರ್ಜನೆ ಮಾಡಲು ಸ್ವಲ್ಪ ದೂರ ಹೋದ. ಈ ವೇಳೆ ವಸಂತ್ ಫೋನ್ ರಿಂಗ್ ಆಗಿ ಕಿರಣ್ ರಿಸೀವ್ ಮಾಡಿದ. ರಶ್ಮಿ ಎಂಬಾಕೆಯಿಂದ ಫೋನ್ ಬಂದಿತ್ತು. ಯಾಕೆ ವಸಂತ್ ಮೊಬೈಲ್ ಗೆ ಫೋನ್ ಮಾಡಿದ್ದೀಯ ಎಂದು ಕಿರಣ್ ಪ್ರಶ್ನಿಸಿದ. ಕೆಲ ಸಮಯದ ನಂತರ ಮತ್ತೆ ರಶ್ಮಿಯಿಂದ ಬಂದ ಫೋನ್ ವಸಂತ್ ರಿಸೀವ್ ಮಾಡಿದಾಗ ಕಿರಣ್ ರಿಸೀವ್ ಮಾಡಿದ್ದ ವಿಚಾರ ಗೊತ್ತಾಯಿತು. ಇಷ್ಟಕ್ಕೇ ಇಬ್ಬರ ನಡುವೆ ಗಲಾಟೆ ಶುರುವಾಯ್ತು. ವಸಂತ್ ಜೊತೆ ಸೇರಿದ ನಾಲ್ವರು ಸ್ನೇಹಿತರು ಕಿರಣ್ ಮೇಲೆ ಹಲ್ಲೆ ನಡೆಸಿದ್ರು. ಸ್ಕೂಟರ್‌ನಿಂದ ಗುದ್ದಿ ಕೆಳಗೆ ಬೀಳಿಸಿ ಹಲ್ಲೆ ನಡೆಸಿ ಪರಾರಿಯಾದರು. ಮಾಹಿತಿ ಅರಿತ ಸಹೋದರ ಅಣ್ಣನನ್ನ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಿರಣ್ ಮೃತಪಟ್ಟಿದ್ದಾನೆ.

ಯುವತಿಯ ಫೋನ್ ರಿಸೀವ್ ಮಾಡಿದ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತ ಎನ್ನುವುದದನ್ನು ಮರೆತು ಬರ್ತ್ ಡೇ ಪಾರ್ಟಿ ದಿನವೇ ಗೆಳೆಯನನ್ನ ಕೊಂದಿದ್ದಾರೆ. ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಆಂದೋಲನ ಡೆಸ್ಕ್

Recent Posts

ನಿಗೂಢ ವಸ್ತು ಸ್ಫೋಟ: 6 ಶಾಲಾ ಮಕ್ಕಳಿಗೆ ಗಂಭೀರ ಗಾಯ

ಬೀದರ್:‌ ನಿಗೂಢ ವಸ್ತುವೊಂದು ಸ್ಫೋಟಗೊಂಡ ಪರಿಣಾಮ ಆರು ಮಕ್ಕಳಿಗೆ ಗಂಭೀರ ಗಾಯಗಳಾಗಿರುವ ಘಟನೆ ಹುಮನಾಬಾದ್ ತಾಲ್ಲೂಕಿನ ಮೋಳಕೇರಾ ಗ್ರಾಮದಲ್ಲಿ ನಡೆದಿದೆ.…

14 mins ago

ಮೈಸೂರು| ರಾಜ್ಯಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದ ಮಾಜಿ ಸಚಿವ ಸಿ.ಟಿ.ರವಿ

ಮೈಸೂರು: ಮಾಜಿ ಸಚಿವ ಸಿ.ಟಿ.ರವಿ ಅವರಿಂದು ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ. ರಾಜ್ಯಪಾಲರಾದ ಥಾವರ್‌ ಚಂದ್‌ ಗೆಹ್ಲೋಟ್‌…

37 mins ago

ಮಹಾರಾಷ್ಟ್ರ ಡಿಸಿಎಂ ಆಗಿ ಅಜಿತ್‌ ಪವಾರ್‌ ಪತ್ನಿ ಸುನೇತ್ರಾ ಆಯ್ಕೆ, ಇಂದು ಸಂಜೆ ಪ್ರಮಾಣವಚನ ಸ್ವೀಕಾರ?

ಮುಂಬೈ: ವಿಮಾನ ಪತನ ದುರಂತದಲ್ಲಿ ಸಾವನ್ನಪ್ಪಿದ ಡಿಸಿಎಂ ಅಜಿತ್‌ ಪವಾರ್‌ ಪತ್ನಿ ಸುನೇಂದ್ರ ಪವಾರ್‌ ಅವರನ್ನು ಉಪಮುಖ್ಯಮಂತ್ರಿ ಸ್ಥಾನಕ್ಕೆ ನೇಮಿಸಲು…

55 mins ago

ಉದ್ಯಮಿ ಸಿ.ಜೆ.ರಾಯ್‌ ಸಾವಿನ ಬಗ್ಗೆ ಸಚಿವ ಪರಮೇಶ್ವರ್‌ ಮಾಹಿತಿ

ಬೆಂಗಳೂರು: ರಿಯಲ್‌ ಎಸ್ಟೇಟ್‌ ಉದ್ಯಮಿ, ಕಾನ್ಪಿಡೆಂಟ್‌ ಗ್ರೂಪ್‌ ಚೇರ್ಮನ್‌ ಸಿ.ಜೆ.ರಾಯ್‌ ಆತ್ಮಹತ್ಯೆ ಪ್ರಕರಣದ ಬಗ್ಗೆ ಗೃಹ ಸಚಿವ ಪರಮೇಶ್ವರ್‌ ಪ್ರತಿಕ್ರಿಯೆ…

2 hours ago

ನಾಳೆ ಕೇಂದ್ರ ಬಜೆಟ್‌ ಮಂಡನೆ ಮಂಡನೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ನಾಳೆ 9ನೇ ಬಾರಿಗೆ ಬಜೆಟ್‌ ಮಂಡನೆ ಮಾಡಲಿದ್ದಾರೆ. ಈ ಮೂಲಕ…

2 hours ago

ಬನ್ನೇರುಘಟ್ಟದ ಕಾಸಾಗ್ರ್ಯಾಂಡ್‌ನಲ್ಲಿ ಇಂದು ಸಂಜೆ ಉದ್ಯಮಿ ಸಿ.ಜೆ.ರಾಯ್ ಅಂತ್ಯಕ್ರಿಯೆ

ಬೆಂಗಳೂರು: ಖ್ಯಾತ ಉದ್ಯಮಿ ಮತ್ತು ಕಾನ್ಪಿಡೆಂಟ್‌ ಗ್ರೂಪ್‌ ಸಂಸ್ಥಾಪಕ ಹಾಗೂ ಅಧ್ಯಕ್ಷರಾಗಿದ್ದ ಸಿ.ಜೆ.ರಾಯ್‌ ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು,…

3 hours ago