ಮೈಸೂರು

ಉಚಿತ ಸಾಮೂಜಿಕ ವಿವಾಹ : ನವ ದಾಂಪತ್ಯಕ್ಕೆ ಕಾಲಿಟ್ಟ 24 ಜೋಡಿ

ನಂಜನಗೂಡು : ಇಲ್ಲಿನ ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹದಲ್ಲಿ 24 ಜೋಡಿಗಳು ನವಜೀವನಕ್ಕೆ ಕಾಲಿಟ್ಟರು.

ಜಿಲ್ಲಾಡಳಿತ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 24 ನವಜೋಡಿಗಳು ದಾಂಪತ್ಯಕ್ಕೆ ಮುನ್ನುಡಿ ಬರೆದರು.

ಬಳಿಕ ಅಧ್ಯಕ್ಷತೆಯ ವಹಿಸಿ ಅವರು ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ. ಪಿ ಶಿವರಾಜು, ಸಾಲ ಮಾಡಿ ಮದುವೆ ಆಗದೆ ಸರಳವಾಗಿ ಮದುವೆ ಆಗುವ ಮೂಲಕ ಎಲ್ಲರಿಗೂ ಮಾದರಿ ಆಗಬೇಕು ಎಂದು ಹೇಳಿದರು.

ಮದುವೆಗೆ ದುಂದು ವೆಚ್ಚ ಮಾಡಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿರುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಆರಂಭಿಸಿರುವ ಯೋಜನೆ ಇದಾಗಿದೆ. ಮಾಂಗಲ್ಯ ಭಾಗ್ಯ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. 2020 ರಿಂದ ಮಾಂಗಲ್ಯ ಭಾಗ್ಯ ಯೋಜನೆ ಪ್ರಾರಂಭವಾಯಿತು. ಇದರ ಸದುಪಯೋಗ ಪಡೆದುಕೊಂಡು ಮದುವೆ ದುಂದುವೆಚ್ಚಕ್ಕೆ ಕಡಿವಾಣ ಹಾಕಿರಿ ಎಂದು ಸಲಹೆ ನೀಡಿದರು.

ಅದ್ದೂರಿ, ಆಡಂಬರದ ಮದುವೆ ಮಾಡಿ ಸಾಲ ತೀರಿಸಲು ಕಷ್ಟ ಪಡುವುದು ಬೇಡ. ಈ ರೀತಿ ಸರಳವಾಗಿ ಮದುವೆ ಆಗುವುದರಿಂದ ಆರ್ಥಿಕವಾಗಿ ಹಣ ಉಳಿತಾಯ ಆಗುತ್ತದೆ. ಈ ಹಣವನ್ನು ಬೇರೆ ಕಾರ್ಯಗಳಿಗೆ ಬಳಸಿಕೊಳ್ಳಿ ಎಂದು ಕಿವಿಮಾತು ಹೇಳಿದ ಅವರು ಈ ಬಾರಿ 24 ಜೋಡಿಗಳು ಸಾಮೂಹಿಕ ವಿವಾಹ ಆಗಿದ್ದು , ಮುಂದಿನ ವರ್ಷ ಕನಿಷ್ಠ 100 ಜೋಡಿಗಳು ಸಾಮೂಹಿಕ ವಿವಾಹದಲ್ಲಿ ಮದುವೆ ಆಗಬೇಕು ಎಂದು ತಿಳಿಸಿದರು.

ನಂಜನಗೂಡು ನಗರಸಭೆಯ ಅಧ್ಯಕ್ಷರಾದ ಶ್ರೀಕಂಠ ಮಾತನಾಡಿ, ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ಸಾಮೂಹಿಕ ವಿವಾಹ ಏರ್ಪಡಿಸಿರುವುದು ಉತ್ತಮವಾದ ಕಾರ್ಯ. ಇದರಿಂದ ದುಂದು ವೆಚ್ಚ ತಡೆಯಲು ಸಾಧ್ಯವಾಗುತ್ತದೆ. ಬಡವರು ಉಚಿತವಾಗಿ ಮದುವೆ ಆಗಲು ಅನುಕೂಲಕರವಾಗಿದೆ. ಆದ್ದರಿಂದ ಇನ್ನೂ ಹೆಚ್ಚು ಹೆಚ್ಚು ಸಾಮೂಹಿಕ ವಿವಾಹ ಕಾರ್ಯಕ್ರಮಗಳು ನಡೆಯಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶಿವಕುಮಾರ್ ಕಾಸನೂರು, ಶ್ರೀಕಂಠೇಶ್ವರ ದೇವಾಲಯದ ಜಗದೀಶ್ ಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಟಿ.ಕೆ ಹರೀಶ್, ವೃತ್ತ ನಿರೀಕ್ಷಕರಾದ ರವೀಂದ್ರ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

ಆಂದೋಲನ ಡೆಸ್ಕ್

Recent Posts

ಹನೂರು | ಬಾವಿಗೆ ಬಿದ್ದ ಶ್ವಾನ, ಅಗ್ನಿಶಾಮಕ ಠಾಣಾ ಸಿಬ್ಬಂದಿಗಳಿಂದ ರಕ್ಷಣೆ

ಹನೂರು : ನೀರಿರುವ ಬಾವಿಗೆ ಬಿದ್ದಿದ್ದ ಶ್ವಾನವನ್ನು ರಕ್ಷಣೆ ಮಾಡುವಲ್ಲಿ ಅಗ್ನಿಶಾಮಕ ಠಾಣಾ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಘಟನೆಯ ವಿವರ ಹನೂರು…

16 mins ago

ಎಲ್‌ಪಿಜಿ ಕೊರತೆ ಪರಿಸ್ಥಿತಿ ; ಹಾಲಿನ ವಹಿವಾಟು ಯಥಾಸ್ಥಿತಿ

ಕೆ.ಬಿ.ರಮೇಶ ನಾಯಕ ಮೈಸೂರು : ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವಯುದ್ಧದ ಪರಿಣಾಮದಿಂದಾಗಿ ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್ ಪೂರೈಕೆಗೆ ದೊಡ್ಡ ಹೊಡೆತ ಬಿದ್ದು…

43 mins ago

ಓದುಗರ ಪತ್ರ | ಶಾಸನಸಭೆಗಳಲ್ಲಿ ಹೊಸ ಯೋಜನೆಗಳ ಚರ್ಚೆಯಾಗಲಿ

ಕರ್ನಾಟಕ ವಿಧಾನಸಭೆ ಹಾಗೂ ಸಂಸತ್‌ ಮೇಲನೆ ಹಾಗೂ ಕೆಳಮನೆಗಳಲ್ಲಿ 2026ರ (ಬಜೆಟ್ ಮೇಲಿನ ಚರ್ಚೆ) ಮುಂದುವರಿದ ಅಧಿವೇಶನಗಳು ನಡೆಯುತ್ತಿವೆ. ಬಜೆಟ್…

52 mins ago

ಓದುಗರ ಪತ್ರ | ಒಳ ಮೀಸಲಾತಿ ಸಮಾನವಾಗಿ ಹಂಚಿಕೆಯಾಗಲಿ

ಒಳ ಮೀಸಲಾತಿ ಕುರಿತು ಮಾ.27ರಂದು ನಡೆಯಲಿರುವ ಸಚಿವ ಸಂಪುಟ ಸಭೆಯ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ. ಸಂಪುಟ ಸಭೆಯು ಎಲ್ಲಾ…

1 hour ago

ಓದುಗರ ಪತ್ರ | ಮೇಕ್ ಇನ್ ಇಂಡಿಯಾಗೆ ಕಾಲ ಪಕ್ವ

ಕೊಲ್ಲಿಯಲ್ಲಿ ಇಸ್ರೇಲ್-ಅಮೆರಿಕ ದೇಶಗಳು ಜಂಟಿಯಾಗಿ ಇರಾನ್ ವಿರುದ್ಧ ಸಾರಿರುವ ಸಮರ ದಿನೇ ದಿನೇ ಉಗ್ರಸ್ವರೂಪ ಪಡೆಯುತ್ತಿದ್ದು, ಇಡೀ ವಿಶ್ವಕ್ಕೆ ಕಂಟಕಪ್ರಾಯವಾಗಿದೆ.…

1 hour ago

ಓದುಗರ ಪತ್ರ | ಮದ್ಯಪ್ರಿಯರ ತಾಣವಾಗಿರುವ ಬಸ್ ತಂಗುದಾಣ

ಚಾಮರಾಜನಗರ ತಾಲ್ಲೂಕಿನ ಮುಕ್ಕಡಹಳ್ಳಿಯ ಬಸ್ ತಂಗುದಾಣವು ರಾತ್ರಿಯ ವೇಳೆಯಲ್ಲಿ ಮದ್ಯಪಾನದಂತಹ ಅನೈತಿಕ ಚಟುವಟಿಕೆಗೆ ವೇದಿಕೆಯಾಗಿದೆ. ಕುಡಿದು ಬಾಟಲಿಗಳು, ಮದ್ಯದ ಪೌಚ್‌ಗಳು,…

1 hour ago