ಮೈಸೂರು

ಕೆ.ಆರ್‌ ನಗರ: ಅಬಕಾರಿ ಸಿಬ್ಬಂದಿ ಮೇಲೆ ಹಲ್ಲೆ: ನಾಲ್ವರ ಬಂಧನ!

ಕೆ.ಆರ್‌ ನಗರ: ತನ್ನ ಬೈಕ್‌ ತಪಾಸಣೆ ಮಾಡಿದ ಕಾರಣಕ್ಕೆ ಪಟ್ಟಣದ ಅಬಕಾರಿ ಇಲಾಖೆ ಸಿಬ್ಬಂದಿಯ ಮೇಲೆ ಕೊಪಗೊಂಡು ಹಲ್ಲೆ ನಡೆಸಿರುವ ಘಟನೆ ತಿಪ್ಪೂರು ಬಳಿ ನಡೆದಿದೆ. ಅಧಿಕಾರಿ ಮೇಲೆ ದಾಳಿ ಮಾಡಿದ ಆರೋಪದಡಿ ನಾಲ್ವರನ್ನು ಬಂಧಿಸಲಾಗಿದೆ.

ಅಕ್ರಮ ಮದ್ಯ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಇಲಾಖೆಯ ಸಿಬ್ಬಂದಿಗಳಾದ ಸಂತೋಷ್, ಸಂದೀಪ್, ಮಲ್ಲೇಶ್ ಮತ್ತು ಮಾಳಪ್ಪ ಅವರು ತಾಲೂಕಿನ ತಿಪ್ಪೂರು ಗ್ರಾಮದ ಬಳಿ ಅದೇ ಗ್ರಾಮದ ಸಂತೋಷ್ ಎಂಬುವವರ ಬೈಕ್ ತಪಾಸಣೆ ಮಾಡಲು ಮುಂದಾಗಿದ್ದಾರೆ. ಇದನ್ನು ಸಹಿಸದ ಸಂತೋಷ್‌ ಅಧಿಕಾರಿಗಳ ಜೊತೆ ಮಾತಿಗೆರಗಿದ್ದಾನೆ. ಆದರೂ ತಪಾಸಣೆ ನಡೆಸಿದ ಅಧಿಕಾರಿಗಳು ಮದ್ಯ ಸಿಗದ ಹಿನ್ನಲೆ ವಾಪಾಸಾಗಿದ್ದಾರೆ.

ಈ ಘಟನೆಯಿಂದ ಕುಪಿತಗೊಂಡ ಸಂತೋಷ್ ತನ್ನ ಸ್ನೇಹಿತರಾದ ರಘು, ಯಶ್ವಂತ್ ಮತ್ತು ಪ್ರಶಾಂತ್ ಎಂಬುವವ ಜೊತೆಗೂಡಿ ಅಬಕಾರಿ ಇಲಾಖೆಯ ಅಧಿಕಾರಿಗಳನ್ನು ಹಿಂಬಾಲಿಸಿ ಕಗ್ಗೆರೆ ಬಸ್ ನಿಲ್ದಾಣದ ಬಳಿ ಅವರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ. ಈ ದಾಳಿಯಿಂದ ಅಬಕಾರಿ ಮುಖ್ಯ ಪೇದೆ ಸಂತೋಷ್‌ಗೆ ತೀವ್ರ ಗಾಯಗಳಾಗಿದ್ದು, ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮುಖ್ಯ ಪೇದೆ ಸಂತೋಷ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ವಾಸು ವಿ ಹೊಂಗನೂರು

ಮೂಲತಃ ಚಾಮರಾಜನಗರ ಜಿಲ್ಲೆಯ ಹೊಂಗನೂರು ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಪದವಿಯಲ್ಲಿ ಪತ್ರಿಕೋದ್ಯಮ ವಿಭಾಗ ಆಯ್ದುಕೊಂಡು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2020ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಪತ್ರಿಕೋದ್ಯಮದಲ್ಲಿ 3 ವರ್ಷಗಳ ಅನುಭವವಿದ್ದು, ಕಳೆದ ಒಂದು ವರ್ಷದಿಂದ ಆಂದೋಲನ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ 6 ತಿಂಗಳಿನಿಂದ ಆಂದೋಲನ ಡಿಜಿಟಲ್‌ ವಿಭಾಗದಲ್ಲಿ ತೊಡಗಿಸಿಕೊಂಡಿದ್ದೇನೆ. ಕ್ರಿಕೆಟ್‌ ಮೇಲೆ ಎಲ್ಲಿಲ್ಲದ ಪ್ರೀತಿಯಿದ್ದು, ಪ್ರವಾಸ, ಇತಿಹಾಸ ಅಧ್ಯಯನ ಕಡೆ ಒಲವು ಹೆಚ್ಚು. ಪತ್ರಿಕಾ ರಂಗದಲ್ಲಿ ಕ್ರೀಡಾ ವಿಭಾಗದಲ್ಲಿ ಹೆಚ್ಚು ಆಸಕ್ತಿ ಇದೆ‌. ಮೊಬೈಲ್‌ ನಂಬರ್:‌ 9620318288

Recent Posts

ದಳಪತಿ ವಿಜಯ್‌ಗೆ ಮತ್ತೆ ಸಂಕಷ್ಟ : ಬಿಡುಗಡೆಗೂ ಮೊದಲೆ ʻಜನ ನಾಯಗನ್‌ʼ ಸೋರಿಕೆ.

ಚೆನ್ನೈ : ನಟ ಹಾಗೂ ರಾಜಕಾರಣಿ ದಳಪತಿ ವಿಜಯ್‌ ಅವರ ವೃತ್ತಿ ಜೀವನದ ಕೊನೆಯ ಹಾಗೂ ಬಹುನಿರೀಕ್ಷಿತ ʻಜನ ನಾಯಗನ್‌ʻ…

57 mins ago

ಆಂದೋಲನ ವರದಿ ಫಲಶ್ರುತಿ ; ಫುಟ್‌ಪಾತ್‌ನಲ್ಲಿದ್ದ ದ್ವಿಚಕ್ರ ವಾಹನಗಳ ತೆರವು

ಮೈಸೂರು : ಕುವೆಂಪುನಗರದ ನ್ಯೂ ಕಾಂತರಾಜ ಅರಸು ರಸ್ತೆಯಲ್ಲಿರುವ ಜನನಿಬಿಡ ಪ್ರದೇಶಗಳಾದ ಬಂದಂತಮ್ಮ ಕಾಳಮ್ಮ ದೇವಸ್ಥಾನ, ಐಗಿರಿ ಕೆಫೆ, ಸುಜ್ಹುಕಿ…

1 hour ago

ಗಾರೆ ಕೆಲಸ ಮಾಡುವವರ ಪುತ್ರಿಗೆ ಸಾಧಿಸುವ ಛಲ

ಮೈಸೂರು : ಎಲ್ಲ ಅನುಕೂಲತೆಗಳಿದ್ದರೂ ವಿದ್ಯೆ ತಲೆಗೆ ಹತ್ತುತ್ತಿಲ್ಲ ಎನ್ನುವ ವಿದ್ಯಾರ್ಥಿಗಳ ನಡುವೆ, ಗಾರೆ ಕೆಲಸ ಮಾಡುವವರ ಪುತ್ರಿಯೊಬ್ಬರು ದ್ವಿತೀಯ…

2 hours ago

ಪಿಯುಸಿ : ಕೋಟೆ ಟಾಪರ್‌ಗಳೆಲ್ಲರೂ ವಿದ್ಯಾರ್ಥಿನಿಯರೇ

ಮಂಜು ಕೋಟೆ ಎಚ್. ಡಿ. ಕೋಟೆ : ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ತಾಲ್ಲೂಕಿನ ತುಂಬಸೋಗೆಯ ಎಂಎಂಕೆ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ…

2 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಏ.11 ಶನಿವಾರ

3 hours ago

ವಾಹನ ದಟ್ಟನೆ : ಸುಗಮ ಸಂಚಾರಕ್ಕೆ ರೈಲ್ವೆ ಅಂಡರ್‌ ಬ್ರಿಡ್ಜ್‌ ವಿಸ್ತರಿಸಲು ಮನವಿ

ಮೈಸೂರು : ಚಾಮರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಾಹನ ದಟ್ಟಣೆ ನಿಯಂತ್ರಣ ಹಾಗೂ ಸುಗಮ ಸಂಚಾರಕ್ಕಾಗಿ ಅಗತ್ಯ ಅಭಿವೃದ್ಧಿ ಕಾಮಗಾರಿಗಳನ್ನು…

14 hours ago