Farewell to retired soldier Siddalingaiah
ಮೈಸೂರು : ಭಾರತೀಯ ಸೇನೆಯಲ್ಲಿ ಸುಧೀರ್ಘ 37 ವರ್ಷಗಳ ಕಾಲ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಮಂಡ್ಯ ಮೂಲದ ಸಿಆರ್‌ಪಿಎಫ್‌ನ ಎಸ್ಐ ಎನ್. ಸಿದ್ದಲಿಂಗಯ್ಯ ಅವರಿಗೆ ಚೆನ್ನೈನ ಪೂನಮಲ್ಲೆನಲ್ಲಿರುವ ಸಿಆರ್‌ಪಿಎಫ್ ಕಮಾಂಡೆಂಟ್ ಕಚೇರಿಯಲ್ಲಿ ಬೀಳ್ಕೊಡುಗೆ ನೀಡಿ ಗೌರವಿಸಲಾಯಿತು.
ಮೂಲತಃ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕನಗನಮರಡಿ ಗ್ರಾಮದ ಚೆಲುವಮ್ಮ-ನಿಂಗಯ್ಯ ದಂಪತಿಯ 3ನೇ ಪುತ್ರ ರಾಗಿ ಜನಿಸಿದ ಇವರು, 1988ರಲ್ಲಿ ಸಿಆರ್ ಪಿಎಫ್ ಗೆ ಆಯ್ಕೆಯಾಗಿ ತರಬೇತಿ ಪಡೆದ ನಂತರ ಶ್ರೀಲಂಕಾ ದಲ್ಲಿರುವ ಭಾರತೀಯ ಶಾಂತಿ ಸೇನೆಯಲ್ಲಿ ವೃತ್ತಿ ಸೇವೆ ಆರಂಭಿಸಿದರು. ಮಣಿಪುರ, ಅಸ್ಸಾಂ, ಛತ್ತೀಸ್ ಘಡ್, ಪಂಜಾಬ್, ನಾಗಲ್ಯಾಂಡ್, ತ್ರಿಪುರ, ಅರುಣಾಚಲ ಪ್ರದೇಶ, ದೆಹಲಿ, ಪಶ್ಚಿಮ ಬಂಗಾಳ, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಮಧ್ಯಪ್ರದೇಶ, ಕೇರಳ, ತಮಿಳುನಾಡಿನಲ್ಲಿ ಸಿಪಾಯಿ, ಹವಲ್ದಾರ್, ಎಎಸ್ಐ, ಎಸ್ಐ ಆಗಿ ಸೇವೆ ಸಲ್ಲಿಸಿದ್ದಾರೆ.
ಪ್ರಸ್ತುತ ಇವರು ಮೈಸೂರಿನ ವಿಜಯನಗರದಲ್ಲಿ ವಿಶ್ರಾಂತಿ ಜೀವನ ನಡೆಸುತ್ತಿದ್ದಾರೆ. ಬೀಳ್ಕೊಡುಗೆ ಸಮಾರಂಭದಲ್ಲಿ ಕಮಾಂಡೆಂಟ್ ರಾದ ಮುಖೇಶ್ ಕುಮಾರ್, ಸಹಾಯಕ ಕಮಾಂಡೆಂಟ್ ಅಲಿನ್ ಆಗಸ್ಟಿನ್, ಇನ್ ಸ್ಪೆಕ್ಟರ್ ಗಳು, ಎಸ್ಐಗಳು, ಸಿಬ್ಬಂದಿ ವರ್ಗದವರು ಹಾಜರಿದ್ದರು.
ಗೌರವ ಸ್ವೀಕರಿಸಿದ ಬಳಿಕ ಮಾತನಾಡಿದ ಸಿದ್ದಲಿಂಗಯ್ಯ, ದಿನನಿತ್ಯ ಗಡಿಯಲ್ಲಿ ಯುದ್ಧದ ವಾತಾವರಣ, ಬಂದೂಕು- ಗುಂಡುಗಳ ಮೊರೆತ, ಉಗ್ರರ ದಾಳಿ ಹೀಗೆ ಒಂದಿಲ್ಲೊಂದು ಘಟನೆಗಳ ಆತಂಕದಲ್ಲಿ ಇರುತ್ತಿದ್ದ ನಮಗೆ ನಮ್ಮ ಜೀವಕ್ಕಿಂತ ದೇಶ ರಕ್ಷಣೆಯೇ ಮುಖ್ಯವಾಗಿರುತ್ತದೆ. ಕುಟುಂಬ, ಸಂಬಂಧ ಇವುಗಳಿಂದ ದೂರ ಇದ್ದ ನನಗೆ ನೈತಿಕವಾಗಿ ಬೆಂಬಲ ನೀಡುತ್ತಿದ್ದ ಪತ್ನಿ ಶಿಕ್ಷಕಿಯೂ ಆದ ಶಾಂತಮ್ಮ ಅವರ ಸಂಪೂರ್ಣ ಸಹಕಾರ ಇತ್ತು. ಇದರಿಂದಲೇ 37 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಲು ಸಾಧ್ಯವಾಯಿತು. ನನ್ನನ್ನು ಖಾಕಿ ವಸ್ತ್ರದಲ್ಲಿ ನೋಡಬೇಕಿದಿದ್ದ ಅವಿದ್ಯಾವಂತರಾದ ನನ್ನ ತಂದೆ -ತಾಯಿ ಕನಸಾಗಿತ್ತು. ಅವರಿಗೆ ಈ ಸೇವೆಯನ್ನು ಅರ್ಪಿಸುತ್ತೇನೆ. ದೇಶ ಸೇವೆ ಸಲ್ಲಿಸಲು ಧೈರ್ಯ, ಸ್ಥೈರ್ಯ, ಪ್ರಾಮಾಣಿಕತೆ ಅತಿ ಮುಖ್ಯ ಎಂದರು.
ಬೆಂಗಳೂರು: ಮನೆ ಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ…
ಬೆಳಗಾವಿ: ಪೊಲೀಸ್ ಇಲಾಖೆಯಲ್ಲಿ 14 ಸಾವಿರ ಹುದ್ದೆಗಳು ಖಾಲಿಯಿದ್ದು, ಈ ಪೈಕಿ 3 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ…
ಬೆಳಗಾವಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆ ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಮತ್ತೊಮ್ಮೆ ಬಾಂಬ್…
ಬೆಂಗಳೂರು: ಸರ್ಕಾರಿ ಆಸ್ಪತ್ರೆಯಲ್ಲಿ ಜನೌಷಧಿ ಕೇಂದ್ರ ಮುಚ್ಚುವ ರಾಜ್ಯ ಸರ್ಕಾರದ ಆದೇಶಕ್ಕೆ ಧಾರವಾಡ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸರ್ಕಾರಿ ಆಸ್ಪತ್ರೆಯ…
ಮೈಸೂರು: ಜಗತ್ಪ್ರಸಿದ್ಧ ಮೈಸೂರು ಅರಮನೆಯ ವರಾಹ ಗೇಟ್‌ನ ಮುಖ್ಯದ್ವಾರದ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಸಾರ್ವಜನಿಕರು ಆಗಮಿಸುವ…
ಬೆಳಗಾವಿ: ದ್ವೇಷ ಭಾಷಣ ವಿಧೇಯಕ ಮಂಡನೆ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಯವರು ದ್ವೇಷ ಭಾಷಣ ಮಾಡದೇ…