ಮೈಸೂರು : ಮೈಸೂರು ಮತ್ತು ಹುಣಸೂರು ಹೆದ್ದಾರಿಯ ರಂಗಯ್ಯನ ಕೊಪ್ಪಲು ಗೇಟ್ ಬಳಿ ಹಾಲಿನ ಟ್ಯಾಂಕರ್ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಎಂಜಿನಿಯರ್ ಯುವತಿಯರು ಮೃತಪಟ್ಟಿದ್ದಾರೆ.
ಮೈಸೂರಿನ ಜೀವಿತಾ ಮತ್ತು ಪ್ರತಿಕ್ಷಾ ಎಂಬುವವರೆ ಸಾವಿಗೀಡಾದವರು. ಭಾನುವಾರದ ಪ್ರಯುಕ್ತ ವೀಕೆಂಡ್ ಪಾರ್ಟಿಗೆಂದು ತೆರಳುವಾಗ ರಾಷ್ಟ್ರೀಯ ಹೆದ್ದಾರಿ 275 ರ ಕಡೆ ಬರುತ್ತಿದ್ದಾಗ (ರಂಗಯ್ಯನ ಕೊಪ್ಪಲು ಗೇಟ್ ಬಳಿ) ಕಾರಿನ ಹಿಂಬದಿ ಟೈರ್ ಪಂಚರ್ ಆಗಿದೆ. ಈ ವೇಳೆ ಕಾರು ನಿಯಂತ್ರಣಕ್ಕೆ ಸಿಗದೆ ಎದುರಿನಿಂದ ಬರುತ್ತಿದ್ದ ಹಾಲಿನ ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದೆ. ಡಿಕಿಯ ರಭಸಕ್ಕೆ ಕಾರಿನಲ್ಲಿದ್ದ ಇಬ್ಬರು ಯುವತಿಯರು ಸ್ಥಳದಲ್ಲಯೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬಂದ ಬಿಳಿಕೆರೆ ಪೊಲೀಸರು ಶವಗಳನ್ನು ಹೊರಕ್ಕೆ ತೆಗೆದು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.