ಮೈಸೂರು : ಕುಡಿಯುವ ನೀರು, ತ್ಯಾಜ್ಯ ನಿರ್ವಹಣೆ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಹಂತಹಂತವಾಗಿ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ನಗರಪಾಲಿಕೆಯಷ್ಟೇ ಸ್ಥಳೀಯ ಸಂಸ್ಥೆಗಳು ಕೆಲಸ ಮಾಡುವ ಜತೆಗೆ,ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಸಲಹೆ ನೀಡಿದರು.
ಹೂಟಗಳ್ಳಿ ಎಚ್.ಕೆ.ಫಂಕ್ಷನ್‌ಹಾಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಹೂಟಗಳ್ಳಿ ನಗರಸಭೆ ವತಿಯಿಂದ ಆಯೋಜಿಸಿದ್ದ ತ್ಯಾಜ್ಯ ನಿರ್ವಹಣೆ, ಕುಡಿಯುವ ನೀರು, ಬೀದಿನಾಯಿಗಳ ಹಾವಳಿ, ಒಳಚರಂಡಿ ನಿರ್ವಹಣೆ ಮತ್ತು ಬೀದಿ ದೀಪಗಳ ನಿರ್ವಹಣೆ ಕುರಿತಂತೆ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಚಾಮುಂಡೇಶ್ವರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ರಾಜ್ಯದಲ್ಲೇ ೧೮ ಗ್ರಾಮ ಪಂಚಾಯಿತಿ,ನಗರಪಾಲಿಕೆ ಐದು ವಾರ್ಡುಗಳು, ನಾಲ್ಕು ಪಟ್ಟಣ ಪಂಚಾಯಿತಿ,ಒಂದು ನಗರಸಭೆಯನ್ನು ಹೊಂದಿರುವ ದೊಡ್ಡ ಕ್ಷೇತ್ರವಾಗಿದೆ. ನಾಲ್ಕು ದಿಕ್ಕುಗಳನ್ನು ಸಂಪರ್ಕ ಕಲ್ಪಿಸುವ ಪ್ರದೇಶವಾಗಿರುವ ಕಾರಣ ಶಕ್ತಿಮೀರಿ ಶ್ರಮಿಸುತ್ತಿದ್ದೇನೆ ಎಂದರು. ಮೈಸೂರು ನಗರದ ರಿಂಗ್ ರಸ್ತೆಯ ಅಕ್ಕಪಕ್ಕದ ಗ್ರಾಪಂಗಳು, ಬಡಾವಣೆಗಳು, ವಿಜಯನಗರ ಮೂರನೇ ಹಂತ,ನಾಲ್ಕನೇ ಹಂತವನ್ನು ಮೈಸೂರು ನಗರಪಾಲಿಕೆಗೆ ಸೇರಿಸಲು ಯುದ್ಧ ಮಾಡಿದಂತೆ ಹೋರಾಟ ಮಾಡಿದ್ದೆ. ನಗರಪಾಲಿಕೆಗೆ ಸೇರ್ಪಡೆಗೊಳಿಸಲು ನಿರ್ಣಯ ಮಾಡಿ ಸರ್ಕಾರಕ್ಕೆ ಕಳುಹಿಸಲು ಪ್ರಸ್ತಾವನೆ ಇಟ್ಟಾಗ ಬಿಜೆಪಿ,ಜಾ.ದಳ ಹಾಗೂ ಕಾಂಗ್ರೆಸ್ ಪಾಲಿಕೆ ಸದಸ್ಯರು ವಿರೋಧ ವ್ಯಕ್ತಪಡಿಸಿ ಐದು ಸಾವಿರ ಕೋಟಿ ರೂಪಾಯಿ ಅನುದಾನ ಕೊಟ್ಟರೆ ಮಾತ್ರ ಸೇರ್ಪಡೆ ಮಾಡಿಸಿಕೊಳ್ಳುತ್ತೇವೆಂದು ನಿರ್ಣಯ ಕೈಗೊಂಡರು.
ಇದನ್ನು ಓದಿ:MLA ನಾಮ ನಿರ್ದೇಶನಕ್ಕೆ ಗ್ರೀನ್ ಸಿಗ್ನಲ್ ನೀಡಿದ ರಾಜ್ಯಪಾಲರು
ಇದರಿಂದಾಗಿ ಅಪಮಾನವಾಗಿ ವಾಪಸ್ ಬಂದು ಬಿಟ್ಟೆ. ನಂತರ, ಅಂದಿನ ಸಂಸದ ಪ್ರತಾಪ್ ಸಿಂಹ ಅವರನ್ನು ಕೂರಿಸಿಕೊಂಡು ಸಮಾಲೋಚನೆಮಾಡಿದಾಗ ಗ್ರಾಪಂಗಳನ್ನು ಪಾಲಿಕೆ ಸೇರಿಸಿಕೊಳ್ಳಲ್ಲ. ಬಡಾವಣೆಗಳಲ್ಲಿ ಸ್ವಚ್ಛಮಾಡಲ್ಲ. ಖಾತೆ ಕಂದಾಯ ಮಾಡಲ್ಲ. ಮುಡಾದ ಬಡಾವಣೆಗಳಲ್ಲೂ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಗಮನಿಸಿ ನಾಲ್ಕು ಪಟ್ಟಣ ಪಂಚಾಯಿತಿ,ಒಂದು ನಗರಸಭೆಯನ್ನು ರಚಿಸಲಾಯಿತು ಎಂದು ಹೇಳಿದರು. ಮುಡಾದಿಂದ ಖಾಸಗಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಲು ಅನುದಾನ ಕೊಡಲಾಗುತ್ತಿತ್ತು.ಆದರೆ,ಸರ್ಕಾರ ನಿಧಿ-೧, ನಿಧಿ-೨ ಎನ್ನುವಂತೆ ವಿಂಗಡಿಸಿದರು. ನಿಧಿ ಒಂದರಲ್ಲಿ ಹತ್ತಾರು ವರ್ಷಗಳ ಹಿಂದೆ ರಚನೆಯಾಗಿರುವ ಬಡಾವಣೆಗಳಿಗೆ ನಿರ್ವಹಣೆ ಮಾಡಬಹುದು ಹೊರತು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಳಸುವಂತಿಲ್ಲ. ನಿಧಿ-೨ರಲ್ಲಿ ಖಾಸಗಿ ಬಡಾವಣೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಳಕೆ ಮಾಡುವಂತಿಲ್ಲ ಎನ್ನುವ ಆದೇಶ ಹೊರಡಿಸಿದ್ದರಿಂದ ತುಂಬಾ ಸಮಸ್ಯೆಯಾಯಿತು. ಹೀಗಾಗಿಯೇ, ಗ್ರಾಪಂಗಳನ್ನು ಮೇಲ್ದರ್ಜೇಗೇರಿಸಲು ಹಗಲು-ರಾತ್ರಿ ವಿಧಾನಸೌಧದಲ್ಲಿ ಅಲೆದಾಡಿ ಅನುಮೋದನೆ ಕೊಡಿಸಿದ್ದರಿಂದಾಗಿ ಇಂದು ಅನುಕೂಲವಾಯಿತು ಎಂದು ಹೇಳಿದರು.
ಖಾಸಗಿ ಬಡಾವಣೆಗಳನ್ನು ರಚನೆ ಮಾಡಿ ನಿವೇಶನಗಳನ್ನು ಹಂಚಿಕೆ ಮಾಡಿದ ಮಾಲೀಕರು ರಸ್ತೆ,ನೀರು,ಚರಂಡಿಯನ್ನೇ ಮಾಡದೆ ಹಾಗೆಯೇ ಬಿಟ್ಟು ಹೋದರು. ನಿವೇಶನಗಳನ್ನು ಖರೀದಿಸಿದವರು ಮನೆ ಕಟ್ಟಿಸಿಕೊಂಡು ವಾಸ ಮಾಡುತ್ತಿದ್ದರಿಂದ ಮೂಲ ಸೌಕರ್ಯ ಇಲ್ಲವೆಂದು ಬರಲು ಶುರು ಮಾಡಿದ್ದರಿಂದ ದೊಡ್ಡ ಸಮಸ್ಯೆಯಾಯಿತು. ಕಷ್ಟಪಟ್ಟು ಮನೆ ಕಟ್ಟಿದರೂ ನೆಮ್ಮದಿಯಾಗಿ ವಾಸಿಸಲು ಸಾಧ್ಯವಾಗದ ಸ್ಥಿತಿಯಾಯಿತು. ಹಾಗಾಗಿಯೇ, ಪಟ್ಟಣ ಪಂಚಾಯಿತಿ,ನಗರಸಭೆಮಾಡಿಸಿ ಈಗ ವ್ಯವಸ್ಥಿತವಾಗಿ ನಿರ್ವಹಣೆ ಮಾಡಿಕೊಂಡು ಹೋಗಲು ಸಾಧ್ಯವಾಗಿದೆ ಎಂದು ಹೇಳಿದರು.
ಕೈಗಾರಿಕಾ ಪ್ರದೇಶಗಳಿಂದ ೨೫ರಿಂದ ೩೦ ಕೋಟಿ ರೂಪಾಯಿ ಬರುತ್ತಿದ್ದರು.ಈಗ ಕರ್ನಾಟಕ ಕೈಗಾರಿಕಾ ಪ್ರಾಧಿಕಾರ ರಚನೆ ಮಾಡಿದ ಮೇಲೆ ಬರುವ ತೆರಿಗೆ ನಿಂತು ಹೋಗಿದೆ. ಇದರಿಂದಾಗಿ ಅನೇಕ ಕಾಮಗಾರಿಗಳು ನಿಂತುಹೋಗಿವೆ. ಗ್ರಾಪಂಗಳು ಕಟ್ಟದೆ ಹೋಗಿರುವ ವಿದ್ಯುತ್ ಬಿಲ್‌ನ್ನು ಎಂಡಿಎದಿಂದ ಕಟ್ಟಿಸಿಕೊಡಲು ತೀರ್ಮಾನ ಮಾಡಿದ್ದೇನೆ ಎಂದು ಭರವಸೆ ನೀಡಿದರು.
ಇದನ್ನು ಓದಿ: ಭಾರತದ ಕ್ವಾಂಟಮ್ ಭವಿಷ್ಯದ ಕೇಂದ್ರವಾಗಲು ಬೆಂಗಳೂರಿಗೆ ಮಹತ್ವದ ಹೆಜ್ಜೆ
ಖಾಸಗಿ ಬಡಾವಣೆಗಳನ್ನು ಈಗ ಎಂಡಿಎಗೆ ವರ್ಗಾವಣೆ ಮಾಡಿ ಖಾತೆ ಮಾಡುವಜೊತೆಗೆ ಮೂಲ ಸೌಕರ್ಯ ಒದಗಿಸಲಾಗುತ್ತಿದೆ. ಒಂದು ಲಕ್ಷಕ್ಕೂ ಹೆಚ್ಚುನಿವೇಶನಗಳನ್ನು ವರ್ಗಾವಣೆ ಮಾಡಿರುವುದರಿಂದ ಕಂದಾಯ ಕಟ್ಟಿಸಿಕೊಂಡು ಖಾತೆ ಮಾಡಲಾಗುತ್ತಿದೆ. ನಿವೇಶನ,ಮನೆ ಮಾಲೀಕರು ಯಾರಿಗೂ ಒಂದು ಪೈಸೆ ಕಟ್ಟದೆ ಖಾತೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.೨೦೦೭ರಲ್ಲಿ ಜೆನರ್ಮ್ ಯೋಜನೆಯಡಿ ೬೦ ಎಂಎಲ್‌ಡಿ ನೀರನ್ನು ತರಲಾಯಿತು. ಕಬಿನಿ ಎರಡನೇ ಹಂತ,ಉಂಡುವಾಡಿ ಯೋಜನೆಯಿಂದ ದಿನದ ೨೪ಗಂಟೆಗಳ ಕಾಲ ನೀರು ಒದಗಿಸುವುದಕ್ಕೆ ಕೆಲಸ ಶುರು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಮರ್ಪಕವಾದ ನೀರು ಒದಗಿಸಲಾಗುವುದು. ಸರ್ಕಾರದಿಂದ ಅನುದಾನ ತಂದು ರಸ್ತೆ,ಚರಂಡಿ ಎಲ್ಲವನ್ನು ಒದಗಿಸುತ್ತೇನೆ ಎಂದರು.ರಿಂಗ್ ರಸ್ತೆಯ ಬದಿಯಲ್ಲಿ ಕಸ ಹಾಕಿದರೆ, ಕೋಳಿ ತ್ಯಾಜ್ಯಗಳನ್ನು ಎಸೆಯುವವರು ಕಂಡುಬಂದರೆ ಅಂತಹವರ ಮೇಲೆ ಮೊಕದ್ದಮೆ ಹಕುವ ಜತೆಗೆ, ದಂಡ ವಿಧಿಸಬೇಕು. ವಾಹನಗಳನ್ನು ಸೀಜ್ ಮಾಡುವ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.
ಇದಾದ ಬಳಿಕ ವಿಜಯನಗರ ನಾಲ್ಕನೇಹಂತಕ್ಕೆ ಸಮರ್ಪಕವಾಗಿ ಕುಡಿಯುವ ನೀರನ್ನು ಒದಗಿಸಲು ಟ್ಯಾಂಕ್ ಪರಿಶೀಲನೆ ನಡೆಸಿದರು. ಪೌರಾಯುಕ್ತ ಬಿ.ಎನ್.ಚಂದ್ರಶೇಖರ್, ವಾಣಿವಿಲಾಸ ನೀರು ಸರಬರಾಜು ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಧನುಷ್, ನಗರಸಭೆ ಎಇಇಗಳಾದ ಮಧು, ಗಿರಿಜಾ ಹಾಜರಿದ್ದರು.
ಪಂಜು ಗಂಗೊಳ್ಳಿ ನೂರಾರು ಜನ ವಿಶೇಷಚೇತನರಿಗೆ ಫೋಟೋಗ್ರಫಿ ತರಬೇತಿ ಎವ್ಗನ್ ಬಾವ್ಚಾರ್ ೧೯೪೬ರಲ್ಲಿ ಸ್ಲೊವೇನಿಯಾ (ಆಗ ಯುಗೊಸ್ಲೇವಿಯಾ)ದಲ್ಲಿ ಹುಟ್ಟಿದರು. ಏಳು…
ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಅಕ್ರಮ ಸಿಗರೇಟ್ ಮಾರುಕಟ್ಟೆಯು ವಾರ್ಷಿಕವಾಗಿ ಸುಮಾರು ರೂ.೧೫,೦೦೦ ಕೋಟಿಗೂ ಅಧಿಕ ನಷ್ಟವನ್ನು ಸರ್ಕಾರಕ್ಕೆ ಉಂಟುಮಾಡುತ್ತಿದೆ.…
ದ್ವಿಚಕ್ರ ವಾಹನಗಳಿಗೆ ಸಂಚಾರ ನಿಯಮದಂತೆ ಎರಡೂ ಕಡೆ ದರ್ಪಣವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಯಾರು ಈ ನಿಯಮವನ್ನು ಉಲ್ಲಂಘಿಸುತ್ತಾರೋ ಅವರಿಗೆ ಸಂಚಾರ…
ಮೈಸೂರಿನ ಕುವೆಂಪುನಗರದ ನೃಪತುಂಗ ರಸ್ತೆಯ ಶಾಂತಿ ಸಾಗರ್ ಕಾಂಪ್ಲೆಕ್ಸ್ ನ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಮದ್ದೂರು ವಡೆ ಸೆಂಟರ್ ಮತ್ತು…
ಪ್ರಶಾಂತ್ ಎಸ್. ಮೈಸೂರು: ನಗರ ಹೊರವಲಯದ ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಲವೆಡೆ ರಸ್ತೆಗಳ ದುಸ್ಥಿತಿಯಿಂದಾಗಿ ವಾಹನಗಳ ಸವಾರರು ಜೀವವನ್ನು…
ಕೆ.ಬಿ.ರಮೇಶನಾಯಕ ಮೈಸೂರು: ಕಪಿಲಾ ನದಿ ತೀರದ ಸುತ್ತೂರಿನಲ್ಲಿ ಆರುದಿನಗಳ ಕಾಲ ಅತ್ಯಂತ ಸಡಗರ, ಸಂಭ್ರಮದಿಂದ ನಡೆದ ಧಾರ್ಮಿಕ, ಸಾಂಸ್ಕೃತಿಕ, ವೈಜ್ಞಾನಿಕ…