ಮಹಾನಗರ ಪಾಲಿಕೆ ವಲಯ ಕಚೇರಿ-1 ಮತ್ತು 2ರಲ್ಲಿ ಇ-ಖಾತೆ ಹಂಚಿಕೆ
ಮೈಸೂರು: ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಹಾನಗರ ಪಾಲಿಕೆ ಕಚೇರಿ-1 ಮತ್ತು 2ರಲ್ಲಿ ಶಾಸಕ ಶ್ರೀವತ್ಸ ಅವರು ೨೫೦ಕ್ಕೂ ಹೆಚ್ಚು ಮಂದಿಗೆ ಇ-ಖಾತೆ ಪತ್ರ ಹಂಚಿಕೆ ಮಾಡಿದರು.
ನಗರದ ವಲಯ ಕಚೇರಿ-1ರಲ್ಲಿ ಇ-ಖಾತೆ ಹಂಚಿಕೆ ಮಾಡಿ ಮಾತನಾಡಿದ ಅವರು, ಆಯುಕ್ತ ತನ್ವೀರ್ ಅವರು ಆಯುಕ್ತರಾಗಿ ಬಂದ ನಂತರ ಸಾರ್ವಜನಿಕರಿಗೆ ಇ-ಖಾತೆ ಹಂಚಿಕೆಯ ವೇಗ ಹೆಚ್ಚಾಗಿದ್ದು, ವಲಯ ಕಚೇರಿಗಳ ಆಯುಕ್ತರುಗಳಿಗೆ ಹೆಚ್ಚಿನ ಜವಾಬ್ದಾರಿಯನ್ನು ಕೊಟ್ಟು ಖಾತೆ ವಿತರಣೆ ಮಾಡಿಸುತ್ತಿರುವುದರಿಂದ ರಾಜ್ಯದಲ್ಲಿ ಮೈಸೂರು ಜಿಲ್ಲೆ ಎರಡನೇ ಸ್ಥಾನ ಪಡೆದು ಕೊಂಡಿದೆ ಎಂದು ಹೇಳಿದರು.
ಆಯುಕ್ತ ತನ್ವೀರ್ ಅವರು ಮಾತನಾಡಿ, ವಲಯ ಕಚೇರಿ-1ರ ಸಹಾಯಕ ಆಯುಕ್ತರು 7/10 ದಿನಗಳಲ್ಲಿ ಇ-ಖಾತೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಗತ್ಯ ದಾಖಲೆ ನೀಡಿ ಸಾರ್ವಜನಿಕರು ಸಹಕರಿಸಿ. ಈಗಾಗಲೇ 45 ದಿನಗಳಲ್ಲಿ 9 ಸಾವಿರ ಇ-ಖಾತೆ ವಿತರಿಸಲಾಗಿದೆ. ಈ ವಲಯದಲ್ಲಿ ಪ್ರತೀ ತಿಂಗಳು 800/900 ಖಾತೆ ವಿತರಿಸುವ ಮೂಲಕ ಗುರಿ ಮುಟ್ಟಬೇಕಿದೆ. ಸಾರ್ವಜನಿಕರು ದಾಖಲೆ ನೀಡಿ ಪಡೆದುಕೊಳ್ಳಿ ಎಂದರು
ಸ್ವಚ್ಛ ಸರ್ವೇಕ್ಷಣ್ ನಡೆಯುತ್ತಿದೆ. ಈ ಸಾಲಿನಲ್ಲಿ ಮೈಸೂರು ನಗರ ೧ನೇ ಸ್ಥಾನ ಪಡೆಯಲು ಪ್ರಯತ್ನಿಸುತ್ತಿದೆ. ಸಾರ್ವಜನಿಕರು ನಿಮ್ಮ ದೂರವಾಣಿಗಳ ಮೂಲಕ ಈ ವಿಚಾರವಾಗಿ ಹೆಚ್ಚು ಪ್ರಚಾರ ಮಾಡುವ ಮೂಲಕ ಸಹಕರಿಸಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪ ಆಯುಕ್ತ(ಕಂದಾಯ) ಸೋಮಶೇಖರ್, ವಲಯ-೧ರ ಸಹಾಯಕ ಆಯುಕ್ತ ಮನನ ಮಂಜುನಾಥ ರೆಡ್ಡಿ, ಕಂದಾಯಾಧಿಜಾರಿ ಸ್ವರ್ಣಲತಾ, ಸಹಾಯಕ ಕಂದಾಯಾಧಿಕಾರಿ ಪ್ರತಾಪ್ ಮುಂಯಾದವರು ಉಪಸ್ಥಿತರಿದ್ದರು.
ವಲಯ ಕಚೇರಿ -2ರಲ್ಲಿ 100 ಇ-ಖಾತೆ ವಿತರಣೆ:
ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ-2ರಲ್ಲಿ ಶಾಸಕ ಶ್ರೀವತ್ಸ ಈ ಭಾಗದ 100 ಮಂದಿ ಸಾರ್ವಜನಿಕರಿಗೆ ಇ- ವಿತರಿಸಿದರು.
ನಂತರ ಮಾತನಾಡಿದ ಅವರು, ಅತ್ಯಂತ ಸಾಧಾರಣವಾದ ನಿಮ್ಮಲ್ಲಿ ಈಗಾಗಲೇ ಇರುವ ದಾಖಲಾತಿಗಳಾದ ಟೈಟಲ್ ಡೀಡ್, ರಿಜಿಸ್ಟ್ರೇಷನ್ ಪ್ರತಿ, ಇಸಿ, ಆಸ್ತಿಯ ಛಾಯಾಚಿತ್ರ, ಪಾಸ್ ಪೋರ್ಟ್ ಫೋಟೋ, ತೆರಿಗೆ ಪಾವತಿಸಿರುವ ರಸೀದಿ, ಐಡಿ ದಾಖಲೆ ಇವಿಷ್ಟು ದಾಖಲೆ ನೀಡಿ ಇ-ಖಾತೆ ಪಡೆದುಕೊಳ್ಳಿ ಎಂದು ಹೇಳಿದರು.
ಈ ವೇಳೆ ವಲಯ ಕಚೇರಿ-2ರ ವಲಯ ಆಯುಕ್ತ ನಾಗರಾಜು, ಸಹಾಯಕ ಕಂದಾಯಾಧಿಕಾರಿ ಬೆಟ್ಟಸಾಮಯ್ಯ, ಜಂದಾಯ ನಿರೀಕ್ಷಕ ಡಿ.ಎಸ್. ಅಶೋಕ್ ಪಾಲಿಕೆ ಮಾಜಿ ಸದಸ್ಯೆ ಚಂಪಕ ಮುಂತಾದವರು ಉಪಸ್ಥಿತರಿದ್ದರು.
ಬೆಂಗಳೂರು : ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ಜಾತಿಗಳ ಮೀಸಲಾತಿ ಪ್ರಮಾಣವನ್ನು ಶೇ.56ಕ್ಕೆ ಹೆಚ್ಚಳ…
ಹೊಸದಿಲ್ಲಿ : ಹಿರಿಯ ನಟ ಧರ್ಮೇಂದ್ರ, ದಂತಕಥೆ ಹಿನ್ನೆಲೆ ಗಾಯಕಿ ಅಲ್ಕಾ ಯಾಜ್ಞಿಕ್, ಮಲಯಾಳಂ ಸಿನಿಮಾ ದಿಗ್ಗಜ ಮಮ್ಮುಟ್ಟಿ, ಬಂಗಾಳಿ…
ಹೊಸದಿಲ್ಲಿ : ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಅಪಾಯ ಹೊರಗಿನಿಂದಲ್ಲ, ‘ಆಂತರಿಕ ವ್ಯವಸ್ಥೆ’ಯಿಂದಲೇ ಇದೆ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಉಜ್ಜಲ್…
ಬೆಂಗಳೂರು : ಅಧಿಕಾರಿಗಳು ಜನಪ್ರತಿನಿಧಿಗಳ ದೂರವಾಣಿ ಕರೆಯನ್ನು ಸ್ವೀಕರಿಸಲೇಬೇಕು ಎಂಬ ಸುತ್ತೋಲೆಯನ್ನು ಹೊರಡಿಸುವ ಮೂಲಕ ಸರ್ಕಾರಿ ಅಧಿಕಾರಿಗಳಿಗೆ ರಾಜ್ಯ ಸರ್ಕಾರ…
ಮೈಸೂರು : ಹೊಸದಿಲ್ಲಿಯಲ್ಲಿ ಬುದ್ಧಗಯಾ ವಿಮೋಚನೆ ಐತಿಹಾಸಿಕ ಚಳವಳಿಯಲ್ಲಿ ಬೌದ್ಧ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಬೌದ್ಧ ಚಿಂತಕ,…
ಮೈಸೂರು : ರಥಸಪ್ತಮಿ ಅಂಗವಾಗಿ ನಗರದಲ್ಲಿ ಭಾನುವಾರ ಅರಮನೆ ಸೇರಿದಂತೆ ವಿವಿಧೆಡೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸೂರ್ಯನಿಗೆ ನಮಿಸಲಾಯಿತು.…